in ,

ಬಿಳಿ ಎಕ್ಕದ ಗಿಡ ವಾಸ್ತುಗೂ ಸೈ, ಆರೋಗ್ಯಕ್ಕೂ ಸೈ

ಬಿಳಿ ಎಕ್ಕದ ಗಿಡ
ಬಿಳಿ ಎಕ್ಕದ ಗಿಡ

ಬಿಳಿ ಎಕ್ಕ ಗಿಡವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಸಿಗುವಂತಹದ್ದು. ಆದರೆ ಪುರಾತನವಾದ ಗಿಡವು ಸಿಗುವುದು ಕಮ್ಮಿ. ಎಕ್ಕ ಗಿಡದಲ್ಲಿ ಗುಲಾಬಿ, ನೀಲಿ ಬಣ್ಣದ ಹೂಗಳಿರುವಂತಹ ಸಸ್ಯಗಳು ಎಲ್ಲಾ ಕಡೆಗಳಲ್ಲಿ ಸಿಗುತ್ತವೆ. ಆದರೆ ಬಿಳಿ ಎಕ್ಕದ ಗಿಡ ಸಿಗುವುದು ವಿರಳ. ಇದನ್ನು ಶ್ವೇತಾರ್ಕವೆಂದೂ ಕರೆಯುತ್ತಾರೆ. ಈ ಗಿಡವು ೬ ರಿಂದ ೭ ಅಡಿ ಎತ್ತರವಾಗಿ,೪ ರಿಂದ ೫ ಅಡಿ ವಿಸ್ತಾರವನ್ನು ಹೊಂದಿರುತ್ತದೆ. ಸುತ್ತಲೂ ಹರಡಿಕೊಂಡಿರುವ ಸಸ್ಯವಿದಾಗಿದೆ. ಇನ್ನೂ ಹೆಚ್ಚು ಹರಡಿರುವ ಸಾಧ್ಯತೆಯೂ ಇದೆ. ಈ ಸಸ್ಯಕ್ಕೆ ಬಲಿಷ್ಠವಾದ ಟೊಂಗೆಗಳಿದ್ದು,ವಟವೃಕ್ಷದ ಎಲೆಗಳಂತೆ ಎಲೆ ಹೊಂದಿರುತ್ತದೆ. ಬಿಳಿ ಹಾಲಿನಂತೆ ಬಣ್ಣ ಹೊಂದಿದ ಹೂಗಳಿದ್ದು,ಬೀಜಗಳು ಅಗಸೇ ಗಿಡದ ಬೀಜಗಳಂತಿರುತ್ತವೆ. ಈ ಗಿಡದಲ್ಲಿ ಬಿಳಿಯ ಹೂಗಳಾಗುತ್ತವೆ. ಭಾರತದಲ್ಲಿ ಅನೇಕ ರೀತಿಯಲ್ಲಿರುವ ಎಕ್ಕ ಸಸ್ಯಗಳನ್ನು ಪಡೆಯಬಹುದಾಗಿದೆ. ಬಹಳಷ್ಟು ನೀಲಿ ಬಣ್ಣದಲ್ಲಿರುತ್ತವೆ. ಕೆಲವು ಕಂದು ಬಣ್ಣದಲ್ಲಿರುತ್ತವೆ. ಎಕ್ಕ ಗಿಡಕ್ಕೆ ಸಸ್ಯಗಳಲ್ಲಿಯೇ ವಿಶೇಷವಾದ ಸ್ಥಾನವಿರುವುದು,ತಾಂತ್ರಿಕ ಪ್ರಯೋಗಗಳಲ್ಲಿ ಸಹ ಅನೇಕ ರೀತಿಯಿಂದ ಎಕ್ಕ ಗಿಡದ ಭಾಗಗಳನ್ನು ಉಪಯೋಗಿಸುತ್ತಾರೆ. ಕನಿಷ್ಠ ೨೭ ವರ್ಷಗಳಷ್ಟು ಹಳೆಯದಾದ ಎಕ್ಕ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವವಿರುವುದು. ಈ ಗಿಡದ ಬೇರಿನಲ್ಲಿ ಗಣೇಶನ ಮೂರ್ತಿಯ ನಿರ್ಮಾಣವಾಗಿರುತ್ತದೆ. ಇದೊಂದು ಪ್ರಕೃತಿಯ ಆಶ್ಚರ್ಯವೆಂದರೆ ತಪ್ಪಿಲ್ಲ. ಈ ರೀತಿಯ ಎಕ್ಕದ ಬೇರನ್ನು ಪಡೆಯಲು ೫೬ ಅಡಿಗಳಷ್ಟು ನೆಲವನ್ನು ಅಗೆದು ತೆಗೆಯಬೇಕಾಗುವುದು. ಹಿಂದಿನ ಕಾಲದಲ್ಲಿ ಸಿದ್ಧರು ತಾವು ಅನೇಕ ಬಿಳಿ ಎಕ್ಕ ಮೂರ್ತಿಗಳನ್ನು ಸಂಪಾದಿಸಿ ಸಂಗ್ರಹಿಸಿಡುತ್ತಿದ್ದರು. ತಮ್ಮ ಚೀಲಗಳಲ್ಲಿಟ್ಟು ಬೇರೆ ಬೇರೆ ಊರುಗಳಿಗೆ ಹೋಗುವಾಗ ಸತ್ಪಾತ್ರರಿಗೆ ಅದನ್ನು ಪ್ರಸಾದಿಸುತ್ತಿದ್ದರು. ಈ ರೀತಿಯ ಮಹಿಮೆಯನ್ನು ಇಂದು ವಿರಳವಾಗಿ ಕಾಣಬಹುದಾಗಿದೆ. ಅತಿ ಹಳೆಯ ಎಕ್ಕ ಗಿಡದ ಬೇರನ್ನು ತೆಗೆಯಲು ತುಂಬಾ ಆಳವಾಗಿ ಅಗೆಯ ಬೇಕಾಗುವುದು. ಗುದ್ದಲಿಯನ್ನು ಬಳಸಿ ಈ ಗಣಪತಿಯ ಮೂರ್ತಿಯನ್ನು ಎಚ್ಚರಿಕೆಯಿಂದಲೇ ಹೊರಗೆ ತೆಗೆಯಬೇಕು. ಗಿಡದ ಅವಧಿ ಹೆಚ್ಚಾದಂತೆ ಗಣಪತಿ ಮೂರ್ತಿಯು ಅತಿ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದಾಗಿದೆ. ಅದಕ್ಕಾಗಿ ಶ್ರಮಪಟ್ಟು ಹುಡುಕಿ ಪಡೆಯಬೇಕಾಗುತ್ತದೆ.

ಮನೆಯ ವಾಸ್ತು ದೋಷವನ್ನು ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ.

ಬಿಳಿ ಎಕ್ಕದ ಗಿಡ ವಾಸ್ತುಗೂ ಸೈ, ಆರೋಗ್ಯಕ್ಕೂ ಸೈ
ಬಿಳಿ ಎಕ್ಕದ ಗಿಡ

ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ.

ಎಕ್ಕದ ಗಿಡವನ್ನು ಮನೆಯ ಬಲಭಾಗದಲ್ಲಿ ಬೆಳೆಸಿದರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಈ ಗಿಡದ ಶಕ್ತಿಯಿಂದ ಯಾವುದೇ ಮಾಟ ಮಂತ್ರ ತಟ್ಟುವುದಿಲ್ಲ. ಶಿವನಿಗೆ ಎಕ್ಕದ ಹೂ ಅತ್ಯಂತ ಪ್ರಿಯವಾಗಿದ್ದು, ಪಾರ್ವತಿಯು ಎಕ್ಕದ ಹೂ ನೀಡಿ ಶಿವನನ್ನು ವರಿಸಿದಳು ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಗಳಿವೆ. ಪ್ರತಿದಿನ ನೀವೂ ಗಣಪತಿಯನ್ನು ಎಕ್ಕದ ಹೂವಿನಿಂದ ಪೂಜೆಸಿದರೆ ವಿಘ್ನೇಶನ ಕೃಪೆಗೆ ಪಾತ್ರರಗಬಹುದು. ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಹಾಗೂ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರಲು ಪ್ರತಿದಿನ ಭಕ್ತಿಯಿಂದ ಎಕ್ಕದ ಗಿಡದಿಂದ ಪೂಜೆಮಾಡಿದರೆ, ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು.

ಎಕ್ಕದ ಬೇರನ್ನು ತಂದು ತಣ್ಣೀರಿನಲ್ಲಿ ಅರೆದು ಚೇಳು ಕಡಿದವರಿಗೆ ಕುಡಿಸುವುದರಿಂದ ವಿಷದ ಬಾಧೆಯು ನಿವಾರಣೆಯಾಗುವುದು. ಎಕ್ಕದ ಹಾಲು, ಎಲೆ, ಬೇರುಗಳಿಂದ ಹಲವಾರು ರೋಗಗಳು ನಿವಾರಣೆಯಾಗುತ್ತದೆ.

ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಪೂಜೆ ಮಾಡುವಾಗ ಲಕ್ಷ್ಮಿ, ಆಂಜನೇಯ, ಗಣಪತಿ, ಶನಿ ಮಹಾತ್ಮರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತಿ ಹೊಂದಬಹುದು. ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಿ, ಇದು ಬಹಳ ಒಳ್ಳೆಯದು. ಬಿಳಿ ಎಕ್ಕದ ಗಿಡ ವಿನಾಯಕ ದೇವರಿಗೆ ಬಹಳ ಪ್ರಿಯವಾದದ್ದು.

ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ. ಎಕ್ಕದ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.

ಬಿಳಿ ಎಕ್ಕದ ಗಿಡ ವಾಸ್ತುಗೂ ಸೈ, ಆರೋಗ್ಯಕ್ಕೂ ಸೈ
ಬಿಳಿ ಎಕ್ಕದ ಗಿಡ

ಬಿಳಿ ಎಕ್ಕದ ಗಿಡದಿಂದ ಪ್ರಮುಖವಾಗಿ ಆಂಜನೇಯ, ಗಣಪತಿ,ಯಂತಹ ದೇವರುಗಳನ್ನು ಪೂಜೆಮಾಡಲಾಗುತ್ತದೆ. ಎಕ್ಕದ ಗಿಡದಿಂದ ಹಾರಮಾಡಿ ಶನಿದೇವನಿಗೆ ಅರ್ಪಿಸಿದರೆ ಶನಿಕಾಟ ನಿವಾರಣೆ ಯಾಗುತ್ತದೆ. ಮನೆಯ ಮುಂಭಾಗ ಹಾಗೂ ದೇವರ ಮನೆಯ ಮುಂಭಾಗ ಎಕ್ಕದ ಗಿಡದ ತೋರಣ ಕಟ್ಟಿದರೆ ಒಳ್ಳೆಯದಾಗುತ್ತದೆ.

ಕನಿಷ್ಟವೆಂದ್ರೂ 27 ವರ್ಷಗಳಷ್ಟು ಹಳೆಯದಾದ ಎಕ್ಕ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವವಿರುವುದು. ಭಾರತೀಯ ಸನಾತನ ಕುಟುಂಬಗಳು ಮನೆಯ ಮುಂದೆ ಎಕ್ಕದ ಗಿಡವನ್ನು ಬೆಳಸಿ ನಿತ್ಯ ಪೂಜೆ ಮಾಡುತ್ತಾರೆ. ಈ ಗಿಡದ ಎಲೆ, ಕಾಂಡ, ಹೂ ಎಲ್ಲವೂ ಔಷಧೀಯ ಗುಣ ಹೊಂದಿರುತ್ತವೆ. ಎಕ್ಕದ ಗಿಡದ ಬಗ್ಗೆ ಋಷಿಮುನಿಗಳು ಸಾಕಷ್ಟು ಮಾಹಿತಿಯನ್ನ ತಿಳಿಸಿರುತ್ತಾರೆ. ಎಕ್ಕದ ಗಿಡವು 64 ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹಲವಾರು ಉಲ್ಲೇಖಗಳಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

50 Comments

ರಾಜ ವಿಷ್ಣುವರ್ಧನ

ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ

ಅಮೋಘವರ್ಷ ನೃಪತುಂಗ

ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ