in

ಕೋವಿಡ್-19 ಇಂದ ಭಾರತದ ಸಾಮಾಜಿಕ ಮತ್ತು ವಾಣಿಜ್ಯ ವಹಿವಾಟಿನ ಮೇಲಿನ ದುಷ್ಪರಿಣಾಮಗಳು

ಕೋವಿಡ್-19 ಭಾರತದ ಸಾಮಾಜಿಕ ಮತ್ತು ವಾಣಿಜ್ಯ ವಹಿವಾಟನ್ನೇ ಸ್ಥಬ್ಧಗೊಳಿಸಿದೆ. ಹೆಚ್ಚಾಗಿ ಪ್ರವಾಸೋದ್ಯಮ,ವಾಯುಯಾನ ಹಾಗು ರಿಟೇಲ್ ಭಾಗಗಳಿಗೆ ನಷ್ಟವಾಗಿದೆ.ಈ ಭಾಗಗಳಲ್ಲದೆ ಬೇರೆ ತರಹದ ವ್ಯಾಪಾರ ವಹಿವಾಟಿನಲ್ಲೂ ನಷ್ಟ ಉಂಟಾಗಿದೆ. ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಒಟ್ಟು 9.2% ಜಿಡಿಪಿ ಕಡೆಗೆ ಕೊಡುಗೆ ನೀಡುತಿತ್ತು. ಅರ್ಥಶಾಸ್ತ್ರಘ್ನರ ಪ್ರಕಾರ ಮೆಡಿಕಲ್,ವ್ಯವಸಾಯ ಹಾಗು ಉತ್ಪಾದನಾ ಉದ್ಯಮದ ಮೇಲೂ ಪರಿಣಾಮವನ್ನುಂಟುಮಾಡಿದೆ.ಕೆಲವು ವರದಿಗಳ ಪ್ರಕಾರ ದೇಶ ಪ್ರವಾಸದಲ್ಲಿ 20% ಮತ್ತು ವಿದೇಶ ಪ್ರವಾಸದಲ್ಲಿ ಸುಮಾರು 75% ಕಡಿತಗೊಂಡಿದೆ. ಹೋಟೆಲ್ ಬುಕಿಂಗ್ನಲ್ಲಿ  ಕೂಡ ಸರಿ ಸುಮಾರು 60%ನಷ್ಟು ಇಳಿಕೆ ಕಂಡಿದೆ.

ಈ ಕೊರೊನದಿಂದಾಗಿ ಕಳೆದ ಒಂದು ವರ್ಷದಲ್ಲಿ ನಮ್ಮ ವ್ಯಾಪಾರ ಮತ್ತು ವಹಿವಾಟುಗಳು ಕಡಿಮೆಯಾಗಿ ದೇಶದ ಆರ್ಥಿಕ ಪರಿಸ್ಥಿತಿ ದುರ್ಭಲವಾಗಿದೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ  ಈ ಕೊರೊನ ಕಾಯಿಲೆಯಿಂದ ದೇಶವನ್ನು ಹೊರತರುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದು ಫಲಿತಾಂಶ ಇನ್ನು ಕಾದುನೋಡಬೇಕಷ್ಟೆ. ದೇಶದ ಬೆನ್ನೆಲುಬು ಕೃಷಿ ಆದರೆ ಇತ್ತೀಚಿನ ವರದಿಗಳ ಪ್ರಕಾರ ಕೃಷಿ ಉತ್ಪಾದನೆಯಲ್ಲೂ ಕೂಡ ದೇಶ ಇಳಿಕೆ ಕಂಡಿದೆ.

ಅದೆಷ್ಟೋ ಜನ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಸ್ಥರು ಇರುವ ವ್ಯಾಪರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟರೆ ಇನ್ನು ಕೆಲವರು ಸಾಲ ಮಾಡಿ ಸಾಕಾಗಿ ವ್ಯವಹಾರವನ್ನು ಮುಚ್ಚಿದ್ದಾರೆ.ಹೊಲಗದ್ದೆಗಳಲ್ಲಿ ದುಡಿಯಲು ಕಷ್ಟ ಎಂದು ಪಟ್ಟಣ ಸೇರಿದ್ದ  ಮಂದಿ ಬನ್ನಿ ಸ್ವಾಮಿ ಪಟ್ಟಣಕ್ಕಿಂತ ನಮ್ಮ ಹಳ್ಳಿಗಳೇ ಮೇಲು ಎಂದು ಗಂಟು ಮೂಟೆ ಕಟ್ಟಿ ಊರ ಕಡೆ ನಡೆದಿದ್ದಾರೆ. ಒಟ್ಟಿನಲ್ಲಿ ನೋಡಿದರೆ ಕೊರೊನದಿಂದ ಜೀವ ಕಳೆದುಕೊಂಡವರು ಒಂದು ಕಡೆಯಾದರೆ, ಜೀವನವನ್ನೇ ಕಳೆದುಕೊಂಡು ಮುಂದೇನು ಎನ್ನುವವರ ಪರಿಸ್ಥಿತಿ ಕಡಿಮೆಯೇನಿಲ್ಲ.

ಆದಷ್ಟು ಲೊಕ್ಡೌನ್ನಿಂದ ಮನೆಯಲ್ಲೇ ಇದ್ದು ನಮ್ಮ ಜೀವ ಕಾಪಾಡಿಕೊಳ್ಳೋಣ, ಜೀವ ಒಂದಿದ್ದರೆ ಮುಂದಿನ ಜೀವನ ತಾನಾಗಿಯೇ ದೊರೆಯುತ್ತದೆ..

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಲಿವರ್ ಆರೋಗ್ಯ ಕಾಪಾಡುವುದು ಹೇಗೆ?

ಆಸ್ಪತ್ರೆಗೆ ಹೋಗದೆ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ