in

ಅಪೌಷ್ಟಿಕತೆ ಎಂದರೆ ಏನು?

ಅಪೌಷ್ಟಿಕತೆ ಎಂದರೆ ಏನು
ಅಪೌಷ್ಟಿಕತೆ ಎಂದರೆ ಏನು

ಅಪೌಷ್ಟಿಕತೆ ಎಂಬುದು ಸಾಕಷ್ಟಿಲ್ಲದ, ವಿಪರೀತದ ಅಥವಾ ಅಸಮತೋಲನದ ಪ್ರಮಾಣದಲ್ಲಿ ಪೌಷ್ಟಿಕದ್ರವ್ಯಗಳ ಸೇವನೆಯಾಗಿರುತ್ತದೆ. ಆಹಾರದಲ್ಲಿ ಯಾವ ಯಾವ ಪೌಷ್ಟಿಕದ್ರವ್ಯಗಳು ಕಡಿಮೆಯಾಗಿವೆ ಅಥವಾ ಹೆಚ್ಚಾಗಿವೆ ಎಂಬುದನ್ನು ಆಧರಿಸಿ ಅನೇಕ ಬೇರೆ ಬೇರೆ ರೀತಿಯ ಪೋಷಣಶಾಸ್ತ್ರೀಯ ವ್ಯಾಧಿಗಳು ಉಂಟಾಗಬಹುದಾಗಿರುತ್ತದೆ. ವಿಶ್ವದ ಸಾರ್ವಜನಿಕರ ಆರೋಗ್ಯಕ್ಕೆ ಏಕೈಕ ಅತ್ಯಂತ ಮಾರಣಾಂತಿಕ ಅಪಾಯ/ಬೆದರಿಕೆ ಎಂದು ವಿಶ್ವ ಆರೋಗ್ಯ ಸಂಘಟನೆಯು ಅಪೌಷ್ಟಿಕತೆಯೆಡೆಗೆ ಬೊಟ್ಟುಮಾಡುತ್ತದೆ. ಪೋಷಣೆಯನ್ನು ಸುಧಾರಿಸುವುದು ಇದಕ್ಕೆ ಬಹು ಪ್ರಭಾವಿಯಾದ ಚಿಕಿತ್ಸೆಯೆಂದು ವ್ಯಾಪಕ ಭಾವನೆ ಇದೆ.

ಕಡಲೆಕಾಯಿ ಬೆಣ್ಣೆಯಂತಹಾ ಸಾರಭರಿತಗೊಳಿಸಿದ ಸ್ಯಾಷೆ/ಕಿರುಸಂಚಿಗಳಲ್ಲಿರುವ ಪುಡಿಗಳ ಮೂಲಕ ಅಥವಾ ನೇರವಾಗಿ ಪೂರಕಾಂಶಗಳ ಮೂಲಕ ತುರ್ತು ಚಿಕಿತ್ಸೆಗಳಲ್ಲಿ ಕೊರತೆಯಾದ ಸೂಕ್ಷ್ಮಪೌಷ್ಟಿಕದ್ರವ್ಯಗಳನ್ನು ಪೂರೈಸುವುದೂ ಸೇರಿದೆ. ಸಾರ್ವಜನಿಕ ನೆರವು ಸಮುದಾಯಗಳು ಬಳಸುವ ದುರ್ಭಿಕ್ಷ ಪರಿಹಾರ ಸೂತ್ರಗಳಲ್ಲಿ ಇತ್ತೀಚೆಗೆ ಅನೇಕ ವೇಳೆ ಕಾನೂನು ಪ್ರಕಾರ ಕಡ್ಡಾಯಗೊಂಡಿರುವಂತೆ ಸಾಗಣೆ ವೆಚ್ಚಕ್ಕೆ ಹಣವು ವ್ಯರ್ಥವಾಗುವುದರಿಂದ ದಾನಿ ರಾಷ್ಟ್ರಗಳಿಂದ ಆಹಾರವನ್ನು ಕೊಂಡುಕೊಳ್ಳುವ ಬದಲಿಗೆ ಹಸಿದವರಿಗೆ ಅವರು ನೇರವಾಗಿ ಸ್ಥಳೀಯ ಕೃಷಿಕರಿಗೆ ಪಾವತಿಸಿ ಆಹಾರ ಪಡೆದುಕೊಳ್ಳುವಂತೆ ನಗದು ಇಲ್ಲವೇ ನಗದು ಸಲ್ಲಿಕೆ ಹುಂಡಿಗಳನ್ನು ದೇಣಿಗೆಯಾಗಿ ನೀಡಲು ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ನೀರಾವರಿಗಳಂತಹಾ ಆಧುನಿಕ ಕೃಷಿಯು ಬಳಕೆಯಲ್ಲಿಲ್ಲದ ಪ್ರದೇಶಗಳಲ್ಲಿ ಅದರ ಮೇಲೆ ಹಣ ಹೂಡುವುದು ಒಂದು ದೀರ್ಘಕಾಲೀನ ಪರಿಹಾರವಾಗಿದ್ದು, ಇದರಿಂದಾಗಿಯೇ ಬಹುಪಾಲು ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಹಸಿವಿನ ಸಮಸ್ಯೆಯು ನೀಗಿದೆ. ಆದಾಗ್ಯೂ, ವಿಶ್ವ ಬ್ಯಾಂಕ್ನ ಕಠಿಣ ನಿಯಮಗಳಿಂದಾಗಿ ಸರ್ಕಾರದಿಂದ ರೈತರಿಗೆ ನೀಡಲಾಗುವ ಸಹಾಯಧನಗಳು ನಿಯಂತ್ರಿತವಾಗುತ್ತಿದ್ದರೆ ರಾಸಾಯನಿಕ ಗೊಬ್ಬರಗಳ ಬಳಕೆಯ ಪಸರಿಸುವಿಕೆಗೆ ಕೆಲ ಪರಿಸರಸಂರಕ್ಷಣಾ ಗುಂಪುಗಳು ಅಡ್ಡಿಪಡಿಸುತ್ತಿವೆ.

ಅಪೌಷ್ಟಿಕತೆ ಎಂದರೆ ಏನು?
ಅಪೌಷ್ಟಿಕತೆಯ ಸಮಸ್ಯೆ

ಜೀನ್‌ ಜೀಯೆಗ್ಲರ್‌‌ರ ಪ್ರಕಾರ, 2000ನೇ ಇಸವಿಯಿಂದ ಮಾರ್ಚ್‌ 2008ರವರೆಗೆ ಆಹಾರದ ಹಕ್ಕಿನ ಸಂಯುಕ್ತ ರಾಷ್ಟ್ರ ಸಂಘದ ವಿಶೇಷ ಕಾರ್ಯಕಲಾಪ ವರದಿಗಾರರು, ಅಪೌಷ್ಟಿಕತೆಯಿಂದ ಉಂಟಾದ ಮರಣಪ್ರಮಾಣ/ಸಾವಿನ ದರವು 2006ರಲ್ಲಿನ ಒಟ್ಟಾರೆ ಮರಣಪ್ರಮಾಣ/ಸಾವಿನ ದರದ 58%ರಷ್ಟಿದೆ. “ಪ್ರತಿ ವರ್ಷ ವಿಶ್ವದಲ್ಲಿ, ಎಲ್ಲಾ ರೀತಿಯ ಕಾರಣಗಳೂ ಸೇರಿ ಸರಿಸುಮಾರು 62 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವದಾದ್ಯಂತ ಹನ್ನೆರಡು ಜನರಲ್ಲಿ ಒಬ್ಬರು ಪೌಷ್ಟಿಕತೆಯ ಕೊರತೆ ಹೊಂದಿರುವವರಾಗಿರುತ್ತಾರೆ. 36 ದಶಲಕ್ಷಗಳಿಗಿಂತ ಹೆಚ್ಚಿನ ಜನರು ಹಸಿವಿನಿಂದ ಅಥವಾ ಸೂಕ್ಷ್ಮಪೌಷ್ಟಿಕದ್ರವ್ಯಗಳಲ್ಲಿನ ಕೊರತೆಗಳಿಂದಾಗಿ ಉಂಟಾಗುವ ಕಾಯಿಲೆಗಳಿಂದಾಗಿ 2006ರಲ್ಲಿ ಮರಣಿಸಿದ್ದರು”. ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ಪ್ರಸ್ತುತ ಮಕ್ಕಳ ಮರಣಪ್ರಮಾಣದ ಅರ್ಧದಷ್ಟು ಪ್ರಕರಣಗಳಲ್ಲಿ ಅಪೌಷ್ಟಿಕತೆಯು ಪ್ರಮುಖ ಕಾರಣವಾಗಿದೆ. ಕೊರತೆ ತೂಕದ ಜನನಗಳು ಹಾಗೂ ಅಂತರ-ಗರ್ಭಕೋಶೀಯ ಬೆಳವಣಿಗೆಯ ಪರಿಮಿತಿಗಳು ಪ್ರತಿ ವರ್ಷ 2.2 ದಶಲಕ್ಷ ಮಕ್ಕಳ ಸಾವಿಗೆ ಕಾರಣವಾಗುತ್ತಿವೆ. ಇನ್ನೂ 1.4 ದಶಲಕ್ಷ ಮಕ್ಕಳ ಸಾವಿಗೆ ಎದೆಹಾಲು ಕುಡಿಸುವಿಕೆಯೇ ಇರದ ಅಥವಾ ಕನಿಷ್ಟ ಪ್ರಮಾಣದಲ್ಲಿ ಕುಡಿಸುತ್ತಿರುವ ಸ್ಥಿತಿ ಕಾರಣವಾಗಿರುತ್ತದೆ. ಇತರೆ ಕೊರತೆಗಳು, A ಜೀವಸತ್ವ ಅಥವಾ ಸತುವುಗಳ ಕೊರತೆಯಂತಹವು 1 ದಶಲಕ್ಷ ಮಕ್ಕಳ ಸಾವಿಗೆ ಕಾರಣವಾಗುತ್ತಿವೆ. ದ ಲ್ಯಾನ್ಸೆಟ್‌‌ನ ಪ್ರಕಾರ, ಮೊದಲೆರಡು ವರ್ಷಗಳಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಎಂದಿಗೂ ಸರಿಪಡಿಸಲಾಗುವುದಿಲ್ಲ. ಪೌಷ್ಟಿಕತೆರಹಿತ ಮಕ್ಕಳು ಕನಿಷ್ಟ ಆರೋಗ್ಯ ಹಾಗೂ ಕೆಳಮಟ್ಟದ ಶೈಕ್ಷಣಿಕ ಸಾಧನೆಗಳೊಂದಿಗೆ ಬೆಳೆಯುತ್ತಾರೆ. ಅಂತಹವರುಗಳಿಗೇ ಹುಟ್ಟಿದ ಮಕ್ಕಳು ಕೂಡಾ ಕೃಶರಾಗುವ ಪ್ರವೃತ್ತಿ ಹೊಂದಿರುತ್ತಾರೆ.

ಅಪೌಷ್ಟಿಕತೆಯನ್ನು ಈ ಮುನ್ನಾ ದಡಾರ/ದಢಾರ, ಶ್ವಾಸಕೋಸದ ಉರಿಯೂತ/ನ್ಯುಮೋನಿಯಾ ಹಾಗೂ ಅತಿಸಾರ/ಭೇದಿಗಳಂತಹಾ ಕಾಯಿಲೆಗಳ ಸಮಸ್ಯೆ/ಲಕ್ಷಣಗಳನ್ನು ಉಲ್ಬಣಗೊಳಿಸುವಂತಹಾ ಆರೋಗ್ಯ ಸಮಸ್ಯೆಯೆಂದು ಭಾವಿಸಲಾಗಿತ್ತು. ಆದರೆ ಅಪೌಷ್ಟಿಕತೆಯು ವಾಸ್ತವವಾಗಿ ಕಾಯಿಲೆಗಳನ್ನೂ ಉಂಟುಮಾಡುತ್ತದೆ, ಮಾತ್ರವಲ್ಲ ಸ್ವತಃ ತಾನೇ ಮಾರಣಾಂತಿಕ ಪರಿಣಾಮವನ್ನೂ ಬೀರಬಲ್ಲದಾಗಿದೆ.

ಅಪೌಷ್ಟಿಕತೆಯು ಸೋಂಕಿನ ಹಾಗೂ ಸೋಂಕು ಜಾಡ್ಯಗಳ ಅಪಾಯವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಕ್ಷಯರೋಗವು ಸಕ್ರಿಯವಾಗಿದ್ದು ಉಲ್ಬಣಗೊಂಡಾಗ ಇದು ಬಹಳ ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ. ಸುರಕ್ಷಿತ ಕುಡಿಯುವ ನೀರಿನ ಕೊರತೆ ಇರುವ ಸಮುದಾಯಗಳು ಮತ್ತು ಇತರೆ ಪ್ರದೇಶಗಳಲ್ಲಿ ಈ ಹೆಚ್ಚುವರಿ ಆರೋಗ್ಯದ ಅಪಾಯಗಳು ಬಹುದೊಡ್ಡ ಅಪಾಯವನ್ನುಂಟು ಮಾಡಬಲ್ಲದು. ಕನಿಷ್ಟ ಪ್ರಮಾಣದ ಶಕ್ತಿ ಮತ್ತು ಮೆದುಳಿನ ಅಸಮರ್ಪಕ ಕಾರ್ಯಾಚರಣೆಗಳು ಅಪೌಷ್ಟಿಕತೆಯು ತಳಮಟ್ಟದವರೆಗೂ ಪ್ರಭಾವ ಬೀರುತ್ತಿದೆಯೆಂಬ ಸೂಚನೆಯೂ ಆಗಿರಬಹುದು, ಏಕೆಂದರೆ ಇದರಿಂದಾಗಿ ಪೀಡಿತರು ಆಹಾರ ಪಡೆಯಲು, ಆದಾಯ ಗಳಿಸಲು ಅಥವಾ ವಿದ್ಯಾಭ್ಯಾಸಗಳ ವಿಚಾರಗಳಲ್ಲಿ ಅಗತ್ಯ ಕೆಲಸಗಳನ್ನು ಮಾಡಲು ಅಶಕ್ತರಾಗಿರುತ್ತಾರೆ.

ಅಪೌಷ್ಟಿಕತೆ ಎಂದರೆ ಏನು?
ಕ್ಷಯರೋಗ

ದ ಲ್ಯಾನ್ಸೆಟ್‌‌ನ ಪ್ರಕಾರ, ಅಯೋಡಿನ್‌‌ ಕೊರತೆಯ ರೂಪದ ಅಪೌಷ್ಟಿಕತೆಯು “ಮಾನಸಿಕ ತೊಂದರೆಗಳನ್ನು ಉಂಟುಮಾಡುವ ತಡೆಯಬಹುದಾದ ವಿಶ್ವದಾದ್ಯಂತದ ಬಹುಪ್ರಧಾನ ಕಾರಣವಾಗಿದೆ.” ವಿಶೇಷವಾಗಿ ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶಿಶುಗಳಲ್ಲಿ ಉಂಟಾಗುವ ಮಿತವಾದ ಅಯೋಡಿನ್‌‌ ಕೊರತೆ ಕೂಡಾ 10ರಿಂದ 15 I.Q. ಪಾಯಿಂಟ್‌/ಅಂಶಗಳಷ್ಟು ಬುದ್ಧಿಶಕ್ತಿಯ ಕೊರತೆಯನ್ನುಂಟು ಮಾಡಿ, ರಾಷ್ಟ್ರದ ಬೆಳವಣಿಗೆಯಲ್ಲಿ ಗಣನಾತೀತ ನಷ್ಟವನ್ನುಂಟು ಮಾಡುತ್ತದೆ. ಇವುಗಳಲ್ಲಿ ಎದ್ದು ಕಾಣುವ ಹಾಗೂ ತೀವ್ರ ಪರಿಣಾಮಗಳಾದ ಅಂಗವಿಕಲತೆಗೆ ದಾರಿಮಾಡುವ ಗಾಯ್ಟರ್‌‌/ಗಳಗಂಡ, ಕ್ರೆಟಿನ್‌ ರೋಗ ಹಾಗೂ ಕುಬ್ಜತೆ — ಗುಡ್ಡಗಾಡು ಹಳ್ಳಿಗಳ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ವಿಶ್ವದ ಶೇಕಡಾ 16 ಜನರು ಕನಿಷ್ಟ ಮಿತ ಪ್ರಮಾಣದ ಕುತ್ತಿಗೆಯಲ್ಲಿ ಊದಿಕೊಂಡ ಥೈರಾಯ್ಡ್‌ ಗ್ರಂಥಿಯಿರುವ ಗಾಯ್ಟರ್‌‌/ಗಳಗಂಡದಿಂದ ಪೀಡಿತರಾಗಿರುತ್ತಾರೆ. ಸಂಶೋಧನೆಯು ಸೂಚಿಸುವ ಪ್ರಕಾರ ಪೌಷ್ಟಿಕ ಆಹಾರದ ಆಯ್ಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಪೂರ್ಣ ಆಹಾರ ಸೇವನೆಯ ದೀರ್ಘಕಾಲೀನ ಹವ್ಯಾಸಗಳು, ಜ್ಞಾನಗ್ರಹಣ ಹಾಗೂ ನೆನಪಿನ ಶಕ್ತಿಯ ಅಗಾಧ ಸಾಮರ್ಥ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರಿ, ಶೈಕ್ಷಣಿಕ ಮಾಹಿತಿಗಳನ್ನು ಅರ್ಥೈಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಕೆಲ ಸಂಸ್ಥೆಗಳು ಶಿಕ್ಷಕರು, ನೀತಿ ನಿರೂಪಕರು ಹಾಗೂ ನಿರ್ವಹಣಾತ್ಮಕ ಆಹಾರಸೇವಾ ಗುತ್ತಿಗೆದಾರ ಸಂಸ್ಥೆಗಳೊಂದಿಗೆ ಸೇರಿ ಸುಧಾರಿತ ಪೋಷಣಾ ವಿಷಯ ಹಾಗೂ ಪೋಷಣೆಯ ಸಂಪನ್ಮೂಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಯಿಂದ ಸ್ನಾತಕೋತ್ತರ ವಿದ್ಯಾಸಂಸ್ಥೆಗಳವರೆಗಿನ ಸಂಸ್ಥೆಗಳ ಉಪಹಾರಕೇಂದ್ರಗಳಲ್ಲಿ ಲಭ್ಯವಿರುವುದನ್ನು ಕಡ್ಡಾಯಗೊಳಿಸಲು ಪ್ರಯತ್ನ ಆರಂಭಿಸಿದ್ದಾರೆ. ಆರೋಗ್ಯ ಹಾಗೂ ಪೋಷಣೆಗಳು ಒಟ್ಟಾರೆ ಶೈಕ್ಷಣಿಕ ಯಶಸ್ಸಿನೊಂದಿಗೆ ಹತ್ತಿರದ ಸಂಬಂಧ ಹೊಂದಿರುವುದು ದೃಢಪಟ್ಟಿದೆ. ಪ್ರಸ್ತುತ 10%ಕ್ಕಿಂತ ಕಡಿಮೆ ಅಮೇರಿಕನ್‌ ಸ್ನಾತಕ ವಿದ್ಯಾರ್ಥಿಗಳು ಮಾತ್ರವೇ ಶಿಫಾರಸು ಮಾಡಲಾದ ಐದು ಪ್ರಮಾಣದ ಹಣ್ಣು ಹಾಗೂ ತರಕಾರಿಗಳನ್ನು ತಾವು ಸೇವಿಸುತ್ತಿರುವುದಾಗಿ ತಿಳಿಸಿದ್ದಾರೆ. ಉತ್ತಮ ಪೋಷಣೆಯು ಜ್ಞಾನಗ್ರಹಣ ಹಾಗೂ ಹೆಚ್ಚಿನ ನೆನಪಿನ ಶಕ್ತಿಸಾಮರ್ಥ್ಯಗಳ ಮೇಲೆ ಪ್ರಭಾವ ಬೀರುತ್ತದೆ; ಅಧ್ಯಯನವೊಂದರ ಪ್ರಕಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವವರು ನಿರ್ದಿಷ್ಟ ಸ್ಮರಣೆಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದರು. ಮತ್ತೊಂದು ಅಧ್ಯಯನದ ಪ್ರಕಾರ, ಕೆಫೀನ್‌ಮುಕ್ತ ಸೇವನೆಯೋಗ್ಯ ಸೋಡಾ ಅಥವಾ ಮಿಶ್ರಣ ತಿನಿಸುಗಳನ್ನು ಸೇವಿಸುವವರಿಗೆ ಹೋಲಿಸಿದರೆ ಮೊಸರನ್ನು ಸೇವಿಸುವವರು ವಿವೇಚನಾಯುಕ್ತ ಚಟುವಟಿಕೆಗಳಲ್ಲಿ ಹೆಚ್ಚು ಉತ್ತಮ ಸಾಧನೆ ತೋರಿದ್ದರು. ಪೋಷಣೆಯ ಕೊರತೆಗಳು 1951ರಷ್ಟು ಹಿಂದಿನ ಸಂಶೋಧನೆಗಳಲ್ಲಿಯೇ ಇಲಿಗಳಲ್ಲಿನ ಕಲಿಕೆಯ ನಡವಳಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದುದನ್ನು ವ್ಯಕ್ತಪಡಿಸಲಾಗಿತ್ತು.

“ಉತ್ತಮ ಕಲಿಕೆಯ ಸಾಧನೆಯು ಕಲಿಕೆ ಹಾಗೂ ಸ್ಮರಣೆ ಸಂಬಂಧಿ ಸಾಮರ್ಥ್ಯಗಳ ಮೇಲೆ ಆಹಾರದಿಂದ ಆಗುವ ಪ್ರಭಾವಗಳೊಂದಿಗೆ ಸಂಬಂಧ ಹೊಂದಿದೆ”.
“ಪೋಷಣೆಶಾಸ್ತ್ರ-ಕಲಿಕೆಗಳ ನಡುವಿನ ನಂಟು” ಎಂಬುದು ಆಹಾರ ಹಾಗೂ ಕಲಿಕೆಗಳ ನಡುವಿನ ಪರಸ್ಪರ ಸಂಬಂಧವನ್ನು ವ್ಯಕ್ತಪಡಿಸುವುದಲ್ಲದೇ, ಉನ್ನತ ಶಿಕ್ಷಣ ಪರಿಸರದಲ್ಲಿ ಉಪಯೋಗಗಳನ್ನು ಹೊಂದಿರುತ್ತದೆ.

“ಉತ್ತಮ ಪೌಷ್ಟಿಕತೆಸಹಿತ ಮಕ್ಕಳು ಶಾಲೆಗಳಲ್ಲಿ ಗಮನಾರ್ಹ ಪ್ರಮಾಣದ ಸಾಧನೆ ತೋರುತ್ತಾರೆ, ಇದಕ್ಕೆ ಕಾರಣ ಭಾಗಶಃ ಅವರು ಶಾಲೆಗೆ ಬೇಗನೆ ಸೇರುವುದರಿಂದ ಕಲಿಸಲು ಹೆಚ್ಚಿನ ಸಮಯ ಸಿಗುವುದು ಒಂದು ವಿಧವಾದರೆ ಮತ್ತೊಂದು ರೀತಿಯಲ್ಲಿ ಶೈಕ್ಷಣಿಕ ಅವಧಿಯ ಪ್ರತಿ ವರ್ಷದ ಹೆಚ್ಚಿನ ಕಲಿಕಾ ಸಾಮರ್ಥ್ಯ ಏರಿಕೆಯಿಂದಾಗಿರುತ್ತದೆ.”

ಶೇಕಡಾ 91%ರಷ್ಟು ಸ್ನಾತಕ ವಿದ್ಯಾರ್ಥಿಗಳು ತಾವು ಉತ್ತಮ ಆರೋಗ್ಯ ಹೊಂದಿದ್ದೇವೆಂದು ಭಾವಿಸಿದ್ದರೆ, ಕೇವಲ 7%ರಷ್ಟು ಮಂದಿ ಮಾತ್ರವೇ ಶಿಫಾರಸು ಮಾಡಲಾದ ಪ್ರಮಾಣದ ಹಣ್ಣು ತರಕಾರಿಗಳನ್ನು ಸೇವಿಸುತ್ತಿದ್ದರು.

ಪೋಷಣೆಶಾಸ್ತ್ರೀಯ ಶಿಕ್ಷಣವು ಉನ್ನತ ಶಿಕ್ಷಣದ ಪರಿಸರದಲ್ಲಿ ಉಪಯುಕ್ತ ಹಾಗೂ ಪ್ರಭಾವಿ ಕಾರ್ಯ ಮಾದರಿಯಾಗಿರುತ್ತದೆ.

ಪೋಷಣೆಶಾಸ್ತ್ರವನ್ನು ಒಳಗೊಂಡಿರುವ ಹೆಚ್ಚು “ಬದ್ಧತೆಯಿರುವ” ಕಲಿಕಾ ಮಾದರಿಗಳು ಕಲಿಕಾ ಆವರ್ತನದ ಎಲ್ಲಾ ಹಂತಗಳಲ್ಲಿಯೂ ಹೆಚ್ಚು ಆವೇಗವನ್ನು ಪಡೆದುಕೊಳ್ಳುತ್ತಿರುವ ಕಲ್ಪನೆಯಾಗಿದೆ.

ಅಪೌಷ್ಟಿಕತೆ ಎಂದರೆ ಏನು?
ಮಿತಿಮೀರಿ ತಿನ್ನುವಿಕೆಯು ಕೂಡಾ ಒಂದು ವಿಧದ ಅಪೌಷ್ಟಿಕತೆ

ಅಪೌಷ್ಟಿಕತೆಯ ಕುರಿತಾದ ಬಹಳ ಚರ್ಚೆಗಳು ಪೋಷಣೆಕೊರತೆಯಲ್ಲಿಯೇ ಗಮನ ಕೇಂದ್ರೀಕರಿಸಿದ್ದರೂ, ಮಿತಿಮೀರಿ ತಿನ್ನುವಿಕೆಯು ಕೂಡಾ ಒಂದು ವಿಧದ ಅಪೌಷ್ಟಿಕತೆಯಾಗಿದೆ. ಮಿತಿಮೀರಿ ತಿನ್ನುವಿಕೆಯು ಬಹುತೇಕ ಜನರಿಗೆ ಆಹಾರದ ಲಭ್ಯತೆಯು ಸಮಸ್ಯೆಯೇ ಅಲ್ಲದಿರುವ ಯುನೈಟೆಡ್‌ ಸ್ಟೇಟ್ಸ್‌‌ ನಲ್ಲಿ ಹೆಚ್ಚು ಸಾಧಾರಣ ವಿಷಯವಾಗಿದೆ. ಈ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿನ ಸಮಸ್ಯೆ ಎಂದರೆ ಸೂಕ್ತ ವಿಧವಾದ ಆಹಾರದ ಆಯ್ಕೆ. ಇತರೆ ಯಾವುದೇ ರಾಷ್ಟ್ರಕ್ಕೆ ಹೋಲಿಸಿದರೆ ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಸೇವಿಸುವ ತಲಾ ತ್ವರಿತ ಆಹಾರ/ಫಾಸ್ಟ್‌ ಫುಡ್‌‌ ಪ್ರಮಾಣ ಹೆಚ್ಚಿನದಾಗಿದೆ. ಈ ರೀತಿಯ ರಾಶಿ ಆಹಾರ ಸೇವನೆಗೆ ಕಾರಣವೆಂದರೆ ಅದನ್ನು ಪಡೆಯುವ ಶಕ್ತತೆ ಹಾಗೂ ಲಭ್ಯತೆ. ಅನೇಕ ವೇಳೆ ತ್ವರಿತ ಆಹಾರ/ಫಾಸ್ಟ್‌ ಫುಡ್‌‌, ವೆಚ್ಚದಲ್ಲಿ ಹಾಗೂ ಪೋಷಕಾಂಶಗಳಲ್ಲಿ ಕಡಿಮೆ ಮಟ್ಟದ್ದಾಗಿದ್ದು ಕ್ಯಾಲೊರಿಗಳ ಲೆಕ್ಕದಲ್ಲಿ ಹೆಚ್ಚಿನದಾಗಿದ್ದರೂ ಹೆಚ್ಚು ಪ್ರೋತ್ಸಾಹ ಪಡೆದಿರುತ್ತದೆ. ಈ ರೀತಿಯ ಆಹಾರ ಸೇವನೆ ಅಭ್ಯಾ/ಹವ್ಯಾಸಗಳು ಹೆಚ್ಚು ನಗರೀಕೃತ, ಸ್ವಯಂಚಾಲಿತ ಹಾಗೂ ಹೆಚ್ಚು ಕುಳಿತುಕೊಂಡಿರುವ ಜೀವನಶೈಲಿಯೊಂದಿಗೆ ಸೇರಿಕೊಂಡಾಗ, ತೂಕ ಹೆಚ್ಚುವುದನ್ನು ಕಡಿಮೆ ಮಾಡಿಕೊಳ್ಳುವುದು ಏಕೆ ಕಷ್ಟ ಎಂಬುದು ಸ್ಪಷ್ಟವಾಗುತ್ತದೆ. ಆದಾಗ್ಯೂ, ಮಿತಿಮೀರಿ ತಿನ್ನುವಿಕೆಯು ಹಸಿವು ಹಾಗೂ ಬಡತನಗಳು ಬೇರೂರಿರುವ ರಾಷ್ಟ್ರಗಳಲ್ಲಿಯೂ ಸಮಸ್ಯೆಯಾಗಿಯೇ ಇದೆ. ಚೀನಾದಲ್ಲಿ ಅಧಿಕ-ಕೊಬ್ಬಿನ ಆಹಾರ ಸೇವನೆಯು ಹೆಚ್ಚಿ ಅಕ್ಕಿ ಹಾಗೂ ಇನ್ನಿತರ ಸಾಮಗ್ರಿಗಳ ಸೇವನೆಯು ಇಳಿಕೆ ಕಂಡಿದೆ. ಮಿತಿಮೀರಿ ತಿನ್ನುವಿಕೆ ಹಾಗೂ ಹಸಿವುಗಳೆರಡೂ ವಿಶ್ವದ ಯಾವ ಭಾಗದಲ್ಲಿ ನೀವಿದ್ದೀರೆಂಬುದರ ಮೇಲೆ ಅವಲಂಬಿತವಾಗಿ ಸಮಾನವಾಗಿ ಗಂಭೀರ ಸಮಸ್ಯೆಗಳಾಗಿವೆ. ಮಿತಿಮೀರಿ ತಿನ್ನುವಿಕೆಯು ಹೃದಯ ಕಾಯಿಲೆ ಹಾಗೂ ಮಧುಮೇಹ/ಸಿಹಿಮೂತ್ರರೋಗದಂತಹಾ ಸಾವಿಗೆ ಕಾರಣವಾಗುವ ಅನೇಕ ಕಾಯಿಲೆಗಳಿಗೆ ದಾರಿ ಮಾಡುತ್ತದೆ. ಮಿತಿಮೀರಿ ತಿನ್ನುವಿಕೆಯ ಈ ಸಮಸ್ಯೆಯನ್ನು ಸರಿಪಡಿಸಲು, ಆರೋಗ್ಯಪಾಲನೆಯಲ್ಲಿ ಸ್ಥೂಲಕಾಯತೆ/ಬೊಜ್ಜನ್ನು ಒಂದು ಕಾಯಿಲೆಯಂತೆ ಪರಿಗಣಿಸಿ ಅದರಲ್ಲಿ ತೂಕಇಳಿಯುವಿಕೆ ಮುಂತಾದ ಪೋಷಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿರುತ್ತದೆ. ಈ ಬಗ್ಗೆಯ ಒಂದು ಪ್ರೋತ್ಸಾಹದಾಯಕ ಹೆಜ್ಜೆ ಎಂದರೆ ಒಬಾಮಾರು ಆರಂಭಿಸಿರುವ ಹೃದಯರೋಗವನ್ನು ಹೊಂದಿರುವ ರೋಗಿಗಳಿಗೆ ಮುಂದಿನ ತಿಂಗಳುಗಳು ಅಥವಾ ವರ್ಷಗಳ ಅವಧಿಯಲ್ಲಿ ಅಗತ್ಯವಾಗಬಹುದಾದ ವೆಚ್ಚದಾಯಕ ಔಷಧಿಗಳು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಅನವಶ್ಯಕಗೊಳಿಸಬಹುದೆಂದು ಆಶಿಸಿರುವ ತೀವ್ರ ಆಹಾರ ಸೇವನೆ ಹಾಗೂ ಜೀವನಶೈಲಿ ಬದಲಾವಣೆ ಯೋಜನೆ. ಉದ್ಯಮವು ಕೈಗೊಳ್ಳಬಹುದಾದ ತಾರ್ಕಿಕ ಮುಂದಿನ ಕ್ರಮವೆಂದರೆ ನಿಯತ ಹಲ್ಲಿನ ತಪಾಸಣೆಗೆ ಸದೃಶವಾದ ಪೋಷಕಾಂಶಗಳ ತಪಾಸಣೆಗಳನ್ನು ಮೂಲಭೂತ ವಿಮಾ ವ್ಯಾಪ್ತಿಗೆ ಸೇರಿಸಿಕೊಳ್ಳುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗಾಳಿಮರ

ಮಣ್ಣಿನ ಸಾರವನ್ನು ಹೆಚ್ಚಿಸುತ್ತದೆ ಗಾಳಿಮರ

ಸೋಂಪು

ಆರೋಗ್ಯ ಗುಣವನ್ನು ಹೊಂದಿರುವ ಸೋಂಪು