ಸಬ್ಬಸಿಗೆಯು ಒಂದು ಅಲ್ಪಕಾಲದ ಬಹುವಾರ್ಷಿಕ ಮೂಲಿಕೆ. ಅದು ಅನೇಥಮ್ ಪಂಗಡದ ಏಕಮಾತ್ರ ಜಾತಿ, ಆದರೆ ಕೆಲವು ಸಸ್ಯಶಾಸ್ತ್ರಜ್ಞರಿಂದ ಒಂದು ಸಂಬಂಧಿತ ಪಂಗಡದಲ್ಲಿ ಪ್ಯೂಸೇಡ್ಯಾನಮ್ ಗ್ರ್ಯಾವಿಯೋಲೆನ್ಸ್ ಎಂದು ವರ್ಗೀಕರಿಸಲಾಗುತ್ತದೆ. ಅದು ಕೃಶವಾದ ಕಾಂಡಗಳು ಮತ್ತು ೧೦-೨೦ ಸೆ.ಮಿ. ಉದ್ದದ ಪ್ರತಿಯಾದ, ನಯವಾಗಿ ವಿಭಜಿತವಾದ, ಕೋಮಲವಾದ ಮೆತ್ತಗಿನ ಎಲೆಗಳೊಂದಿಗೆ ೪೦-೬೦ ಸೆ.ಮಿ. ಎತ್ತರಕ್ಕೆ ಬೆಳೆಯುತ್ತದೆ.
ಸಬ್ಬಸಿಗೆ ಎಲೆಗಳನ್ನು ಭಾರತದಲ್ಲಿ ‘ಸೋಯಾ’, ‘ಸೋವಾ’ ಅಥವಾ ‘ಸಾವಾ’ ಎಂದು ಕರೆಯಲಾಗುತ್ತದೆ. ಭಾರತೀಯರು ದ್ವಿದಳ ಧಾನ್ಯಗಳು, ಉಪ್ಪಿನಕಾಯಿ ಮತ್ತು ತರಕಾರಿ ಅಡುಗೆಗಳನ್ನು ತಯಾರಿಸುವಾಗ ಸಬ್ಬಸಿಗೆ ಸೊಪ್ಪನ್ನು ಬಳಸುತ್ತಾರೆ. ಬೇಳೆ ಬೇಯಿಸುವಾಗ ನೀವು ಈ ಸೊಪ್ಪನ್ನು ನೇರವಾಗಿ ಸೇರಿಸಬಹುದು ಅಥವಾ ಆಲೂಗಡ್ಡೆ ಜೊತೆಗೆ ತರಕಾರಿಯಾಗಿ ಬೇಯಿಸುವ ಮೂಲಕ ನೀವು ಸಬ್ಬಸಿಗೆ ಎಲೆಗಳಿಂದ ಖಾದ್ಯವನ್ನು ತಯಾರಿಸಬಹುದು. ದಿನ ನಿತ್ಯ ಕುಡಿಯುವ ಚಹಾಕ್ಕೆ ಕೂಡ ಸಬ್ಬಸಿಗೆ ಎಲೆಗಳನ್ನು ಸೇರಿಸಬಹುದು.
ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ನಮ್ಮ ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹ ಸಹಾಯ ಮಾಡುತ್ತದೆ. ಸಬ್ಬಸಿಗೆ ಸೊಪ್ಪಿನಲ್ಲಿ ಇರುವ ವಿಟಮಿನ್ ಎ ನಮ್ಮ ದೃಷ್ಟಿಯನ್ನು ಬಲಪಡಿಸುವ ಮೂಲಕ ಸಹಾಯ ಮಾಡುತ್ತದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಬ್ಬಸಿಗೆ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಸಬ್ಬಸಿಗೆ ಸೊಪ್ಪನ್ನು ಸಾಂಬಾರು, ಪಲ್ಯ, ಪಲಾವ್ ಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಈ ಸೊಪ್ಪಿನಿಂದ ಇನ್ನೂ ನಾನಾ ತರಹದ ಅಡುಗೆಗಳನ್ನು ತಯಾರಿಸುತ್ತಾರೆ. ಹಾಗು ಸಬ್ಬಸಿಗೆ ಬೀಜಗಳನ್ನು ಸಾಂಬಾರಿನಲ್ಲಿ ಬಳಸುತ್ತಾರೆ.
ಸಬ್ಬಸಿಗೆ ಸೊಪ್ಪು ಗಾಯಗಳನ್ನು ವಾಸಿ ಮಾಡುತ್ತದೆ. ಗಾಯಗಳಾದಾಗ ಸಬ್ಬಸಿಗೆ ಸೊಪ್ಪಿನ ರಸ ತೆಗೆದು ಹಚ್ಚುವುದರಿಂದ, ಗಾಯದಿಂದ ಬರುವ ರಕ್ತ ನಿಲ್ಲುತ್ತದೆ ಹಾಗು ಗಾಯವು ಬೇಗನೆ ವಾಸಿಯಾಗುತ್ತದೆ.
ಸಬ್ಬಸಿಗೆ ಫ್ಲೇವನಾಯ್ಡ್ಸ್ ಮತ್ತು ಬಿ-ಕಾಂಪ್ಲೆಕ್ಸ್ ಒಳಗೊಂಡಿರುತ್ತದೆ. ಇದು ನಿದ್ರಾಹೀನತೆಯನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಸಬ್ಬಸಿಗೆ ಆರೋಗ್ಯಕರ ಹಾರ್ಮೋನುಗಳ ಬಿಡುಗಡೆಯನ್ನು ಸಕ್ರಿಯಗೊಳಿಸಬಹುದು. ಇದು ಅಂತಿಮವಾಗಿ ಕಡಿಮೆ ಮಟ್ಟದ ಒತ್ತಡಕ್ಕೆ ಕಾರಣವಾಗುತ್ತದೆ.

ಸರಿಯಾದ ಸಮಯಕ್ಕೆ ಜೀರ್ಣವಾಗದೇ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ, ಸಬ್ಬಸಿಗೆ ಸೊಪ್ಪಿನರಸಕ್ಕೆ ಜೇನು ಬೇರಸಿ ಕುಡಿದರೆ ಅಜೀರ್ಣ ಕಡಿಮೆಯಾಗುತ್ತದೆ. ಹೊಟ್ಟೆನೋವು ಕಡಿಮೆಯಾಗುತ್ತದೆ.
ಸಬ್ಬಸಿಗೆ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾ ವಿರೋಧ ಮತ್ತು ಉರಿಯೂತದ ಗುಣಗಳಿವೆ. ಹಾಗಾಗಿ ಇದರ ರಸವನ್ನು ಗಾಯಗಳ ಮೇಲೆ ಹಾಕುವುದರಿಂದ ಸೂಕ್ಷ್ಮ ಜೀವಿಗಳ ಬೆಳವಣಿಗೆಯನ್ನು ತಡೆದು ಗಾಯ ಗುಣವಾಗುವಂತೆ ಮಾಡುತ್ತದೆ.
ಸಬ್ಬಸಿಗೆ ಸೊಪ್ಪನ್ನು ನಾವು ನಮ್ಮ ಆಹಾರ ಪದಾರ್ಥದಲ್ಲಿ ಅಳವಡಿಸಿಕೊಳ್ಳುವುದರಿಂದ ಅದರಲ್ಲಿರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುವ ಕಾರ್ಯ ನಿರ್ವಹಿಸುತ್ತದೆ.
ಹೊಟ್ಟೆ ನೋವು ನಿವಾರಣೆಗೆ ಸಬ್ಬಸಿಗೆ ಸೊಪ್ಪು
ಸಬ್ಬಸಿಗೆ ಸೊಪ್ಪಿನ ರಸವನ್ನು ತೆಗೆದುಕೊಂಡು, ಅದಕ್ಕೆ ಜೇನು ತುಪ್ಪ ಬೆರೆಸಿ, ಸೇವಿಸುವುದರಿಂದ ಅಜೀರ್ಣದಿಂದುಂಟಾದ ಹೊಟ್ಟೆನೋವು ನಿವಾರಣೆಯಾಗುತ್ತದೆ.
ಸಬ್ಬಸಿಗೆ ಎಲೆಗಳು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ವಾಯು ಸಮಸ್ಯೆ ತೊಡೆದು ಹಾಕುತ್ತದೆ.
ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದರೆ, ಸಬ್ಬಸಿಗೆ ಸೊಪ್ಪಿನ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುತ್ತದೆ.
ಮಧುಮೇಹ ರೋಗಿಗಳು ಸಬ್ಬಸಿಗೆ ಸೊಪ್ಪನ್ನು ಬಳಸುವುದರಿಂದ, ಇದು ರಕ್ತದಲ್ಲಿ ಸಕ್ಕೆರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಹಾಗು ಇನ್ಸುಲಿನ್ ನಿಯಮಿತವಾಗಿರಿಸುತ್ತದೆ.
ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

ಸಬ್ಬಸಿಗೆ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ.
ಸಬ್ಬಸಿಗೆ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿರುತ್ತವೆ. ಇವುಗಳಲ್ಲಿ ಕ್ಲಾಲೋರಿ ಪ್ರಮಾಣವೂ ತುಂಬಾ ಕಡಿಮೆ. ಬೆಳಿಗ್ಗೆ ಗ್ರೀನ್ ಟೀ ಸೇವಿಸುವವರಿದ್ದರೆ ಸಬ್ಬಸಿಗೆ ಎಲೆಗಳನ್ನು ಸೇರಿಸಿ ಚಹಾ ಸವಿಯುವುದರ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಸಬ್ಬಸಿಗೆ ಸೊಪ್ಪನ್ನು ಅರೆದು, ಅರಿಷಿಣ, ಉಪ್ಪು ಹಾಗೂ ಸ್ವಲ್ಪ ತುಪ್ಪದೊಂದಿಗೆ ಕಲೆಸಿ ಲೇಪಿಸಿದರೆ, ಕೀಟಗಳ ಕಡಿತದಿಂದುಂಟಾಗುವ ಗಾಯಗಳು ವಾಸಿಯಾಗುತ್ತವೆ.
ಸಬ್ಬಸಿಗೆ ಸೊಪ್ಪನ್ನು ದಿನವೂ ಆಹಾರದ ರೂಪದಲ್ಲಿ ಸೇವಿಸುವುದರಿಂದ ಪ್ರೊಜೆಸ್ಟ್ರಾನ್ ಸ್ರವಿಸುವಿಕೆ ಹೆಚ್ಚಾಗಿ ಅನಿಯಮಿತವಾದ ಋತುಚಕ್ರ ನಿಯಮಿತವಾಗುತ್ತದೆ.
ಉರಿಯೂತವನ್ನು ಕಡಿಮೆ ಮಾಡುತ್ತದೆ.
ಹಾರ್ಮೋನ್ ಗಳ ಅಸಮತೋಲನವನ್ನು ಸರಿಪಡಿಸುತ್ತದೆ. ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ c ಜೀವಸತ್ವವನ್ನೊಳಗೊಂಡಿದೆ.
ಸಬ್ಬಸಿಗೆ ಸೊಪ್ಪನ್ನು ಒಣಗಿಸಿ ಚಟ್ನಿಪುಡಿ ತಯಾರಿಸಿ
ಸೇವಿಸುವದರಿಂದ ಜೀರ್ಣಶಕ್ತಿ ಸುಧಾರಿಸುತ್ತದೆ.
ಸಬ್ಬಸಿಗೆ ಸೊಪ್ಪನ್ನು ಅರೆದು ಮೊಸರಿನಲ್ಲಿ ಬೆರೆಸಿ
ಸೇವಿಸುವದರಿಂದ ಮಲಬದ್ದತೆ ಕಾಡದು.
ವಿಟಮಿನ್ ಸಿ ನಮ್ಮ ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹ ಸಹಾಯ ಮಾಡುತ್ತದೆ. ಸಬ್ಬಸಿಗೆ ಸೊಪ್ಪಿನಲ್ಲಿ ಇರುವ ವಿಟಮಿನ್ ಎ ನಮ್ಮ ದೃಷ್ಟಿಯನ್ನು ಬಲಪಡಿಸುವ ಮೂಲಕ ಸಹಾಯ ಮಾಡುತ್ತದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಬ್ಬಸಿಗೆ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಧನ್ಯವಾದಗಳು.
GIPHY App Key not set. Please check settings