in

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ


ತೆಂಗಿನೆಣ್ಣೆ ಎಂದ ತಕ್ಷಣ ನೆನಪಾಗುವುದು ಕೇರಳ ಮತ್ತು ಕರಾವಳಿ ಭಾಗದ ರುಚಿ ರುಚಿಯಾದ ಅಡುಗೆಗಳು. ಏಕೆಂದರೆ ನಿಮಗೂ ಗೊತ್ತು ಅಲ್ಲಿಯವರು ಯಾವುದೇ ರೀತಿಯ ಅಡುಗೆಗಳಿಗೆ ಅಥವಾ ಒಗ್ಗರಣೆಗೆ ತೆಂಗಿನೆಣ್ಣೆ ಬಿಟ್ಟು ಇತರ ಯಾವುದೇ ಎಣ್ಣೆಯನ್ನು ಉಪಯೋಗಿಸುವುದಿಲ್ಲ.ಇದು ನೆನ್ನೆ ಮೊನ್ನೆಯ ವಿಚಾರವಲ್ಲ ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ರೂಡಿಯಲ್ಲಿದೆ. ನೈಸರ್ಗಿಕ ಆರ್ದ್ರತೆ: ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ, ತೆಂಗಿನಕಾಯಿ ಎಣ್ಣೆ ಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ. ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.


ಕೇರಳದ ಮಹಿಳೆಯರ ಸೌಂದರ್ಯ ಹಾಗೂ ಕೇಶ ರಕ್ಷಣೆಯ ಗುಟ್ಟು:

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ


ನೀವು ಒಂದು ವಿಷಯ ಕೇರಳದ ಹೆಣ್ಣುಮಕ್ಕಳಲ್ಲಿ ಗಮನಿಸಿರಬಹುದು ಅವರು ಸೋಪು ಉಪಯೋಗಿವುದು ಕಡಿಮೆ ಬರೀ ತೆಂಗಿನೆಣ್ಣೆಯನ್ನು ತಲೆತುಂಬ ಹಚ್ಚಿಕೊಳ್ಳುತ್ತಾರೆ.ಆದ್ದರಿಂದ ಅವರಲ್ಲಿ ಯಾವುದೇ ರೀತಿಯ ಚರ್ಮದ ಕಾಯಿಲೆ ಕಂಡುಬರುವುದಿಲ್ಲ. ಕೂದಲಿನಲ್ಲಿ ಹೊಳಪು ಮತ್ತು ಮುಖದಲ್ಲೂ ಅಷ್ಟೇ ಒಂದು ಮೊಡೆವೆಯೂ ಇರುವುದಿಲ್ಲ. ಯಾಕೆಂದರೆ ತೆಂಗಿನಎಣ್ಣೆಯಲ್ಲಿ ರೋಗನಿರೋಧಕ ಅಂಶ ಜಾಸ್ತಿ ಇರುತ್ತದೆ.

ಇನ್ನು ನಿಮ್ಮ ಮನೆಯಲ್ಲಿ ನೊಣಗಳ ಸಮಸ್ಯೆ ಇದ್ದರೆ ಟೇಬಲ್ ಮೇಲೆ ಒಂದು ಲೇಯರ್ ತೆಂಗಿನೆಣ್ಣೆ ಹಚ್ಚಿ.ನೊಣಗಳು ಅದರ ಮೇಲೆ ಕುಳಿತುಕೊಳ್ಳುವುದಿಲ್ಲ. ಕುಳಿತುಕೊಂಡರೂ ಕೂಡ ಅವುಗಳ ಕಾಲಿನಲ್ಲಿರುವ ಕ್ರಿಮಿಗಳು ಅಲ್ಲಿಯೇ ಸತ್ತುಹೋಗುತ್ತದೆ. ತೆಂಗಿನೆಣ್ಣೆ ಒಂದು ಉತ್ತಮ ಕ್ರಿಮಿನಾಶಕ. ಚಳಿಗಾಲದಲ್ಲಿ ಅದು ಬೆಂಗಳೂರಲ್ಲಿ ಇರುವವರಿಗೆ ಯಾವಾಗಲೂ ಶೀತ , ಗಂಟಲು ನೋವು, ಮೂಗು ಸೋರುವಿಕೆ ಹೀಗೆ ಹಲವು ಸಮಸ್ಯೆ ಬರುತ್ತದೆ.ಇಂಥ ಸಂದರ್ಭದಲ್ಲಿ ಒಂದು ಚಮಚ ತೆಂಗಿನಎಣ್ಣೆಯನ್ನ ಬೆಳ್ಳಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ಇಟ್ಟುಕೊಳ್ಳಿ ಅದು ಬಾಯಿಯಲ್ಲಿ ಹೀರಿಕೊಳ್ಳುತ್ತದೆ.ತಾಯಿಯ ಹಾಲು ಮತ್ತು ತೆಂಗಿನಎಣ್ಣೆ ಮಾತ್ರ ಬಾಯಿಯಲ್ಲೆ ಜೀರ್ಣವಾಗುವ ವಸ್ತು…

ದೇಹದ ತೂಕ ಇಳಿಸಲು ತೆಂಗಿನ ಎಣ್ಣೆ ಸಹಾಯ ಮಾಡಬಲ್ಲದು :

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ


ಇನ್ನು ದಪ್ಪ ಇರುವವರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ಒಂದು ಚಮಚ ತೆಂಗಿನ ಎಣ್ಣೆ ಇಟ್ಟುಕೊಳ್ಳುವುದರಿಂದ ಮೆಟಬೋಲಿಸಾಮ್ ಹೆಚ್ಚಾಗಿ ದೇಹದ ತೂಕ ಕಡಿಮೆಯಾಗುತ್ತಾ ಬರುತ್ತದೆ. ಬ್ಯಾಡ್ ಕೊಲೆಸ್ಟ್ರಾಲ್ ಬಗ್ಗೆ ಚಿಂತೆ ಇದ್ದರೆ ಕೂಡ ನಿತ್ಯ ತೆಂಗಿನಎಣ್ಣೆ ಉಪಯೋಗಿಸಿ. ತೆಂಗಿನೆಣ್ಣೆಯಿಂದ ತಯಾರಿಸಿದ ಆಹಾರಗಳು ಬಹುಬೇಗ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುವುದು. ತೂಕ ಇಳಿಸಲು ತೆಂಗಿನೆಣ್ಣೆ ಸಹಾಯ ಮಾಡುವುದು. ತೂಕ ಹೆಚ್ಚಳದಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುತ್ತದೆ.


ಮಕ್ಕಳಲ್ಲಿ ತೆಂಗಿನ ಎಣ್ಣೆಯ ಲಾಭ :
ಮುಖ್ಯವಾಗಿ ಚಿಕ್ಕ ಮಕ್ಕಳು ಬಿದ್ದು ಮೈ ಕೈ ಏಟು ಮಾಡಿಕೊಂಡು ರಕ್ತ ಬಾರದೆ ಅಲ್ಲಿಯೇ ಹಸಿರು ಬಣ್ಣಕ್ಕೆ ತಿರುಗುತ್ತವೆ. ಆಗ ತೆಂಗಿನಎಣ್ಣೆಗೆ ಅರಸಿನ ಬೇರೆಸಿ ಲೇಪಿಸಬೇಕು. ಎರಡು ದಿನದಲ್ಲಿ ಕಲೆ ಹೋಗುತ್ತದೆ ನೋವು ಕಮ್ಮಿ ಆಗುತ್ತದೆ. ಹಿಮ್ಮಡಿ ಒಡೆದು ನೋವು ಇದ್ದರೂ ಕೂಡ ಇದೇ ಲೇಪ ಹಚ್ಚಬಹುದು. ಮಕ್ಕಳಲ್ಲಿ ಮೂರ್ಛೆರೋಗದ ಸೆಳೆವು ಕಡಿಮೆ ಮಾಡಲು, ಕೆಟೋಜೆನಿಕ್ ಎಂಬ ಕಡಿಮೆ ಪಿಷ್ಠ ಹಾಗೂ ಹೆಚ್ಚು ಕೊಬ್ಬಿರುವ ಆಹಾರ ಪದ್ಧತಿ ಬಗ್ಗೆ ಅಧ್ಯಯನ ನಡೆದಿದೆ. ಕೊಬ್ಬರಿಎಣ್ಣೆಯ ಕೊಬ್ಬಿನ ಆಮ್ಲ ಯಕೃತ್ತಿಗೆ ಹೋಗಿ ಕಿಟೋನ್ಗಳಾಗಿ, ಆಹಾರದಲ್ಲಿ ಹೆಚ್ಚು ಪಿಷ್ಠವಿರಲು ಅನುಕೂಲ ಮಾಡುತ್ತದೆ.
ಹೀಗಾಗಿ ತೆಂಗಿನಎಣ್ಣೆ ಒಂದು ದಿವ್ಯವಾದ ಔಷದಿ ಗುಣವನ್ನು ಹೊಂದಿದೆ. ಪ್ರತಿನಿತ್ಯ ಬಳಸುವುದರಿಂದ ಕೂದಲಿಗೆ ,ಚರ್ಮಕ್ಕೆ , ಅಲರ್ಜಿ ಹಾಗೂ ಬಹಳಷ್ಟು ಸಮಸ್ಯೆಗಳಿಗೆ ಉಪಯೋಗಕಾರಿಯಾಗಿದೆ.

ಫೇಸ್ವಾಶ್ ಆಗಿ ಬಳಕೆ :
ತೆಂಗಿನ ಎಣ್ಣೆಯನ್ನು ಫೇಸ್ವಾಶ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಹೆಚ್ಚು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗಿ ಬಂದ ಮೇಲೆ ತೆಂಗಿನ ಎಣ್ಣೆಯನ್ನು ಬಳಸಿ ಮುಖ ತೊಳೆದುಕೊಳ್ಳಬಹುದು.
ಫೇಸ್ಮಾಸ್ಕ್ನಲ್ಲಿ ಇದೆ ಉತ್ತಮ ಪ್ರತಿಕ್ರಿಯೆ
ತೆಂಗಿನ ಎಣ್ಣೆಯನ್ನು ಫೇಸ್ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಅರಶಿಣದೊಂದಿಗೆ ಅಥವಾ ಇತರೆ ಉಪಯುಕ್ತ ವಸ್ತುಗಳನ್ನು ಸೇರಿಸಿ ಮುಖಕ್ಕೆ ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು.


ಸೊಳ್ಳೆ ಕಡಿತಕ್ಕೆ ಮದ್ದು :
ಮುಖದ ಮೇಲೆ ಸೊಳ್ಳೆ ಕಡಿತದಿಂದಾದ ಕಲೆಗಳು ನಿಮ್ಮನ್ನು ಚಿಂತೆಗೀಡು ಮಾಡಿದ್ದರೆ, ಅದರಿಂದ ಮುಕ್ತಿ ಪಡೆಯಲು ಸರಳ ವಿಧಾನವೊಂದಿದೆ. ನಿಮ್ಮ ನೆಚ್ಚಿನ ಯಾವುದಾದರೊಂದು ಎಸೆನ್ಸಿಯಲ್ ಆಯಿಲ್ ಜೊತೆಗೆ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಿ. ಒಂದೆರಡು ದಿನಗಳ ತನಕ ಇದನ್ನು ಪುನರಾವರ್ತಿಸಿದರೆ ಕಲೆ ಮಾಯವಾಗುತ್ತದೆ.


ಲಿಪ್ ಬಾಮ್ :
ಚಳಿಗಾಲದಲ್ಲಿ ತುಟಿಗಳು ಬೇಗ ತೇವಾಂಶ ಕಳೆದುಕೊಂಡು ಬಿರುಕು ಬಿಡುತ್ತವೆ. ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಲಿಪ್ಬಾಮ್ನಂತೆ ನಿಮ್ಮ ತುಟಿಗಳು ಒಡೆಯದಂತೆ ತಡೆಯುತ್ತದೆ. ನಿಮ್ಮ ಲಿಪ್ಬಾಮ್ಗೆ ಕೆಲವು ಹನಿಗಳಷ್ಟು ತೆಂಗಿನ ಎಣ್ಣೆಯನ್ನು ಸೇರಿಸಿ ಅದನ್ನು ಕೂಡ ತುಟಿಗಳಿಗೆ ಹಚ್ಚಬಹುದು.


ತೆಂಗಿನ ಎಣ್ಣೆಯನ್ನು ಮೇಕಪ್ ಹೋಗಲಾಡಿಸುವ ಸಾಧನವಾಗಿ ಬಳಸಬಹುದು. ಇದು ಸಾಮಾನ್ಯವಲ್ಲ, ಆದರೆ ಪ್ರಪಂಚದಾದ್ಯಂತದ ಮಹಿಳೆಯರು ಮೇಕಪ್ ಗಳನ್ನು ಕಠಿಣವಾದ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವೇಶಿಸುವ ಕಠಿಣ ರಾಸಾಯನಿಕಗಳನ್ನು ಹೋಗಿಸಲು ಇಂದಿಗೂ ಇದೆ ಎಣ್ಣೆಯನ್ನು ಬಳಸುತ್ತಿದ್ದಾರೆ . ಅವರ ಮೇಕಪ್ ತೆಗೆದುಹಾಕುವುದಕ್ಕೆ ಬಳಸಿಕೊಂಡಿದ್ದಾರೆ.
ನಿರಂತರ ಬಳಕೆಯಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತನಾಳಗಳ ಗೋಡೆಗಳನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸುವ ವಸ್ತುಗಳನ್ನು ಒಳಗೊಂಡಿದೆ.
ಔಷಧೀಯ ಉದ್ದೇಶಗಳಿಗಾಗಿ ತೆಂಗಿನ ಎಣ್ಣೆಯನ್ನು ವ್ಯವಸ್ಥಿತವಾಗಿ ಬಳಸುವ ಮೂರ್ಛೆರೋಗ ಹೊಂದಿರುವ ಜನರು ರೋಗಗ್ರಸ್ತವಾಗುವಿಕೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.
ಹೊಕ್ಕಳಿಗೆ ಎಣ್ಣೆ ಹಾಕುದರಿಂದ ಹಲವಾರು ಖಾಯಿಲೆಗೆ ತುಂಬಾ ಪ್ರಯೋಜನಕಾರಿ ಇದೊಂದು ಜಾನಪದ ಚಿಕಿತ್ಸಾ ವಿಧಾನವಾಗಿದೆ ಪ್ರತಿಯೊಬ್ಬರು ತಾಯಿಯ ಹೊಟ್ಟೆಯಲ್ಲಿರವಾಗ ಮಗು ನಾಭಿಯ ಮುಖಾಂತರ ಊಟ ಮಾಡುತ್ತದೆ ಮತ್ತು ಉಸಿರಾಟ ಸಹ ನಾಭಿಯ ಮುಖಾಂತರ ಮಾಡುತ್ತದೆ ಇವೆಲ್ಲ ತಾಯಿ ಮತ್ತು ಮಗುವಿಗೆ ಇರುವ ಹೊಕ್ಕಳ ಬಳ್ಳಿ ಮೂಲಕ ನಡೆಯುತ್ತದೆ ಆದರೆ ಮಗು ಹುಟ್ಟಿದ ನಂತರ ನಾಭಿ ನಿಷ್ಕ್ರಿಯವಾಗುತ್ತದೆ ಹಾಗೂ ಯಾವಾಗ ಮನುಷ್ಯನಲ್ಲಿ ಅಗ್ನಿ ಇರುತ್ತದೆಯೋ ಅಲ್ಲಿಯವರೆಗೆ ಮನುಷ್ಯ ಆರಾಮವಾಗಿ ಇರುತ್ತಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಲ್ಲದ ಅರೋಗ್ಯ ಗುಣ ತಿಳಿದರೆ ನೀವು ಕೂಡ ದಿನ ಸೇವಿಸುವಿರಿ

ಬೆಲ್ಲದ ಅರೋಗ್ಯ ಗುಣ ತಿಳಿದರೆ ನೀವು ಕೂಡ ದಿನ ಸೇವಿಸುವಿರಿ

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ