in

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?
ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?

ಉದ್ಯೋಗದಾತರಿಂದ, ಉದ್ಯೋಗಿ ಪಡೆದ ಎಲ್ಲ ಹಣವೂ ಕೂಡಾ ಆದಾಯ ತೆರಿಗೆಯ ಅಡಿಯಲ್ಲಿ ಬರುತ್ತದೆ. ಉದ್ಯೋಗದಾತರೂ ಖಡ್ಡಾಯವಾಗಿ ತೆರಿಗೆಯನ್ನು ನೀಡುವ ಸಂಬಳದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

ಭಾರತ ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ತೆರಿಗೆಯ ವ್ಯಾಪ್ತಿಗೆ ಒಳಪಡುವ ಆದಾಯದ ಮೇಲೆ, ಹಿಂದು ಅವಿಭಕ್ತ ಕುಟುಂಬಗಳು (ಎಚ್‌ಯುಎಫ್‌), ಕಂಪೆನಿಗಳು, ವ್ಯಾಪಾರಿ ಸಂಸ್ಥೆಗಳು, ಸಹಕಾರ ಸಂಘಗಳು ಮತ್ತು ಟ್ರಸ್ಟ್‌ ಮತ್ತು ಇತರೇ ಯಾವುದೇ ರೀತಿಯ ವ್ಯಕ್ತಿಗಳಿಗೂ ಆದಾಯ ತೆರಿಗೆಯನ್ನು ವಿಧಿಸುತ್ತದೆ. ಮೇಲೆ ಹೇಳಿದ ಪ್ರತಿಯೊಬ್ಬ ವ್ಯಕ್ತಿಗೆ ತೆರಿಗೆ ಕರ ವಿಭಿನ್ನವಾಗಿರುತ್ತದೆ. ಈ ಕರವು ಭಾರತೀಯ ಆದಾಯ ತೆರಿಗೆ, 1961ರ ಪ್ರಕಾರ ಇದು ನಿಯಂತ್ರಣಕ್ಕೊಳಪಟ್ಟಿರುತ್ತದೆ. ಭಾರತೀಯ ಆದಾಯ ತೆರಿಗೆ ಇಲಾಖೆಯು ಕೇಂದ್ರೀಯ ನೇರ ತೆರಿಗೆ ಸಮಿತಿಯ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಅಲ್ಲದೆ ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ಇಲಾಖೆಯ ಅಧೀನದಲ್ಲಿ ಬರುತ್ತದೆ.

ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಪ್ರತಿ ಹಣಕಾಸು ವರ್ಷದಲ್ಲಿ ಈ ಬಗ್ಗೆ ಆದಾಯ ತೆರಿಗೆ ಮತ್ತು ಹಣಕಾಸು ಸಚಿವಾಲಯ ಸೂಚನೆ ನೀಡುತ್ತಲೇ ಇರುತ್ತದೆ. ಜತೆಗೆ ಆದಾಯ ತೆರಿಗೆ ಪಾವತಿ ದಿನಾಂಕ ವಿಸ್ತರಣೆ ಕುರಿತು ಕೂಡ ಮಾಹಿತಿ ನೀಡುತ್ತದೆ.

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?
ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು

ನಾವು ಪಾವತಿ ಮಾಡಿದ ಆದಾಯ ತೆರಿಗೆ ಹಾಗೂ ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಯ ನಡುವೆ ವ್ಯತ್ಯಾಸವಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಫಂಡ್ ಅನ್ನು ಮಾಡಲಾಗುತ್ತದೆ. ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕವಾಗಿದ್ದರೆ ಮಾತ್ರ ಆದಾಯ ತೆರಿಗೆ ರಿಫಂಡ್ ಮಾಡಲಾಗುತ್ತದೆ.

ಇದಕ್ಕಾಗಿ ಫಾರ್ಮ್ 30 ಅನ್ನು ಬಳಕೆ ಮಾಡಲಾಗುತ್ತದೆ. ಆದಾಯ ತೆರಿಗೆ ಹಾಗೂ ಇತರೆ ನೇರ ತೆರಿಗೆ ನಿಯಮದ ಪ್ರಕಾರ ಈ ಹಿಂದೆ ಹೇಳಿದಂತೆ ನೀವು ಪಾವತಿ ಮಾಡಿದ ಮೊತ್ತ ಅಧಿಕವಾಗಿದ್ದರೆ ಮಾತ್ರ ರಿಫಂಡ್ ಲಭ್ಯವಾಗುತ್ತದೆ. ಈ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 237 ಮತ್ತು 245 ಅಡಿಯಲ್ಲಿ ಬರುತ್ತದೆ.

ಒಬ್ಬ ವ್ಯಕ್ತಿಯು ನಿಗದಿತ ಮಿತಿಯನ್ನು ಮೀರಿದ ಆದಾಯದಿಂದ ತೆರಿಗೆಯನ್ನು ಕಡಿತಗೊಳಿಸಿದಾಗ, ಅವನು ಮರುಪಾವತಿಗೆ ಅರ್ಹನಾಗಿರುತ್ತಾನೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ಐಟಿಆರ್ ಸಲ್ಲಿಸಬೇಕು.

ಆದಾಯ ತೆರಿಗೆ ಮರುಪಾವತಿಯನ್ನು ಪಡೆಯಲು ನೀವು ಬಯಸಿದರೆ, ನೀವು ಅದರ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದು. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಅಥವಾ NSDL ವೆಬ್ಸೈಟ್ ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು.

ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹತೆಯೇನು?

* ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಆ ಹಣಕಾಸು ವರ್ಷದಲ್ಲಿ ಪಾವತಿ ಮಾಡಬೇಕಾದ ಹಣಕ್ಕಿಂತ ಅಧಿಕವಾಗಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.

* ನಿಮ್ಮ ಟಿಡಿಎಸ್, ಸೆಕ್ಯೂರಿಟೀಸ್, ಡಿಬೆಂಚರ್, ಲಾಭಾಂಶ ಮೊದಲ ಬಡ್ಡಿಯು ಪಾವತಿಸಬೇಕಾದ ತೆರಿಗೆಗಿಂತ ಅಧಿಕವಾಗಿದ್ದರೆ, ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.

* ನೀವು ಪಾವತಿ ಮಾಡಬೇಕಾದ ಆದಾಯ ತೆರಿಗೆಗಿಂತ ಅಧಿಕ ತೆರಿಗೆಯನ್ನು ವಿಧಿಸಿದ್ದರೆ ನೀವು ಆದಾಯ ತೆರಿಗೆ ರಿಫಂಡ್ ಪಡೆಯುವ ಅರ್ಹತೆಯನ್ನು ಹೊಂದಿರುತ್ತೀರಿ.

* ಬೇರೆ ದೇಶದಲ್ಲಿ ಇರುವ ಭಾರತೀಯರು ದುಪ್ಪಟ್ಟು ಆದಾಯ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ಭಾರತ ಸರ್ಕಾರ ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಂದು ವೇಳೆ ಬೇರೆ ದೇಶದಲ್ಲಿಯೂ ನಿಮಗೆ ತೆರಿಗೆ ವಿಧಿಸಿದ್ದರೆ, ಭಾರತದಲ್ಲಿಯೂ ತೆರಿಗೆ ವಿಧಿಸಿದ್ದರೆ ನೀವು ರಿಫಂಡ್ ಪಡೆಯಲು ಅರ್ಹರಾಗಿರುತ್ತೀರಿ.

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?
ಪಾವತಿ ಮಾಡಿದ ಮೊತ್ತ ಅಧಿಕವಾಗಿದ್ದರೆ ಮಾತ್ರ ರಿಫಂಡ್ ಲಭ್ಯವಾಗುತ್ತದೆ

* ನೀವು ತೆರಿಗೆ ಮುಕ್ತ ಹೂಡಿಕೆಯನ್ನು ಮಾಡಿದ್ದರೆ, ಅದನ್ನು ತೆರಿಗೆ ಪಾವತಿ ಮಾಡುವ ವೇಳೆ ಡಿಕ್ಲೈರ್ ಮಾಡಿಲ್ಲದಿದ್ದರೆ ರಿಫಂಡ್ ಪಡೆಯಬಹುದು.

ನೀವು ಆದಾಯ ತೆರಿಗೆ ರಿಫಂಡ್‌ ಅನ್ನು ಒಂದು ಹಣಕಾಸು ವರ್ಷದಲ್ಲಿ ಕ್ಲೈಮ್ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಮಾತ್ರ ಅವಧಿ ಅಂತ್ಯದ ಬಳಿಕ ಮಾಡಿ ಕ್ಲೈಮ್ ಅನ್ನು ಅಧಿಕಾರಿಗಳು ಪ್ರಕ್ರಿಯೆ ಮಾಡುತ್ತಾರೆ. ಆರು ಹಣಕಾಸು ವರ್ಷ ಕಳೆದು ಹೋದ ಬಳಿಕ ನೀವು ಆರು ವರ್ಷದ ಹಿಂದಿನ ರಿಫಂಡ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ರಿಫಂಡ್ ಮೊತ್ತವು ಐವತ್ತು ಲಕ್ಷ ರೂಪಾಯಿಗಿಂತ ಕಡಿಮೆ ಆಗಿರಬೇಕು. ತಡವಾಗಿ ಕ್ಲೈಮ್ ಮಾಡುವ ಮೊತ್ತಕ್ಕೆ ಬಡ್ಡಿದರವನ್ನು ನೀಡಲಾಗುವುದಿಲ್ಲ.

ಆದಾಯ ತೆರಿಗೆ ರಿಫಂಡ್ ಕ್ಲೈಮ್ ಮಾಡುವುದು ಹೇಗೆ?

ಆದಾಯ ತೆರಿಗೆ ರಿಫಂಡ್ ಅನ್ನು ನೀವು ಡಿಕ್ಲೈರ್ ಮಾಡಬೇಕಾದರೆ, ನೀವು ಮಾಡುವ ಹೂಡಿಕೆಯನ್ನು ಫಾರ್ಮ್ 16 ಅಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ಇದರಲ್ಲಿ ನೀವು ವಿಮೆ ಪ್ರೀಮಿಯಂಗೆ ಮಾಡಿದ ಪಾವತಿ, ಮನೆಯ ಬಾಡಿಗೆ, ಮ್ಯೂಚುವಲ್ ಫಂಡ್, ಬ್ಯಾಂಕ್ ಎಫ್‌ಡಿ, ಎನ್‌ಎಸ್‌ಸಿಯಲ್ಲಿ ಮಾಡುವ ಹೂಡಿಕೆ, ಶಿಕ್ಷಣ ವೆಚ್ಚ ಮೊದಲಾದವುಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ. ಹಾಗೆಯೇ ಇದಕ್ಕೆ ಪುರಾವೆಯನ್ನು ಕೂಡಾ ನೀಡಬೇಕಾಗುತ್ತದೆ. ನೀವು ಅಧಿಕ ತೆರಿಗೆಯನ್ನು ಪಾವತಿ ಮಾಡುತ್ತೀದ್ದೀರಿ ಎಂದು ನಿಮಗೆ ಅನಿಸಿದರೆ ನೀವು ಫಾರ್ಮ್ 30 ಅನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಕ್ಲೈಮ್ ಅನ್ನು ಹಣಕಾಸು ವರ್ಷದ ಕೊನೆಗೂ ಮುನ್ನ ಸಲ್ಲಿಕೆ ಮಾಡಬೇಕಾಗುತ್ತದೆ.

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?
ಸರಿಯಾಗಿ ಬ್ಯಾಂಕ್ ಖಾತೆ ವಿವರ ಉಲ್ಲೇಖ ಮಾಡಿದ್ದೇವೆಯೇ ಎಂದು ನೋಡಿಕೊಳ್ಳಬೇಕು

ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನೀಡಲಾದ ಬ್ಯಾಂಕ್ ವಿವರಗಳು ತಪ್ಪಾಗಿದ್ದರೆ, ಮರುಪಾವತಿ ಸಾಧ್ಯವಿಲ್ಲ. ಬ್ಯಾಂಕ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ. ರಿಟರ್ನ್‌ಗಳನ್ನು ಸಲ್ಲಿಸಿದ್ದರೂ, ಇ-ವೆರಿಫಿಕೇಷನ್ ಅನ್ನು ಮಾಡದಿದ್ದರೆ, ಮರುಪಾವತಿಯನ್ನು ಸಾಧ್ಯವಾಗುವುದಿಲ್ಲ. ರಿಟರ್ನ್ಸ್ ಸಲ್ಲಿಸಿದ 120 ದಿನಗಳಲ್ಲಿ ಇ-ವೆರಿಫಿಕೇಷನ್ ಅನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಅದು ಅಮಾನ್ಯಗೊಳ್ಳುತ್ತದೆ. ಆದಷ್ಟು ಬೇಗ ಇ-ವೆರಿಫಿಕೇಷನ್ ಮಾಡುವುದು ಉತ್ತಮ.

ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

* ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿ: ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿಸಬೇಕಾದ ಮೊತ್ತದ ನೇರ ವರ್ಗಾವಣೆ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಈ ವಹಿವಾಟನ್ನು NECS/RTGS ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ಇದಕ್ಕಾಗಿ ನಾವು ಆದಾಯ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ರಿಟರ್ನ್ ಫಾರ್ಮ್‌ಗಳಲ್ಲಿ ಸರಿಯಾಗಿ ಬ್ಯಾಂಕ್ ಖಾತೆ ವಿವರ ಉಲ್ಲೇಖ ಮಾಡಿದ್ದೇವೆಯೇ ಎಂದು ನೋಡಿಕೊಳ್ಳಬೇಕು.

* ಚೆಕ್ ಮೂಲಕ ಆದಾಯ ತೆರಿಗೆ ಮರುಪಾವತಿ: ಆದಾಯ ತೆರಿಗೆ ಮರುಪಾವತಿಗಳನ್ನು ಮಾಡಲು ಈ ವಿಧಾನವು ಪರ್ಯಾಯ ಆಯ್ಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ಒದಗಿಸಿದ ಬ್ಯಾಂಕ್ ವಿವರಗಳು ಅಸ್ಪಷ್ಟ, ಅಪೂರ್ಣ ಅಥವಾ ತಪ್ಪು ಎಂದು ಅನಿಸಿದರೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆದಾರರು ಒದಗಿಸಿದ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಚೆಕ್ ಅನ್ನು ನೀಡುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನ್ನಡ ಭಾಷೆಯ ನಾನಾ ರೂಪಗಳು

ಕನ್ನಡ ಭಾಷೆಯ ನಾನಾ ರೂಪಗಳು

ವಿಶ್ವ ಸಾಮಾಜಿಕ ನ್ಯಾಯ ದಿನ

ಫೆಬ್ರವರಿ 20 ರಂದು, ವಿಶ್ವ ಸಾಮಾಜಿಕ ನ್ಯಾಯ ದಿನ