in , ,

ಕರಿ ಮೆಣಸು ಬೆಳೆಯುವ ರೀತಿ ಮತ್ತು ಆರೋಗ್ಯಕರ ಲಾಭಗಳು

ಕರಿ ಮೆಣಸು
ಕರಿ ಮೆಣಸು

ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಉಪಯೋಗಿಸುತ್ತಾರೆ. ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು. ಇದನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.

ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.

ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ ಬಳಕೆಯಿಂದ ಬಂದಿದೆ.

ಕರಿ ಮೆಣಸು ಬೆಳೆಯುವ ರೀತಿ ಮತ್ತು ಆರೋಗ್ಯಕರ ಲಾಭಗಳು
ಹಸಿಯಾದ ಕಾಳು ಮೆಣಸು

ಕರಿಮೆಣಸನ್ನು ಇನ್ನೂ ಮಾಗದ ಹಸಿ ಕಾಳುಮೆಣಸಿನಿಂದ ತಯಾರಿಸುತ್ತಾರೆ. ಹಸಿಯಾದ ಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತಿನವರೆಗೆ ಕುದಿಸಿ ನಂತರ ಶುಧ್ದೀಕರಿಸಿದ ಕಾಳನ್ನು ಒಣಗಿಸುತ್ತಾರೆ. ಈ ಕ್ರಿಯೆಯು ಕಾಳಿನಲ್ಲಿರುವ ಜೀವಕೋಶದ ಹೊರಪದರವನ್ನು ತುಂಡರಿಸಿ, ಕಾಳು ಬೇಗನೆ ಕಂದಲು ಸಹಾಯ ಮಾಡುತ್ತದೆ. ಕಾಳುಗಳನ್ನು ಸಾಮಾನ್ಯವಾಗಿ ಬಿಸಿಲಿನಲ್ಲಿ ಅಥವ ಯಂತ್ರಗಳಲ್ಲಿ ಕೆಲವು ದಿನಗಳವರೆಗೆ ಒಣಗಿಸಲಾಗುತ್ತದೆ. ಈ ಸಮಯದಲ್ಲಿ ಕಾಳಿನ ಸುತ್ತಲಿರುವ ಹಣ್ಣು ಸಂಕುಚನಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಒಣಗಿದ ಕಾಳನ್ನು ಕರಿಮೆಣಸು ಎನ್ನುತ್ತಾರೆ.

ಮೆಣಸಿನ ಹೊರ ಕವಚವನ್ನು ಬೇರ್ಪಡಿಸಿ ಉಳಿಯುವ ಕಾಳಿಗೆ ಬಿಳಿ ಮೆಣಸು ಎನ್ನುತ್ತಾರೆ. ಚೆನ್ನಾಗಿ ಹಣ್ಣಾದ ಮೆಣಸನ್ನು ಸುಮಾರು ಒಂದು ವಾರ ನೀರಿನಲ್ಲಿ ನೆನೆಸಿಟ್ಟರೆ, ಅದರ ಹಣ್ಣಿನಂಥಹ ಹೊರಕವಚ ಮೆತ್ತಗಾಗಿ ಕೊಳೆಯಲಾರಂಭಿಸುತ್ತದೆ. ನೀರಿನಿಂದ ಹೊರತೆಗೆದು ಉಜ್ಜಿದರೆ, ಈ ಹಣ್ಣಿನ ಅಂಶ ಹಾಗೂ ಬೀಜ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಬೀಜವನ್ನು ಒಣಗಿಸಿದಾಗಿ ಬಿಳಿಮೆಣಸು ತಯಾರಾಗುತ್ತದೆ. ಇನ್ನೂ ಮಾಗದ ಮೆಣಸನ್ನು ಒಣಗಿಸಿ ತಯಾರಿಸಲಾದ ಕರಿಮೆಣಸಿನ ಹೊರ ಕವಚವನ್ನು ತಗೆದು ಬಿಳಿಮೆಣಸು ತಯಾರಿಸುವ ಪದ್ಧತಿಯೂ ಇದೆ.

ಹಸಿರು, ಕೆಂಪು ಹಾಗೂ ಒಣಗಿದ ಕಪ್ಪು ಕರಿಮೆಣಸು
ಮೆಣಸು ಕಾಳುಗಳನ್ನು ಅದರ ಮೂಲವನ್ನವಲಂಬಿಸಿ ವರ್ಗೀಕರಿಸಲಾಗುತ್ತದೆ. ಎರಡು ಬಹಳ ಜನಪ್ರಿಯ ತಳಿಗಳು ಭಾರತದ ಮಲಬಾರ್ ತೀರದಲ್ಲಿ ದೊರೆಯುವ ತಳಿಗಳು, ಮಲಬಾರ್ ಮೆಣಸು ಹಾಗೂ ತೆಲ್ಲಿಚೆರಿ ಮೆಣಸು. ತೆಲ್ಲಿಚೆರಿ ತಳಿ ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯೆಂದು ಹೇಳಲಾಗುತ್ತದೆ. ಸರವಾಕ ಎಂಬ ತಳಿಯ ಮೆಣಸು ಮಲೇಶಿಯದ ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋಂಗ್ ಎಂಬ ತಳಿ ಇಂಡೋನೇಶಿಯದ ಸುಮಾತ್ರ ದ್ವೀಪದಲ್ಲಿ ದೊರಕುತ್ತವೆ. ಬಿಳಿಯ ಮುಂಟೋಕ್ ಮೆಣಸು ಇಂಡೋನೇಶಿಯದ ಮತ್ತೊಂದು ಉತ್ಪಾದನೆ, ಬಾಂಗ್ಕಾ ದ್ವೀಪದಲ್ಲಿ ದೊರೆಯುವಂತದ್ದು.

ಭಾರತದಲ್ಲಿ ಕರಿಮೆಣಸು ಸಾಂಬಾರ ಪದಾರ್ಥವಾಗಿ ಪುರಾತನ ಕಾಲದಿಂದಲೂ ಬಳಕೆಯಾಗುತ್ತಿದೆ. ಕೇರಳದ ಮಲಬಾರ್ ತೀರದಲ್ಲಿ ಇದರ ಕೃಷಿ ಮೊಟ್ಟಮೊದಲು ಪ್ರಾರಂಭವಾಗಿರಬೇಕು ಎಂಬ ಊಹೆಯಿದೆ. “ಕಪ್ಪು ಚಿನ್ನ” ಎಂದೇ ಹೆಸರಾಗಿದ್ದ ಮೆಣಸಿನಕಾಳು ಬಹಳ ಬೆಲೆಬಾಳುವ ವಾಣಿಜ್ಯ ಸಾಮಗ್ರಿಯಾಗಿತ್ತು. ಇದನ್ನು ಹಣದ ರೂಪದಲ್ಲಿ ಬಳಸಿದ್ದೂ ಇದೆ. ಸಹ್ಯಾದ್ರಿಯ ಮೆಣಸು ಬೆಳೆ ಪಶ್ಚಿಮ ಕರಾವಳಿಯ ಹಳೆಯ ರೇವುಪಟ್ಟಣಗಳಿಂದ ಜಗತ್ತಿನ ಮೂಲೆಮೂಲೆಗಳಿಗೆ ರಫ್ತಾಗುತ್ತಿತ್ತು. ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಭಾರತದ ಮೆಣಸಿನ ರುಚಿ ಹತ್ತಿತ್ತು. ನೇರವಾಗಿ ಭಾರತದೊಂದಿಗೆ ವ್ಯಾಪಾರ ಬೆಳಸದವರಿಗೆ ಅರಬ್ಬಿ ವರ್ತಕರು ಭಾರತದ ಮೆಣಸನ್ನು ಕೈಮುಟ್ಟಿಸುತ್ತಿದ್ದರು. ವಿಜಯನಗರದ ಅರಸರ ಕಾಲದಲ್ಲಿ ಅಮೇರಿಕಾ ಮೆಣಸಿನಕಾಯಿ ಭಾರತದಲ್ಲಿ ಕಾಲಿಡುವ ಮುನ್ನ ಅಡುಗೆಯಲ್ಲಿ ಖಾರಕ್ಕಾಗಿ ಮೆಣಸು, ಹಿಪ್ಪಲಿ ಶುಂಠಿ, ಜೀರಿಗೆಗಳ ಬಳಕೆಯಾಗುತ್ತಿತ್ತು. ಭಾರತಕ್ಕೆ ಮೆಣಿಸಿನಕಾಯಿಯನ್ನು ಪರಿಚಯಿಸಿದ ಐರೋಪ್ಯರು ಮೆಣಸನ್ನು ಕೊಂಡೊಯ್ದು ಮಡಗಾಸ್ಕರ್ ಆಫ್ರಿಕಾ ಖಂಡದ ಪೂರ್ವಕ್ಕಿರುವ ಒಂದು ದ್ವೀಪರಾಷ್ಟ್ರ, ಜಾವಾ ದ್ವೀಪ, ಸುಮಾತ್ರ, ಮಲೇಷಿಯಾ ಮುಂತಾದ ಆಗ್ನೇಯ ಏಷಿಯಾದ ಪ್ರದೇಶಗಳಲ್ಲಿ ಬೆಳೆದು ತಾವುಗಳೆ ಚೀನಾದೊಂದಿಗೆ ವ್ಯಾಪಾರಕ್ಕೆ ತೊಡಗಿದರು.

ಕರಿ ಮೆಣಸು ಬೆಳೆಯುವ ರೀತಿ ಮತ್ತು ಆರೋಗ್ಯಕರ ಲಾಭಗಳು
ಮೆಣಸಿನಕಾಳು ಕೃಷಿ

ಕರಿಮೆಣಸಿನ ಪುರಾತನ ಇತಿಹಾಸ ಆಗಾಗ, ಒಣಗಿದ ಫಲವಾದ “ಪೈಪರ್ ಲೋಗಂ”ಗೆ ಹತ್ತಿರವಾದ ಹಿಪ್ಪಲಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುತ್ತದೆ ಅಥವಾ ತಪ್ಪಾಗೆ ತಿಳಿಯಲ್ಪಡುತ್ತದೆ. ರೋಮನರಿಗೆ ಎರಡರ ಬಗ್ಗೆಯೂ ತಿಳಿದಿದ್ದು ಎರಡನ್ನೂ ಅವರು “ಪೈಪರ್” ಎಂದು ಕರೆಯುತ್ತಿದ್ದರು. ವಸ್ತುತಃ ಹೊಸ ಜಗತ್ತಿನ ಖಾರ ಮೆಣಸಿನ ಪ್ರಸಿದ್ಧಿಯ ಮುನ್ನ ಹಿಪ್ಪಲಿಯ ಖ್ಯಾತಿ ಪತನವಾಗಿರಲಿಲ್ಲ. ಒಣಗಿಸಿದಾಗ ಹಿಪ್ಪಲಿಯ ರುಚಿಗೆ ಹಾಗು ಆಕಾರಕ್ಕೆ ಹೊಂದುವ ಖಾರ ಮೆಣಸನ್ನು ಯೂರೋಪಿನ ಅನೇಕ ಸ್ಥಳಗಳಲ್ಲಿ ಬೆಳೆಸುವುದು ಸುಲಭವಾಗಿತ್ತು.

ವಾಸ್ತವವಾಗಿ, ಮಧ್ಯಮ ಯುಗದ ಅಂತ್ಯದ ನಂತರದವರೆಗೂ ಎಲ್ಲ ಕರಿಮೆಣಸೂ ಸಹ ಯೂರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ನಂತರದಲ್ಲಿ ಭಾರತದ ಮಲಬಾರ್ ಪ್ರದೇಶದಲ್ಲಿ ಕಾಣಸಿಗುತ್ತಿತ್ತು. ೧೬ನೇ ಶತಮಾನದ ಹೊತ್ತಿಗೆ ಮೆಣಸನ್ನು ಜಾವ, ಸುಂದ, ಸುಮಾತ್ರ, ಮಡಗಾಸ್ಕರ್, ಮಲೇಷ್ಯ ಮತ್ತು ಇತರ ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು, ಆದರೆ ಈ ಪ್ರದೇಶಗಳು ಮುಖ್ಯವಾಗಿ ಚೀನಾ ಜೊತೆಗೆ ವ್ಯಾಪಾರ ಮಾಡುತ್ತಿದ್ದವು ಅಥವಾ ಪ್ರಾದೇಶಿಕವಾಗಿ ಉಪಯೋಗಿಸುತ್ತಿದ್ದವು. ಮಲಬಾರ್ ಪ್ರದೇಶ ಬಂದರುಗಳು ಹಿಂದೂ ಮಹಾ ಸಾಗರದ ದೂರಪ್ರಾಚ್ಯಗಳಿಂದ ಇತರ ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ಕೇಂದ್ರಸ್ಥಾನವಾಗಿ ಆಧರಿಸಿತ್ತು.

ಅಲೆಕ್ಸಾಂಡರಿನ ಕಾಲಕ್ಕಾಗಲೆ ಗ್ರೀಕರಿಗೆ ಭಾರತದ ಮೆಣಸಿನ ಬಗ್ಗೆ ತಿಳಿದಿತ್ತು. ಅವರಲ್ಲಿ ಹಿಪ್ಪಲಿಯ ಬಳಕೆಯೂ ಇತ್ತು. ದಕ್ಷಿಣ ಭಾರತದ ಮೆಣಸು ಪಶ್ಚಿಮ ಸಮುದ್ರದ ತೀರದ ಗುಂಟ ಸಾಗುತ್ತಿದ್ದ ವ್ಯಾಪಾರ ನೌಕೆಗಳಲ್ಲಿ ಗ್ರೀಸನ್ನು ತಲುಪುತ್ತಿತ್ತು. ಆದರೆ ವಾಯವ್ಯ ಭಾರತದ ಬೆಳೆಯಾದ ಹಿಪ್ಪಲಿಯನ್ನು ಭೂಮಾರ್ಗದಲ್ಲಿ ಸಾಗಿಸುತ್ತಿದರು. ಅಂತಲೆ ಗ್ರೀಕರಿಗೆ ಮೆಣಸಿಗಿಂತಲೂ ಹಿಪ್ಪಲಿಯು ಸುಲಭವಾಗಿ ಕೊಳ್ಳಲು ಬರುತ್ತಿತ್ತು. ಆದರೂ ಇವೆರಡೂ ತುಟ್ಟಿಯ ಪದಾರ್ಥಗಳಾಗಿದ್ದಿರಲೂ ಜನಸಾಮಾನ್ಯರ ಎಟುಕಿಗೆ ಮೀರಿ ಇದ್ದರಲೂ ಸಾಕು.

ಆರೋಗ್ಯಕರ ಲಾಭಗಳು :

ಶೀತ ಕೆಮ್ಮು ಇದ್ದರೆ, ಚಹಾಕ್ಕೆ ಕರಿಮೆಣಸು ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಿರಿ. ಇದರಿಂದ ನಿಮ್ಮ ಶೀತ ಕೆಮ್ಮು ಮಾಯವಾಗುತ್ತದೆ. ಅಷ್ಟೇ ಅಲ್ಲದೆ ಬೆಲ್ಲದೊಂದಿಗೆ ಕಾಳು ಮೆಣಸನ್ನು ಮಿಶ್ರ ಮಾಡಿ ಸಣ್ಣ ಮಾತ್ರೆಗಳನ್ನಾಗಿಸಿ ಕೂಡ ಸೇವಿಸಬಹುದು. ಇದನ್ನು ನಿರಂತರ ಸೇವಿಸುವುದರಿಂದ ಕೆಮ್ಮು, ಗಂಟಲು ಕೆರೆತ, ಶೀತದ ಸಮಸ್ಯೆ ದೂರವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ .
ಹಸಿವನ್ನು ಹೆಚ್ಚಿಸುತ್ತದೆ.
ಹಾಲಿನೊಂದಿಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದು ಸಹ ಉತ್ತಮ.
ಗಂಟಲು ಕೆರೆತ,ಶೀತ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ.

ಕರಿ ಮೆಣಸು ಬೆಳೆಯುವ ರೀತಿ ಮತ್ತು ಆರೋಗ್ಯಕರ ಲಾಭಗಳು
ಕರಿ ಮೆಣಸು

ಕಾಳುಮೆಣಸಿನಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳಿನ ಕ್ಯಾನ್ಸರ್,ಚರ್ಮದ ಕ್ಯಾನ್ಸರ್ ಮುಂತಾದವುಗಳನ್ನು ತಡೆಗಟ್ಟುವ ಗುಣಗಳಿವೆ. ಪ್ರತಿದಿನ ಅಡುಗೆಯಲ್ಲಿ ಕಾಳುಮೆಣಸನ್ನು ಬಳಸಿ. ಅಡುಗೆಗೆ ಬಳಸುವ ಬದಲು ಹಾಗೆಯೇ ತಿಂದರೆ ಕೂಡ ಇನ್ನೂ ಒಳ್ಳೆಯದು.

ಗಂಟಲ ನೋವನ್ನು ಗುಣಪಡಿಸಲು, ಕರಿಮೆಣಸನ್ನು ಅಗೆಯುವುದು ಉತ್ತಮ. ನಿಮಗೆ ಜ್ವರ ಇದ್ದರೆ, ತುಳಸಿ, ಕರಿಮೆಣಸಿನ ಕಷಾಯವನ್ನು ಕುಡಿಯುವುದು ಪ್ರಯೋಜನಕಾರಿ. ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳಿದ್ದಲ್ಲಿ ಕರಿಮೆಣಸು ಮತ್ತು ಪುದೀನ ಚಹಾವನ್ನು ಕುಡಿಯಿರಿ. ಇದಲ್ಲದೆ, ಕರಿಮೆಣಸು, ತುಪ್ಪ ಮತ್ತು ಸಕ್ಕರೆ ಕ್ಯಾಂಡಿಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚವನ್ನು ತೆಗೆದುಕೊಳ್ಳಿ. ಇದರಿಂದ ಸಹ ಉಸಿರಾಟ ಸಮಸ್ಯೆಗೆ ಪರಿಹಾರ ಕಾಣಬಹುದು.

ಅತಿಸಾರ, ಕಿವಿನೋವು , ವ್ರಣ, ಹೃದ್ರೋಗ , ಹರ್ನಿಯಾ , ಗಂಟಲ ನೋವು, ಅಜೀರ್ಣ , ಕೀಟ ವಿಷಭಾದೆ, ನಿದ್ರಾಹೀನತೆ,ಕೀಲು ನೋವು ಯಕೃತ್ತಿನ ತೊಂದರೆ, ಶ್ವಾಸಕೋಶದ ಕಾಯಿಲೆಗಳು , ಬಾಯಿ ಹುಣ್ಣು , ಚರ್ಮರೋಗ, ಹುಳುಕು ಹಲ್ಲು, ಮತ್ತು ಹಲ್ಲು ನೋವು ಗಳಿಗೆ ಔಷಧಿಯಂತೆ ಕೆಲಸ ಮಾಡುತ್ತೆ.

ಕರಿಮೆಣಸು ಮತ್ತು ಕಪ್ಪು ಉಪ್ಪನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗೆ ಗುಡ್​ಬೈ ಹೇಳಬಹುದು. ಈ ರೀತಿಯ ಪಾನೀಯ ಕುಡಿಯುವುದರಿಂದ ಹೊಟ್ಟೆಯಲ್ಲಿ ಸೂಕ್ಷ್ಮಜೀವಿಗಳು ಸಾಯುತ್ತವೆ. ಹಾಗೆಯೇ ಹೊಟ್ಟೆ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗೌರಿ ಗಣೇಶ ಹಬ್ಬದ ವಿಶೇಷತೆ

ಗೌರಿ ಗಣೇಶ ಹಬ್ಬದ ವಿಶೇಷತೆ

ವಿಟಮಿನ್ ಬಿ 12

ವಿಟಮಿನ್ ಬಿ 12 ಮಾನವನ ದೇಹಕ್ಕೆ ಏಷ್ಟು ಮುಖ್ಯ?