in ,

ಫೈಬರ್ ಅಂಶ ಹೊಂದಿರುವ ಉದ್ದಿನ ಬೇಳೆ

ಉದ್ದಿನ ಬೇಳೆ
ಉದ್ದಿನ ಬೇಳೆ

ಉದ್ದಿನ ಬೇಳೆ ಭಾರತೀಯ ಉಪಖಂಡದಲ್ಲಿ ಬೆಳೆಯಲಾಗುವ ಒಂದು ಬೀಜ. ಹೆಸರು ಕಾಳಿನ ಜೊತೆಗೆ ಇದನ್ನು ಫ್ಯಾಸಿಯೋಲಸ್‍ನಲ್ಲಿ ಇರಿಸಲಾಗಿತ್ತು ಆದರೆ ನಂತರ ವಿಗ್ನಾಗೆ ವರ್ಗಾಯಿಸಲಾಗಿದೆ. ಒಂದು ಸಮಯದಲ್ಲಿ ಇದು ಹೆಸರು ಕಾಳಿನ ಪ್ರಜಾತಿಗೇ ಸೇರಿದ್ದೆಂದು ಪರಿಗಣಿಸಲಾಗಿತ್ತು. ಒಂದು ದ್ವಿದಳ ಧಾನ್ಯ ಫ್ಯಾಸಿಯೋಲಸ್ ಮುಂಗೊ. ತೊಗರಿ, ಅವರೆ, ಹೆಸರು ಇಂಥ ಬೇಳೆಗಳ ಹಾಗೆಯೇ ಇದು ನಮ್ಮ ಆಹಾರದಲ್ಲಿ ಪ್ರೊಟೀನು ಆವಶ್ಯಕತೆಯನ್ನು ಪುರೈಸಲು ಸಹಕಾರಿ. ಬಹು ಜನಪ್ರಿಯವಾಗಿರುವ ಇಡ್ಲಿ, ದೋಸೆಗಳ ತಯಾರಿಕೆಯಲ್ಲಿ ಉದ್ದನ್ನು ಬಳಸಿದಾಗ ಹುದುಗುವಿಕೆ ಉಂಟಾಗಿ, ಇಡ್ಲಿ ಮತ್ತು ದೋಸೆಯು ಮೃದುವಾಗಿ, ಉಬ್ಬಿ, ನೋಡುವುದಕ್ಕೆ ಆಕರ್ಷಕವಾಗಿಯೂ, ತಿನ್ನುವುದಕ್ಕೆ ರುಚಿಕರವಾಗಿಯೂ ಇರುತ್ತವೆಯಲ್ಲದೆ ಅಗತ್ಯವಾದ ಪ್ರೋಟೀನನ್ನು ಒದಗಿಸುತ್ತವೆ. ಉದ್ದಿನ ಮೂಲಕ ಈ ತಿಂಡಿಗಳಿಗೆ ಪ್ರೋಟೀನಿನ ಅಂಶ ಸೇರುತ್ತದೆ. ಊಟ, ತಿಂಡಿಗಳಲ್ಲಿ ಉದ್ದಿನ ಬಳಕೆ ಆರ್ಯರ ಕಾಲದಿಂದ ಇರುವುದು ಕಂಡುಬಂದಿದೆ. ಇಂದಿಗೂ ಶ್ರಾದ್ಧಾದಿ ವಿಶೇಷ ದಿವಸಗಳಲ್ಲಿ ಉದ್ದಿನ ವಡೆ ಊಟಕ್ಕೆ ಇರಲೇಬೇಕು. ಇದು ಮಾಂಸದಷ್ಟೇ ಪೌಷ್ಟಿಕ ಆಹಾರವೆಂಬ ವಿಷಯ ಅಂದಿನವರಿಗೆ ತಿಳಿದಿದ್ದಿರಬೇಕು.

ಉದ್ದಿನ ಬೇಳೆಯನ್ನು ದೇಶದ ಎಲ್ಲ ಭಾಗಗಳಲ್ಲೂ ಹೊಲದಲ್ಲಿ ಬೆಳೆಯುತ್ತಾರೆ. ಮಳೆಯ ಆಸರೆಯಲ್ಲಿ ಬೆಳೆಯುವ ಉದ್ದಿನ ಇಳುವರಿ, ಎಕರೆ ಒಂದಕ್ಕೆ 180-230ಕೆ.ಜಿ. 35″-40″ ಕ್ಕಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಉದ್ದು ಅಷ್ಟು ಚೆನ್ನಾಗಿ ಬರುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ ಬತ್ತದ ಬೆಳೆಗೆ ಏಪ್ರಿಲ್ ತಿಂಗಳಲ್ಲಿ ಉದ್ದನ್ನು ಬಿತ್ತಿ ಜುಲೈ ತಿಂಗಳಿನಲ್ಲಿ, ನಾಟಿಗೆ ಮೊದಲು, ಕಾಯನ್ನು ಕೊಯ್ದು ಗಿಡವನ್ನು ಗದ್ದೆಗಳಲ್ಲಿ ಗೊಬ್ಬರಕ್ಕಾಗಿ ಉಳುತ್ತಾರೆ. ಪೈರು ಬೆಳೆಯುತ್ತಿರುವಾಗ ಒಂದೆರಡು ಬಾರಿ ನೀರು ಹಾಯಿಸಿದರೆ ಉತ್ತಮ ಬೆಳೆಯಾಗುತ್ತದೆ. ಮಳೆ ಪ್ರದೇಶಗಳಲ್ಲಿ ಮಳೆ ಕಳೆದ ಮೇಲೆ ಉದ್ದಿನ ಬಿತ್ತನೆ ಮಾಡಬಹುದು. ಉದ್ದು 3 ತಿಂಗಳ ಬೆಳೆಯಾದ್ದರಿಂದ ಪರ್ಯಾಯ ಬೆಳೆಯಾಗಿದೆ. ಮಳೆಯ ಅನುಕೂಲಕ್ಕನುಗುಣವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಬಿತ್ತನೆ ಮಾಡಿ ಜೂನ್ ಜುಲೈನಲ್ಲಿ ಪೈರು ಕೊಯಿಲು ಮಾಡಿ, ಮುಂದೆ ರಾಗಿ ಅಥವಾ ಹುಚ್ಚೆಳ್ಳು ಮುಂತಾದ ಬೆಳೆ ತೆಗೆಯುವುದು ಸಾಧ್ಯ. ಮುಖ್ಯ ಬೆಳೆಯ ಕಾಲದಲ್ಲಿ ಎರೆಯ ಭೂಮಿಯಲ್ಲಿ ಇದನ್ನು ಮೇವು, ಜೋಳ, ಕುಸುಮ, ನಾರಗಸೆ ಮೊದಲಾದವುಗಳ ಜೊತೆಯಲ್ಲಿ ಸಾಲಮಿತ್ರ ಬೆಳೆಯಾಗಿ ಬಿತ್ತುತ್ತಾರೆ. ಅಪಸಣಬು ಅಲಸಂದೆ, ಹುರುಳಿ ಇವುಗಳೊಡನೆ ಮಿಶ್ರವಾದ ಉದ್ದಿನ ಬೆಳೆಯನ್ನು ಬತ್ತದ ಗದ್ದೆಗಳಲ್ಲಿ ಹಸಿರು ಗೊಬ್ಬರಕ್ಕಾಗಿ ಬೆಳೆಯುವುದು ಸಾಮಾನ್ಯ. ಉದ್ದಿನ ಬೆಳೆಗೆ ನೀರು ಹೆಚ್ಚು ಉಳಿಸಿಕೊಳ್ಳಲು ಸಾಮರ್ಥ್ಯವಿರುವ ಜೇಡಿ ಮಣ್ಣು ಬಹಳ ಅನುಕೂಲ.

ಫೈಬರ್ ಅಂಶ ಹೊಂದಿರುವ ಉದ್ದಿನ ಬೇಳೆ
ಉದ್ದಿನ ಬೇಳೆ ಬೆಳೆ

ಎರೆ ಭೂಮಿಗಳಲ್ಲಿ ಉತ್ತಮವಾದ ಬೆಳೆ ತೆಗೆಯಬಹುದು. ಹಾಗೆಯೇ ಆಳವಾದ ಕೆಂಪು ಗೋಡು ಭೂಮಿಗಳಲ್ಲೂ ಇದನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ಭೂಮಿಯನ್ನು 3-4 ವಾರಗಳ ಅಂತರದಲ್ಲಿ ಒಂದೆರಡು ಸಾರಿ ಉತ್ತು, ಕುಂಟೆ ಹೊಡೆದು ಬಿತ್ತನೆಗೆ ತಯಾರು ಮಾಡುತ್ತಾರೆ. ಬೀಜವನ್ನು ಎರಚಿ ಬಿತ್ತುವುದು ರೂಢಿ. ಸಾಲಿನಲ್ಲಿ ಬಿತ್ತಿದಾಗ ಮಧ್ಯಂತರ 10″ ಇರುತ್ತದೆ. ಒಂದು ವಾರದಲ್ಲಿ ಬೀಜ ಮೊಳೆತು ಪೈರು ಮೇಲೆ ಕಾಣಿಸಿಕೊಳ್ಳುತ್ತದೆ. ಮೂರು ವಾರಾನಂತರ ಅಲುಗೆಯ ಕುಂಟೆಯಿಂದ ಸಾಲಿನ ಮಧ್ಯ ಕಳೆ ತೆಗೆಯುವುದುಂಟು. ಏಳು ವಾರದಲ್ಲಿ ಪೈರು ಹೂವಿಗೆ ಬರುತ್ತದೆ. ಮೂರು ತಿಂಗಳಲ್ಲಿ ಕಾಯಿ ಬಲಿತು ಕಟಾವಿಗೆ ಸಿದ್ಧವಾಗುತ್ತದೆ. ಗಿಡಗಳನ್ನು ಬೇರು ಸಮೇತ ಕಿತ್ತು ಒಣಗಿಸಿ ಬಡಿದು ಅಥವಾ ಎತ್ತಿನಿಂದ ತುಳಿಸಿ ಕಾಳನ್ನು ಬೇರೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕಾಳನ್ನು ಬೇರ್ಪಡಿಸಲು ಯಂತ್ರಗಳನ್ನು ಉಪಯೋಗಿಸುತ್ತಾರೆ. ಸಿಪ್ಪೆಯನ್ನು ಹುಲ್ಲಿನೊಡನೆ ಬೆರೆಸಿ ದನಗಳಿಗೆ ತಿನ್ನಿಸುತ್ತಾರೆ. ಒಣಗಿದ ಗಿಡವನ್ನು ಗೊಬ್ಬರದ ಗುಂಡಿಗೆ ಹಾಕುತ್ತಾರೆ. ಇಲ್ಲವೆ ಉರುವಲಾಗಿ ಬಳಸುತ್ತಾರೆ. ಉಳಿದ ಕಾಳುಗಳಂತೆ ಉದ್ದನ್ನು ದಾಸ್ತಾನು ಮಾಡಿದಾಗಲೂ ಹುಳು ಬಿದ್ದು ನಷ್ಟವಾಗಬಹುದು. ಉದ್ದು ದ್ವಿದಳ ಜಾತಿಗೆ ಸೇರಿದ್ದು. ವೈಜ್ಞಾನಿಕವಾಗಿ ಇದು ಲೆಗ್ಯುಮಿನೇಸೀ ಎಂಬ ಕುಟುಂಬಕ್ಕೂ ಪ್ಯಾಪಿಲಿಯೋನೇಸೀ ಎಂಬ ಉಪಕುಟುಂಬಕ್ಕೂ ಸೇರಿದೆ. ಸಸ್ಯಕ್ಕೆ ದೃಢವಾದ ತಾಯಿಬೇರು ಮತ್ತು ಹರಡುವ ಬೇರುಗಳಿವೆ. ಈ ಬೇರುಗಳ ಮೇಲೆ ಬ್ಯಾಕ್ಟೀರಿಯಗಳನ್ನು ಹೊಂದಿರುವ ಗಂಟುಗಳು ಇರುತ್ತವೆ. ಈ ಬ್ಯಾಕ್ಟ್ರೀರಿಯಗಳ ಸಹಾಯದಿಂದ ಬೇರುಗಳು ವಾಯುವಿನಲ್ಲಿರುವ ಸಾರಜನಕವನ್ನು ನೇರವಾಗಿ ಹೀರಬಲ್ಲವು. ಗಿಡದ ಎತ್ತರ 1 ಗಿಂತ ಹೆಚ್ಚಿರುವುದಿಲ್ಲ. ರೆಂಬೆಗಳು ಹೇರಳ. ಕಾಂಡ ಮತ್ತು ಎಲೆಗಳು ಒರಟಾದ ಕೆಂಪು ಕೂದಲಿನಿಂದ ಕೂಡಿವೆ. ಹೂವಿನ ಬಣ್ಣ ಹಳದಿ. ಕಾಯಿ ತೆಳು, ನಾಳಾಕಾರ, 1ಳಿ”-2ಳಿ” ಉದ್ದ. ಪ್ರತಿ ಕಾಯಿಯಲ್ಲೂ 8-15 ಕಾಳುಗಳಿರುತ್ತವೆ. ಕಾಳಿನ ಬಣ್ಣ ಕಪ್ಪು ಇಲ್ಲವೆ ಕಪ್ಪುಕಂದು. ಬೇಳೆಯ ಬಣ್ಣ ಬಿಳಿ. ಮೈಸೂರು ರಾಜ್ಯದಲ್ಲಿ ಎರಡು ಜಾತಿಯ ಉದ್ದು ಕೃಷಿಯಾಗುತ್ತದೆ. ಸಣ್ಣದು ಮತ್ತು ದಪ್ಪದು. ಮೊದಲನೆಯದನ್ನು ಮುಂಗಾರು ಸಮಯದಲ್ಲೂ ಎರಡನೆಯ ಜಾತಿಯ ಉದ್ದನ್ನು ಹಿಂಗಾರಿನಲ್ಲೂ ಬೆಳೆಯುತ್ತಾರೆ.

ಉದ್ದಿನ ಹಿಟ್ಟಿನ ಒಂದು ಮುಖ್ಯ ಲಕ್ಷಣವೆಂದರೆ, ಇದನ್ನು ನೀರಿನಲ್ಲಿ ಕಲಸಿ ರುಬ್ಬಿದ ಹಾಗೆಲ್ಲ ನಯವಾಗಿ ದೋಸೆ, ಇಡ್ಲಿ, ವಡೆ ಮುಂತಾದ ತಿಂಡಿತಿನಿಸುಗಳ ರಚನೆಯನ್ನು ಉತ್ತಮಪಡಿಸುತ್ತದೆ. ಇದರಲ್ಲಿನ ಪ್ರೊಟೀನ್ ಮಾಂಸದ ಪ್ರೊಟೀನಿನಷ್ಟೇ ಪುಷ್ಟಿಕರ. ರುಬ್ಬಿದ ಉದ್ದನ್ನು ಹಸುಗಳಿಗೆ ತಿನ್ನಿಸಿದಾಗ ಹಾಲು ವೃದ್ಧಿಯಾಗುವುದು ಕಂಡುಬಂದಿದೆ. ಉದ್ದನ್ನು ದೋಸೆ, ಇಡ್ಲಿ ಮುಂತಾದ ತಿಂಡಿಗಳಲ್ಲೂ ಜಹಾಂಗೀರ್‍ನಂತಹ ಸಿಹಿ ತಿಂಡಿಗಳಲ್ಲೂ ಸಾಂಬಾರು ಗೊಜ್ಜು ಮೊದಲಾದವುಗಳ ಲವಾಜಮೆಯಲ್ಲೂ ಹೇರಳವಾಗಿ ಬಳಸುತ್ತಾರೆ.

ಆರೋಗ್ಯಕರ ಲಾಭಗಳು :

ಫೈಬರ್ ಅಂಶ ಹೊಂದಿರುವ ಉದ್ದಿನ ಬೇಳೆ
ಉದ್ದಿನ ಬೇಳೆ

ಇದರಲ್ಲಿ ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇಹದಲ್ಲಿ ಶಕ್ತಿಯನ್ನು ವೃದ್ಧಿಸಿ, ನಮ್ಮಲ್ಲಿ ಲವಲವಿಕೆಯನ್ನು ಹೆಚ್ಚಿಸುತ್ತದೆ.

ಉದ್ದಿನ ಬೇಳೆ ಕಬ್ಬಿಣದ ಕೊರತೆ ನೀಗಿಸುತ್ತದೆ ಉದ್ದಿನ ಬೇಳೆಯಲ್ಲಿ ಕಬ್ಬಿಣದ ಪ್ರಮಾಣವು ತುಂಬಾ ಒಳ್ಳೆಯದು. ಇದು ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಫೈಬರ್ ಸಮೃದ್ಧವಾಗಿದ್ದು ಇದು ರಕ್ತದಲ್ಲಿನ ಸಕ್ಕರೆ ಮತ್ತು ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.

ಕೀಲುಗಳು ಮತ್ತು ಸ್ನಾಯುಗಳಲ್ಲಿನ ನೋವು ಮತ್ತು ಊತವನ್ನು ನಿವಾರಿಸಲು ಸಹಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.

ಅತಿಸಾರ, ಮಲಬದ್ಧತೆ, ಸೆಳೆತ ಮತ್ತು ಉಬ್ಬುವಿಕೆ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇದರಲ್ಲಿರುವ ಪೊಟ್ಯಾಸಿಯಂ, ಮೆಗ್ನಿಸಿಯಂ ಮತ್ತು ಫೈಬರ್ ಅಧಿಕವಾಗಿದ್ದು, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ನಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಸರಿಯಾಗಿರಿಸುತ್ತದೆ. ಪೊಟ್ಯಾಸಿಯಂ ದೇಹದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಉದ್ದಿನ ಬೇಳೆ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಕರಗಬಲ್ಲ ಮತ್ತು ಕರಗದ ನಾರಿನಂಶವನ್ನು ಹೊಂದಿರುತ್ತದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೊಡಿ ಮಠ ಸ್ವಾಮಿಯ ಮತ್ತೊಂದು ಭವಿಷ್ಯ ಕೇಳಿ ಬೆಚ್ಚಿಬಿದ್ದ ಜನರು.

ಕೊಡಿ ಮಠ ಸ್ವಾಮಿಯ ಮತ್ತೊಂದು ಭವಿಷ್ಯ ಕೇಳಿ ಬೆಚ್ಚಿಬಿದ್ದ ಜನರು.

ಶತರೂಪಾ

ಹಿಂದೂ ಪುರಾಣಗಳಲ್ಲಿ ನಂಬಿದ ವಿಶ್ವದ ಮೊದಲ ಮಹಿಳೆ: ಶತರೂಪಾ