in

ಹೊಯ್ಸಳ ವಂಶ

ಹೊಯ್ಸಳ ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ, ಇಂದಿನ ಹಳೇಬೀಡು. ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ.

ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಾಜ್ಯ ಕಟ್ಟಿದರು. ಮುಂದೆ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಾಡಿಕೊಂಡರು. ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ೧೨-೧೩ನೆಯ ಶತಮಾನಗಳಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ ತಲಕಾಡು ವಿಜಯದೊಂದಿಗೆ ಈ ರಾಜವಂಶದ ಉಚ್ಛ್ರಾಯ ಕಾಲ ಆರಂಭವಾಯಿತು. ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಾಮನಾಥ ಮತ್ತು ಮುಮ್ಮಡಿ ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನೂ ದಕ್ಷಿಣದಲ್ಲಿ ಚೋಳ ಪಾಂಡ್ಯರನ್ನೂ ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ಧಿ ಹೆಚ್ಚಿಸಿದರು. ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ ಕೊಂಗಾಳ್ವರನ್ನೂ ನಿಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನೂ ಕುಮ್ಮಟವನ್ನೂ ಗೆದ್ದ. ಬೆಳ್ವೊಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿನ ಕದಂಬರೂ ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರಿಗೆ ಮಾತ್ರ ಸಾಮಂತರಾಗಿದ್ದರೂ, ವಾಸ್ತವವಾಗಿ ಸ್ವತಂತ್ರರಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು.

ಹೊಯ್ಸಳ ವಂಶ
ಹೊಯ್ಸಳ ಸಾಮ್ರಾಜ್ಯ

ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. ಕೆಲಕಾಲನಂತರ ಬೆಳ್ವೊಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಾಡಿ ೧೧೯೦ ರಲ್ಲಿ ಸೊರಟೂರು ಕದನದಲ್ಲಿ ಅವರನ್ನು ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದುವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗೆಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳ ಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ಥಾಪಿಸಿ, ಕಣ್ಣಾನೂರನ್ನು ,ತಿರುಚಿರಾಪಳ್ಳಿಯ ಬಳಿಯಿರುವ ಈಗಿನ ಸಮಯಪುರ ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಇಮ್ಮಡಿ ಬಲ್ಲಾಳ ಈ ಕಾರ್ಯಗಳನ್ನು ಸಾಧಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದ. ಕರ್ನಾಟಕದ ರಾಜರಲ್ಲೆಲ್ಲ ಅತ್ಯಂತ ಪ್ರಮುಖರಲ್ಲೊಬ್ಬನೆಂದು ಕರೆಸಿಕೊಂಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಾಡುತ್ತಿದ್ದು ಕಡೆಗೆ ತನ್ನ ೮೦ನೆಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕೊಳಗಾಗಿ ಪ್ರಾಣ ತೆತ್ತ.

ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದು. ಈ ಯುಗದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ, ಮತೀಯ ಸಮನ್ವಯ, ವಿದ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ಧಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಭವನಾದ ಇಮ್ಮಡಿ ತೈಲ, ರಾಷ್ಟ್ರಕೂಟರನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರಾದ ಸತ್ಯಾಶ್ರಯ ಇರಿವಬೆಡಂಗ, ಜಯಸಿಂಹ ವಲ್ಲಭ, ೧ನೆಯ ಸೋಮೇಶ್ವರ ಆಹವಮಲ್ಲ ಮತ್ತು ೬ನೆಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆಯನ್ನು ವೃದ್ಧಿಗೊಳಿಸಿದರು. ಇವರ ಯುದ್ಧ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತವಾಗಿರಲಿಲ್ಲವೆಂಬುದೇನೋ ನಿಜ. ಭಾರತದ ಮಾರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಬಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ ಪ್ರಮುಖ ಆಡಚಣೆಗಳಾಗಿದ್ದರೂ ಇವರು ತಮ್ಮ ರಾಜ್ಯದ ಸಮಗ್ರತೆಯನ್ನು ರಕ್ಷಿಸಿಕೊಂಡುದಲ್ಲದೆ ಪೂರ್ವದಲ್ಲಿ ವೆಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು, ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರ ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಅಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು.

ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೀಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು.

ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂತ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕತೀಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು.

ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳು- ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿ ವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ) – ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಾಲಕನಾಗಿದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು. ಗ್ರಾಮಪ್ರತಿನಿಧಿಗಳಾದ ಹಿರಿಯರ ನೇತೃತ್ವದಲ್ಲಿ ಗ್ರಾಮಾಡಳಿತ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಕೆಳಗಿನ ಹಂತಗಳಲ್ಲಿ ವಿವಿಧ ಮಟ್ಟಗಳ ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಹೊಯ್ಸಳ ವಂಶ
ಶೃಂಗೇರಿ ಮಠ

ಒಂಬತ್ತನೆಯ ಶತಮಾನದಲ್ಲಿ ಅದ್ವೈತ ಪ್ರತಿಪಾದಕ ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದು ಮತ್ತು ಹತ್ತನೆಯ ಶತಮಾನದಲ್ಲಿ ಗಂಗ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಸ್ಥಾಪಿಸಿದ್ದು ರಾಜ್ಯದ ಧಾರ್ಮಿಕ ವಿಕಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ೧೧, ೧೨, ೧೩ನೆಯ ಶತಮಾನಗಳ ಅವಧಿ ಬಹಳ ಮಹತ್ತ್ವದ ಕಾಲ. ಶೈವಧರ್ಮದ ವಿಭಾಗವಾದ ಕಾಳಾಮುಖ ಪಂಥದ ಸ್ಥಾಪಕ ಲಕುಲೀಶನ ಉಲ್ಲೇಖಗಳು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯರರಸ ೨ನೆಯ ಜಯಸಿಂಹ ಜೈನಧರ್ಮದಿಂದ ಶೈವಧರ್ಮಕ್ಕೆ ಪರಿವರ್ತಿತನಾದ. ಶೈವಗುರುಗಳು ತಪೋನಿಷ್ಠರೂ ವಿದ್ವಾಂಸರೂ ಆಗಿದ್ದು ಸಾರ್ವತ್ರಿಕವಾಗಿ ಗೌರವ ಪಡೆದಿದ್ದರು. ೧೨ನೆಯ ಶತಕದಲ್ಲಿ ಬಸವೇಶ್ವರರು ವೀರಶೈವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿಯನ್ನುಂಟುಮಾಡಿದರು. ಇವರ ಜೀವನ ಮತ್ತು ಭಕ್ತಿಮಾರ್ಗಗಳು ಸರಳವಾಗಿದ್ದು ಜನತೆಯನ್ನು ವೀರಶೈವ ಧರ್ಮದ ಕಡೆಗೆ ಆಕರ್ಷಿಸಿದುವು. ಜಾತಿ, ಮತ, ಲಿಂಗಭೇದಗಳನ್ನು ಲಕ್ಷಿಸಿದ, ಸಮಾಜದ ಸುಪ್ತ ಚೈತನ್ಯಗಳನ್ನು ಹೊರತರಬಲ್ಲ ಈ ಸಾಮಾಜಿಕ ಆಂದೋಳನದಿಂದ ಅದ್ಭುತ ಪರಿಣಾಮಗಳುಂಟಾದುವು. ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತತ್ತ್ವಪ್ರಚಾರಕ್ಕೆ ಬಳಸಿದುದಿಂದ ಸರಳವೂ ಸತ್ತ್ವಪೂರ್ಣವೂ ಆದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕಾನೇಕ ಶರಣರೂ ವೀರಶೈವ ಧರ್ಮಪ್ರಚಾರಕರೂ ದೇಶಾದ್ಯಂತ ಸಂಚರಿಸಿ, ಸರಳವೂ ಜನಪ್ರಿಯವೂ ಆದ ವಚನಗಳಿಂದ ಜನರನ್ನು ಆಕರ್ಷಿಸಿದರು. ಈ ರೀತಿಯ ಮತ ಪ್ರಸಾರ ನಡೆಯುತ್ತಿದ್ದರೂ ಧರ್ಮಾಂಧತೆಯಿಲ್ಲದಿದ್ದು ಜನಸಾಮಾನ್ಯರಲ್ಲಿ ಪರಧರ್ಮಸಹನೆ ಪ್ರಧಾನವಾಗಿತ್ತೆನ್ನಬಹುದು.

ಶೈವಧರ್ಮಾವಲಂಬಿಗಳಾದ ರಾಜರೂ ಜೈನಧರ್ಮಕ್ಕೆ ಉತ್ತೇಜನ ನೀಡುತ್ತಿದ್ದರು. ಕ್ಷೀಣಗತಿಯಲ್ಲಿದ್ದ ಬೌದ್ಧಧರ್ಮದ ಬಗೆಗೂ ಸಹನೆ ತೋರುತ್ತಿದ್ದರು. ಚಾಳುಕ್ಯ ವಂಶದ ಜಯಸಿಂಹರಾಜನ ಆಸ್ಥಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವಿದ್ದು, ಶೈವ, ಜೈನ ಆಚಾರ್ಯರು ಸಮೃದ್ಧ ಧಾರ್ಮಿಕಜೀವನಕ್ಕೂ ದಾರ್ಶನಿಕಸಾಹಿತ್ಯಕ್ಕೂ ಕಾರಣರಾಗಿದ್ದರು. ಅನ್ಯಮತಸಹಿಷ್ಣುತೆಯೊಂದಿಗೆ ವಿವಿಧ ಮತಧರ್ಮಗಳಲ್ಲಿ ಶ್ರದ್ಧೆಯಿದ್ದ ವ್ಯಕ್ತಿಗಳೂ ಹಲವಾರು ಜನರಿದ್ದು ಎಲ್ಲ ಮತದ ದೇವರುಗಳನ್ನೂ ಪುಜಿಸಿ ಗೌರವಿಸುತ್ತಿದ್ದ ನಿದರ್ಶನಗಳು ಹಲವಾರಿವೆ. ೧೧೨೯ರ ಶಾಸನದ ವಾಕ್ಯವೊಂದು ಇದಕ್ಕೆ ಉತ್ತಮ ನಿದರ್ಶನ: ಹರಿ-ಹರ-ಕಮಲಾಸನ-ವೀತರಾಗ-ಬೌದ್ಧಾಲಯಂಗಳಂದಿನ ವಸುಂಧರೆಗೆಸೆವ ಪಂಚಶರದಂತಿರೆ ಪಂಚಮಠಂಗಳೆಸೆವುವಾಪಟ್ಟಣದೊಳ್ ಎಂದು ಅದು ಬಳ್ಳಿಗಾವೆಯನ್ನು ವರ್ಣಿಸುತ್ತದೆ.

ಹೊಯ್ಸಳರ ಆಶ್ರಯದಲ್ಲಿ ಈ ನೀತಿಗೆ ಹೆಚ್ಚಿನ ಪ್ರಾಧಾನ್ಯವಿತ್ತೆಂದು ತಿಳಿದುಬರುತ್ತದೆ. ಅವರ ಶಾಸನಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಧ್ಯಾನ ಶ್ಲೋಕ ಇದಕ್ಕೆ ನಿದರ್ಶನ. ಶಿವನೆಂಬ ಹೆಸರಿನಿಂದ ಶೈವರೂ, ಬ್ರಹ್ಮವೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ನೈಯಾಯಿಕರೂ ಅರ್ಹನೆಂದು ಜೈನರೂ ಕರ್ಮವೆಂದು ಮೀಮಾಂಸಕರೂ ಯಾರನ್ನು ಪುಜಿಸುವರೋ ಆ ಕೇಶವೇಶ ನಮ್ಮನ್ನು ರಕ್ಷಿಸಿಲೆಂಬುದು ಆ ಶ್ಲೋಕಾರ್ಥ. ಈ ತತ್ತ್ವದ ಅನುಷ್ಠಾನ ಎಷ್ಟುಮಟ್ಟಿಗೆ ಬಳಕೆಯಲ್ಲಿತ್ತೆಂಬುದನ್ನು ಸಮಕಾಲೀನ ಶಾಸನಗಳೂ ಸಾಹಿತ್ಯವೂ ತೋರಿಸುತ್ತವೆ. ಎಲ್ಲ ಧರ್ಮಗಳ ದೇವತೆಗಳಿಗೂ ಆಲಯಗಳನ್ನು ಕಟ್ಟಿ ದಾನದತ್ತಿಗಳನ್ನು ನೀಡಲಾಗಿತ್ತು. ಶೈವರಲ್ಲಿ ವೈದಿಕರು, ಲಕುಲೀಶ ಪಾಶುಪತ ಸಂಪ್ರದಾಯದವರು ಮತ್ತು ವೀರಶೈವರೆಂಬ ತ್ರಿವರ್ಗಗಳವರಿದ್ದರು. ವೈಷ್ಣವರಲ್ಲಿ ವಾಸುದೇವನ ಆರಾಧಕರಾದ ಭಾಗವತರು, ದಕ್ಷಿಣದೇಶದ ಆಳ್ವಾರುಗಳ ಪಂಥ ಮತ್ತು ಅದರಿಂದ ವಿಕಾಸಗೊಂಡ ರಾಮಾನುಜೀಯ ಶ್ರೀವೈಷ್ಣವಪಂಥ ಮತ್ತು ಹೊಯ್ಸಳಯುಗದ ಕೊನೆಯ ಭಾಗದಲ್ಲಿ ಮಧ್ವಮುನಿ ಸಂಚಾಲಿತ ವೈಷ್ಣವಪಂಥಗಳು ಪ್ರಧಾನವಾಗಿದ್ದುವು. ವಿಷ್ಣುವಿನ ವಿವಿಧ ಅವತಾರಗಳೂ ಸೂರ್ಯ, ಶಕ್ತಿ, ಸರಸ್ವತಿ, ಕಾರ್ತಿಕೇಯ, ಗಣಪತಿಗಳನ್ನು ಪೂಜಿಸುತ್ತಿದ್ದ ಮತಪ್ರಭೇದಗಳೂ ರೂಢಿಯಲ್ಲಿದ್ದುವು ಈ ಕಾಲದಲ್ಲಿ ಹಿಂದೂ ಧರ್ಮದ ಇಬ್ಬರು ಮಹಾನ್ ಆಚಾರ್ಯಪುರುಷರು ದಕ್ಷಿಣ ಕರ್ನಾಟಕದಲ್ಲಿ ಬಾಳಿ ತಮ್ಮ ಉಪದೇಶಾಮೃತದಿಂದ ಧಾರ್ಮಿಕ ಪ್ರವೃತ್ತಿಯ ಬೆಳೆವಣಿಗೆಗೆ ಕಾರಣರಾದರು. ತಮಿಳು ದೇಶದಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳು ಪ್ರಸಾರಮಾಡಿದ ತತ್ತ್ವಗಳನ್ನು ೧೧ನೆಯ ಶತಕದಲ್ಲಿ ನಾಥಮುನಿಯೂ ಆತನ ಮೊಮ್ಮಗ ಯಾಮುನಾಚಾರ್ಯರು ಜನಪ್ರಿಯಗೊಳಿಸಿದ್ದರು. ಅದೇ ಸಂಪ್ರದಾಯಕ್ಕೆ ಸೇರಿದ ರಾಮಾನುಜಾಚಾರ್ಯರು (೧೦೭೧-೧೧೩೭) ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಜನಿಸಿದರಾದರೂ ತಮ್ಮ ಜೀವನದ ಸಂಧಿಕಾಲದಲ್ಲಿ ಇವರು ಕರ್ಣಾಟಕದಲ್ಲಿ ಆಶ್ರಯ ಪಡೆದರು. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಪಂಥವನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಶೈವನಾಗಿದ್ದ ಚೋಳರಾಜನ ಹಿಂಸೆಗೊಳಗಾಗಿ ತಮಿಳುನಾಡಿನಿಂದ ಕರ್ನಾಟಕದ ಸಾಲಿಗ್ರಾಮ, ತೊಂಡನೂರು, ಮೇಲುಕೋಟೆಗಳಲ್ಲಿ ಬಹುಕಾಲ ನೆಲೆಸಿದ್ದರು. ಇವರು ತೊಂಡನೂರಿನಲ್ಲಿದ್ದಾಗ ಹೊಯ್ಸಳ ವಿಷ್ಣುವರ್ಧನ ಇವರ ಪ್ರಭಾವಕ್ಕೊಳಗಾದ. ರಾಮಾನುಜರು ಕರ್ನಾಟಕದಲ್ಲಿ ತಮ್ಮ ತತ್ತ್ವಗಳನ್ನು ಬೋಧಿಸಿ ವಿಶಿಷ್ಟಾದ್ವೈತ ಮತವನ್ನು ಇಲ್ಲೂ ನೆಲೆಗೊಳಿಸಿದರು. ಜಾತಿ ವೈಷಮ್ಯಗಳನ್ನು ಎದುರಿಸಿ ಎಲ್ಲ ಜಾತಿಗಳವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರಲ್ಲದೆ ಅವುಗಳ ನಿರ್ಮೂಲಕ್ಕೂ ಶ್ರಮಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಭಕ್ತಿಮಾರ್ಗವನ್ನು ಉತ್ತೇಜಿಸಿದರು. ಪ್ರಪತ್ತಿಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯವೆಂಬುದು ಇವರ ಬೋಧನೆ. ತಲಕಾಡು, ಬೇಲೂರು, ತೊಂಡನೂರು, ಮೇಲುಕೋಟೆ ಮತ್ತು ಗದಗಗಳಲ್ಲಿ ನಾರಾಯಣ ದೇಗುಲಗಳ ಸ್ಥಾಪನೆಯೂ ಇವರು ಕರ್ನಾಟಕದಲ್ಲಿ ಸಾಧಿಸಿದ ಕಾರ್ಯಗಳಲ್ಲೊಂದೆಂದು ಹೇಳಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

  1. Абузоустойчивый VPS
    Виртуальные серверы VPS/VDS: Путь к Успешному Бизнесу

    В мире современных технологий и онлайн-бизнеса важно иметь надежную инфраструктуру для развития проектов и обеспечения безопасности данных. В этой статье мы рассмотрим, почему виртуальные серверы VPS/VDS, предлагаемые по стартовой цене всего 13 рублей, являются ключом к успеху в современном бизнесе

  2. https://medium.com/@PranavP84902/дешевый-виртуальный-выделенный-сервер-vds-на-ubuntu-linux-с-высокоскоростным-интернетом-290d89276d38
    https://medium.com/@EzequielMo81389/абузостойкий-vps-9784e7a0a587
    https://medium.com/@BraedonRus32798/бесплатный-vds-с-выделенным-сервером-на-ubuntu-linux-с-высокоскоростным-интернетом-4f4bf90044c1
    https://medium.com/@JeremyLee137398/аренда-выделенного-сервера-на-linux-5e3ff8866940
    https://medium.com/@BEdwards67867/выделенный-сервер-linux-353961893415

    VPS SERVER
    Высокоскоростной доступ в Интернет: до 1000 Мбит/с
    Скорость подключения к Интернету — еще один важный фактор для успеха вашего проекта. Наши VPS/VDS-серверы, адаптированные как под Windows, так и под Linux, обеспечивают доступ в Интернет со скоростью до 1000 Мбит/с, что гарантирует быструю загрузку веб-страниц и высокую производительность онлайн-приложений на обеих операционных системах.

ಸಂಚಾರಿ ವಿಜಯ್

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್

ಅಪ್ಪು ಕಾಲಿಗೆ ಬಿದ್ದ ವ್ಯಕ್ತಿ ಬಳಿಕ ಬಾಸ್ ಮಾಡಿದ್ದೇನು.

ಅಪ್ಪು ಕಾಲಿಗೆ ಬಿದ್ದ ವ್ಯಕ್ತಿ ಬಳಿಕ ಬಾಸ್ ಮಾಡಿದ್ದೇನು.