in

ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಅತ್ತಿಮರ ಕೊಡುತ್ತದೆ

ಅತ್ತಿಹಣ್ಣು
ಅತ್ತಿಹಣ್ಣು

ನಮ್ಮ ಕಡೆ ಮಾತು ಇದೆ, ಯಾರಾದರೂ ತುಂಬಾ ದಿನ ಕಾಣಿಸಿಕೊಳ್ಳದೆ ಇದ್ದರೆ, ಅಪರೂಪವಾಗಿ ಸಿಕ್ಕರೆ, ನೀನು ಅತ್ತಿ ಮರದ ಹೂವಾಗಿ ಬಿಟ್ಟೆ ಅಂತ ಹೇಳುವುದುಂಟು. ಹಿರಿಯರು ಹೇಳುವ ಪ್ರಕಾರ ಅತ್ತಿ ಮರ ಹೂವು ಬಿಡುವುದನ್ನು ಯಾರು ನೋಡಿಲ್ಲವಂತೆ ಅದು ರಾತ್ರಿ ಹೊತ್ತು ಮಾತ್ರ ಅರಳುತ್ತದೆ ಅಂತ. ಇಂತಹ ಅತ್ತಿಮರದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಅತ್ತಿಮರ ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಹಳ್ಳಗಳ ದಂಡೆಯ ಮೇಲೆ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಹಳ್ಳಿಗಳ ಸುತ್ತಮುತ್ತಲೂ ಕಾಣಬಹುದು. ದಪ್ಪ ಟೊಂಗೆ ಮತ್ತು ಬೊಡ್ಡೆಗಳ ಮೇಲೆ ಮಾರ್ಚ್, ಜುಲೈ ಅವಧಿಯಲ್ಲಿ ನೂರಾರು ಹಣ್ಣುಗಳಾಗುತ್ತವೆ. ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ತಿನ್ನಿಸುತ್ತಾರೆ. ಹರವಾಗಿ ಬೆಳೆಯುವುದರಿಂದ ಇದು ನೆರಳಿನ ಗಿಡ. ಇದರ ಕಟ್ಟಿಗೆಯಿಂದ ಪೆಟ್ಟಿಗೆ, ಹಲಗೆ, ಚಕ್ಕಡಿಗಳ ಹಲ್ಲು ಇತ್ಯಾದಿ ಮರಮುಟ್ಟುಗಳನ್ನು ತಯಾರಿಸುತ್ತಾರೆ. ಅರಗಿನ ಹುಳುವನ್ನು ಕೂಡ ಈ ಮರದ ಎಲೆಗಳ ಮೇಲೆ ಸಾಕುವರು.

10-15 ಮೀಟರ್ ಎತ್ತರ ಬೆಳೆಯುವ ಸದಾ ಹಸಿರು ವೃಕ್ಷ, ಎಲೆ, ಕಾಯಿ, ಫಲ, ತೊಗಟೆಯಿಂದ ಹಳದೀ ವರ್ಣದ, ಅಂಟಾದ ಹಾಲು ಬರುವುದು, ಕಾಯಿ ಹಸಿರಾಗಿದ್ದು, ಗುಂಡಾಗಿರುವುದು. ಹಣ್ಣಾದಾಗ ಕೆಂಪು ಬಣ್ಣವನ್ನು ಹೊಂದುವುದು. ಹಣ್ಣು ಮೃದುವಾಗಿರುವುದು ಮತ್ತು ಪರಿಮಳವಿರುವುದು. ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವುವು. ಇರುವೆಗಳ ಪರಾಗಸ್ಪರ್ಶದಲ್ಲಿ ನೆರವಾಗುವುವು. ಒಳಗಡೆ ಸಣ್ಣ ಬೀಜಗಳು ನೂರಾರು ಇರುವುವು. ರೆಂಬೆಗಳ ತುಂಬಾ ಮತ್ತು ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವುದು. ಬಹು ಪರಿಚಿತ ವೃಕ್ಷ ಮತ್ತು ಸಾಲು ಮರಗಳಾಗಿ ಮತ್ತು ಊರ ಗುಂಡು ತೋಪಿನಲ್ಲಿ ಬೆಳೆಸುತ್ತಾರೆ. ಕೋತಿಗಳು, ಅಳಿಲು, ಗಿಣಿ, ಮತ್ತು ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಮತ್ತು ಪುಷ್ಟಿದಾಯಕವೂ ಹೌದು.

ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಅತ್ತಿಮರ ಕೊಡುತ್ತದೆ
ಅತ್ತಿಮರ

ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಗಿಡವು ಒಣ-ಉಷ್ಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದ ಆರಂಭ ಗಿಡ ನೆಡಲು ಸೂಕ್ತ ಕಾಲ. ಸಸಿ ಬಲಿಯುವ ತನಕ ಹೆಚ್ಚಿನ ನೀರು ಅಗತ್ಯ. ಒಂದು ವರ್ಷದಲ್ಲಿ ಕಾಯಿ ಬಿಡಲು ಶುರು ಮಾಡುವ ಈ ಮರಗಳು ೩೫ ವರ್ಷಗಳ ಕಾಲ ಬಾಳಿಕೆ ಹೊಂದಿರುತ್ತವೆ. ಹಣ್ಣುಗಳಲ್ಲಿ ನಾಲ್ಕು ವಿಧಗಳಿದ್ದು, ಕೊಯ್ಲಿನ್ ಸೀಸನ್ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚು ಮಾಗಿದ ಹಣ್ಣುಗಳು ಬಿರಿಯುವುದು ಉಂಟು. ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಕಾಂಡಕ್ಕೆ ಅಂಟಿಕೊಂಡು ಗೊಂಚಲು ಕಾಯಿಗಳನ್ನು ಬಿಡುವುದು ಇದರ ವೈಶಿಷ್ಟ್ಯ. ಜೆಲ್ಲಿಯಂತಹ ಮಾಂಸಲ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಅಂಜೂರ ಹಣ್ಣುಗಳು ಕೇಂದ್ರ ಭಾಗದಲ್ಲಿ ಬೀಜ ಪುಂಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳ ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು ೨-೩ ಹೋಳುಗಳಾಗಿಸಿ ಕಡು ಬಿಸಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳಯದು. ಪ್ರತಿಶತ ೯೦ ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿಯೇ ಡ್ರ್ಯೆಫ್ರುಟ್ ಅಗಿ ಉಪಯೋಗಿಸುತ್ತಾರೆ.

ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.

ಹೊಟ್ಟೆಯಲ್ಲಿ ಗಡಗಡ ಶಬ್ದ, ನೋವು ಮತ್ತು ನೀರಿನಂತೆ ಬೇದಿಯಾಗುತ್ತಿದ್ದರೆ ಈ ಉಪಚಾರದಿಂದ ಶಮನವಾಗುವುದು. ಅತ್ತಿಮರದ ಬುಡದ ಹಾಲನ್ನು ಹೊಕ್ಕಳಿನ ಸುತ್ತ ಲೇಪಿಸುವುದು ಮತ್ತು ಗುಂಡಾದ ಮಡಿಕೆಯ ಚೂರನ್ನು ಹೊಕ್ಕಳಿನ ಮೇಲೆ ಇಡುವುದು. ಅಂಟಾಗಿರುವ ಹಾಲಿನಲ್ಲಿ ಈ ಬಿಲ್ಲೆ ಚೆನ್ನಾಗಿ ಅಂಟಿಕೊಳ್ಳುವುದು. ಇದರ ಸುತ್ತ ಬುಡದಲ್ಲಿರುವ ನಯವಾದ ಮಣ್ಣನ್ನು ಹಾಕುವುದು ಮತ್ತು ಬಟ್ಟೆ ಕಟ್ಟುವುದು.

ಚೆನ್ನಾಗಿ ಪಕ್ವವಾದ, ಹುಳುಕಿಲ್ಲದ, ಒಂದು ಹಿಡಿ ಅತ್ತಿ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ, ನಯವಾದ ವಸ್ತ್ರಗಾಳಿತ ಚೂರ್ಣ ಮಾಡುವುದು. 1\2 ಟೀ ಚಮಚ ಚೂರ್ಣಕ್ಕೆ ಸ್ವಲ್ಪ ಜೇನು ಬೆರೆಸಿ ನೆಕ್ಕುವುದು. ದಿವಸಕ್ಕೆ ಎರಡು ವೇಳೆ ಸೇವಿಸುವುದು.

ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಅತ್ತಿಮರ ಕೊಡುತ್ತದೆ
ಬೇಧಿಯ ಸಮಸ್ಯೆ

ಬೇಧಿಯ ಸಮಸ್ಯೆಗೆ ಅತ್ತಿಯ ಹಾಲನ್ನು ಸಕ್ಕರೆ ಪುಡಿ ಸಮೇತ ಸೇವಿಸುವುದು.

ಅತ್ತಿ ಎಲೆಗಳ ರಸವನ್ನು ಹಿಂಡಿ, ಜವೆ ಗೋದಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ ಗಟ್ಟಿಯಾದ ಬಾವುಗಳಿಗೆ ಲೇಪಿಸಿ, ಬಟ್ಟೆ ವಾಸಿಯಾಗುವುದು. ಕೀವು ಸೋರುತ್ತಿರುವ ಭಾಗಗಳಿಗೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುವುವು.

ಅತ್ತಿಮರದ ಕಾಂಡಕ್ಕೆ ಗಾಯ ಮಾಡುವುದು ಮತ್ತು ಸುರಿಯುವ ಹಾಲನ್ನು ಮಡಕೆ ಚೂರಿನಲ್ಲಿ ಶೇಖರಿಸಿ, ಕೆನ್ನೆ ಬೀಗಿರುವ ಕಡೆ ಲೇಪಿಸುವುದು ಅಥವಾ ಅತ್ತಿ ಮರದ
ಬೇರನ್ನು ನೀರಿನಲ್ಲಿ ತೇದು ಸ್ವಲ್ಪ ಹಿಂಗು ಮತ್ತು ಹರಳೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಲೇಪಿಸುವುದು.

ಒಂದು ಹಿಡಿ ಅತ್ತಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ, ಬಟ್ಟೆಯಲ್ಲಿ ಸೋಸಿ, ಒಂದು ಟೀ ಚಮಚ ರಸವನ್ನು ಶೇಖರಿಸುವುದು, ಸ್ವಲ್ಪ ಜವೆಗೋದಿಯ ಹಿಟ್ಟಿಗೆ ಈ ರಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಮೊಲೆಯ ಬಾವಿಗೆ ಕಟ್ಟುವುದು.

ಅತ್ತಿ ಮರದ ತೊಗಟೆಯನ್ನು ನೆರಳಲ್ಲಿ ಚೆನ್ನಾಗಿ ಒಣಗಿಸಿ ವಸ್ತ್ರಗಾಳಿತ ಚೂರ್ಣ ಮಾಡುವುದು, ಎರಡು ಟೀ ಚಮಚ ಪುಡಿಯನ್ನು ಮರಳುವ ನೀರಿಗೆ ಹಾಕಿ, ಕಷಾಯ ಮಾಡುವುದು. ಆರಿದ ಕಷಾಯವನ್ನು ವೇಳೆಗೆ ಎರಡು ಟೀ ಚಮಚದಂತೆ ಬೆಳಿಗ್ಗೆ ಸಾಯಂಕಾಲ ಸೇವಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಾಯಿ ಕಡಿತವನ್ನು ತಪ್ಪಿಸುವುದು ಹೇಗೆ

ನಾಯಿ ಕಡಿತವನ್ನು ತಪ್ಪಿಸುವುದು ಹೇಗೆ ಮತ್ತು ಪ್ರಥಮ ಚಿಕಿತ್ಸೆ ಏನು?

ಹೂವುಗಳ ರಾಣಿ ಮಲ್ಲಿಗೆ

ಹೂವುಗಳ ರಾಣಿ ಮಲ್ಲಿಗೆ