in ,

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳು

ಬರ/ಜಲಕ್ಷಾಮ
ಬರ/ಜಲಕ್ಷಾಮ

ಬರ ಎಂದರೆ ಪ್ರದೇಶವೊಂದರಲ್ಲಿ ಜಲ/ನೀರಿನ ಲಭ್ಯತೆ/ಸರಬರಾಜಿನಲ್ಲಿ ಉಂಟಾದ ಕೊರತೆಯು ತಿಂಗಳುಗಳು ಅಥವಾ ವರ್ಷಗಳ ಕಾಲ ವಿಸ್ತರಿಸಿದಾಗ ಉಂಟಾಗುವ ಪರಿಸ್ಥಿತಿ. ಸಾಧಾರಣವಾಗಿ ಯಾವುದೇ ಪ್ರದೇಶವು ಸತತವಾಗಿ ಸರಾಸರಿ ಮಳೆ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತಿದ್ದರೆ ಹೀಗಾಗುತ್ತದೆ. ಅದರಿಂದ ಪೀಡಿತವಾದ ಪ್ರದೇಶದ ಪರಿಸರ ವ್ಯವಸ್ಥೆ ಮತ್ತು ಕೃಷಿವ್ಯವಸ್ಥೆಗಳ ಮೇಲೆ ಇದು ಗಣನೀಯ ಪ್ರಮಾಣದ ಪ್ರಭಾವ ಬೀರಬಹುದಾಗಿರುತ್ತದೆ. ಬರ/ಜಲಕ್ಷಾಮಗಳು ಹಲವು ವರ್ಷಗಳ ಕಾಲ ಮುಂದುವರೆಯಬಲ್ಲವಾದರೂ ಅಲ್ಪ ಕಾಲದ, ತೀವ್ರತರವಾದ ಬರ/ಜಲಕ್ಷಾಮ ಕೂಡಾ ಗಮನಾರ್ಹ ಪ್ರಮಾಣದ ಹಾನಿ/ನಷ್ಟಗಳನ್ನು ಉಂಟುಮಾಡಬಹುದಾಗಿರುತ್ತಲ್ಲದೇ ಸ್ಥಳೀಯ ಆರ್ಥಿಕತೆಗೆ ನಷ್ಟವನ್ನು ಕೂಡಾ ಉಂಟು ಮಾಡಬಲ್ಲದು.

ಈ ಜಾಗತಿಕ ವಿದ್ಯಮಾನವು ಕೃಷಿವ್ಯವಸ್ಥೆಯ ಮೇಲೆ ವ್ಯಾಪಕವಾದ ಪರಿಣಾಮವನ್ನು ಬೀರುತ್ತಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆ/ವಿಶ್ವಸಂಸ್ಥೆಯು ಅಂದಾಜಿಸುವ ಪ್ರಕಾರ, ಅರಣ್ಯನಾಶ ಮತ್ತು ವಾತಾವರಣ ಅಸ್ಥಿರತೆಗಳಿಂದಾಗಿ ಉಂಟಾಗುವ ಬರ/ಜಲಕ್ಷಾಮದಿಂದ ಪ್ರತಿ ವರ್ಷವೂ ಉಕ್ರೇನ್‌‌ ರಾಷ್ಟ್ರದ ಗಾತ್ರದಷ್ಟು ಪ್ರಮಾಣದ ಫಲವತ್ತಾದ ಮಣ್ಣುಳ್ಳ ಪ್ರದೇಶವು ನಷ್ಟವಾಗುತ್ತಲಿದೆ. ದೀರ್ಘಾವಧಿಗೆ ವಿಸ್ತರಿಸಿದ ಬರ/ಜಲಕ್ಷಾಮಗಳು ಬಹಳ ಹಿಂದಿನಿಂದಲೇ ಸಾಮೂಹಿಕ ವಲಸೆಗೆ ಪ್ರಮುಖ ಕಾರಣವಾಗಿದ್ದು, ಅನೇಕ ಚಾಲ್ತಿಯಲ್ಲಿರುವ ವಲಸೆಗಳು ಹಾಗೂ ಆಫ್ರಿಕಾದ ಭೂಶಿರ ಮತ್ತು ಸಾಹೆಲ್‌ ಪ್ರದೇಶಗಳಲ್ಲಿ ಉಂಟಾಗಿರುವ ಇತರೆ ಮಾನವಸಂಬಂಧಿ ಬಿಕ್ಕಟ್ಟುಗಳು ಉಂಟಾಗಲು ಇದೇ ಪ್ರಧಾನ ಪಾತ್ರ ವಹಿಸಿದೆ.

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳು
ಜಲಕ್ಷಾಮ

ಬರ/ಜಲಕ್ಷಾಮವು ಉಂಟಾದಂತಹಾ ಅವಧಿಗಳು ಗಣನೀಯ ಪ್ರಮಾಣದ ಪರಿಸರಕ್ಕೆ ಸಂಬಂಧಿಸಿದ, ಕೃಷಿಸಂಬಂಧಿತ, ಆರೋಗ್ಯದ ಮೇಲಿನ, ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಲ್ಲವು. ಇವುಗಳಿಂದಾಗುವ ಪರಿಣಾಮವು ಪ್ರದೇಶದ ಪರಿಸರೀಯ ಸೂಕ್ಷ್ಮತೆಗಳಿಗನುಸಾರ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ, ಕೌಟುಂಬಿಕ ಅಗತ್ಯದಷ್ಟು ಮಾತ್ರ ಪೂರೈಸಬಲ್ಲ ಕೃಷಿಕಾರ್ಯ ನಡೆಸುವ ಕೃಷಿಕರು ತಮಗೆ ಬೇರೆ ಯಾವುದೇ ಪರ್ಯಾಯ ಆಹಾರ ಮೂಲ ಇಲ್ಲದ ಕಾರಣ ಬರ/ಜಲಕ್ಷಾಮದ ಅವಧಿಯಲ್ಲಿ ವಲಸೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಕೌಟುಂಬಿಕ ಅಗತ್ಯದಷ್ಟು ಮಾತ್ರ ಪೂರೈಸಬಲ್ಲ ಕೃಷಿಕಾರ್ಯವನ್ನೇ ಪ್ರಧಾನ ಆಹಾರ ಮೂಲವನ್ನಾಗಿಸಿಕೊಂಡ ಜನಸಮೂಹದಿಂದ ಕೂಡಿದ ಪ್ರದೇಶಗಳು ಬರ/ಜಲಕ್ಷಾಮದಿಂದ ಉಂಟಾಗುವ ದುರ್ಭಿಕ್ಷಕ್ಕೆ ಈಡಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಬರ/ಜಲಕ್ಷಾಮವು ನೀರಿನ ಗುಣಮಟ್ಟವನ್ನು ಕೂಡಾ ಕುಂದಿಸುವ ಸಾಧ್ಯತೆಗಳಿವೆ, ಏಕೆಂದರೆ ನೀರಿನ ಹರಿವಿನ ಕಡಿಮೆ ಪ್ರಮಾಣವು ಕಲುಷಿತಗೊಳಿಸಬಲ್ಲ ವಸ್ತುಗಳ ಸಾರಗುಂದಿಸುವಿಕೆಯನ್ನು ಕಡಿಮೆ ಮಾಡಬಲ್ಲವು ಹಾಗೂ ಉಳಿದಿರುವ ಜಲ ಮೂಲಗಳ ಕಲುಷಿತಗೊಳಿಸುವಿಕೆ ಹೆಚ್ಚಿಸಬಲ್ಲವು.

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳಲ್ಲಿ ಈ ಕೆಳಕಂಡವು ಸೇರಿವೆ

*ಬೆಳೆಗಳ ಬೆಳವಣಿಗೆಯಲ್ಲಿನ ಅಥವಾ ಫಸಲಿನ ಉತ್ಪಾದನೆಯಲ್ಲಿನ ಇಳಿಕೆ ಹಾಗೂ ಜಾನುವಾರುಗಳ ನಿರ್ವಹಣಾ ಸಾಮರ್ಥ್ಯ ಕುಂದುವಿಕೆ.
*ಸ್ವತಃ ತಾವೇ ಸವಕಳಿಯಾಗುತ್ತಿರುವ ಸೂಚಕಗಳೆಂದು ಕಂಡುಬರುವ ಬಂಜರು ಭೂಮಿಗಳು, ಭೂಪ್ರದೇಶದ ಸವಕಳಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
*ಮರುಭೂಮೀಕರಣ ಮತ್ತು ಸವಕಳಿಯ ಸಮಸ್ಯೆಗಳಿಂದ ಪೀಡಿತವಾಗಿರುವ ಪ್ರದೇಶದಲ್ಲಿ ಬರ/ಜಲಕ್ಷಾಮವು ಕೂಡಾ ಅಪ್ಪಳಿಸಿದಾಗ ಉಂಟಾಗುವ ಧೂಳಿನ ಬಿರುಗಾಳಿಗಳು.
*ನೀರಾವರಿ ವ್ಯವಸ್ಥೆಗೆ ಅಗತ್ಯವಾದಷ್ಟು ನೀರಿಲ್ಲದೇ ಉಂಟಾಗುವ ದುರ್ಭಿಕ್ಷ/ತೀವ್ರ ಬರ.
*ಭೂಮೇಲ್ಮೈನ ಹಾಗೂ ಜಲಚರ/ಜಲಜೀವಿಪ್ರಪಂಚದ ಜೀವಜಾತಿಗಳ ಮೇಲೆ ಪರಿಣಾಮ ಉಂಟಾಗುವಂತೆ ವಾಸಸ್ಥಾನ/ವಾಸದನೆಲೆಗಳಿಗೆ ಹಾನಿ ಉಂಟಾಗುವುದು.
*ಅಪೌಷ್ಟಿಕತೆ, ನಿರ್ಜಲೀಕರಣ/ನಿರಾರ್ದ್ರೀಕರಣ ಹಾಗೂ ಸಂಬಂಧಿತ ಕಾಯಿಲೆ/ರೋಗಗಳು.
*ಆಂತರಿಕ ಸ್ಥಳಾಂತರಣ/ಸ್ಥಳಪಲ್ಲಟನ ಮತ್ತು ಅಂತರರಾಷ್ಟ್ರೀಯ ದೇಶಭ್ರಷ್ಟತೆ ಉಂಟಾಗಲು ಕಾರಣವಾಗುವಂತಹಾ ಸಾಮೂಹಿಕ ವಲಸೆ
*ವಿದ್ಯುದುತ್ಪಾದನಾ ಕೇಂದ್ರಗಳಲ್ಲಿ ಅಗತ್ಯವಾದಷ್ಟು ತಂಪುಕಾರಕ/ಶೀತಕಗಳ ಲಭ್ಯತೆ ಇಲ್ಲದಿರುವುದರಿಂದ, ಹಾಗೂ ಜಲವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರಗಳ ಅಣೆಕಟ್ಟುಗಳಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ಉಂಟಾಗುವ ವಿದ್ಯುಚ್ಛಕ್ತಿಯ ಉತ್ಪಾದನೆಯಲ್ಲಿನ ಇಳಿಕೆ.
*ಕೈಗಾರಿಕಾ/ಔದ್ಯಮಿಕ ಬಳಕೆದಾರರಿಗೆ ನೀರಿನ ಲಭ್ಯತೆಯಲ್ಲಿ ಕೊರತೆ.
*ಹಾವುಗಳ ವಲಸೆ ಹಾಗೂ ಹಾವುಕಚ್ಚುವಿಕೆಯ ಪ್ರಕರಣಗಳಲ್ಲಿನ ಹೆಚ್ಚಳ.
*ಸಾಮಾಜಿಕ ಅಶಾಂತಿ/ವಿಪ್ಲವ
ನೀರು/ಜಲ ಮತ್ತು ಆಹಾರಗಳೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಯುದ್ಧ ನಡೆಯುವಿಕೆ.
*ಆಸ್ಟ್ರೇಲಿಯಾದ ಕಾಡುಬೆಂಕಿ/ಕಾಳ್ಗಿಚ್ಚಿನಂತಹಾ ಕಾಡಿನಬೆಂಕಿ/ಕಾಳ್ಗಿಚ್ಚುಗಳು ಬರ/ಜಲಕ್ಷಾಮಗಳು ಉಂಟಾಗುವ ಅವಧಿಯಲ್ಲಿ ಮತ್ತಷ್ಟು ಸರ್ವೇಸಾಮಾನ್ಯವಾಗಿರುತ್ತವೆ.

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳು
ಪರಿಸರದ ಲಕ್ಷಣ

ವಿಶ್ವದ ಬಹುತೇಕ ಭಾಗಗಳಲ್ಲಿ ಬರ/ಜಲಕ್ಷಾಮವು ಒಂದು ಸಾಧಾರಣವಾದ, ಪದೇಪದೇ ಮರುಕಳಿಸುವ ಪರಿಸರದ ಲಕ್ಷಣವಾಗಿದೆ. ಗಿಲ್ಗಮೇಷ್‌/ಶ್‌ ಮಹಾಕಾವ್ಯದಲ್ಲಿ ಇದು ಪ್ರಸ್ತಾಪವಾಗಿದ್ದು, ಪ್ರಾಚೀನ ಈಜಿಪ್ಟ್‌ಗೆ ಜೋಸೆಫ್‌ನ ಆಗಮನದ ಬೈಬಲ್‌ ಪ್ರಣೀತ ಕಥೆ ಹಾಗೂ ನಂತರ ಎಕ್ಸೋಡಸ್‌ ಎಂಬ ಪ್ರಾಚೀನ ಈಜಿಪ್ಟ್‌ನಿಂದ ಯಹೂದ್ಯರ ನಿರ್ಗಮನದ ಕಥೆಗಳೊಂದಿಗೆ ಕೂಡಾ ತಳಕು ಹಾಕಿಕೊಂಡಿರುವ ಮೂಲಕ ಇದು ಅತಿ ಪುರಾತನವಾಗಿ ದಾಖಲಾಗಿದ್ದ ವಾಯುಗುಣಕ್ಕೆ ಸಂಬಂಧಿಸಿದ ವಿದ್ಯಮಾನವಾಗಿದೆ.

ಆಧುನಿಕ ಜನಸಮುದಾಯವು ನೀರಾವರಿ ವ್ಯವಸ್ಥೆ ಹಾಗೂ ಸರದಿ ಕೃಷಿ ಪದ್ಧತಿಗಳ ಮೂಲಕ ಬರ/ಜಲಕ್ಷಾಮಗಳಿಂದ ಉಂಟಾಗುವ ಪರಿಣಾಮಗಳನ್ನು ಬಹುಮಟ್ಟಿಗೆ ಕಾರ್ಯಕಾರಿಯಾಗಿ ತಗ್ಗಿಸಬಹುದಾಗಿದೆ. ಆಧುನಿಕ ಯುಗದಲ್ಲಿ ಸಮರ್ಪಕವಾದ ಬರ/ಜಲಕ್ಷಾಮ ನಿವಾರಣಾ ನಿರ್ವಹಣಾಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಆಗಬಹುದಾದ ವೈಫಲ್ಯವು ಪ್ರತಿನಿತ್ಯವೂ ಹೆಚ್ಚುತ್ತಾ ಹೋಗುತ್ತಿರುವ ಜನಸಂಖ್ಯಾ ಸಾಂದ್ರತೆಯಲ್ಲಿನ ಏರಿಕೆಯಿಂದಾಗಿ ಮಾನವ ಕುಲದ ಭಯಾನಕ ಬೆಲೆಯನ್ನೇ ತೆರುವಂತೆ ಮಾಡಬಹುದಾಗಿದೆ.

2001ರ ಉಪಗ್ರಹ ಚಿತ್ರದಲ್ಲಿ ಕಾಣಿಸುತ್ತಿರುವ ಛಾದ್‌/ಡ್‌ ಸರೋವರ, ವಾಸ್ತವ ಸರೋವರವು ನೀಲಿ ಬಣ್ಣದಲ್ಲಿ ತೋರಿಸುತ್ತದೆ. 1960ರ ದಶಕದಿಂದ ಸರೋವರವು ಸೊರಗುತ್ತಿದೆ.

ನ್ಯೂಸೌತ್‌ವೇಲ್ಸ್‌ನ ಉರಾಂಕ್ವಿಟಿ ಸಮೀಪದ ಬರ/ಜಲಕ್ಷಾಮ ಪೀಡಿತ ಹೊಲದಲ್ಲಿರುವ ಕುರಿ.
ಆಫ್ರಿಕಾದ ಭೂಶಿರದಲ್ಲಿ ಮರುಭೂಮೀಕರಣಕ್ಕೆ ಕಾರಣವಾಗುತ್ತಿರುವ ಪದೇಪದೇ ಮರುಕಳಿಸುತ್ತಿರುವ ಬರ/ಜಲಕ್ಷಾಮಗಳು ಪರಿಸರ ವ್ಯವಸ್ಥೆಯಲ್ಲಿನ ಭೀಕರ ಮಹಾದುರಂತಗಳನ್ನು ಉಂಟುಮಾಡಿದ್ದು ಭಾರೀ ಪ್ರಮಾಣದ ಈಗಲೂ ಮರುಕಳಿಸುತ್ತಿರುವ ಆಹಾರದ ಕೊರತೆಯನ್ನು ಪ್ರೇರಿಸುತ್ತಿದೆ. ಭೂಶಿರದ ವಾಯುವ್ಯಕ್ಕೆ, ನೆರೆಯಲ್ಲಿರುವ ಸೂಡಾನ್‌ ರಾಷ್ಟ್ರದಲ್ಲಿ ಉಂಟಾಗಿರುವ ಛಾ/ಚಾದ್‌ ಪ್ರದೇಶದ ಮೇಲೂ ಪರಿಣಾಮ ಬೀರುತ್ತಿರುವ ಡಾರ್ಫರ್‌ ಸಂಘರ್ಷವನ್ನು ದಶಕಗಳಿಂದಲೂ ಪೀಡಿಸುತ್ತಿರುವ ಬರ/ಜಲಕ್ಷಾಮವು ಉದ್ದೀಪಿಸುತ್ತಿತ್ತು ; ಡಾರ್ಫರ್‌ ಸಂಘರ್ಷ ಉಂಟಾಗಲು ಪ್ರಮುಖ ಕಾರಣಗಳಲ್ಲಿ ಬರ/ಜಲಕ್ಷಾಮ, ಮರುಭೂಮೀಕರಣ ಮತ್ತು ಭಾರೀ ಜನಸಂಖ್ಯೆಗಳು ಮೂರೂ ಸೇರಿವೆ, ಏಕೆಂದರೆ ನೀರನ್ನು ಹುಡುಕಿಕೊಂಡು ಹೋಗುವ ಅರಬ್ಬರ ಬಗ್ಗಾರಾ ಜನಾಂಗದ ಅಲೆಮಾರಿಗಳು ತಮ್ಮ ಜಾನುವಾರುಗಳನ್ನು ಮತ್ತಷ್ಟು ದಕ್ಷಿಣದೆಡೆಗೆ ತೆಗೆದುಕೊಂಡು ಹೋಗಬೇಕಿದ್ದು, ಆ ಪ್ರದೇಶವು ಪ್ರಧಾನವಾಗಿ ಅರಬ್ಬರಲ್ಲದ ಕೃಷಿಕ ಜನಸಮುದಾಯದಿಂದ ಕೂಡಿರುವುದು ಇದಕ್ಕೆ ಕಾರಣವಾಗಿದೆ.

ಹಿಮಾಲಯದ ನದಿಗಳ ಎಡೆಬಿಡದ ಹರಿವಿನ ಜಲಾನಯನ ಪ್ರದೇಶದಲ್ಲಿ ಸುಮಾರು 2.4 ಶತಕೋಟಿ ಜನರು ವಾಸವಾಗಿದ್ದಾರೆ.ಬರುವ ದಶಕಗಳಲ್ಲಿ ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್‌ಮಾರ್ಗಳಲ್ಲಿ ಮೊದಲು ಪ್ರವಾಹಗಳುಂಟಾಗಿ ನಂತರ ಬರ/ಜಲಕ್ಷಾಮಗಳು ಬರಬಹುದು. 500 ದಶಲಕ್ಷಕ್ಕೂ ಮೀರಿದ ಜನರಿಗೆ ಕುಡಿಯುವ ನೀರಿನ ಹಾಗೂ ಕೃಷಿಸಂಬಂಧಿತ ನೀರಾವರಿ ವ್ಯವಸ್ಥೆಗಳಿಗೆ ಆಕರವಾಗಿರುವ ಕಾರಣದಿಂದ ನಿರ್ದಿಷ್ಟವಾಗಿ ಗಂಗಾ ನದಿಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿರುವ ಭಾರತದಲ್ಲಿನ ಬರ/ಜಲಕ್ಷಾಮವು ಕಳವಳವನ್ನುಂಟು ಮಾಡುತ್ತಿದೆ.ರಾಕಿ ಪರ್ವತಪಂಕ್ತಿಗಳು ಹಾಗೂ ಸಿಯೆರ್ರಾ ನೆವಡಾದಂತಹಾ ಪರ್ವತ ಶ್ರೇಣಿಗಳಲ್ಲಿನ ಹಿಮನದಿಗಳಿಂದಲೇ ತನಗೆ ಬರುವ ನೀರಿನ ಬಹುಪಾಲನ್ನು ಪಡೆಯುವ ಉತ್ತರ ಅಮೇರಿಕಾದ ಪಶ್ಚಿಮ ಕರಾವಳಿಯು ಕೂಡಾ ಬಾಧಿತವಾಗಬಹುದಾಗಿದೆ.

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳು
ಹವಾಗುಣ

ಅಮೇಝಾನ್‌ ಜಲಾನಯನ ಭೂಮಿಯ ಕೆಲವು ಭಾಗಗಳು 2005ರಲ್ಲಿ 100 ವರ್ಷಗಳಲ್ಲೇ ಅತ್ಯಂತ ಭೀಕರವಾಗಿದ್ದ ಬರ/ಜಲಕ್ಷಾಮವನ್ನು ಕಂಡವು. 23 ಜುಲೈ 2006ರಂದು ಪ್ರಕಟವಾದ ಲೇಖನವೊಂದು ವುಡ್ಸ್‌ ಹೋಲ್‌ ಸಂಶೋಧನಾ ಕೇಂದ್ರದ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ ಆ ಅರಣ್ಯವು ತನ್ನ ಪ್ರಸ್ತುತ ರೂಪದಲ್ಲಿ ಕೇವಲ ಮೂರು ವರ್ಷಗಳ ಕಾಲದ ಬರ/ಜಲಕ್ಷಾಮವನ್ನಷ್ಟೇ ತಾಳಿಕೊಳ್ಳಬಲ್ಲದು ಎಂದು ಸ್ಪಷ್ಟಪಡಿಸಿತ್ತು. ಬ್ರೆಜಿಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಮೆಜೋನಿಯನ್‌ ರಿಸರ್ಚ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಈ ಲೇಖನದಲ್ಲಿ ಈ ಬರಗಾಲದ ಪ್ರತಿಕ್ರಿಯೆಯು ಮತ್ತು ಪ್ರಾದೇಶಿಕ ಹವಾಗುಣದ ಮೇಲೆ ಅರಣ್ಯನಾಶದ ಪ್ರಭಾವಗಳೆರಡೂ ಸೇರಿ ಮಳೆಕಾಡನ್ನು “ಅಳಿವಿನಂಚಿಗೆ” ತಳ್ಳುತ್ತಿದೆ. ಇಲ್ಲಿಂದ ಅದು ಎಂದಿಗೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ಬಿದ್ದು ಅರಣ್ಯವು ಸತ್ತುಹೋಗಲು ಆರಂಭವಾಗುತ್ತದೆ ಎಂದು ಬ್ರೆಜಿಲ್‌ನ ನ್ಯಾಷನಲ್‌ ರಾಷ್ಟ್ರೀಯ ಅಮೆಜೋನಿಯನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಈ ಪ್ರಕಟಣೆಯಲ್ಲಿ ಪ್ರತಿಪಾದಿಸುತ್ತಾರೆ. ಹುಲ್ಲುಗಾಡು ಅಥವಾ ಮರುಭೂಮಿಯಾಗಿ ಇಲ್ಲಿನ ಮಳೆಕಾಡು ಪರಿವರ್ತನೆಯಾಗುವ ಸಾಧ್ಯತೆ ಸನಿಹದಲ್ಲಿದ್ದು, ವಿಶ್ವದ ವಾತಾವರಣದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಬಹುದು ಎಂದು ಈ ವರದಿಯು ನಿರ್ಣಯಿಸಿತು. WWF ಸಂಸ್ಥೆಯ ಪ್ರಕಾರ, ವಾತಾವರಣ ಬದಲಾವಣೆ ಹಾಗೂ ಅರಣ್ಯನಾಶದಲ್ಲಿನ ಏರಿಕೆಗಳೆರಡೂ ಸೇರಿ ಕಾಳ್ಗಿಚ್ಚುಗಳಿಗೆ ಕಾರಣವಾಗುವ ಮೃತ ಮರಗಳನ್ನು ಒಣದಾಗಿಸುವಂತೆ ಪರಿಣಾಮ ಬೀರುತ್ತದೆ.

ಇದುವರೆಗೂ ಆಸ್ಟ್ರೇಲಿಯಾದ ಬಹು ವಿಶಾಲವಾದ ಭಾಗವು ಮರುಭೂಮಿ ಅಥವಾ ಸಾಧಾರಣವಾಗಿ ಹಿನ್ನಾಡು ಎಂದು ಕರೆಯಲ್ಪಡುವ ಅರೆ-ಶುಷ್ಕ ಭೂಪ್ರದೇಶಗಳಿಂದ ಕೂಡಿದೆ. 2005ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಆಸ್ಟ್ರೇಲಿಯಾದ ಮತ್ತು ಅಮೇರಿಕಾದ ಸಂಶೋಧಕರುಗಳು ಒಳನಾಡಿನ ಮರುಭೂಮೀಕರಣದ ಬಗ್ಗೆ ಪರಿಶೀಲನೆ ನಡೆಸಿದ್ದರು, ನಂತರ ಅವರು ಇದಕ್ಕೆ ಸೂಚಿಸಿದ ಕಾರಣದ ಪ್ರಕಾರ ಇದಕ್ಕೆ ನೀಡಬಹುದಾದ ಒಂದು ವಿವರಣೆಯು ಸುಮಾರು 50,000 ವರ್ಷಗಳಷ್ಟು ಹಿಂದೆ ಇಲ್ಲಿಗೆ ಬಂದಿದ್ದ ಮಾನವ ವಸಾಹತುಗಾರರಿಗೆ ಸಂಬಂಧಿಸಿತ್ತು. ಹೀಗೆ ಇಲ್ಲಿ ನೆಲೆಸಿದ್ದ ವಸಾಹತುಗಾರರು ನಿಯತವಾಗಿ ಮರಗಳನ್ನು ಸುಡುತ್ತಿದ್ದುದರಿಂದ ಆಸ್ಟ್ರೇಲಿಯಾದ ಒಳಭಾಗವನ್ನು ಮಳೆ ಮಾರುತಗಳು ತಲುಪದಂತೆ ತಡೆದಿರುವ ಸಾಧ್ಯತೆ ಇದೆ. ಜೂನ್‌ 2008ರಲ್ಲಿ ತಿಳಿದು ಬಂದ ಪ್ರಕಾರ ಓರ್ವ ತಜ್ಞರ ತಂಡವು ಸಂಪೂರ್ಣ ಮುರ್ರೇ-ಡಾರ್ಲಿಂಗ್‌ ಜಲಾನಯನ ಭೂಮಿಯು ಅಗತ್ಯವಾದಷ್ಟು ಪ್ರಮಾಣದ ನೀರನ್ನು ಅಕ್ಟೋಬರ್‌ ತಿಂಗಳ ಒಳಗೆ ಪಡೆದುಕೊಳ್ಳದಿದ್ದಲ್ಲಿ ದೀರ್ಘಕಾಲೀನವಾದ ಬಹುಶಃ ಸರಿಪಡಿಸಲಸಾಧ್ಯವಾದ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ತೀವ್ರತರವಾದ ಹಾನಿಯುಂಟಾಗುವ ಬಗ್ಗೆ ಎಚ್ಚರಿಕೆ ನೀಡಿತ್ತು. ಆಸ್ಟ್ರೇಲಿಯಾವು ಮತ್ತಷ್ಟು ತೀವ್ರತರವಾದ ಬರ/ಜಲಕ್ಷಾಮಗಳನ್ನು ಅನುಭವಿಸಬಹುದಾದ ಸಾಧ್ಯತೆಯಿದ್ದು, ಭವಿಷ್ಯದಲ್ಲಿ ಅವುಗಳು ಮತ್ತಷ್ಟು ಪುನರಾವರ್ತನೆಯಾಗಬಲ್ಲವಾಗಿವೆ ಎಂದು ಸರ್ಕಾರದಿಂದ ನಿಯಮಿತವಾದ ಆಯೋಗವೊಂದರ ವರದಿಯು ಜುಲೈ 6, 2008ರಂದು ಬಹಿರಂಗಪಡಿಸಿತ್ತು. 2007ರ ಸಾಲಿನ ಆಸ್ಟ್ರೇಲಿಯಾದ‌‌ ವರ್ಷದ ವ್ಯಕ್ತಿ ಪರಿಸರಶಾಸ್ತ್ರಜ್ಞ ಟಿಮ್‌ ಫ್ಲಾನರಿಯವರು, ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ ಮಹಾನಗರವು ತೀವ್ರತರವಾದ ಬದಲಾವಣೆಗಳನ್ನು ಕೈಗೊಳ್ಳದಿದ್ದಲ್ಲಿ ಅದು ವಿಶ್ವದ ಪ್ರಥಮ ಜೀವಚ್ಛವ ಮಹಾನಗರ ಎಂದರೆ ತನ್ನಲ್ಲಿ ವಾಸಿಸುವ ಜನಸಮೂಹಕ್ಕೆ ಅಗತ್ಯವಾದಷ್ಟು ನೀರನ್ನು ಎಂದಿಗೂ ಹೊಂದಲಾರದ ಪರಿತ್ಯಜಿತ ಮಹಾನಗರವಾಗಲಿದೆ ಎಂದು ಭವಿಷ್ಯ ನುಡಿದರು.

ಪೂರ್ವ ಆಫ್ರಿಕಾ ಪ್ರದೇಶವು ಪ್ರಸ್ತುತವಾಗಿ ತನ್ನ ದಶಕಗಳಲ್ಲೇ ಅತ್ಯಂತ ದುರ್ಭರವಾದ ಬರ/ಜಲಕ್ಷಾಮವನ್ನು ಎದುರಿಸುತ್ತಿದ್ದು, ಬೆಳೆಗಳು ಹಾಗೂ ಜಾನುವಾರುಗಳು ನಾಶವಾಗುತ್ತಲಿವೆ. U.N. ಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಯು ಇತ್ತೀಚೆಗೆ ಸ್ಥೂಲವಾಗಿ ನಾಲ್ಕು ದಶಲಕ್ಷ ಕೀನ್ಯಾ ನಾಗರಿಕರು ಆಹಾರದ ತುರ್ತು ಅಗತ್ಯವನ್ನು ಹೊಂದಿದ್ದಾರೆ ಎಂದು ಹೇಳಿತ್ತು.

ಬರ/ಜಲಕ್ಷಾಮದಿಂದುಂಟಾಗುವ ಸರ್ವೇಸಾಮಾನ್ಯ ಪರಿಣಾಮಗಳು
ಜಾನುವಾರು

ಸಾಧಾರಣವಾಗಿ ಬೀಳುವ ಮಳೆಯ ಪ್ರಮಾಣವು ವಾತಾವರಣದಲ್ಲಿ ಲಭ್ಯವಿರುವ ನೀರಿನ ಆವಿಯ ಪ್ರಮಾಣಕ್ಕೆ ಹಾಗೂ ಆ ನೀರಿನ ಆವಿಯನ್ನು ಒಳಗೊಂಡಿರುವ ವಾಯುರಾಶಿಯು ಮೂಡಿಸುವ ಮೇಲ್ಮುಖ ಒತ್ತಡದ ಪ್ರಮಾಣಕ್ಕೆ ಸಂಬಂಧಿಸಿರುತ್ತದೆ. ಇವೆರಡರಲ್ಲಿ ಯಾವುದಾದರೊಂದು ಕಡಿಮೆಯಾದರೂ, ಅದರ ಪರಿಣಾಮವೇ ಬರ/ಜಲಕ್ಷಾಮ. ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಧಿಕ ಒತ್ತಡದ ವ್ಯವಸ್ಥೆಗಳು, ಸಾಗರಪರಿಣಾಮಿ ವಾಯುರಾಶಿಯ ಬದಲಿಗೆ ಭೂಖಂಡೀಯ ವಾಯುರಾಶಿಯನ್ನು ಹೊತ್ತು ಚಲಿಸುವ ಮಾರುತಗಳು, ಹಾಗೂ ಒಂದು ನಿರ್ದಿಷ್ಟ ಪ್ರದೇಶದ ಚಂಡಮಾರುತ ಮಳೆಯ ಚಟುವಟಿಕೆ ಅಥವಾ ಮಳೆಯನ್ನು ತಡೆಯುವ ಅಥವಾ ನಿಯಂತ್ರಿಸುವ ಅಧಿಕ ಒತ್ತಡದ ಪ್ರದೇಶಗಳ ಸಾಲುಗಳಿಂದ ಈ ಬಗೆಯ ಪರಿಣಾಮ ಎದುರಾಗಬಹುದು. ಎಲ್‌ ನಿನೋ-ದಾಕ್ಷಿಣಾತ್ಯ ಆಂದೋಲನದಂತಹಾ ಸಾಗರ ಪರಿಣಾಮಿ ಹಾಗೂ ವಾಯುಮಂಡಲದ ಹವಾಮಾನದ ಆವರ್ತಗಳು ಪೆಸಿಫಿಕ್‌/ಶಾಂತಮಹಾಸಾಗರದ ಕರಾವಳಿಯಾದ್ಯಂತದ ಅಮೇರಿಕಾಗಳ ಪ್ರದೇಶ ಹಾಗೂ ಆಸ್ಟ್ರೇಲಿಯಾಗಳಾದ್ಯಂತ ಬರ/ಜಲಕ್ಷಾಮವನ್ನು ನಿಯತವಾಗಿ ಮರುಕಳಿಸುವ ಗುಣಲಕ್ಷಣವನ್ನಾಗಿಸಿವೆ. ಗನ್ಸ್‌‌, ಜರ್ಮ್ಸ್‌ ಅಂಡ್‌ ಸ್ಟೀಲ್‌ ಕೃತಿಯ ಲೇಖಕ ಜೇರೆಡ್‌ ಡೈಮಂಡ್‌ರವರು ಆಸ್ಟ್ರೇಲಿಯಾದ‌‌ ಮೂಲನಿವಾಸಿ/ಆದಿವಾಸಿಗಳು ಕೃಷಿವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬದಲಾಗಿ ಬೇಟೆಗಾರ-ಸಂಗ್ರಹಕಾರ ಸಮಾಜವಾಗಿಯೇ ಏಕೆ ಉಳಿದರು ಎಂಬುದಕ್ಕೆ ಪ್ರಧಾನ ಕಾರಣವಾಗಿ ಆಸ್ಟ್ರೇಲಿಯಾದ/ಆಸ್ಟ್ರೇಲಿಯನ್‌ ಹವಾಮಾನ ಮಾದರಿಗಳಲ್ಲಿ ಕಂಡುಬರುವ ಬಹು-ವರ್ಷೀಯ ENSO ಆವರ್ತಗಳ ಭಯಾನಕ ಆಘಾತಗಳೆಡೆಗೆ ಬೊಟ್ಟು ಮಾಡುತ್ತಾರೆ. ಈಶಾನ್ಯ ಸ್ಪೇನ್‌ನಲ್ಲಿ ಉಂಟಾಗುವ ಬರ/ಜಲಕ್ಷಾಮಗಳೊಂದಿಗೆ ಉತ್ತರ ಅಟ್ಲಾಂಟಿಕ್‌ ಆಂದೋಲನ ಎಂದು ಹೆಸರಾದ ಮತ್ತೊಂದು ವಾತಾವರಣ ಆಂದೋಲನವನ್ನು ತಳಕು ಹಾಕಲಾಗುತ್ತದೆ.

ವಿಪರೀತ ಕೃಷಿಚಟುವಟಿಕೆ, ಹೆಚ್ಚುವರಿ ನೀರಾವರಿ ವ್ಯವಸ್ಥೆ, ಅರಣ್ಯನಾಶ ಮತ್ತು ಸವಕಳಿಗಳಂತಹಾ ಮಾನವ ಚಟುವಟಿಕೆಗಳು ನೇರವಾಗಿ ನೀರನ್ನು ಸೆಳೆದುಕೊಳ್ಳುವ ಹಾಗೂ ಹಿಡಿದಿಟ್ಟುಕೊಳ್ಳುವ ಭೂಮಿಯ ಸಾಮರ್ಥ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿಕ್ಕೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿರುತ್ತವೆ. ಈ ಎಲ್ಲಾ ಚಟುವಟಿಕೆಗಳು ಮೇಲುನೋಟಕ್ಕೆ ಸಾಪೇಕ್ಷವಾಗಿ ತಮ್ಮ ಪ್ರಭಾವ ವ್ಯಾಪ್ತಿಯನ್ನು ಪ್ರತ್ಯೇಕವಾಗಿ ಹೊಂದಿರುತ್ತವೆಯಾದರೂ ಜಾಗತಿಕ ವಾತಾವರಣ ಬದಲಾವಣೆಗೆ ಕಾರಣವಾಗುವ ಚಟುವಟಿಕೆಗಳು ವಿಶ್ವದಾದ್ಯಂತದ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕೃಷಿವ್ಯವಸ್ಥೆಯ ಮೇಲೆ ಗಮನಾರ್ಹ ಪ್ರಮಾಣದಲ್ಲಿ ಪ್ರಭಾವ ಬೀರುವಂತೆ ಬರ/ಜಲಕ್ಷಾಮಗಳನ್ನು ಪ್ರಚೋದಿಸುತ್ತವೆಂದು ಭಾವಿಸಲಾಗಿದೆ.ಒಟ್ಟಾರೆಯಾಗಿ ಜಾಗತಿಕ ಉಷ್ಣಾಂಶ ಏರಿಕೆಯು ವಿಶ್ವದ ಮಳೆ ಬೀಳುವ ಪ್ರಮಾಣದಲ್ಲಿನ ಹೆಚ್ಚಳಕ್ಕೆ ಕಾರಣವಾಗಲಿದೆ. ಕೆಲ ಪ್ರದೇಶಗಳಲ್ಲಿ ಬರ/ಜಲಕ್ಷಾಮಗಳಿದ್ದರೆ, ಉಳಿದ ಪ್ರದೇಶಗಳಲ್ಲಿ ಪ್ರವಾಹಗಳುಂಟಾಗುವಿಕೆ ಹಾಗೂ ಭೂಸವಕಳಿಗಳು ಹೆಚ್ಚಾಗುತ್ತವೆ. ವಿರೋಧಾಭಾಸವೆನಿಸುವಂತೆ ಜಾಗತಿಕ ತಾಪಮಾನ ಏರಿಕೆಗೆ ಸೂಚಿಸಲಾದ ಕೆಲ ಪರಿಹಾರಗಳು ಮತ್ತಷ್ಟು ಕ್ರಿಯಾತ್ಮಕವಾದ ತಂತ್ರಗಳನ್ನು ಒಳಗೊಂಡಿವೆ, ವಿಶಾಲವಾದ ಛಾವಣಿಯ ಬಳಕೆಯ ಮೂಲಕ ಸೌರ ವಿಕಿರಣ ಪ್ರಸರಣದ ನಿರ್ವಹಣೆಯೂ ಇವುಗಳಲ್ಲಿ ಒಂದಾಗಿದ್ದು, ಇದೂ ಕೂಡಾ ಬರ/ಜಲಕ್ಷಾಮದ ಸಾಧ್ಯತೆಯನ್ನು ಹೆಚ್ಚಿಸಬಹುದಾದ ಅಪಾಯವನ್ನು ತನ್ನೊಳಗೆ ಒಳಗೊಂಡಿರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ

ಬೆಂಗಳೂರಿನಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

ನ್ಯಾಯ ತೀರ್ಮಾನದ ಕತೆ

ಭೂತಾರಾಧನೆಯಲ್ಲಿ ನ್ಯಾಯ ತೀರ್ಮಾನದ ಕತೆ