in

ಆಸ್ಪತ್ರೆಗೆ ಹೋಗದೆ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

ಎಲ್ಲ ಕಾಯಿಲೆಗಳಿಗೂ ಆಸ್ಪತ್ರೆಯ ಕಡೆ ಮುಖ ಮಾಡಬೇಕೆಂದು ಇಲ್ಲ. ಹಾಗೆ ನೋಡಿದರೆ ನಮ್ಮ ಹಿಂದಿನವರು ನಮಗಿಂತ ಆರೋಗ್ಯದಲ್ಲಿ ಮುಂದಿದ್ದರು. ಮನೆಯಲ್ಲಿ ಅಜ್ಜಿ ಇದ್ದರೆ ಕೆಮ್ಮು, ಶೀತ ,ಕಫ ಇಂತ ಇನ್ನು ಹಲವಾರು ಸಣ್ಣ ಕಾಯಿಲೆಗಳಿಗೆ ಮನೆ ಮದ್ದನ್ನೇ ಮಾಡಿ ವಾಸಿ ಮಾಡುತ್ತಿದ್ದರು. ಮನೆಗಳಲ್ಲಿ ಸಾಮಾನ್ಯವಾಗಿ ಸಿಗುವ ವಸ್ತುಗಳನ್ನು ಬಳಸಿ ಇಂತಹ ಸಣ್ಣ ಪುಟ್ಟ ತೊಂದರೆಗಳಿಂದ ಪಾರಾಗಬಹುದು. ಹೀಗೆ ನನಗೆ ತಿಳಿದ ಕೆಲವೊಂದು ಮನೆ ಮದ್ದು..

ಕೆಮ್ಮು:ಶುಂಠಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಕೆಮ್ಮು ಮತ್ತು ಕಫ ಕಡಿಮೆಯಾಗುತ್ತದೆ.ಮನೆಯಲ್ಲೇ ಸಿಗುವು ತುಳಸಿ ಎಲೆಗಳನ್ನು ಬಾಯಲ್ಲಿ ಜಗಿಯುವುದರಿಂದ ಇಲ್ಲವೆ ಇದರ ಎಲೆಗಳಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಕೆಮ್ಮು ಕಡಿಮೆ ಮಾಡಿಕೊಳ್ಳಬಹುದು.

ಗಂಟಲು ನೋವು: ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯುವುದರಿಂದ ಗಂಟಲು ನೋವು ಶಮನವಾಗುತ್ತದೆ.ಕೆಲವು ಅಧ್ಯಯನಗಳ ಪ್ರಕಾರ ಮಕ್ಕಳಿಗೆ ಮಲಗುವ ಹೊತ್ತಿನಲ್ಲಿ 10gm ಜೇನುತುಪ್ಪ ಕೊಡುವುದರಿಂದ ಮಕಳಲ್ಲಿ ಗಂಟಲು ನೋವು ಕಡಿಮೆ ಮಾಡಬಹುದು.2 ವರ್ಷದ ಕೆಳಗಿನ ಮಕ್ಕಳಿಗೆ ಜೇನುತುಪ್ಪ ಕೊಡುವುದು ಉತ್ತಮವಲ್ಲ.

ಉಸಿರಾಟದ ಸೋಂಕುಗಳು: ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗರ್ಗಳಿಂಗ್ ಮಾಡುವುದರಿಂದ ಉಸಿರಾಟದ ಸೋಂಕುಗಳು ಶಮನಗೊಳ್ಳುತ್ತವೆ.

ಶೀತ: ಕುದಿಯು ನೀರಿಗೆ 3-4 ಎಸಳು ಬೆಳ್ಳುಳ್ಳಿಯನ್ನು ಹಾಕಿ  ಸ್ವಲ್ಪ ಕುದಿಸಬೇಕು. ನಂತರ ಈ ನೀರನ್ನು ಕುಡಿಯುವುದರಿಂದ ಶೀತ ಕಡಿಮೆಯಾಗುತ್ತದೆ.

ಹಲ್ಲು ನೋವು: ಒಂದು ಲವಂಗವನ್ನು ನೋವಿರುವ ಹಲ್ಲಿನ ನಡುವೆ ಇಡುವುದರಿಂದ ಹಲ್ಲು ನೋವನ್ನು ಶಮನಗೊಳಿಸಬಹುದು. ಇದರ ಬದಲು ನೋವಿರುವ ಜಾಗಕ್ಕ ಲವಂಗದ ಎಣ್ಣೆಯನ್ನು ಸಹ ಬಳಸಬಹುದು.

ತಲೆನೋವು: ಒಂದು ಸಣ್ಣ ಚಕ್ಕೆಯ ಬಾಗವನ್ನು ನೀರಿನಲ್ಲಿ ಕುದಿಸಿ ಈ ನೀರನ್ನು ಕುಡಿಯುವುದರಿಂದ ತಲೆ ನೋವು ವಾಸಿಯಾಗುತ್ತದೆ. ಚಕ್ಕೆಯ ಪುಡಿಯನ್ನು ತಯಾರಿಸಿ ಇದನ್ನು ನೀರಿನಲ್ಲಿ ಕಲಸಿ ನೋವಿರುವ ತಲೆಯ ಬಾಗಕ್ಕೆ ಹಚ್ಚಿದರು ತಲೆನೋವು ನಿವಾರಣೆಯಾಗುತ್ತದೆ.

ಗಾಯದ ನಿವಾರಣೆಗೆ: ಸ್ವಲ್ಪ ಅರಿಶಿನ ಪುಡಿಯನ್ನು ಗಾಯದ ಜಾಗಕ್ಕೆ ಹಚ್ಚಬೇಕು. ಅರಿಶಿನದಲ್ಲಿ ನಿರೋಧಕ ಗುಣವಿದೆ. ಇದರಿಂದ ಗಾಯಗಳು ಬೇಗೆ ವಾಸಿಯಾಗುತ್ತದೆ.

ಈ ರೀತಿ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಇಂತಹ ಸಣ್ಣ ಕಾಯಿಲೆಗಳಿಗೆ  ಪರಿಹಾರ ಕಂಡುಕೊಳ್ಳಬಹುದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೋವಿಡ್-19 ಇಂದ ಭಾರತದ ಸಾಮಾಜಿಕ ಮತ್ತು ವಾಣಿಜ್ಯ ವಹಿವಾಟಿನ ಮೇಲಿನ ದುಷ್ಪರಿಣಾಮಗಳು

ವೀಳ್ಯದ ಎಲೆಯ ಆರೋಗ್ಯ ಲಾಭ ಕೇಳಿದ್ದೀರಾ..