ಶತರೂಪಾ ಹಿಂದೂ ಪುರಾಣಗಳಲ್ಲಿ ಹೇಳಿದ ಮತ್ತು ನಂಬಿದ ವಿಶ್ವದ ಮೊದಲ ಮಹಿಳೆ. ಸೃಷ್ಠಿಗೆ ಮೊದಲು ಬ್ರಹ್ಮನ ಸಂಕಲ್ಪದಂತೆ ಅವಳು ಬ್ರಹ್ಮನ ವಮಾಂಗದಿಂದೆ ಎಂದರೆ ಅವನ ದೇಹದ ಎಡ ಬಾಗದಿಂದ ಜನಿಸಿದ ಸ್ತ್ರೀ ರೂಪಳು. ಬ್ರಹ್ಮನು ತನ್ನ ಬಲಭಾಗದಿಂದ ಒಬ್ಬ ಪುರುಷನನ್ನು ಸೃಷ್ಟಿಸಿದನು. ಆ ಪುರಷನು ಸ್ವಾಯಂಭುಮನು. ಶತರೂಪಾ ಸ್ವಯಂಂಭುವ ಮನುವಿನ ಹೆಂಡತಿಯಾದಳು.
ಸುಖಸಾಗರ್ ಪ್ರಕಾರ, ಬ್ರಹ್ಮಾಂಡದ ಬೆಳವಣಿಗೆಗಾಗಿ, ಬ್ರಹ್ಮನು ತನ್ನ ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿದನು, ಅವುಗಳ ಹೆಸರುಗಳು ‘ಕಾ’ ಮತ್ತು ‘ಯಾ’ ಕಾಯ. ಆ ಎರಡು ಭಾಗಗಳಲ್ಲಿ, ಪುರುಷನು ಬಲ ಒಂದರಿಂದ ಮತ್ತು ಮಹಿಳೆ ಇನ್ನೊಂದು ಎಡ ಭಾಗದಿಂದ ಜನಿಸಿದರು. ಪುರುಷನ ಹೆಸರು ಸ್ವಯಂ ಭುವಮನು ಮತ್ತು ಮಹಿಳೆಯ ಹೆಸರು ಶತರೂಪಾ. ಪ್ರಪಂಚದ ಎಲ್ಲಾ ಜನರು ಈ ಮೊದಲ ಗಂಡು ಮತ್ತು ಮೊದಲ ಹೆಣ್ಣು ಮಕ್ಕಳಿಂದ ಹುಟ್ಟಿಕೊಂಡಿದ್ದಾರೆ. ಮನು ಅವರ ಮಕ್ಕಳಿಂದಾಗಿ ಅವರನ್ನು ಮನುಷ್ಯರು ಎಂದು ಕರೆಯಲಾಗುತ್ತದೆ.
ಅವರಿಗೆ ಪ್ರಿಯವ್ರತ, ಉತ್ತಾನಪಾದ ಮೊದಲಾದ ಏಳು ಗಂಡು ಮತ್ತು ಮೂವರು ಪುತ್ರಿಯರು ಜನಿಸಿದರು. ನರಮನುಷ್ಯ ಪುತ್ರರ ನಂತರ, ಬ್ರಹ್ಮ ಅಂಗಜಾ ಎಂಬ ಹುಡುಗಿಯನ್ನು ನಿರ್ಮಿಸಿದನು, ಅವಳು ಶತರೂಪಾ, ಸರಸ್ವತಿ ಇತ್ಯಾದಿಗಳನ್ನು ಒಳಗೊಂಡಿದ್ದಳು. ಬ್ರಹ್ಮನಿಂದ ಜನಿಸಿದ ಅವಳಿಗೆ ಏಳು ಗಂಡು ಮಕ್ಕಳಾದರು, ಸ್ವಯಂಂಭುವ ಮನು, ಮಾರಿಚ ಇತ್ಯಾದಿ ಎಂದು ಮತ್ಸ್ಯ ಪುರಾಣದಲ್ಲಿ ಹೇಳಿದೆ. ಹರಿಹರಪುರಾಣದ ಪ್ರಕಾರ, ಶತರೂಪಾಳು ಘೋರ ತಪಸ್ಸನ್ನು ಮಾಡಿ ಸ್ವಯಂಂಭುವ ಮನುವನ್ನು ಗಂಡನಾಗಿ ಪಡೆದಳು. ಸ್ವಯಂಂಭುಮನು ಮತ್ತು ಶತರೂಪಾ ಅವರು ‘ವೀರ’ ಎಂಬ ಮಗನನ್ನು ಹೊಂದಿದ್ದರು.
ಮಾರ್ಕಾಂಡೇಯ ಪುರಾಣದಲ್ಲಿ ಶತಾರೂಪಾಳು ಇಬ್ಬರು ಗಂಡು ಮಕ್ಕಳಲ್ಲದೆ, ರಿದ್ಧಿ ಮತ್ತು ಪ್ರಸೂತಿ ಎಂಬ ಇಬ್ಬರು ಹೆಣ್ಣುಮಕ್ಕಳನ್ನೂ- ಉಲ್ಲೇಖಿಸಲಾಗಿದೆ. ಮತ್ತೊಂದು ಕಡೆ ಮೂರನೇ ಮಗಳು ದೇವಹೂತಿಯನ್ನೂ ಹೆಸರಿಸಲಾಗಿದೆ. ಶಿವ ಮತ್ತು ವಾಯು ಪುರಾಣಗಳಲ್ಲಿ ಇಬ್ಬರು ಹೆಣ್ಣುಮಕ್ಕಳ ಪ್ರಸೂತಿ ಮತ್ತು ಅಕೂತಿ ಎಂಬ ಎರಡು ಹೆಸರುಗಳಿವೆ. ವಾಯುಪುರಾಣದ ಪ್ರಕಾರ, ಬ್ರಹ್ಮನ ದೇಹದಲ್ಲಿ ಎರಡು ಭಾಗಗಳಿದ್ದವು, ಅವುಗಳಲ್ಲಿ ಒಂದು ಶತರೂಪ ಇನ್ನಂದು ಸ್ವಯಂಂಭುಮನು. ದೇವಿ ಭಾಗವತ್ ಇತ್ಯಾದಿಗಳಲ್ಲಿ ಶತರೂಪಾ ಅವರ ಕಥೆಗಳು ವಿಭಿನ್ನವಾಗಿವೆ.
ಹಿಂದೂ ಪುರಾಣಗಳಲ್ಲಿ, ಬ್ರಹ್ಮ ಬ್ರಹ್ಮಾಂಡವನ್ನು ರಚಿಸುವಾಗ, ಅವನು ಶತರೂಪೆ ಎಂದು ಕರೆಯಲ್ಪಡುವ ಸ್ತ್ರೀ ದೇವತೆಯನ್ನು ಸೃಷ್ಠಿ ಮಾಡಿದನು. ಶತ-ರೂಪಾ “ಅವಳು ನೂರು ಸುಂದರ ರೂಪಗಳಲ್ಲಿ / ನೂರು ರೂಪಗಳನ್ನು ಪಡೆಯಬಲ್ಲವಳು” ಎಂದು ಕರೆಯಲ್ಪಡುವ ಸ್ತ್ರೀ ದೇವತೆಯನ್ನು ಸೃಷ್ಠಿ ಮಾಡಿದನು. ಮತ್ಸ್ಯ ಪುರಾಣದ ಪ್ರಕಾರ, ಶತರೂಪಾಳನ್ನು ಶತರೂಪಾ, ಸಂಧ್ಯಾ ಮತ್ತು ಬ್ರಾಹ್ಮಿ ಸೇರಿದಂತೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಬ್ರಹ್ಮ ಪುರಾಣದ ಪ್ರಕಾರ, ಮನುವಿನೊಂದಿಗೆ ಬ್ರಹ್ಮನು ಸೃಷ್ಟಿಸಿದ ಮೊದಲ ಮಹಿಳೆ ಎಂದು ಶತರೂಪನನ್ನು ಪರಿಗಣಿಸಲಾಗಿದೆ.
ಹಿಂದೂ ಪುರಾಣವು ಬ್ರಹ್ಮನ ನಾಲ್ಕು ತಲೆಗಳನ್ನು ಪಡೆದ ಬಗೆಯನ್ನು ವಿವರಿಸಲು ಒಂದು ಕಥೆ ಇದೆ. ಬ್ರಹ್ಮನು ಶತರೂಪಾಳನ್ನು ಸೃಷ್ಟಿಸಿದಾಗ, ಅವನು ತಕ್ಷಣ ಅವಳಲ್ಲಿ ಮೋಹಗೊಂಡನು ಮತ್ತು ಅವಳು ಹೋದಲ್ಲೆಲ್ಲಾ ನೋಟದಲ್ಲಿ ಅವಳನ್ನು ಹಿಂಬಾಲಿಸಿದನು. ಅವನ ನೋಟವನ್ನು ತಪ್ಪಿಸಲು ಶತರೂಪಾಳು ವಿವಿಧ- ನಾಲ್ಕು ದಿಕ್ಕುಗಳಲ್ಲಿ ಚಲಿಸಿದಳು. ಆದರೆ ಅವಳು ಹೋದಲ್ಲೆಲ್ಲಾ, ಬ್ರಹ್ಮನು ಆ ನಾಲ್ಕು ದಿಕ್ಕಿಗೂ ತನ್ನ ನೋಟವನ್ನು ಹರಿಸಿದಾಗ, ಅವನ ನೋಟಹರಿದಂತೆ ಆ ನಾಲ್ಕು ದಿಕ್ಕಿಗೂ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ -ಹೀಗೆ ಒಂದೊಂದು ತಲೆಯನ್ನು ಅಭಿವೃದ್ಧಿಪಡಿಸಿಕೊಂಡನು. ಹತಾಶಳಾದ ಶತರೂಪೆ ಒಂದು ಕ್ಷಣವಾದರೂ ಅವನ ದೃಷ್ಟಿಯಿಂದ ಹೊರಗುಳಿಯಲು, ಅವನ ಮೇಲೆ ಹಾರಿದಳು. ಆದಾಗ್ಯೂ, ಬ್ರಹ್ಮನು ಐದನೇ ತಲೆಯು ಇತರ ತಲೆಗಳೊಡನೆ ಹೆಚ್ಚಾಗಿ ಕಾಣಿಸಿಕೊಂಡಿತು. ಹೀಗಾಗಿ, ಬ್ರಹ್ಮ ಐದು ತಲೆಗಳನ್ನು ಅಭಿವೃದ್ಧಿಪಡಿಸಿಕೊಂಡ. ಈ ಕ್ಷಣದಲ್ಲಿ ‘ತತ್ಪುರುಷ’ ಇತ್ಯಾದಿ ಪಂಚ ಶಿರಸ್ಸಿನ ಶಿವನು ಕಾಣಿಸಿಕೊಂಡನು. ಶತರೂಪಾಳು ಬ್ರಹ್ಮನ ಮಗಳು ಅವನಿಂದ ಸೃಷ್ಟಿಸಲ್ಪಟ್ಟಿದ್ದಾಳೆ. ಅವನೇ ಅವಳನ್ನು ಮೋಹಿಸುವುದು ತಪ್ಪು; ಹಾಗೆಂದು ಭಾವಿಸಿ ಶಿವನು ಶತರೂಪಾಳನ್ನು ದೇವಿ ಅಂಬಿಕೆ ಮೂಕಾಂಬಿಕೆಯಲ್ಲಿ ವಿಲೀನಗೊಳಿಸಿದನು. ಆ ಅಂಬಿಕೆಯನ್ನು ತನ್ನಲ್ಲಿ ಸೇರಿಸಿಕೊಂಡು ಅರ್ಧನಾರೀಶ್ವರವನ ರೂಪವನ್ನು ಪಡೆದನು. ಆದ್ದರಿಂದ ಶಿವನನ್ನು “ಅರ್ಧ-ಪುರುಷ ಮತ್ತು ಅರ್ಧ ಸ್ತ್ರೀ-ಯಾಗಿರುವ ದೇವರು” ಎಂದು ಕರೆಯಲಾಗಿದೆ. ಶಿವನು ಬ್ರಹ್ಮನಿಗೆ ಗಂಡು ಮತ್ತು ಹೆಣ್ಣು ಇಬ್ಬರಿಗೂ ಆತ್ಮಗಳು ಒಂದೇ ಆಗಿರುವುದರಿಂದ ಅವರು ಒಂದೇ ಸಮಾನರು ಬೇಧವಿಲ್ಲ,ಆದ್ದರಿಂದ ಮೋಹಕ್ಕೆ ಅರ್ಥವಿಲ್ಲ. ಇಬ್ಬರ ದೇಹವೂ ಒಂದೇ ಆದ ಆತ್ಮ ವಸ್ತುವನ್ನು ಹೊಂದಿದೆ. ದೇಹದ ವಿಭಿನ್ನ ಭಾಗಗಳಿಂದ ಮಾತ್ರ ಹೊರಗಿನ ದೇಹವು ವಿಭಿನ್ನವಾಗಿರುತ್ತದೆ ಎಂದು ಹೇಳಿದನು.
ಬ್ರಹ್ಮನಿಗೆ ನಾಲ್ಕೇ ತಲೆ ಉಳಿದ ಬಗೆ
ಶಿವನು ತಾನು ಪಂಚಾನನಾಗಿರುವಾಗ ಬ್ರಹ್ಮನೂ ಪಂಚ ಆನನನಾಗಿರುವುದು ಸರಿಯಲ್ಲ ಎಂದು ಅವನ ಮಧ್ಯದ ಮೇಲಿನ ನೋಟದ ತಲೆಯನ್ನು ಉಗುರಿನಿಂದ ಕತ್ತರಿಸಿ ತೆಗೆದನು, ಆ ತಲೆ ಅವನ ಕೈಗೆ ಅಂಟಿಕೊಂಡಿತು
ಆ ಬ್ರಹ್ಮ ಕಪಾಲವನ್ನು ಬಿಡಿಸಿಕೊಳ್ಳಲು ಆಗದೆ ಅದನ್ನೇ ಹಿಡಿದುಕೊಂಡು ಮೂರು ಲೋಕಗಳಲ್ಲಿ ಅಲೆದು ಭಿಕ್ಷೆ ಬೇಡಿದನು. ಕೊನೆಗೆ ವಿಷ್ಷ್ನುವು ಅದನ್ನು ಉಪಾಯದಿಂದ ಶಿವನ ಕೈಯಿಂದ ಕೆಳಗೆ ಬೀಳುವಂತೆ ಮಾಡಿದನು ಎಂಬುದು- ಬ್ರಹ್ಮ ಕಪಾಲದ ಕಥೆ. ಹಾಗಾಗಿ ಬ್ರಹ್ಮನಿಗೆ ಕೊನೆಗೆ ನಾಲ್ಕೇ ತಲೆಗಳು ಉಳಿದವು.
ಬೇರೆ ಕಡೆ ಇರುವ ಕಥೆ : ಶತರೂಪಾಳು ಸ್ವಯಂಭುವ ಮನುವನ್ನು ಮದುವೆಯಾದಳು ಮತ್ತು ಐದು ಮಕ್ಕಳನ್ನು ಹೊಂದಿದ್ದಳು – ಇಬ್ಬರು ಪುತ್ರರು, ಪ್ರಿಯವ್ರತ ಮತ್ತು ಉತ್ತಾನಪಾದ, ಮತ್ತು ಮೂವರು ಹೆಣ್ಣು ಮಕ್ಕಳಾದ ಅಕೂತಿ, ದೇವಹೂತಿ ಮತ್ತು ಪ್ರಸೂತಿ. ಮನು ತನ್ನ ಮೊದಲ ಮಗಳು ಅಕೂತಿಯನ್ನು ಋಷಿ ರುಚಿಗೆ ಕೊಟ್ಟನು. ಮಧ್ಯಮ ಮಗಳು ದೇವಹೂತಿಯನ್ನು, ಕರ್ದಮ ಋಷಿಗೆ ಕೊಟ್ಟನು ಮತ್ತು ಕಿರಿಯ ಪ್ರಸೂತಿಯನ್ನು ದೇವ ದಕ್ಷಬ್ರಹ್ಮನಿಗೆ ಒಪ್ಪಿಸಿದನು.
ಧನ್ಯವಾದಗಳು.
GIPHY App Key not set. Please check settings