in

ಲಿವರ್ ಆರೋಗ್ಯ ಕಾಪಾಡುವುದು ಹೇಗೆ?

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಕೂಡ ಒಂದು. ನಮ್ಮಆಂತರಿಕ ಅಂಗಗಳಲ್ಲಿ ಲಿವರ್ ದೊಡ್ಡ ಅಂಗ.  ಇದು ನಿರ್ಣಾಯಕ ಜೈವಿಕ ಕಾರ್ಯಗಳನ್ನು ಮಾಡಿ ನಮನ್ನು ಆರೋಗ್ಯವಂತರಾಗಿ ಮತ್ತು  ಫಿಟ್ಆಗಿಯೂ  ಇಡುತ್ತದೆ. ನಮ್ಮ ಜೀರ್ಣಾಂಗದಿಂದ ಬರುವು ರಕ್ತವನ್ನು ಶುದ್ಧಿಗೊಳಿಸಿ ದೇಹದ ಇತರ ಬಾಗಾಗಳಿಗೆ ಪೂರೈಕೆ ಮಾಡುತ್ತದೆ. ಲಿವರ್ ರಾಸಾಯನಿಕಗಳನ್ನು ನಿರ್ವಿಶೀಕರಿಸುತ್ತದೆ ಹಾಗು ಔಷಧಗಳನ್ನು ಚಯಾಪಚಯಗೊಳಿಸುತ್ತದೆ. ಈ ಎಲ್ಲ ಕ್ರಿಯೆಗಳಿಂದ ಶೇಖರಣೆಯಾಗುವ ಬೈಲು ಜ್ಯೂಸು ಕರುಳುಗಳಲ್ಲಿ ಮತ್ತೆ ಕೊನೆಗೊಳ್ಳುತ್ತದೆ. ಇದಲ್ಲದೆ ವಿಟಮಿನ್ Kಯನ್ನು ಬಳಸಿಕೊಂಡು ನಮ್ಮ ರಕ್ತ ಹೆಪ್ಪುಗಟ್ಟುವುದಕ್ಕೆ ಬೇಕಾಗುವ ಪ್ರೊಟೀನ್ಗಳನ್ನು ಉತ್ಪಾದಿಸುತ್ತದೆ. ದೇಹದಲ್ಲಿನ ಹಳೆಯ ಮತ್ತು ಹಾನಿಗೊಳಗಾಗಿರುವ ರಕ್ತದ ಜೀವಕೋಶಗಳನ್ನು ಮುರಿದುಹಾಕುತ್ತದೆ. ಕೊಬ್ಬು ಚಯಾಪಚಯ ಕ್ರಿಯೆಯಲ್ಲಿ ಲಿವರ್ ಜೀವಕೋಶಗಳು ಕೊಬ್ಬನ್ನು ಮುರಿದು ಅದನ್ನು ಶಕ್ತಿಯನ್ನಾಗಿ ಮಾರ್ಪಡಿಸುತ್ತದೆ.. ಇಷ್ಟೆಲ್ಲಾ ಕಾರ್ಯ ನಿರ್ವಹಿಸುವ ನಮ್ಮ ಲಿವರ್ ಆರೈಕೆ ಮಾಡುವುದನ್ನು ತಿಳಿದುಕೊಳ್ಳೋಣ,

  1. ಆರೋಗ್ಯಕರ ದೇಹದ ತೂಕ: ನಮ್ಮ ದೇಹದ ತೂಕ ನಿಯಂತ್ರಣದಲ್ಲಿದ್ದರೆ ಲಿವರ್ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಜಂಕ್ ಫುಡ್ ನಿಯಂತ್ರಣದಲ್ಲಿರಲಿ. ದೇಹದ ತೂಕ ಹೆಚ್ಚಾದಂತೆ ಲಿವರ್ ತೂಕವು ಜಾಸ್ತಿಯಾಗುತ್ತದೆ. ಇದರಿಂದ ಲಿವರ್ನಲ್ಲಿ ಕೊಬ್ಬು ಶೇಖರಣೆಯಾಗಿ, ಈಗಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವ ನೋನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಬರುವ ಸಾಧ್ಯತೆಗಳಿವೆ.ದೇಹದ ತೂಕ ಸಮತೋಲನದಲ್ಲಿರುವುದು ಅತಿ ಮುಖ್ಯ. ವ್ಯಾಯಾಮ, ಯೋಗ, ವಾಕಿಂಗ್ ಹೀಗೆ ಹಲವಾರು ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು.
  2. ಸಮತೋಲಿತ ಆಹಾರ ಸೇವನೆ: ಜಾಸ್ತಿ ಕ್ಯಾಲೊರಿ, ಪರಿಷ್ಕರಿಸಿದ ಕೊಬ್ಬು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್(ಅನ್ನ , ಪಾಸ್ತಾ, ವೈಟ್ ಬ್ರೆಡ್), ನಾರಿನಾಂಶವಿರುವ ಹಣ್ಣು, ತರಕಾರಿಗಳು, ಮಾಂಸ, ಹಾಲು ಮತ್ತು ಜಲಸಂಚಯನ ಹೆಚ್ಚಿರಬೇಕು ಹಾಗಾಗಿ ಜಾಸ್ತಿ ನೀರನ್ನು ಕುಡಿಯಬೇಕು.
  3. ವ್ಯಾಯಾಮ ಮಾಡುವುದು: ದಿನನಿತ್ಯ ವ್ಯಾಯಾಮ ಮಾಡುವುದರಿಂದ ಲಿವರ್ ನಲ್ಲಿರುವು ಕೊಬ್ಬು ಕರಗಲು ಸಹಾಯವಾಗುತ್ತದೆ. ಇದರಿಂದ ನಮ್ಮ ಲಿವರ್ ಆರೋಗ್ಯವಾಗಿರುತ್ತದೆ.
  4. ಆಲ್ಕೋಹಾಲ್ ಸೇವನೆ ಮಿತಿಯಲ್ಲಿರಲಿ: ಆಲ್ಕೋಹಾಲ್ ಸೇವಿಸುವುದರಿಂದ  ಆ ಕ್ಷಣದ ನೆಮ್ಮದಿ ಇಲ್ಲವೇ ಖುಷಿ ಸಿಗಬಹುದು, ಆದರೆ ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಲಿವರ್ ಜೀವಕೋಶಗಳನ್ನು ನಾಶಮಾಡುತ್ತದೆ ಇಲ್ಲವೇ ಹಾನಿಮಾಡುತ್ತದೆ.
  5. ಕೈ ತೊಳೆಯುವ ಅಭ್ಯಾಸ: ದೇಹದ ಆರೋಗ್ಯದ ಜೊತೆಗೆ ದೇಹದ ಶುಚಿಯೂ ಮುಖ್ಯ. ಬಾತ್ರೂಮ್ ಬಳಸಿದ ನಂತರ ಹ್ಯಾಂಡ್ವಾಷ್ ಇಲ್ಲವೇ ಬಿಸಿ ನೀರನ್ನು ಬಳಸಿ ಕೈಯನ್ನು ತೊಳೆಯಿರಿ. ಆಹಾರ ತಯಾರಿಸುವಾಗ ಹಾಗು ಊಟ ಮಾಡುವಾಗ ಕೈಯನ್ನು ತೊಳೆದು ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
  6. ಕಾಫಿ: ಕೆಲವು  ಅಧ್ಯಯನಗಳ ಪ್ರಕಾರ ನಿಯಮಿತ ಕಾಫಿ ಸೇವನೆಯಿಂದ ಲಿವರ್ ಆರೋಗ್ಯ ಕಾಪಾಡಬಹುದು ಎನ್ನಲಾಗಿದೆ.

ನಮ್ಮ ಜೀರ್ಣಾಂಗ ಕ್ರಿಯೆಯಲ್ಲಿ ಲಿವರ್ ಅತಿ ಮುಖ್ಯವಾಗಿ ಪಾತ್ರವಹಿಸುತ್ತದೆ. ನಾವು ಕುಡಿಯುವ ಹಾಗು ತಿನ್ನುವ ಪ್ರತಿಯೊಂದು ಆಹಾರವು ಲಿವರ್ ಮೂಲಕವೇ  ಹಾದುಹೋಗುತ್ತದೆ. ಲಿವರ್ ಆರೋಗ್ಯವನ್ನು ಸರಿಯಾಗಿ ಕಾಪಾಡುವುದರಿಂದ ಅದು ಸರಿಯಾಗಿ ಅದರ ಕಾರ್ಯ ನಿರ್ವಹಿಸುತ್ತದೆ. ಇದು ಮಾನವನ ದೇಹದ ಅತಿ ಪ್ರಮುಖ ಅಂಗವಾಗಿರುವುದರಿಂದ ಇತರ ಕಾಳಜಿ ಅತಿಮುಖ್ಯ. ಯಾವುದೇ ಔಷದಿಯ ಅವಶ್ಯಕತೆ ಇಲ್ಲ. ನಮ್ಮ ಸರಿಯಾದ ಜೀವನಶೈಲಿಂದ ಇದರ ಆರೋಗ್ಯ ಕಾಪಾಡಬೇಕು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳೋಣ  ಹಾಗು ದೇಹದ ಆರೋಗ್ಯ ಕಾಪಾಡೋಣ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..

ಕೋವಿಡ್-19 ಇಂದ ಭಾರತದ ಸಾಮಾಜಿಕ ಮತ್ತು ವಾಣಿಜ್ಯ ವಹಿವಾಟಿನ ಮೇಲಿನ ದುಷ್ಪರಿಣಾಮಗಳು