ತಿನ್ನುವುದು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಅದರಲ್ಲೂ ಬಾಗೆ ಬಗೆಯ ತಿನಿಸುಗಳು ಅಂದರೆ ಸಾಕು. ನಮ್ಮ ಕರ್ನಾಟಕದಲ್ಲೆ ಸಾಕಷ್ಟು ಬಗೆಯ ತಿನಿಸುಗಳು ಇವೆ .ಹಾಗೆ ಕರ್ನಾಟಕದ ಅಡುಗೆಯಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. ಪಕ್ಕದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಇವುಗಳ ಪ್ರಭಾವ ಕರ್ನಾಟಕದ ಅಡುಗೆಗಳ ಮೇಲೆ ಆಗಿದೆ. 1980ರ ದಶಕದ ನಂತರ ಉತ್ತರ ಭಾರತದ ಅಡುಗೆಗಳೂ ಕರ್ನಾಟಕದಲ್ಲಿ ಜನಪ್ರಿಯವಾದವು. ಇಲ್ಲಿನ ತಿನಿಸು ಪಕ್ಕದ ಮೂರು ದಕ್ಷಿಣ ಭಾರತದ ರಾಜ್ಯಗಳ ಮತ್ತು ರಾಜ್ಯದ ಉತ್ತರಕ್ಕೆ ಇರುವ ಮಹಾರಾಷ್ಟ್ರ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮತ್ತು ಸಮುದಾಯಗಳ ಆಹಾರ, ಹಾಗೂ ಪ್ರಭಾವವನ್ನು ಪ್ರತಿಫಲಿಸುತ್ತದೆ. ಕೆಲವು ವಿಶಿಷ್ಟ ಭಕ್ಷ್ಯಗಳಾಗಿ ಬಿಸಿ ಬೆಳೆ ಬಾತ್, ಜೋಳದ ರೊಟ್ಟಿ, ಚಪಾತಿ, ರಾಗಿ ರೊಟ್ಟಿ , ಅಕ್ಕಿ ರೊಟ್ಟಿ, ಉಪ್ಪಿಟ್ಟು , ಸಾರು, ಇಡ್ಲಿ-ವಡಾ ಸಾಂಬಾರ್, ವಾಂಗಿ ಬಾತ್, ಖರ ಬಾತ್, ಕೇಸರಿ ಬಾತ್, ಬೆಣ್ಣೆ ದೋಸೆ, ರಾಗಿ ಮುದ್ದೆ , ಪಡ್ದು / ಗುಂಡ್ಪೊಂಗ್ಲು, ಕೋಳಿ ಸಾರು, ಮಾಂಸದ ಸಾರು ಇವು ಸೇರಿವೆ.
ಪ್ರಸಿದ್ಧ ಮಸಾಲಾ ದೋಸೆ, ಉಡುಪಿ ಪಾಕಪದ್ಧತಿಯಲ್ಲಿ ಹಾಸು ಹೊಕ್ಕಿದೆ. ಸರಳ ಮತ್ತು ರವೆ ಇಡ್ಲಿ ಮೈಸೂರು ಮಸಾಲೆ ದೋಸೆ ಮತ್ತು ಮದ್ದೂರು ವಡೆ ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯವಾಗಿವೆ. ಕರಾವಳಿ ಕರ್ನಾಟಕ ಅನೇಕ ಟೇಸ್ಟಿ ಸಮುದ್ರಾಹಾರ ವಿಶೇಷತೆಗಳನ್ನೂ ಹೊಂದಿದೆ. ಕೆಲವು ಸಂದರ್ಭದಲ್ಲಿ ಕೊಡಗು ಜಿಲ್ಲಾ ವಿವಿಧ ಹಂದಿ ಮಸಾಲೆಗಳಿಗೆ ಪ್ರಸಿದ್ಧವಾಗಿದೆ.
ಸಿಹಿತಿಂಡಿಗಳಲ್ಲಿ, ಮೈಸೂರು ಪಾಕ್, ಹೋಳಿಗೆ, ಅಥವಾ ಒಬ್ಬಟ್ಟು, ಧಾರವಾಡ ಪೇಢ, ಚಿರೋಟಿ, ಸಜ್ಜಿಗೆ, ಕಡುಬು / ಕರ್ಜಿಕಾಯಿ ಮುಂತಾದವು ಹೆಸರುವಾಸಿಯಾಗಿದೆ. ಕೆಳಗಿನ ಅಡುಗೆಗಳು ಕರ್ನಾಟಕದಲ್ಲಿ ಅನ್ವೇಷಿಸಲ್ಪಟ್ಟು ಆನಂತರ ಭಾರತದ ಹಾಗೂ ಈಚೆಗೆ ವಿಶ್ವದ ಎಲ್ಲಾ ಕಡೆ ಪ್ರಸಿದ್ಧವಾಗಿವೆ.
ಮೈಸೂರು ರಸಂ ಅಥವಾ ಸಾರು
ಬಿಸಿಬೇಳೆಭಾತ್ ಅಥವಾ ಬಿಸಿಬೇಳೆ ಹುಳಿಯನ್ನ
ಚಿತ್ರಾನ್ನದ ಬಗೆಗಳು
ಕೋಸಂಬರಿ
ಮಸಾಲೆದೋಸೆ
ಮಂಗಳೂರು ಬಜ್ಜಿ
ಮದ್ದೂರುವಡೆ
ಅವರೆಕಾಯಿ ಅಕ್ಕಿರೊಟ್ಟಿ
ರಾಗಿರೊಟ್ಟಿ
ತೊಗರಿ ನುಚ್ಚಿನುಂಡೆ
ಮೈಸೂರುಪಾಕ್
ಧಾರವಾಡದ ಫೇಡೆ (ಪೇಡಾ)
ಬೆಳಗಾವಿ ಕುಂದಾ
ಹಲಸಿನ ಹಪ್ಪಳ
ದೋಸೆ – ಅನೇಕ ವಿಧದ ದೋಸೆಗಳು ಕರ್ನಾಟಕದಲ್ಲಿ ಪ್ರಸಿದ್ಧ. ಇವುಗಳಲ್ಲಿ “ನೀರುದೋಸೆ” ಎಂಬುದು ಕರ್ನಾಟಕದ ವಿಶೇಷ. ಅಕ್ಕಿ ಮತ್ತು ಕೊಬ್ಬರಿ ಎರಡನ್ನೂ ರುಬ್ಬಿದ ಹಿಟ್ಟಿನಿಂದ ತಯಾರಿಸಿದ ಈ ಖಾದ್ಯವನ್ನು ಕೊಬ್ಬರಿ ಚಟ್ಣಿಯೊಂದಿಗೆ ಬಡಿಸಲಾಗುತ್ತದೆ. ಸಾದಾದೋಸೆ, ಮಸಾಲೆದೋಸೆ, ರವೆದೋಸೆ, ರಾಗಿದೋಸೆ, ಗೋಧಿದೋಸೆ, ಇತ್ಯಾದಿ ನಾನಾ ವೈವಿಧ್ಯಗಳನ್ನು ಸೃಷ್ಟಿಸಲಾಗಿದೆ. “ದಾವಣಗೆರೆ ಬೆಣ್ಣೆದೋಸೆ” ಎಂಬುದು ಬಹಳ ಜನಪ್ರಿಯ.
ಉತ್ತಪ್ಪ – ಸ್ವಲ್ಪ ದಪ್ಪವಾದ ದೋಸೆ; ದೋಸೆಯ ಮೇಲೆ ಕತ್ತರಿಸಿದ ಟೊಮೇಟೋ, ಮೆಣಸಿನಕಾಯಿ, ಈರುಳ್ಳಿ ಮೊದಲಾದವುಗಳನ್ನು ಹರಡುತ್ತಾರೆ.
ಇಡ್ಲಿ – ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ ರುಬ್ಬಿ ಮಾಡಿದ ಖಾದ್ಯ. ಇಡ್ಲಿಯೊಂದಿಗೆ ಉದ್ದಿನ ವಡೆ ಬಹಳ ಜನಪ್ರಿಯ. ಇವುಗಳನ್ನು ಕೊಬ್ಬರಿ ಚಟ್ಣಿಯೊಂದಿಗೆ ಸವಿಯುತ್ತಾರೆ. ತಮಿಳುನಾಡಿನ ಪ್ರಭಾವದಿಂದ ಸಾಂಬಾರ್ ಕೂಡಾ ಜನಪ್ರಿಯವಾಗಿದೆ.
ಕಡುಬು – ಜನಪ್ರಿಯವಾದ ಇಡ್ಲಿಯ ಸೋದರ ಎನ್ನಬಹುದಾದ ಈ ಖಾದ್ಯವನ್ನು ಹಲಸಿನ ಎಲೆಯ ಸುರುಳಿಯಲ್ಲಿಟ್ಟು ಬೇಯಿಸುತ್ತಾರೆ.
ರಾಗಿರೊಟ್ಟಿ – ರಾಗಿಹಿಟ್ಟನ್ನು ಕುದಿಯುವ ನೀರಿನಲ್ಲಿ ಕಲಸಿ ಮಾಡುವ ರೊಟ್ಟಿ ಜನಪ್ರಿಯ ಖಾದ್ಯ.
ಅಕ್ಕಿರೊಟ್ಟಿ – ಅಕ್ಕಿಹಿಟ್ಟಿನಿಂದ ತಯಾರಿಸುವ ರೊಟ್ಟಿಯಲ್ಲಿ ನಾನಾ ವಿಧಗಳಿವೆ. ಅವರೇಕಾಯಿ, ಈರುಳ್ಳಿ, ಸಬ್ಬಸೀಗೆ ಸೊಪ್ಪು ಮೊದಲಾದವುಗಳನ್ನು ಹಿಟ್ಟಿಗೆ ಬೆರೆಸುವ ಮೂಲಕ ಅನೇಕ ವೈವಿಧ್ಯಗಳನ್ನು ಈ ರೊಟ್ಟಿಯಲ್ಲಿ ನೋಡಬಹುದು.
ಉಪ್ಪಿಟ್ಟು – ಗೋಧಿ ಅಥವಾ ಅಕ್ಕಿ ರವೆಯಿಂದ ಮಾಡಿದ ಖಾದ್ಯ. ಕೆಲವರು ಇದನ್ನು ಖಾರಾಭಾತ್ ಎನ್ನುತ್ತಾರೆ. ಇದರಲ್ಲೂ ಅನೇಕ ವೈವಿಧ್ಯಗಳಿವೆ. ಅವರೇಕಾಯಿ ಉಪ್ಪಿಟ್ಟು ಬಹಳ ವಿಶೇಷ.
ಅವಲಕ್ಕಿ – ಅವಲಕ್ಕಿಯನ್ನು ನೆನೆಸಿ ಒಗ್ಗರಣೆಗೆ ಹಾಕುತ್ತಾರೆ. ಗೊಜ್ಜವಲಕ್ಕಿ, ಮೊಸರವಲಕ್ಕಿ, ಸಿಹಿ ಅವಲಕ್ಕಿ ಎಂಬ ವೈವಿಧ್ಯಗಳೂ ಇವೆ.
ಶ್ಯಾವಿಗೆ – ಗೋಧಿ ಅಥವಾ ಅಕ್ಕಿಯ ಶ್ಯಾವಿಗೆಯನ್ನು ಹಬೆಯಲ್ಲಿ ಬೇಯಿಸಿ ಅದಕ್ಕೆ ಒಗ್ಗರಣೆ ಹಾಕಿ ಮಾಡಿದ ಖಾದ್ಯ. ಅನೇಕ ವೈವಿಧ್ಯಗಳಿವೆ.
ನವಣೆ/ಸಾಮೆ ಅಕ್ಕಿ/ರಾಗಿ ಮೊದಲಾದ ಧಾನ್ಯಗಳಿಂದಲೂ ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು ಮೊದಲಾದವುಗಳನ್ನು ತಯಾರಿಸುತ್ತಾರೆ.
ದಕ್ಷಿಣ ಕರ್ನಾಟಕ ಅಥವಾ ಹಳೆಯ ಮೈಸೂರು ಪ್ರದೇಶದ ಬಯಲುಸೀಮೆ ಅಥವಾ ಇಂದಿನ ಕೋಲಾರ, ಬೆಂಗಳೂರು, ಮೈಸೂರ್ , ತುಮಕೂರು , ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಬಯಲು ಎಂದು ಕರೆಯಲಾಗುತ್ತದೆ. ರಾಗಿ ಮತ್ತು ಅಕ್ಕಿ ಅತಿ ಮುಖ್ಯವಾದ ಪ್ರಧಾನ ಧಾನ್ಯಗಳು, ಜೋಳ ಮತ್ತು ಜೋಳ ಯಾ ಅಂತಹುದೇ ಧಾನ್ಯ ಸಹ ಪ್ರದೇಶದ ಒಣ ಭಾಗಗಳಲ್ಲಿ ಬೆಳೆದು ಸೇವಿಸಲಾಗುತ್ತದೆ . ದಿನದ ಮೊದಲ ಊಟ ಸಾಕಷ್ಟು ಗಣನೀಯ ಉಪಹಾರ ಹೊಂದಿದೆ.
ಉತ್ತರ ಕರ್ನಾಟಕದ ಸಸ್ಯಾಹಾರಿ ಊಟ ಹೀಗಿರುತ್ತದೆ.
ಜೋಳದ ರೊಟ್ಟಿ – ತೆಳುವಾದ ರೊಟ್ಟಿಯನ್ನು ಸಾಮಾನ್ಯವಾಗಿ ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಸೀಧಾ ಬೆಂಕಿಯಾ ಮೇಲೆ ಅಥವಾ ಕಬ್ಬಿಣದ ಬಾಣಲೆ ಮೇಲೆ ಬೇಯಿಸಲಾಗುತ್ತದೆ. ಜೋಳ ಯಾ ಅಂತಹುದೇ ಧಾನ್ಯ ಮತ್ತು ಗೋಧಿ ಹಿಟ್ಟು ಕೂಡ ಪರ್ಯಾಯವಾಗಿ ಬಳಸಲಾಗುತ್ತದೆ.
ಎಣ್ಣೆ-ಗಯಿ / ತುಂಬು-ಗಯಿ – ಸಣ್ಣ ಬದನೆಕಾಯನ್ನು ನೆಲದ ಕಡಲೆಕಾಯಿ, ನೆಲದ ಎಳ್ಳು, ಶುಂಠಿ, ಬೆಳ್ಳುಳ್ಳಿ, ಗರಂ ಮಸಾಲಾ, ಉಪ್ಪು, ಮತ್ತು ನಂತರ ಸಾಟಿ ಈರುಳ್ಳಿ ಮತ್ತು ಇತರ ಮಸಾಲೆಗಳೊಂದಿಗೆ ಸೇರಿದಂತೆ ತುಂಬಿಸಿ. ಬದನೆಕಾಯಿ ಬದಲಿಗೆ ಯಾವುದೇ ಇತರ ಸೂಕ್ತ ತರಕಾರಿ ಬಳಸಬಹುದು.ಜನಪ್ರಿಯ ಸಿಹಿತಿನಿಸುಗಳು ಶೇಂಗ ಉಂಡೆಗೊಡಿ ಹುಗ್ಗಿ ಶೇಂಗಾ / ಸೇಸಮೆ ಚಟ್ನಿ – ವಿವಿಧ ನೆಲದ ಕಡಲೆಕಾಯಿ ಅಥವಾ ಎಳ್ಳಿನ ತಯಾರಿಸಲಾಗುವ ಪುಡಿ / ಡ್ರೈ ಚಟ್ನಿ. ಕೆಂಪು ಕಾರ ಅಥವಾ ರಂಜಕ – ಒಂದು ವ್ಯಂಜನ ಪದಾರ್ಥದಂತೆ ಸೇವಿಸುವ ಚಟ್ನಿ ಪೇಸ್ಟ್ ಕೆಂಪು ಮೆಣಸಿನಕಾಯಿಗಳಳೊಂದಿಗ ಮಾಡಲಾಗುತ್ತದೆ.
ಕಾಳುಪಲ್ಯ – ಮೊಳಕೆ ಎಬ್ಬಿಸಿದ ಕಾಳನ್ನು ಬೇಯಿಸಿ ಒಗ್ಗರಣೆ ಹಾಕಿದ ಪಲ್ಯ. ಕಡಲೆಕಾಳು, ಮಡಕೆಕಾಳು ಇತ್ಯಾದಿ ಅನೇಕಬಗೆಯ ಕಾಳುಗಳಿಂದ ತಯಾರಿಸುತ್ತಾರೆ.
ಎಳ್ಳುಪುಡಿ – ಎಳ್ಳು ಮತ್ತಿತರ ಮಸಾಲೆಪದಾರ್ಥಗಳನ್ನು ಹುರಿದು ಪುಡಿ ಮಾಡಿ ತಯಾರಿಸಿದ ಚಟ್ನಿಪುಡಿ
ಗೋಧಿ ಹುಗ್ಗಿ – ಕುಟ್ಟಿದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ, ಬೆಲ್ಲ ಮತ್ತು ತುಪ್ಪ ಬೆರೆಸಿ ಮಾಡುವ ವಿಶೇಷ ಸಿಹಿತಿಂಡಿ.
ಇನ್ನೂ ಹಲವಾರು ಖಾದ್ಯಗಳು ನಮ್ಮ ಕರ್ನಾಟಕದಲ್ಲಿ ಪ್ರಚಲಿತವಾಗಿದೆ .
ಧನ್ಯವಾದಗಳು.
GIPHY App Key not set. Please check settings