in

ಭಗವಂತ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪವೇ ಕಾರಣನಾ?

ಭಗವಂತ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪವೇ ಕಾರಣನಾ?

ಶ್ರೀ ಕೃಷ್ಣನ ಮಹಿಮೆಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ.
ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ,ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ಕರುಣೆಯಿಲ್ಲದೆ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು “ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ” ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ಕೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.

ಭಗವಂತ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪವೇ ಕಾರಣನಾ?
ಶ್ರೀಕೃಷ್ಣ

ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಇವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.
ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀವೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.
ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.

ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಮತ್ತು ಪಾಂಡವರ ಗುರುತು ಹಿಡಿದು ಬಲರಾಮನಿಗೆ ತೋರಿಸುತ್ತಾನೆ. ನಂತರ ಅವನು ಯಾದವರೊಡನೆ ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಭಾಗವಹಿಸುವನು. ಜೂಜಿನಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ.


ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ.

ಭಗವಂತ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪವೇ ಕಾರಣನಾ?

ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.
ಕೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಡುತ್ತಾನೆ.
ರಾಮಾಯಣದ ಜಾಂಬವಂತನನ್ನು ಎದುರಿಸಿ ಶ್ಯಮಂತಕ ಮಣಿಯನ್ನೂ, ಜಾಂಬವಂತನ ಮಗಳು ಜಾಂಬವತಿಯನ್ನೂ ಗೆಲ್ಲುವ ಕೃಷ್ಣ, ಜಾಂಬವಂತನಿಗೆ ರಾಮಾಯಣದ ಶ್ರೀರಾಮಚಂದ್ರನ ರೂಪದಲ್ಲಿ ದರ್ಶನ ನೀಡುತ್ತಾನೆ.
ರಾಮಾಯಣದಲ್ಲಿ ರಾಮನಾಗಿ ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ಮಾತು ನೀಡಿರುತ್ತಾನೆ. ಅದರಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ಕೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನಿಯಾಮಕ ಶ್ರೀ ಕೃಷ್ಣ ಅಸು ನೀಗಿ ತನ್ನ ಅವತಾರವನ್ನು ಮುಗಿಸುತ್ತಾನೆ.

ಗಾಂದಾರಿಯ ಶಾಪ

ಭಗವಂತ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪವೇ ಕಾರಣನಾ?
ಗಾಂದಾರಿಯ ಶಾಪ

ದುರ್ಯೋಧನನು ಅಂತಿಮವಾಗಿ ಹತ್ಯೆಯಾಗಿ ಮಹಾಭಾರತದ ಯುದ್ಧ ಕೊನೆಗೊಂಡ ಮೇಲೆ, ಅವನ ಮಾತೆ ಗಾಂಧಾರಿಯ ಮನ ಛಿದ್ರಗೊಂಡಿತು. ಆಕೆ ತನ್ನ ಮಗನ ಅವಶೇಷವನ್ನು ನೋಡಿ ಶೋಕಿಸಲು ಯುದ್ಧ ಭೂಮಿಗೆ ತೆರಳಿದಳು. ಶ್ರೀ ಕೃಷ್ಣ ಮತ್ತು ಪಾಂಡವರು ಆಕೆಯ ಜೊತೆಗೂಡಿದರು.
ತನ್ನ ಮಕ್ಕಳನ್ನೆಲ್ಲ ಕಳೆದುಕೊಂಡು ಶೋಕತಪ್ತೆಯಾಗಿದ್ದ ಗಾಂಧಾರಿ, ಶ್ರೀ ಕೃಷ್ಣನಿಗೆ 36 ವರ್ಷದ ಬಳಿಕ ಮರಣ ಹೊಂದಲಿ ಎಂದು ಶಾಪಕೊಡುತ್ತಾರೆ. ಸ್ವತಃ ಶ್ರೀ ಕೃಷ್ಣನು ಮುಗುಳ್ನಗೆಯಿಂದ ಈ ಶಾಪವನ್ನು ಸ್ವೀಕರಿಸುತ್ತಾರೆ. ಈ ಪ್ರಕರಣ ನಿಖರ 36 ವರ್ಷಗಳ ಬಳಿಕ ಒಬ್ಬ ಬೇಟೆಗಾರನ ಬಾಣದಿಂದ ಶ್ರೀಕೃಷ್ಣನು ಸಾವನ್ನಪ್ಪುತ್ತಾರೆ. ಇದರೊಂದಿಗೆ ಕೃಷ್ಣಾವತಾರದ ಪರಿಸಮಾಪ್ತಿಯಾಗುತ್ತದೆ. ಕ್ರಮೇಣವಾಗಿ ಕೃಷ್ಣ ಪರಮಾತ್ಮನ ಯಾದವಕುಲ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ದ್ವಾರಕ ಪಟ್ಟಣವು ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಅದು ಈಗಲೂ ಸಮುದ್ರದಲ್ಲಿ ಉಳಿದುಕೊಂಡಿದೆವೆಂಬ ನಂಬಿಕೆ ಇದೆ.

ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರು ಕ್ಷೇತ್ರಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿಯು ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು. ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು. ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿಯೆಂದೂ ಸಹ ಶಾಪ ಕೊಟ್ಟಳು. ಶ್ರೀ ಕೃಷ್ಣನು ಎಷ್ಟಾದರೂ ಗಾಂಧಾರಿಯು ತನ್ನ ಉತ್ಕಟ ಭಕ್ತಳೆಂದು ಮುಗುಳ್ನಗೆಯಿಂದ ಶಾಪವನ್ನು ಸ್ವೀಕರಿಸಿದನು. ಈ ರೀತಿ ಶ್ರೀ ಕೃಷ್ಣನ ಅಂತ್ಯಕ್ಕೆ ಗಾಂಧಾರಿಯ ಶಾಪ ಕೂಡ ಕಾರಣವಾಗಿತ್ತು.


ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಮಾನ್ಯ ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯಗಳು

ಸಾಮಾನ್ಯ ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯಗಳು

ಛತ್ರಪತಿ ಶಿವಾಜಿ

ಛತ್ರಪತಿ ಶಿವಾಜಿ ಮಹಾರಾಜ್