ನರಕಾಸುರ ಭೂಮಿ ಪುತ್ರ, ದುಷ್ಟನಾದ ನರಕಾಸುರನನ್ನು ಕೃಷ್ಣ ಸಂಹಾರ ಮಾಡಿ ಭೂಮಿಯಲ್ಲಿ ಸುಟ್ಟಾಗ ದೇಹ ರಾಸಾಯನಿಕವಾಗಿ ಬಣ್ಣಬಣ್ಣವಾಗಿ ಸಿಡಿಯಿತು. ಅದರ ಪ್ರತೀಕವಾಗಿ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದು ಎಂದು ಉತ್ತರ ಭಾರತದ ಕಡೆ ಜಾನಪದ ಕಥೆ ಪ್ರಚಲಿತದಲ್ಲಿದೆ.
ಆದರೆ ಆಧುನಿಕ ಕಾಲದಲ್ಲಿ ಪರಿಸರ ಮಾಲಿನ್ಯದ ಕಾರಣಕ್ಕೆ ಜಾಸ್ತಿ ಹಚ್ಚುವಂತಿಲ್ಲ.ಅ. 24 ಮತ್ತು 26ರ ವರೆಗೆ ದೀಪಾವಳಿಯಿದ್ದು, ಆ ದಿನ ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ.

ಇನ್ನೊಂದು, ಪಿತೃಪಕ್ಷದಲ್ಲಿ ಪಿತೃಗಳೆಲ್ಲ ಭೂಮಿಗೆ ಬಂದಿರುತ್ತಾರೆ, ದೀಪಾವಳಿ ಮುಗಿಸಿಕೊಂಡು ಹೊರಡುವ ಪಿತೃಗಳಿಗೆ ಪಿತೃಲೋಕಕ್ಕೆ ದಾರಿ ತೋರಿಸಲು ಉಲ್ಕಾದಾನ ಮಾಡುವುದು ಎಂಬರ್ಥವಿದೆ. ಆಕಾಶಬುಟ್ಟಿಗಳನ್ನು, ದೀಪಗಳನ್ನು, ಪಟಾಕಿಗಳನ್ನು ಹಚ್ಚಿ ಬೆಳಕು ಮೂಡಿಸಿ ಪಿತೃಗಳಿಗೆ ದಾರಿ ತೋರಿಸುವುದು ಎಂಬ ಸಂಕೇತವಿದೆ. ಕಾಲಾಂತರದಲ್ಲಿ ಇದು ಪ್ರಸಿದ್ಧವಾಗಿ ಬಹುವಿಧ ಆಯಾಮ ಪಡೆದುಕೊಂಡು ಪಟಾಕಿ ಹಚ್ಚುವುದು ಪ್ರತೀತಿಯಾಗಿ ಬಂತು.
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಬಂದಾಗ ಪ್ರಜೆಗಳು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸುವ ದಿನವೇ ದಿಪಾವಳಿ ಎಂಬ ಕಥೆ ಕೂಡ ಪ್ರಚಲಿತದಲ್ಲಿದೆ. ಹೀಗೆ ಪುರಾಣ, ವೇದ ಕಾಲದಿಂದಲೂ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದಕ್ಕೆ ಪ್ರಾಶಸ್ತ್ಯ, ಪದ್ಧತಿಯಿದೆ. ಸಂಭ್ರಮ, ಗೆಲುವಿನ ಸಂಕೇತವನ್ನು ಪಟಾಕಿ ಹಚ್ಚುವ ಮೂಲಕ ವ್ಯಕ್ತಪಡಿಸುವ ಪದ್ಧತಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮಲ್ಲಿ ಪಟಾಕಿಯನ್ನು ಕಾಮನ ಹುಣ್ಣಿಮೆ, ದಸರಾ ಸಂದರ್ಭ ಮತ್ತು ದೀಪಾವಳಿ ಸಮಯದಲ್ಲಿ ನಾಲ್ಕೈದು ದಿನ ಬಹಳ ದೊಡ್ಡ ಮಟ್ಟದಲ್ಲಿ ಹಚ್ಚುತ್ತಾರೆ.

ಎರಡು ಗಂಟೆ ಮಾತ್ರ ಅವಕಾಶ : ನಿತ್ಯ ರಾತ್ರಿ 8 ರಿಂದ ರಾತ್ರಿ 10ರ ಒಳಗಾಗಿ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
”ದೀಪಾವಳಿ ಹಬ್ಬ ನಾಡಿನ ಸಮಸ್ತರಿಗೂ ಬೆಳಕು ತರಲಿ. ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ದ ಹಾಗೂ ವಾಯು ಮಾಲಿನ್ಯ ತಡೆಯೋಣ. 125 ಡೆಸಿಬಿಲ್‌ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ” ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿನಿತ್ಯ ರಾತ್ರಿ 8 ಗಂಟೆಯಿಂದ 10ರ ವರೆಗೆ (2 ಗಂಟೆ) ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸುತ್ತೋಲೆ ಹೊರಡಿಸಿದೆ.ರಾಜ್ಯದಲ್ಲಿ ಅ. 24 ರಿಂದ 26ರ ವರೆಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಹಬ್ಬದ ವೇಳೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ಪಾಲಿಸುವಂತೆ ಮಂಡಳಿ ಸೂಚಿಸಿದೆ. ಈ ವಿಚಾರವಾಗಿ ಆಯಾ ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ಸುತ್ತೋಲೆ ಹೊರಡಿಸಲಾಗಿದೆ.

ಹಸಿರು ಪಟಾಕಿಗೆ ಮಾತ್ರ ಅವಕಾಶ : ನಿತ್ಯ ರಾತ್ರಿ 8 ರಿಂದ ರಾತ್ರಿ 10ರ ಒಳಗಾಗಿ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಪಟಾಕಿ ಸಿಡಿಸುವವರು ಘನತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಧನ್ಯವಾದಗಳು.
GIPHY App Key not set. Please check settings