ನ್ಯಾಯ ತೀರ್ಮಾನದ ಕತೆ
ಒಂದು ಕ್ರಿಶ್ಚಿಯನ್ ಕುಟುಂಬದ ಒಬ್ಬ ಹುಡುಗ ಬೊಂಬಾಯಿಗೆ ಹೋದವ ಹಿಂದಿರುಗಿ ಬರಲಿಲ್ಲ. ಸುಮಾರು ಹತ್ತು ವರುಷ ಆದಾಗ ಅವನಿಗೆ ಮದುವೆಯಾಗಿದೆ ಎಂದು ಸುದ್ದಿ ತಿಳಿಯಿತು. ಇದನ್ನು ಕೇಳಿದ ತಂದೆ ತಾಯಿಯರು ಕೋರ್ದಬ್ಬು ದೈವಕ್ಕೆ ದೂರು ನೀಡುತ್ತಾರೆ. ಅವನನ್ನು ಬರುವಂತೆ ಮಾಡಿದರೆ ನನಗೇನು ಕಾಣಿಕೆ ಕೊಡುವಿರಿ ಎಂದಾಗ ನಿನ್ನ ಭಂಡಾರಕ್ಕೆ ಇಪ್ಪತೈದು ರುಪಾಯಿ ಕಾಣಿಕೆ ಹಾಕುತ್ತೇವೆ ಎನ್ನುತ್ತಾರೆ. ಆಗ ದೈವದ ಮದಿಪು ಹೀಗಿದೆ; ಯಾನೆ ಮಲ್ಲ ಪರ್ವತ ಜರಿಪೊಡು, ಆಂಡ ಎಂಕ್ ತಿಕುನು ಬಜೀ ಕಿಚ್ಚೆಲಿ. ಉಂದು ಎಲ್ಯ ಬೇಲೆ ಅತ್ತ್. ಕರಿಯಣಿ ಕಡ್ತ್‍ದ್ ಕನವೊಡಾಪುಂಡು. ಮಲ್ಲ ಪಾಪೊತ್ತುನು ಯಾನ್ ತುಂಬೊನೊಡು.(ನಾನೇ ದೊಡ್ಡ ಪರ್ವತ ಬೀಳಿಸಬೇಕು, ಆದರೆ ನನಗೆ ಚಿಕ್ಕ ತುಂಡು, ಚಿಕ್ಕ ಕೆಲಸ ಅಲ್ಲ, ದೊಡ್ಡ ಪಾಪ ನಾನು ಹೊತ್ತುಕೊಳ್ಳಬೇಕು).
ಸತ್ಯ ಪರೀಕ್ಷೆಯ ವಿಧಾನಗಳು :
*ದೈವಕ್ಕೆ ತಂಬಿಲ ಕೊಡುವ ಸಂದರ್ಭ – ಕೋಳಿ ಕೊಂದು ಎಡೆ ಬಡಿಸುವುದು. ಆ ಸಂದರ್ಭದಲ್ಲಿ ಕೊಂದ ಕೋಳಿ ಸರಿಯಾಗಿ ಬೀಳುವಂತೆ ಬಯಸುವುದು. ಅದು ಸರಿಯಾಗಿ ಬೀಳಲಿಲ್ಲವೆಂದರೆ ಕುಟುಂಬಕ್ಕೆ ತೊಂದರೆಯಿದೆ, ಕೋಲ ಕೊಡಬೇಕು ಎಂದು ತಿಳಿದುಕೊಳ್ಳುವುದು.
*ಮನೆ ಒಕ್ಕಲು, ತೊಟ್ಟಿಲು ಕೊಂಡುಹೋಗುವುದು, ಯಾವುದೇ ಶುಭಮುಹೂರ್ತದಲ್ಲಿ ತೆಂಗಿನಕಾಯಿ ಒಡೆಯುವುದು. ತೆಂಗಿನಕಾಯಿ ಸರಿಯಾಗಿ ಒಡೆದು ಬಿದ್ದರೆ ಶುಭ. ಇಲ್ಲವಾದರೆ ಅಪಶಕುನ.
*ದೈವ ವೀಳ್ಯದೆಲೆಯನ್ನು ಹಾರಿಸಿ ಅಂಗಾತ ಬಿದ್ದರೆ ಸರಿ, ಎಲೆಯ ಬೆನ್ನು ಬಿದ್ದರೆ ದೋಷವೆಂದು ಪರಿಗಣಿಸುವುದು.
*ದೈವ ತೆಂಗಿನ ಕಾಯನ್ನು ಹಾರಿಸಿ ಸರಿ ಬೀಳುವುದು.
*ಯಾವುದೇ ದೈವ ಕ್ರಿಯೆಯಲ್ಲಿ ದೀಪ ಉರಿಸಿಡುವುದು.
*ಅದು ನಂದಾ ದೀಪದಂತೆ ಉರಿಯಬೇಕೆಂದು ಬಯಸುವುದು.
*ಹಲವಾರು ಸನ್ನಿವೇಶಗಳಲ್ಲಿ ಸತ್ಯ ಪ್ರಮಾಣ ಪರೀಕ್ಷೆ ನಡೆಯುತ್ತದೆ. ಬೆಂಕಿಗೆ ಕೈ ಇಡುವುದು, ಕಾದ ಎಣ್ಣೆಗೆ ಕೈ ಹಾಕುವುದು ಇಂತಹ ಸಂದರ್ಭಗಳು ನಡೆಯುತ್ತಿದ್ದವು.
*ಆಣೆ ಪ್ರಮಾಣ ಮಾಡಿಕೊಂಡವರು ಮತ್ತೆ ಜೊತೆ ಸೇರಬಾರದು. ಪರಸ್ಪರ ಅನ್ನ ನೀರು ಮುಟ್ಟಬಾರದು,
*ಮದುವೆಯಾಗಬಾರದೆಂಬ ನಿಷೇಧವಿದೆ. ಉದಾ: ಬಳಜೇಯಿ ಮಾಣಿಗನ ಸಂಧಿಯಲ್ಲಿ ಬರುವ ಸನ್ನವೇಶ – ಚೆನ್ನೆಯಾಟದಲ್ಲಿ ಆಟ ಕೆಡಿಸಿದುದಕ್ಕಾಗಿ ಕೋಪಿಸಿ ಮಡದಿ ತವರಿಗೆ ಹೋದಳು. ಮಡದಿ ಮರಳಿ ಬಂದರೆ ಅವಳ ಮೈ ಮುಟ್ಟುವುದಕ್ಕೆ ಮೊದಲು ದೈವಕ್ಕೆ ನೇಮ ಕೊಡುವುದಾಗಿ ಗಂಡ ಹರಕೆ ಹೇಳಿದ. ದೈವದ ಪ್ರೇರಣೆಯಿಂದ ಆಕೆ ಮರಳಿ ಬರುತ್ತಾಳೆ. ಮಡದಿ ಮರಳಿ ಬಂದ ಸಂಭ್ರಮದಲ್ಲಿ ಹರಕೆಯನ್ನು ಮರೆತು, ಮೈಮರೆತು ಆಕೆಯನ್ನು ಬರಸೆಳೆದುದರಿಂದ ಆತ ಹೆಂಡತಿಯನ್ನು ಕಳೆದುಕೊಂಡ ಎಂಬ ಉಲ್ಲೇಖವಿದೆ. ನ್ಯಾಯ ತೀರ್ಮಾನ ಮತ್ತು ಸತ್ಯ ಪರೀಕ್ಷೆಯ ಜೊತೆಜೊತೆಗೆ ದಾನ-ಧರ್ಮ ನೀಡುವ ಸಂದರ್ಭಗಳು ಬರುತ್ತವೆ. ತುಳುನಾಡಿನಲ್ಲಿ ನಡೆವ ಅನೇಕ ಉತ್ಸವ ಸಮಾರಂಭಗಳಲ್ಲಿ ಅನ್ನದಾನ ಧರ್ಮಕಾರ್ಯ ಇಂದಿಗೂ ನಡೆಯುತ್ತಿದೆ. ಅನ್ನದಾನದಿಂದ ಧರ್ಮ ಚೆನ್ನಾಗಿ ನಡೆಯಿತೇ ಎಂಬ ಮಾತೊಂದಿದೆ. ತುಳುನಾಡಿನ ಪ್ರತಿಯೊಂದು ವಾರ್ಷಿಕಾವರ್ತನ ಆಚರಣೆ ಆರಾಧನೆಗಳಲ್ಲಿ ಮತ್ತು ಹುಟ್ಟಿನಿಂದ ಸಾವಿನವರೆಗೆ ಬರುವ ಎಲ್ಲಾ ಜೀವನಾವರ್ತನ ಆಚರಣೆಗಳಲ್ಲಿ ಅನ್ನದಾನ ಪ್ರಧಾನವಾಗಿದೆ.
ದೈವಾರಾಧನೆಯಲ್ಲಿ ಈ ನಾಲ್ಕು ಪರಿಕಲ್ಪನೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ಈ ರೀತಿ ಚರ್ಚಿಸಬಹುದು.
ಜನಪದ ನ್ಯಾಯಾಂಗ ಎನ್ನುವುದು ಒಂದು ಸಾಮಾಜಿಕ ನ್ಯಾಯ ಪದ್ಧತಿಯೂ ಹೌದು. ಧಾರ್ಮಿಕ ನ್ಯಾಯ ಪದ್ಧತಿನೂ ಹೌದು. ನ್ಯಾಯಾಂಗ ಪದ್ಧತಿಯನ್ನು ನಿರ್ವಹಿಸುವ ಸಾಮಥ್ರ್ಯ ಭೂತದ ಹಲವಾರು ನುಡಿಕಟ್ಟುಗಳಲ್ಲಿದೆ. “ಪತ್ತ್ ಕೂಡಿ ಕಳಟ್ಟ್ ಮುತ್ತು ಉಂಡು ಪನ್ಪೆರ್. ನಿನ್ನ ಸತ್ಯೊದ ಕಳಟ್ಟ್ ಇಂಚಿನಾಯೆ ಇಂಚ ಮಲ್ತೆ. ಈ ದಾದ ಶಿಕ್ಷೆ ಕೊರ್‍ಯ”. ಹತ್ತು ಜನ ಸೇರಿದಲ್ಲಿ ಕಳೆ ಇದೆ ಎನ್ನುತ್ತಾರೆ. ನಿನ್ನ ಸತ್ಯದ ಕಳದಲ್ಲಿ ಇಂತಹ ತಪ್ಪನ್ನು ಇಂತವ ಮಾಡಿದ್ದಾನೆ. ನೀನು ಏನು ಶಿಕ್ಷೆ ನೀಡಿದೆ ಇದು ನ್ಯಾಯ ತೀರ್ಮಾನದಲ್ಲಿ ನಡೆಸುವವರಿಂದ ಬರುವ ಮಾತು. ನ್ಯಾಯ ಸಿಗಬೇಕಾಗಿರುವುದು ಭೂತ ಕಟ್ಟಿರುವ ಮಾಯ ಸ್ವರೂಪಿ ಸತ್ಯದಿಂದ. ದೈವವು ‘ಬಾಸೆ ತತ್ತಿನಾಯಗ್ ಬಾಸೆ’ ದೀಪೆ ಎನ್ನುತ್ತದೆ. ಎಂದರೆ ನನ್ನ ಮಾತು ತಪ್ಪಿದವನಿಗೆ ನನ್ನಾಣೆ ಎಂಬ ಶಾಪ. “ಪತ್ತಿ ಪಗರಿನ್ ಬೂಮಿಗ್ ಬುಡೊಡಾ ಬಾನೊಗು ಬುಡೊಡಾ?” ಆಕಾಶಕ್ಕೆ ಬಾಣ ಬಿಡುವುದರಿಂದ ಪ್ರಯೋಜನವಿಲ್ಲವೆಂದು ದೈವ ತನ್ನ ಸುರಿಯೆಯನ್ನು ಅಥವಾ ಬಾಣವನ್ನು ನೆಲಕ್ಕೆ ಊರುತ್ತದೆ. “ಪಂಡಿ ನಾಲಾಯಿ ದೊಂಡೆಡಾವೊಡಾಂಡ ನೆತ್ತ ದೃಷ್ಟಾಂತ ತೋಜಾವೆ” ಎಂದು ಶಾಪ ನೀಡುತ್ತದೆ. ಇಂದಿಗೂ ಸರ್ಪವನ್ನು ಕೊಲ್ಲುವವರು ಅದು ನೆಲ ಕಚ್ಚದಂತೆ ಕೊಲ್ಲುತ್ತಾರಂತೆ. ‘ಮಣ್ಣ್ ಮೂರಿ ಲಕ್ಕ್‌ದ್‍ಂಡ್’, ‘ನೆಲನೇ ತುಚ್ಚು’ ಇಂತಹ ಮಾತುಗಳಲ್ಲಿ ದೈವವನ್ನು ನಡೆಸಿಕೊಡುವವರು ಮತ್ತು ಕಟ್ಟುವವರ ಮಾತಿನಲ್ಲಿ ಭಯ ಹುಟ್ಟಿಸುವ ಮಾತುಗಳು ಬರುತ್ತವೆ.
ಜನಪದ ನ್ಯಾಯಾಂಗ ಎನ್ನುವುದು ಒಂದು ಫ್ಯೂಡಲ್ ಪದ್ಧತಿಯೂ ಹೌದು. ಆಳುವವರು, ಶ್ರೀಮಂತರು, ಊರ ಯಜಮಾನಿಕೆ ಇರುವವರು, ಮೇಲ್ಜಾತಿಯಲ್ಲಿರುವವರು ತಮ್ಮನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪರತಿ ಮಂಗಣೆ ಎಂಬ ಆರಾಧನೆಯಲ್ಲಿ ಪರತಿ ಭೂತಕ್ಕೆ ಕಟ್ಟುವ ಪರವನ ಹೆಂಡತಿ. ಆಕೆಯ ರೂಪಕ್ಕೆ ಮರುಳಾಗಿ ಪರವನನ್ನು ಉಪಾಯವಾಗಿ ಕೊಂದು ಆಕೆಯನ್ನು ವಶಪಡಿಸಲು ಸಾಧ್ಯವಾಗದೆ ತನ್ನ ಸರ್ವಸ್ವವನ್ನೂ ಪರವನ ಚಿತೆಗೆ ಸುರಿದು ಕೊನೆಗೆ ಆತನೂ ಚಿತೆಗೆ ಹಾರಿಕೊಳ್ಳುವಂತ ದುರ್ದೈವಿಯೊಬ್ಬನ ಕೃತ್ಯದ ವಿವರ ಬೊಟ್ಟುವಾದಿ ಬಲ್ಲಾಳನ ಸಂಧಿಯಲ್ಲಿ ಬರುತ್ತದೆ.
ಆಳುವವನಿಗೆ ಊರ ಸಂಪತ್ತು, ಹೆಣ್ಣು, ಯಜಮಾನಿಕೆ ಎಲ್ಲವೂ ಬೇಕಿದ್ದ ಕಾಲವಿತ್ತು ಎಂಬುದು ಜನಪದ ಸಾಹಿತ್ಯದಲ್ಲಿ ತಿಳಿದುಬರುತ್ತದೆ. ಆ ಕಾಲದಲ್ಲಿ ಭೂತವಾಗುತ್ತಿದ್ದರು. ಈಗ ಅಂತಹದಕ್ಕೆ ಜನ ರಾಕ್ಷಸರಾಗುತ್ತಾರೆ.
ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದಾಗ ದನಿ ಒಕ್ಕಲು ಕಾನೂನು ಬಂದ ಸಂದರ್ಭದಲ್ಲಿ ಭೂ ಮಾಲೀಕ ಒಕ್ಕಲಿನಿಗೆ ಭೂಮಿ ಬಿಟ್ಟುಕೊಡುವ ಪ್ರಸಂಗವೂ ಬಂತು. ದೈವ ಯಾರ ಕಡೆ ನ್ಯಾಯ ಒದಗಿಸಿರಬಹುದೆಂಬುದನ್ನು ನಮಗೆ ಕಲ್ಪಿಸಿಕೊಳ್ಳುವುದಕ್ಕೆ ಅಸಾಧ್ಯ. ದೈವವನ್ನು ನಡೆಸುವವ ಮತ್ತು ಕಟ್ಟುವವ ಇಬ್ಬರೂ ಜೊತೆ ಸೇರಿ ಊರಿನ ಗ್ರಹಸ್ಥರ ಮಾತು ಮೊದಲು ದೈವದ ನಡೆ ನಂತರ ಎಂದು ತೀರ್ಮಾನಿಸಿದರು. ಎಷ್ಟೋ ಒಕ್ಕಲುಗಳ ಮನೆಗೆ ರಾತ್ರೋ ರಾತ್ರಿ ಬೆಂಕಿ ಬಿತ್ತು. ಅವರು ಊರು ಬಿಟ್ಟು ಓಡಿದರು. ದೈವದ ವಿರುದ್ಧ ಮತ್ತು ಊರಿನ ಯಜಮಾನರ ವಿರುದ್ಧ ಮಾತನಾಡುವುದು ಕಷ್ಟವಾಗಿತ್ತು.
ದೈವಾರಾಧನೆ ಒಂದು ಮನೋವೈಜ್ಞಾನಿಕ ಆಟವೂ ಹೌದು. ಕೆಲವೊಮ್ಮೆ ದೈವದ ಬಗೆಗೆ ಅತೀವ ಭಕ್ತಿಯಿದ್ದಲ್ಲಿ ಮೈಮೇಲೆ ದರ್ಶನ ಬರುತ್ತದೆ. ನ್ಯಾಯಪದ್ಧತಿಯೆಂಬ ಈ ವ್ಯವಸ್ಥೆಯಲ್ಲಿ ಆಳುವವರನ್ನು ವಿರೋಧಿಸುವ ಸಾಮಥ್ರ್ಯ ದೈವಕ್ಕೂ ಇರುವುದಿಲ್ಲ. ಕೆಲವು ಜಿಗುಟಾದ ಸಮಸ್ಯೆಗಳನ್ನು, ಜಗಳಗಳನ್ನು ಬಿಡಿಸಲು ನ್ಯಾಯ ತೀರ್ಮಾನವನ್ನು ನೀಡುವ ದೈವಕ್ಕೂ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ಉಪಾಯಗಳನ್ನು ಬಳಸಿದ್ದೂ ಇದೆಯೆಂಬುದಕ್ಕೆ ಒಂದು ಸನ್ನಿವೇಶವಿದೆ.
ಒಮ್ಮೆ ದೈವವು ಪ್ರಚಂಡ ವ್ಯಕ್ತಿಯ ವಿರುದ್ಧ ತೀರ್ಮಾನ ನೀಡಿತು. ಆತ ದೈವವನ್ನು ವಿರೋಧಿಸಿದ ಬೈದ, ದೈವಕ್ಕೆ ಹೊಡೆಯಲೂ ಬಂದ. ದೈವವು ಇದ್ದಕ್ಕಿದ್ದಂತೆ ಅಣಿಸಮೇತ ಕೆಳಗುರುಳಿತು. ಎಷ್ಟೇ ಪ್ರಾರ್ಥಿಸಿದರೂ ದೈವ ಮೈದುಂಬಿ ಬಾರದಿದ್ದಾಗ ಬೈದಾತ ಕ್ಷಮೆ ಯಾಚಿಸಿ ತಪ್ಪು ಕಾಣಿಕೆ ನೀಡಿದ ಮೇಲೆ ದೈವ ಮೈದುಂಬಿ ಬಂತು.
ದೈವವನ್ನೇ ‘ಸತ್ಯೊ’ ಎಂದು ಜನಪದರು ಭಾವಿಸಿದ್ದಾರೆ. ದೈವದ ಚಾಕರಿ ಮಾಡುವವರಿಗೆ, ಭೂತ ಕಟ್ಟುವವರಿಗೆ ಚಪ್ಪಲಿಯಿಂದ ಹೊಡೆದರೆ, ಅವಮಾನಿಸಿದರೆ ಹೊಡೆಸಿಕೊಂಡವರು ಮುಂದೆ ದೈವದ ಯಾವುದೇ ಕೆಲಸಕ್ಕೆ ಅನರ್ಹರಾಗುತ್ತಾರೆ. ಕಾರಣವಿಷ್ಟೇ ದೈವಾರಾಧನೆಯೆಂಬುದು ಶುದ್ಧದಿಂದ ನಡೆದುಕೊಳ್ಳುವ ಆಚರಣೆ. ದೈವವನ್ನು ಕಟ್ಟುವವರಿಗೆ ಸಮಾಜದಲ್ಲಿ ತುಂಬ ಉನ್ನತವಾದ ಸ್ಥಾನವನ್ನು ನೀಡಲಾಗಿದೆ.
ಧನ್ಯವಾದಗಳು.
canadian drugs to us
medications without prescription
best online pharmacy no prescription
best online pharmacies without a script
Welcome to our platform, your top source for all the current news and developments on the communications landscape in the United Kingdom. Whether you’re interested in telecasts, broadcast radio, print, or online content, we present complete coverage that keeps you updated about the key advancements and shifts. From just-in bulletins to comprehensive analyses, our team of veteran journalists and industry analysts work ceaselessly to bring you the most reliable and recent details – https://ukeventnews.uk/which-of-these-classical-music-composers-from/
In alongside to updates, we provide informative features and opinion pieces that delve into the intricacies of the press industry. Our articles cover a wide range of topics, including regulatory modifications, media possession, and the impact of new innovations. We also showcase the successes and obstacles faced by media professionals, presenting a platform for voices from throughout the industry to be heard and valued.
Stay connected with the pulse of the UK media scene through our consistently updated content. Whether you’re a media professional, a student, or simply a media enthusiast, our platform is designed to accommodate to your interests and wants. Enter our growing community of readers and make sure you’re always in the know about the dynamic and continually progressing world of media in the United Kingdom.