in

ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು

ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು
ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು

ಶ್ವಾಸಕೋಶದ ಕ್ಯಾನ್ಸರ್ ಎಂಬುದು ಒಂದು ಕಾಯಿಲೆಯಾಗಿದ್ದು, ಶ್ವಾಸಕೋಶದ ಅಂಗಾಂಶಗಳಲ್ಲಿನ ಅನಿಯಂತ್ರಿತವಾದ ಜೀವಕೋಶದ ಬೆಳವಣಿಗೆಯನ್ನು ಇದು ಒಳಗೊಂಡಿರುತ್ತದೆ. ಈ ಬೆಳವಣಿಗೆಯು ಸ್ಥಾನಾಂತರಣಕ್ಕೆ ಕಾರಣವಾಗಬಹುದು. ಅಂದರೆ ಇದು ಪಕ್ಕದ ಅಂಗಾಂಶದ ಮೇಲೆ ಆಕ್ರಮಣ ಮಾಡಬಹುದು ಮತ್ತು ಶ್ವಾಸಕೋಶಗಳಿಂದ ಆಚೆಗಿನ ಭಾಗಗಳಲ್ಲಿನ ಒಳವ್ಯಾಪಿಸುವಿಕೆಗೆ ಕಾರಣವಾಗಬಹುದು. ಶ್ವಾಸಕೋಶದ ಪ್ರಧಾನ ಕ್ಯಾನ್ಸರ್‌ಗಳ ಪೈಕಿಯ ಬಹುಪಾಲು ನಿದರ್ಶನಗಳು ಶ್ವಾಸಕೋಶದ ಕಾರ್ಸಿನೋಮಗಳಾಗಿದ್ದು, ಹೊರಪದರದ ಜೀವಕೋಶಗಳಿಂದ ಅವು ಜನ್ಯವಾದವುಗಳಾಗಿರುತ್ತವೆ.

ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಅತ್ಯಂತ ಸಾಮಾನ್ಯ ಕಾರಣವಾಗಿರುವ ಶ್ವಾಸಕೋಶದ ಕ್ಯಾನ್ಸರ್, ವಿಶ್ವಾದ್ಯಂತ ಕಂಡುಬರುವ 1.3 ದಶಲಕ್ಷ ಸಾವುಗಳಿಗೆ ಸಂಬಂಧಿಸಿದಂತೆ ಹೊಣೆಗಾರನಾಗಿದೆ. ಈ ಅಂಕಿ-ಅಂಶವು 2004ರ ವೇಳೆಗೆ ಇದ್ದಂತೆ ವಾರ್ಷಿಕವಾಗಿ ಕಂಡುಬಂದ ಸಂಖ್ಯೆಯಾಗಿದೆ. ಉಸಿರಾಟದಲ್ಲಿ ಕಂಡುಬರುವ ಅಲ್ಪತೆ, ಕೆಮ್ಮುವಿಕೆ, ಕೆಮ್ಮಿದಾಗ ರಕ್ತವು ಹೊರಬರುವುದೂ ಸೇರಿದಂತೆ ಮತ್ತು ತೂಕನಷ್ಟ ಇವುಗಳು ಅತ್ಯಂತ ಸಾಮಾನ್ಯ ರೋಗಲಕ್ಷಣಗಳಾಗಿವೆ.

ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಮತ್ತು ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ – ಇವು ಶ್ವಾಸಕೋಶದ ಕ್ಯಾನ್ಸರ್‌‌ನ ಮುಖ್ಯ ಬಗೆಗಳಾಗಿವೆ. ಕ್ಯಾನ್ಸರ್‌‌ನ ಬಗೆಯ ಅನುಸಾರ ಚಿಕಿತ್ಸೆಯು ಬದಲಾಗುವುದರಿಂದ ಈ ವೈಲಕ್ಷಣ್ಯವು ಪ್ರಮುಖವಾಗಿರುತ್ತದೆ. ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು ಶಸ್ತ್ರಚಿಕಿತ್ಸೆ ಮಾಡಿ ಕೆಲವೊಮ್ಮೆ ಉಪಚರಿಸಲಾದರೆ, ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು ಸಾಮಾನ್ಯವಾಗಿ ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಸ್ಪಂದಿಸುತ್ತದೆ. ತಂಬಾಕು ಹೊಗೆಗೆ ದೀರ್ಘಾವಧಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಧೂಮಪಾನಿಗಳಲ್ಲದವರು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಪ್ರಮಾಣವು ಒಟ್ಟು ಪ್ರಕರಣಗಳ ಪೈಕಿ ಸುಮಾರು 15%ನಷ್ಟಿದ್ದು, ಇದಕ್ಕೆ ಅನೇಕ ಕಾರಣಗಳಿರಲು ಸಾಧ್ಯವಿದೆ; ಆನುವಂಶಿಕ ಅಂಶಗಳು ರೇಡಾನ್‌ ಅನಿಲ, ಕಲ್ನಾರು, ಮತ್ತು ಅನ್ಯಮೂಲದ ಹೊಗೆಯನ್ನು ಒಳಗೊಂಡಿರುವ ವಾಯುಮಾಲಿನ್ಯ. ಇವುಗಳ ಒಂದು ಸಂಯೋಜನೆಯು ಧೂಮಪಾನಿಗಳಲ್ಲದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌ಗೆ ಅನೇಕವೇಳೆ ಕಾರಣವಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು
ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು

ಎದೆಯ ರೇಡಿಯೋಗ್ರಾಫ್‌ ಮತ್ತು ಕಂಪ್ಯೂಟರ್‌ ಬಳಸಿ ಮಾಡಲಾದ ತಲಲೇಖನದ ವಿಧಾನಗಳನ್ನು ಬಳಸಿಕೊಂಡು ಶ್ವಾಸಕೋಶದ ಕ್ಯಾನ್ಸರ್‌‌ನ್ನು ಕಾಣಲು ಸಾಧ್ಯವಿದೆ. ಅಂಗಾಂಶ ಪರೀಕ್ಷೆಯೊಂದನ್ನು ಕೈಗೊಳ್ಳುವ ಮೂಲಕ ರೋಗನಿರ್ಣಯವನ್ನು ದೃಢೀಕರಿಸಲಾಗುತ್ತದೆ. ಬ್ರಾಂಕೋಸ್ಕೋಪಿ ಅಥವಾ CT-ನಿರ್ದೇಶಿತ ಅಂಗಾಂಶ ಪರೀಕ್ಷೆಯಿಂದ ಇದನ್ನು ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ. ಕ್ಯಾನ್ಸರ್‌ನ ಊತಕಶಾಸ್ತ್ರೀಯ ಬಗೆ, ಹರಡಿಕೆಯ ಮಟ್ಟ, ಮತ್ತು ರೋಗಿಯ ಕಾರ್ಯಕ್ಷಮತೆಯ ಸ್ಥಿತಿಯ ಮೇಲೆ ಚಿಕಿತ್ಸೆ ಮತ್ತು ಕಾಯಿಲೆಯ ಮುನ್ನರಿವು ಅವಲಂಬಿತವಾಗಿರುತ್ತವೆ. ಸಂಭಾವ್ಯ ಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆ, ರಾಸಾಯನಿಕ ಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆಗಳು ಸೇರಿವೆ. ಕಾಯಿಲೆಯ ಹಂತ, ಒಟ್ಟಾರೆ ಆರೋಗ್ಯ, ಮತ್ತು ಇತರ ಅಂಶಗಳನ್ನು ಅವಲಂಬಿಸಿ ರೋಗಿಯ ಬದುಕುಳಿಯುವಿಕೆಯು ಬದಲಾಗುತ್ತದೆಯಾದರೂ, ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿರುವುದು ಪತ್ತೆಯಾದ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದಂತಿರುವ ಒಟ್ಟಾರೆ ಐದು-ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು 14%ನಷ್ಟಿದೆ ಎನ್ನಬಹುದು.

ತಡೆಗಟ್ಟುವಿಕೆಯು ಶ್ವಾಸಕೋಶದ ಕ್ಯಾನ್ಸರ್‌‌ನ ವಿರುದ್ಧ ಹೋರಾಡುವುದಕ್ಕೆಂದು ಇರುವ ಅತ್ಯಂತ ವೆಚ್ಚ-ಪರಿಣಾಮಶೀಲ ವಿಧಾನವಾಗಿದೆ. ಬಹುತೇಕ ದೇಶಗಳಲ್ಲಿ ಕೈಗಾರಿಕಾ ಮತ್ತು ಗೃಹಬಳಕೆಯ ಕ್ಯಾನ್ಸರು ಜನಕಗಳನ್ನು ಗುರುತಿಸಿ ನಿಷೇಧಿಸಲಾಗಿದೆಯಾದರೂ, ತಂಬಾಕು ಧೂಮಪಾನವು ಈಗಲೂ ವ್ಯಾಪಕವಾಗಿ ಹಬ್ಬಿದೆ. ತಂಬಾಕು ಸೇದುವಿಕೆಯನ್ನು ತೆಗೆದುಹಾಕುವುದು ಶ್ವಾಸಕೋಶದ ಕ್ಯಾನ್ಸರ್‌‌ನ ತಡೆಗಟ್ಟುವಿಕೆಯಲ್ಲಿನ ಒಂದು ಪ್ರಧಾನ ಗುರಿಯಾಗಿದೆ, ಮತ್ತು ಈ ಪ್ರಕ್ರಿಯೆಯಲ್ಲಿ ಧೂಮಪಾನದ ನಿಲುಗಡೆಯು ಒಂದು ಪ್ರಮುಖ ನಿರೋಧಕ ಸಾಧನ ಎಂದು ಕರೆಸಿಕೊಂಡಿದೆ.

ಯುವಜನತೆಯನ್ನು ಉದ್ದೇಶಿಸಿ ಹಮ್ಮಿಕೊಳ್ಳಲಾಗಿರುವ ತಡೆಗಟ್ಟುವಿಕೆಯ ಕಾರ್ಯಸೂಚಿಗಳು ಅವುಗಳ ಪೈಕಿ ಅತೀವ ಪ್ರಾಮುಖ್ಯತೆಯನ್ನು ಹೊಂದಿವೆ. 1998ರಲ್ಲಿ, ಮಾಸ್ಟರ್‌ ಸೆಟ್ಲ್‌ಮೆಂಟ್‌ ಅಗ್ರಿಮೆಂಟ್‌ ಎಂಬ ಒಡಂಬಡಿಕೆಯು, ತಂಬಾಕು ಕಂಪನಿಗಳಿಂದ ಬರಬೇಕಾದ ಒಂದು ವಾರ್ಷಿಕ ಪಾವತಿಗೆ ಸಂಬಂಧಿಸಿದಂತೆ USAಯಲ್ಲಿನ 46 ಸಂಸ್ಥಾನಗಳಿಗೆ ಅರ್ಹತೆಯನ್ನು ನೀಡಿತು. ಫೈಸಲಾತಿಯ ಹಣ ಮತ್ತು ತಂಬಾಕು ತೆರಿಗೆಗಳ ನಡುವೆ, ಪ್ರತಿ ಸಂಸ್ಥಾನದ ಸಾರ್ವಜನಿಕ ಆರೋಗ್ಯ ಇಲಾಖೆಯು ತಡೆಗಟ್ಟುವಿಕೆಯ ಕುರಿತಾದ ತನ್ನ ಕಾರ್ಯಸೂಚಿಗಳಿಗೆ ಧನಸಹಾಯವನ್ನು ನೀಡುತ್ತದೆಯಾದರೂ, ಸಂಸ್ಥಾನಗಳ ಪೈಕಿ ಯಾವೊಂದೂ ಸಹ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ವತಿಯಿಂದ ಶಿಫಾರಿತವಾಗಿರುವ ಮೊತ್ತದವರೆಗೆ ಖರ್ಚುಮಾಡುತ್ತಿಲ್ಲ. ಅಂದರೆ ಈ ತಡೆಗಟ್ಟುವಿಕೆಯ ಪ್ರಯತ್ನಗಳ ಮೇಲೆ ಅವು, ತಂಬಾಕು ತೆರಿಗೆಗಳು ಮತ್ತು ಫೈಸಲಾತಿ ಆದಾಯಗಳ ಪೈಕಿಯ 15 ಪ್ರತಿಶತದಷ್ಟು ಮೊತ್ತವನ್ನು ಮಾತ್ರವೇ ಖರ್ಚುಮಾಡುತ್ತಿವೆ.

ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣಗಳು
ನಿಷ್ಕ್ರಿಯ ಧೂಮಪಾನ

ಭೋಜನಗೃಹಗಳು ಮತ್ತು ಕಾರ್ಯಕ್ಷೇತ್ರಗಳಂಥ ಸಾರ್ವಜನಿಕ ಪ್ರದೇಶಗಳಲ್ಲಿ ನಿಷ್ಕ್ರಿಯ ಧೂಮಪಾನವನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಕಾರ್ಯನೀತಿಯ ಮಧ್ಯಸ್ಥಿಕೆಗಳು ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಮಾರ್ಪಟ್ಟಿದ್ದು, ಇದಕ್ಕೆ ಪುಷ್ಟಿನೀಡುವಂತೆ ಕ್ಯಾಲಿಫೋರ್ನಿಯಾವು ಸಾರ್ವಜನಿಕ ಸಂಸ್ಥೆಗಳಲ್ಲಿ ಧೂಮಪಾನವನ್ನು ನಿಷೇಧಿಸುವ ಒಂದು ಕ್ರಮವನ್ನು ಕೈಗೊಳ್ಳಲು 1998ರಲ್ಲಿ ಮುಂದಾಯಿತು. 2004ರಲ್ಲಿ ಐರ್ಲೆಂಡ್‌ ಇದೇ ರೀತಿಯ ಪಾತ್ರವೊಂದನ್ನು ಯುರೋಪ್‌ನಲ್ಲಿ ನಿರ್ವಹಿಸಿತು. ಈ ಮೇಲ್ಪಂಕ್ತಿಯನ್ನು ಇಟಲಿ ಮತ್ತು ನಾರ್ವೆ 2005ರಲ್ಲಿ ಅನುಸರಿಸಿದರೆ, 2006ರಲ್ಲಿ ಸ್ಕಾಟ್ಲೆಂಡ್‌ ಹಾಗೂ ಇನ್ನಿತರ ದೇಶಗಳು, 2007ರಲ್ಲಿ ಇಂಗ್ಲಂಡ್‌, 2008ರಲ್ಲಿ ಫ್ರಾನ್ಸ್‌ ಮತ್ತು 2009ರಲ್ಲಿ ಟರ್ಕಿ ಈ ಬಗೆಯ ಕ್ರಮಗಳಿಗೆ ಮುಂದಾದವು. ನ್ಯೂಜಿಲೆಂಡ್‌ ದೇಶವು 2004ರ ವೇಳೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿತು. ಭೂತಾನ್‌ ರಾಜ್ಯವು 2005 ರಿಂದಲೂ ಸಂಪೂರ್ಣ ಧೂಮಪಾನ ನಿಷೇಧದ ಕಟ್ಟುಪಾಡೊಂದನ್ನು ಪಾಲಿಸಿಕೊಂಡು ಬಂದಿದೆ. ಅನೇಕ ದೇಶಗಳಲ್ಲಿ, ಇದೇ ರೀತಿಯ ನಿಷೇಧಗಳಿಗೆ ಸಂಬಂಧಿಸಿದಂತೆ ಒತ್ತಡದ ಗುಂಪುಗಳು ಪ್ರಚಾರ ಮಾಡುತ್ತಿವೆ. 2007ರಲ್ಲಿ, ಚಂಡೀಗಢ ನಗರವು ಭಾರತದಲ್ಲಿನ ಮೊಟ್ಟಮೊದಲ ಹೊಗೆ-ಮುಕ್ತ ನಗರ ಎನಿಸಿಕೊಂಡಿತು. ಭಾರತವು 2008ರ ಅಕ್ಟೋಬರ್‌‌ 2ರಂದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರ ಮೇಲೆ ಒಂದು ಸಂಪೂರ್ಣ ನಿಷೇಧವನ್ನು ಹೇರುವ ಕ್ರಮವನ್ನು ಜಾರಿಗೆ ತಂದಿತು.

ಧೂಮಪಾನದ ಅಪರಾಧೀಕರಣ, ಕಳ್ಳ ಸಾಗಾಣಿಕೆಯ ಅಪಾಯವು ಹೆಚ್ಚಳವಾಗುವುದು, ಮತ್ತು ಇಂಥದೊಂದು ನಿಷೇಧವು ಜಾರಿಮಾಡಲಾಗದಿರುವಂಥ ಅಪಾಯ ಇವೆಲ್ಲವೂ ಇಂಥ ನಿಷೇಧಗಳ ವಿರುದ್ಧವಾಗಿ ಉಲ್ಲೇಖಿಸಲ್ಪಟ್ಟ ವಾದಗಳಾಗಿವೆ.

C ಜೀವಸತ್ವ, E ಜೀವಸತ್ವ ಮತ್ತು ಫೋಲೇಟ್‌ನಂಥ ಪೂರಕವಾದ ಬಹುಜೀವಸತ್ವಗಳ ದೀರ್ಘಾವಧಿ ಬಳಕೆಯು ಶ್ವಾಸಕೋಶದ ಕ್ಯಾನ್ಸರ್‌‌ನ ಅಪಾಯವನ್ನು ತಗ್ಗಿಸುವುದಿಲ್ಲ. E ಜೀವಸತ್ವದ ಪೂರಕ ಅಂಶಗಳನ್ನು ಹೆಚ್ಚಿನ ಪ್ರಮಾಣಗಳಲ್ಲಿ ದೀರ್ಘಾವಧಿಯವರೆಗೆ ಸೇವಿಸುವುದರಿಂದ, ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಅಪಾಯವು ಅವಶ್ಯವಾಗಿ ಮತ್ತಷ್ಟು ಹೆಚ್ಚಾಗಲೂಬಹುದು.

ಯುವಜನತೆಯು ಧೂಮಪಾನದೆಡೆಗೆ ಆಕರ್ಷಿತವಾಗುವುದನ್ನು ತಡೆಗಟ್ಟಲೆಂದು, ತಂಬಾಕು ಜಾಹೀರಾತಿನ ಮೇಲೆ ಒಂದು ಸಂಪೂರ್ಣ ನಿಷೇಧವನ್ನು ಹೇರುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳಿಗೆ ಕರೆನೀಡಿದೆ. ಈಗಾಗಲೇ ಇಂಥ ನಿಷೇಧಗಳು ಹೇರಲ್ಪಟ್ಟಿರುವ ಪ್ರದೇಶಗಳಲ್ಲಿ ತಂಬಾಕು ಸೇವನೆಯು 16%ನಷ್ಟು ತಗ್ಗಿದೆ ಎಂಬ ಅಂಕಿ-ಅಂಶವನ್ನು ಅದು ಈ ಸಂದರ್ಭದಲ್ಲಿ ನೀಡಿದೆ.

ಹಾಗಾಗಿ ಆದಷ್ಟು ನಮ್ಮ ಯುವ ಜನತೆ ಎಚ್ಚೆತ್ತುಕೊಳ್ಳಬೇಕು.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶತರೂಪಾ

ಹಿಂದೂ ಪುರಾಣಗಳಲ್ಲಿ ನಂಬಿದ ವಿಶ್ವದ ಮೊದಲ ಮಹಿಳೆ: ಶತರೂಪಾ

ಸಾಮ್ರಾಟ್ ದಿಲೀಪ

ರಘುವಂಶದ ಸಾಮ್ರಾಟ್ ದಿಲೀಪ