ಒಂಟೆಯು ಅದರ ಬೆನ್ನ ಮೇಲೆ “ಡುಬ್ಬ”ಗಳೆಂದು ಕರೆಯಲಾಗುವ ವಿಶಿಷ್ಟ ಕೊಬ್ಬಿನ ಸಂಗ್ರಹವನ್ನು ಹೊಂದಿರುವ, ಕಮೇಲುಸ್ ಜಾತಿಯಲ್ಲಿನ ಒಂದು ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿ. ಮಧ್ಯಪ್ರಾಚ್ಯ ಹಾಗು ಆಫ಼್ರಿಕಾದ ಕೊಂಬಿನಲ್ಲಿ ನೆಲೆಸಿರುವ ಡ್ರಮಿಡರಿ ಅಥವಾ ಒಂಟಿ ಡುಬ್ಬದ ಒಂಟೆ ಮತ್ತು ಮಧ್ಯ ಏಷ್ಯಾದಲ್ಲಿ ನೆಲೆಸಿರುವ ಬ್ಯಾಕ್ಟ್ರಿಯನ್ ಅಥವಾ ಎರಡು ಡುಬ್ಬಗಳ ಒಂಟೆ.
ಒಂಟೆಯ ಎರಡು ಜೀವಂತವಿರುವ ಪ್ರಜಾತಿಗಳಾಗಿವೆ. ಎರಡೂ ಪ್ರಜಾತಿಗಳನ್ನು ಪಳಗಿಸಲಾಗಿದೆ; ಅವು ಹಾಲು, ಮಾಂಸ, ಬಟ್ಟೆಗಳು ಅಥವಾ ಉಣ್ಣೆಬಟ್ಟೆ ಸಂಚಿಗಳಂತಹ ಸರಕುಗಳಿಗೆ ಕೂದಲನ್ನು ಒದಗಿಸುತ್ತವೆ, ಮತ್ತು ಅವು ಮಾನವ ಸಾರಿಗೆಯಿಂದ ಭಾರ ಹೊರುವವರೆಗೆ ವ್ಯಾಪಿಸುವ ಕಾರ್ಯಗಳಲ್ಲಿ ಕೆಲಸದ ಪ್ರಾಣಿಗಳಾಗಿವೆ. ಒಂಟೆಯಂಬ ಪದವನ್ನು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಮೂಲದಿಂದ ಬಂದಂತಹ ಪದವಾಗಿದೆ.
ಒಂಟೆಗಳು ‘ಫೇಮಸ್’ ಆಗಿರುವುದು ಅದರ ಬೆನ್ನಿನ ಮೇಲಿರುವ ಡುಬ್ಬಕ್ಕೆ. ಸಣ್ಣವರಿರುವಾಗ ಈ ಡುಬ್ಬಗಳ ಬಗ್ಗೆ ಹಲವಾರು ಮಿಥ್ಯ ಕಥೆಗಳಿದ್ದವು. ಇದರ ಒಳಗೆ ಒಂಟೆಗಳು ಯಥೇಚ್ಛವಾದ ನೀರು ಸಂಗ್ರಹ ಮಾಡಿಕೊಳ್ಳುತ್ತದೆ. ನಂತರ ಬಾಯಾರಿಕೆಯಾದಾಗ ಇದರಿಂದ ನೀರನ್ನು ಬಳಸಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಅರ್ಧ ಸತ್ಯ ಸಂಗತಿ. ನಿಜವಾಗಿ ಒಂಟೆಯ ಡುಬ್ಬದಲ್ಲಿರುವುದು ನೀರು ಅಲ್ಲ, ಅದರ ಒಳಗಿರುವುದು ಸುಮಾರು ನಲವತ್ತರಿಂದ ಐವತ್ತು ಕಿಲೋಗ್ರಾಂ ನಷ್ಟು ಕೊಬ್ಬು. ಬಹಳ ಸಮಯದವರೆಗೆ ಒಂಟೆಗೆ ಆಹಾರ ಮತ್ತು ನೀರು ಸಿಗದೇ ಹೋದರೆ ಅದು ಈ ಕೊಬ್ಬನ್ನು ಕರಗಿಸಿಕೊಂಡು ನೀರು ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಹೀಗೆ ಕೊಬ್ಬು ಬಳಕೆಯಾಗುವಾಗ ಅದರ ಡುಬ್ಬದ ಗಾತ್ರ ಕಡಿಮೆಯಾಗುತ್ತಾ ಹೋಗುತ್ತದೆ.
ಉತ್ತಮ ಆಹಾರ ಮತ್ತು ನೀರು ದೊರೆತಾಗ ಮತ್ತೆ ಮೂಲ ರೂಪಕ್ಕೆ ಈ ಡುಬ್ಬಗಳು ಮರಳುತ್ತವೆ. ನೀರು ದೊರೆತಾಗ ಒಂದೇ ಬಾರಿಗೆ ನೂರು ಲೀಟರ್ ನಷ್ಟು ನೀರನ್ನು ಕುಡಿಯಬಲ್ಲದು. ಅದೂ ಕೇವಲ ಹತ್ತರಿಂದ ಹನ್ನೆರಡು ನಿಮಿಷಗಳ ಒಳಗೆ. ಒಂಟೆಯ ಡುಬ್ಬವು ಕೊಬ್ಬನ್ನು ಶೇಖರಿಸಿಕೊಳ್ಳುವ ಕೆಲಸವನ್ನು ಮಾತ್ರ ಮಾಡುವುದಲ್ಲ, ಅದು ದೇಹದ ಉಷ್ಣತೆಯನ್ನು ಕಾಪಾಡುವ ಕೆಲಸವನ್ನೂ ಮಾಡುತ್ತದೆ. ಮರಳುಗಾಡಿನಲ್ಲಿ ವಿಪರೀತ ಸೆಖೆ ಹಾಗೂ ಚಳಿಯ ವಾತಾವರಣವಿರುವ ಸಮಯದಲ್ಲಿ ತನ್ನ ದೇಹದ ಉಷ್ಣತೆಯನ್ನು ಈ ಡುಬ್ಬದಲ್ಲಿರುವ ಕೊಬ್ಬಿನ ಸಹಾಯದಿಂದ ಹೊಂದಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಐದಾರು ತಿಂಗಳವರೆಗೆ ಹಾಗೂ ಬಿರು ಬೇಸಿಗೆಯಲ್ಲಿ ಒಂದು ವಾರದ ವರೆಗೆ ಇವುಗಳು ನೀರನ್ನು ಕುಡಿಯದೇ ಬದುಕಬಲ್ಲವು. ಎರಡು ಡುಬ್ಬಗಳನ್ನು ಹೊಂದಿದ ಒಂಟೆಗಳೂ ಇವೆ.

ಮರುಭೂಮಿಯಲ್ಲಿ ಗಟ್ಟಿಯಾದ ನೆಲ ಇರುವುದು ಕಡಿಮೆ. ಅದು ಮರಳುಗಾಡು. ಈ ನೆಲದಲ್ಲಿ ಸಂಚರಿಸಲು ಒಂಟೆ ಸೂಕ್ತವಾದ ಪ್ರಾಣಿಯಾಗಿದೆ. ಆದರ ದೇಹರಚನೆ ಮತ್ತು ಚಯಾಪಚಯ ಕ್ರಿಯೆಗಳ ವಿಧಾನವು ನೀರು ಮತ್ತು ಆಹಾರದ ಅಲಭ್ಯತೆಯ ಸಮಯದಲ್ಲೂ ತೊಂದರೆಯಾಗದಂತೆ ನಿರ್ಮಾಣಗೊಂಡಿದೆ. ಒಂಟೆಗಳ ಕಾಲಿನ ಬೆರಳುಗಳು ಅಗಲವಾಗಿರುವುದರಿಂದ ಮತ್ತು ಎರಡು ಬೆರಳುಗಳ ನಡುವೆ ದಪ್ಪನೆಯ ಹೆಣಿಗೆಯಂತಹ ರಚನೆಗಳಿರುವುದರಿಂದ ಮರಳಿನಲ್ಲಿ ನಡೆಯುವಾಗ ಕಾಲಿನ ಅಡಿ ಭಾಗವು ಬಿಸಿಯಾದ ಮರಳು ಕಾಲನ್ನು ಸುಡುವುದರಿಂದ ರಕ್ಷಣೆ ನೀಡುತ್ತದೆ. ಮರಳುಗಾಡಿನಲ್ಲಿ ಒಂದೊಂದು ಸಮಯ ಒಂದೊಂದು ರೀತಿಯ ವಾತಾವರಣವಿರುತ್ತದೆ. ಇಲ್ಲಿ ಸಂಚಾರ ಮಾಡುವಾಗ ಹಲವಾರು ಸಮಯದವರೆಗೆ ಆಹಾರ, ನೀರು ಸಿಗದೇ ಇರುವ ಸಾಧ್ಯತೆಯೂ ಇದೆ. ಹಗಲಿನಲ್ಲಿ ವಿಪರೀತ ಸೆಖೆ, ರಾತ್ರಿ ವಿಪರೀತ ಚಳಿಯ ವಾತಾವರಣ ಇರುತ್ತದೆ. ಬಿಸಿಯಾದ ಗಾಳಿ, ಮರಳನ್ನು ಹೊತ್ತೊಯ್ಯುವ ಬಿರುಗಾಳಿ ಇವೆಲ್ಲವನ್ನೂ ಎದುರಿಸಲು ಒಂಟೆ ಸಶಕ್ತವಾಗಿದೆ.
ಒಂಟೆ ಹಾಲಿನಲ್ಲಿ ನಾವು ಕುಡಿಯುವ ಹಸುವಿನ ಹಾಲಿಗಿಂತ ಅತಿ ಹೆಚ್ಚು ಪೌಷ್ಟಿಕ ಸತ್ವಗಳು ಅಡಗಿವೆ. ಇದರಲ್ಲಿ ಕಬ್ಬಿಣ, ಜಿಂಕ್, ಪೊಟ್ಯಾಷಿಯಂ, ತಾಮ್ರ, ಸೋಡಿಯಂ ಮತ್ತು ಮೆಗ್ನೀಸಿಯಮ್ ಅಂಶಗಳು ಹೆಚ್ಚಾಗಿವೆ. ಜೊತೆಗೆ ಪ್ರೋಟೀನ್, ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್, ಸ್ವಲ್ಪ ಪ್ರಮಾಣದ ಲ್ಯಾಕ್ಟೋಸ್ ಮತ್ತು ಇನ್ಸುಲಿನ್ ತರಹದ ಪ್ರೊಟೀನ್ ಅಂಶಗಳು ಹೆಚ್ಚಿವೆ. ಇನ್ನು ವಿಟಮಿನ್ ಅಂಶಗಳ ವಿಚಾರಕ್ಕೆ ಬರುವುದಾದರೆ ವಿಟಮಿನ್ ‘ ಎ ‘, ವಿಟಮಿನ್ ‘ ಬಿ2 ‘ ಮತ್ತು ವಿಟಮಿನ್ ‘ ಸಿ ‘ ಅಂಶಗಳು ಹೆಚ್ಚಿವೆ. ಇದರಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ವೈರಲ್ ಗುಣ ಲಕ್ಷಣಗಳು ಸಾಕಷ್ಟಿವೆ. ಇತರ ಪ್ರಾಣಿಗಳ ಹಾಲಿನ ಅಂಶಗಳ ಮೇಲೆ ನಡೆದ ಸಂಶೋಧನೆಯಂತೆ ಒಂಟೆಯ ಹಾಲಿನ ಮೇಲೂ ಸಾಕಷ್ಟು ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆದಿವೆ. ಒಂಟೆಯ ಹಾಲಿನಲ್ಲಿ ಲಾಕ್ಟೋಫರ್ರಿನ್ ಅಂಶ ಇರುವುದು ಕಂಡು ಬಂದಿದೆ. ಲಾಕ್ಟೋಫರ್ರಿನ್ ಅಂಶ ಸಾಮಾನ್ಯವಾಗಿ ಒಂದು ಆಂಟಿ – ಆಕ್ಸಿಡೆಂಟ್ ಅಂಶವಾಗಿದ್ದು, ಮನುಷ್ಯನ ದೇಹದ ಆರೋಗ್ಯವನ್ನು ವೈರಲ್ ಮತ್ತು ಬ್ಯಾಕ್ಟೀರಿಯಲ್ ಸೋಂಕುಗಳಿಂದ ರಕ್ಷಿಸುತ್ತದೆ.
ಹುಟ್ಟಿದ ಮಗು ತನ್ನ ಜೀವ ಉಳಿಸಿಕೊಳ್ಳಲು ಬೇರೆ ಯಾವ ಆಹಾರವನ್ನೂ ಸೇವಿಸಲು ಸಾಧ್ಯವಾಗುವುದಿಲ್ಲ. ಮಗು ಬೆಳೆಯುತ್ತಾ ದೊಡ್ಡದಾಗುತ್ತಿರುವ ಸಂದರ್ಭದಲ್ಲಿ, ಕೆಲವು ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತವೆ. ಆ ಸಮಯದಲ್ಲಿ ಮೇಕೆ ಹಾಲು ಕುಡಿಸುವುದನ್ನು ಕೇಳಿದ್ದೇವೆ. ದಿನ ಕಳೆದಂತೆ ಮಗುವಿನ ರೋಗ ನಿರೋಧಕ ಶಕ್ತಿ ಮತ್ತು ದೈಹಿಕ ಸದೃಢತೆ ಬಲಗೊಳ್ಳಲು ಕತ್ತೆ ಹಾಲು ಕುಡಿಸುವುದನ್ನೂ ಕೇಳಿದ್ದೇವೆ. ಆದರೆ ಎಂದಾದರೂ ಒಂಟೆ ಹಾಲಿನ ಬಗ್ಗೆ ಮತ್ತು ಮಕ್ಕಳಿಗೆ ಒಂಟೆ ಹಾಲು ಕೊಡುವ ಬಗ್ಗೆ ಕೇಳಿದ್ದೀರಾ?
ತಾಯಿಯ ಎದೆ ಹಾಲಿನಷ್ಟೇ ಪವಿತ್ರ ಒಂಟೆ ಹಾಲು.

ಕೆಲವೊಂದು ಹೊರ ದೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಹಾಲಿನ ಬದಲು ಒಂಟೆ ಹಾಲು ಕೊಡುವ ಪ್ರತೀತಿ ಇದೆ. ಇದಕ್ಕೆ ಕಾರಣ ಒಂಟೆಯ ಹಾಲು ತಾಯಿಯ ಎದೆ ಹಾಲಿನಷ್ಟೇ ಪವಿತ್ರ ಮತ್ತು ಶಕ್ತಿಯುತ ಎಂದು. ಒಂಟೆ ಹಾಲಿನ ಗುಣ ಲಕ್ಷಣಗಳು ಕೇವಲ ಮಕ್ಕಳ ಆರೋಗ್ಯಕ್ಕೆ ಮಾತ್ರ ಸೀಮಿತವಲ್ಲ. ದೊಡ್ಡವರಾದ ನಮಗೂ ಸಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಉಂಟು ಮಾಡುತ್ತದೆ.
ಒಂಟೆಯ ಹಾಲು ಅತ್ಯಂತ ಪೌಷ್ಟಿಕದಾಯಕ ಹಾಗೂ ಸ್ವಾದಿಷ್ಟವಾಗಿರುತ್ತದೆ. ಆಕಳ ಹಾಲಿಗೆ ಹೋಲಿಸಿದರೆ ಕೊಬ್ಬಿನ ಅಂಶ ಕಡಿಮೆ. ಒಂಟೆ ಹಾಲಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಾಲು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಈಗಾಗಲೇ ಒಂಟೆ ಹಾಲನ್ನು ಕೆಲವು ಕಂಪೆನಿಗಳು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಗೆ ತಂದಿವೆ.
ಮಧುಮೇಹಿಗಳಿಗೆ ಯಾವ ಆಹಾರ ತಿಂದರೂ ಹೆಚ್ಚು, ಬಿಟ್ಟರೂ ಕಡಿಮೆ ಎಂಬಂತೆ ದಿನ ನಿತ್ಯದ ಜೀವನ ನಡೆಯುತ್ತಿರುತ್ತದೆ. ಸೇವಿಸುವ ಆಹಾರದಲ್ಲಿ ಅಲ್ಪ ಸ್ವಲ್ಪ ಸಕ್ಕರೆ ಅಂಶ ವ್ಯತ್ಯಾಸವಾದರೂ ಆರೋಗ್ಯದ ವಿಷಯದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಮಧುಮೇಹಿಗಳು ತಮ್ಮ ದಿನದ ಯಾವುದಾದರೂ ಒಂದು ಸಮಯದಲ್ಲಿ ಒಂಟೆ ಹಾಲಿನ ಸೇವನೆ ಅಭ್ಯಾಸ ಮಾಡಿಕೊಂಡರೆ, ತಮ್ಮ ಆರೋಗ್ಯದ ವೃದ್ಧಿಯಲ್ಲಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಏಕೆಂದರೆ ಒಂಟೆ ಹಾಲಿನಲ್ಲಿ ಆಂಟಿ – ಡಯಾಬಿಟಿಕ್ ಏಜೆಂಟ್ ಇದ್ದು, ಇದು ಇನ್ಸುಲಿನ್ ರೀತಿಯ ಪ್ರೋಟಿನ್ ಅಂಶವನ್ನು ಹೊಂದಿರುವ ಕಾರಣದಿಂದ ಮಧುಮೇಹಿಗಳ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂಬ ಮಾತಿದೆ.
ಒಂಟೆಯ ಉಗುಳುವಿಕೆ ಮಾತ್ರ ತುಂಬಾನೇ ಅಪಾಯಕಾರಿ, ಅದು ಕಿರಿಕಿರಿಯಾದರೆ, ಗಾಬರಿಯಾದರೆ ಅಥವಾ ಅಪಾಯದ ಸಂದರ್ಭ ಎದುರಾದರೆ ಜೋರಾಗಿ ಉಗುಳುತ್ತದೆ. ಈ ಉಗುಳಿನಲ್ಲಿ ನಮ್ಮಂತೆ ಕೇವಲ ಜೊಲ್ಲು ಮಾತ್ರ ಬಾರದೇ ಹೊಟ್ಟೆಯಲ್ಲಿ ಜೀರ್ಣವಾಗದೇ ಉಳಿದ ಆಹಾರ ವಸ್ತುಗಳೂ ಬರುತ್ತವೆ. ಹಾಗಾಗಿ ಒಂಟೆ ಉಗುಳುವಾಗ ಅದರ ಎದುರು ಹೋಗುವುದು ತೀರಾ ಅಸಹ್ಯಕರವಾಗಿರುತ್ತದೆ.
ಒಂಟೆಯ ಹಾಲಿನಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು, ಇವುಗಳು ಮನುಷ್ಯನ ಜೀವಕೋಶಗಳಿಗೆ ಶಕ್ತಿಯನ್ನು ತುಂಬಿ ದೇಹದ ಫ್ರೀ – ರಾಡಿಕಲ್ಸ್ ಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಾಶ ಮಾಡುತ್ತವೆ. ಇದರ ಜೊತೆಗೆ ಒಂಟೆ ಹಾಲಿನಲ್ಲಿರುವ ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳು ನಿಮ್ಮ ಆಕ್ಸಿಡೇಟಿವ್ ಒತ್ತಡ ಮತ್ತು ಕ್ಯಾನ್ಸರ್ ಉಂಟಾಗುವ ಸಂಭವವನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.

ಅಧಿಕ ತೂಕ ಹೊಂದಿರುವವರಿಗೆ ಸಹಕಾರಿ. ಒಂಟೆಯ ಹಾಲಿನಲ್ಲಿ ಸಕ್ಕರೆಯ ಪ್ರಮಾಣ ಮತ್ತು ದೇಹದ ತೂಕವನ್ನು ಬೊಜ್ಜಿನ ಸಹಿತ ಹೆಚ್ಚು ಮಾಡುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಬಹಳಷ್ಟು ಕಡಿಮೆ ಇದ್ದು, ತಮ್ಮ ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆಗಲು ಬಯಸುವವರಿಗೆ ಒಂಟೆಯ ಹಾಲಿನಂತಹ ಪಾನೀಯ ಮತ್ತೊಂದಿಲ್ಲ. ನೈಸರ್ಗಿಕವಾಗಿ ಕೆಲಸ ಮಾಡುವ ಒಂಟೆ ಹಾಲು ತನ್ನಲ್ಲಿ ಅಗತ್ಯವಾಗಿರುವ ಖನಿಜಾಂಶಗಳನ್ನು ಹೊಂದಿದ್ದು, ದೇಹದ ತೂಕ ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಮಾಂಸ ಖಂಡಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.
ಒಂಟೆಯ ಹಾಲಿನಲ್ಲಿ ಅತ್ಯಧಿಕವಾದ ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳಿದ್ದು, ಇವು ದೈಹಿಕವಾಗಿ ನೀವು ಎದುರಿಸುವ ಉರಿಯೂತದ ಸಮಸ್ಯೆಗಳಾದ ಕೆಮ್ಮು ಮತ್ತು ಇನ್ನಿತರ ಸಮಸ್ಯೆಗಳಿಗೆ ಅಂದರೆ ದೇಹದ ಹೆಚ್ಚಿದ ಉಷ್ಣಾಂಶ, ಕೆಲವು ಅಂಗಾಂಗಗಳಲ್ಲಿ ನೋವು ಕಂಡು ಬರುವುದು, ಕೈ ಕಾಲುಗಳು ಊದಿಕೊಳ್ಳುವುದು ಇತ್ಯಾದಿಗಳಿಗೆ ಒಂಟೆ ಹಾಲಿನ ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳಿಂದ ಪರಿಹಾರ ಸಿಗುತ್ತದೆ.
ಮರಳುಗಾಡಿನ ಸಸ್ಯಗಳು ಸಣ್ಣ ಸಣ್ಣದಾದ ಎಲೆಗಳನ್ನು ಹೊಂದಿರುತ್ತವೆ. ಇದರ ಜೊತೆಗೆ ಮುಳ್ಳುಗಳೂ ಇರುವ ಸಾಧ್ಯತೆ ಇದೆ. ಈ ಕಾರಣದಿಂದ ಇಂತಹ ಸಸ್ಯಗಳ ಎಲೆಗಳನ್ನು ತಿನ್ನುವಾಗ ಗಾಯಗಳಾಗದಂತೆ ತಡೆಯಲು ದಪ್ಪವಾದ ತುಟಿಗಳನ್ನು ಒಂಟೆ ಹೊಂದಿರುತ್ತದೆ.
ಒಂಟೆಗಳ ಚರ್ಮವು ಬಹಳ ದಪ್ಪವಾಗಿರುವುದರಿಂದ ಬಿಸಿಲಿನ ಧಗೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಮೊಣಕಾಲುಗಳ ಹಾಗೂ ಎದೆಯ ಚರ್ಮ ಬಹಳ ದಪ್ಪವಾಗಿರುವುದರಿಂದ ಒಂಟೆಗಳು ಆರಾಮವಾಗಿ ಬಿಸಿಯಾದ ಮರಳಿನ ಮೇಲೂ ಕುಳಿತುಕೊಳ್ಳುತ್ತದೆ.
ಒಂಟೆ ಅಪಾಯಕಾರಿ ಪ್ರಾಣಿಗಳಲ್ಲ. ಕುದುರೆಗಳಂತೆ ಒಂಟೆಯನ್ನು ಸವಾರಿಗೆ ಮಾನವ ಬಳಸುತ್ತಾ ಬಂದಿದ್ದಾನೆ.
ಧನ್ಯವಾದಗಳು.
GIPHY App Key not set. Please check settings