in

ಗುಂಗುರು ಕೂದಲಿನ ಆರೈಕೆ ಹೇಗೆ?

ಗುಂಗುರು ಕೂದಲಿನ ಆರೈಕೆ
ಗುಂಗುರು ಕೂದಲಿನ ಆರೈಕೆ

ಗುಂಗುರು ಕೂದಲಿನ ಆರೈಕೆ ನೇರವಾದ ಕೂದಲಿನ ಆರೈಕೆಯಂತಲ್ಲ. ಇದು ಕಷ್ಟದ ಕೆಲಸ. ಇದಕ್ಕೆ ಗುಂಗುರು ಕೂದಲಿನ ಬಗ್ಗೆ ಸರಿಯಾಗಿ ತಿಳಿದಿರುವುದು ಅಗತ್ಯ. ಹೀಗೆ ಮಾಡಿದರೆ ಆರೋಗ್ಯದ ಜೊತೆಗೆ ಕೂದಲಿನ ಅಂದ ಕೂಡ ಹೆಚ್ಚಾಗುತ್ತದೆ. ಗುಂಗುರು ಕೂದಲಿನ ಬೆಡಗಿಯರಲ್ಲಿ ಏನೋ ಒಂಥರಾ ವಿಶೇಷ ಲುಕ್ ಇರುತ್ತದೆ. ಎಲ್ಲೆರೆದುರು ಅವರು ಎದ್ದು ಕಾಣುತ್ತಾರೆ. ಅಲ್ಲದೇ ಸ್ಟೈಲಿಶ್ ಆಗಿಯೂ ಕಾಣುತ್ತಾರೆ.

ಗುಂಗುರು ಕೂದಲು ಒಡೆಯುವಿಕೆ, ಸಿಕ್ಕಾಗುವುದು, ಕೂದಲಿನ ತುದಿ ಒಡೆಯುವುದು ಈ ಪರಿಣಾಮಗಳಿಗೆ ಒಳಗಾಗುತ್ತದೆ. ನೀವು ಗುಂಗುರು ಕೂದಲನ್ನು ಹೊಂದಿದ್ದರೆ, ಸಾಮಾನ್ಯ ರೀತಿಯಲ್ಲಿ ಕೂದಲು ತೊಳೆದರೂ ಅದನ್ನು ನಿರ್ವಹಿಸುವುದು ಕಷ್ಟ.

ಪ್ರತಿಯೊಬ್ಬರ ಕೂದಲು ಹಾಗೂ ಚರ್ಮದ ವಿನ್ಯಾಸವು ಭಿನ್ನವಾಗಿರುತ್ತದೆ. ಅವುಗಳನ್ನು ಪರಿಪೂರ್ಣವಾದ ಆರೈಕೆ ಮಾಡುವುದರ ಜೊತೆಗೆ ಪೋಷಣೆ ಮಾಡಿಕೊಳ್ಳಬೇಕು. ಮಾನವರಾದ ನಮಗೆ ನಮ್ಮಲ್ಲಿ ಇರುವ ಚರ್ಮ ಹಾಗೂ ಕೂದಲ ವಿನ್ಯಾಸಕ್ಕಿಂತ ಬೇರೆಯವರ ಕೂದಲು ಹಾಗೂ ಚರ್ಮದ ವಿನ್ಯಾಸವು ಇಷ್ಟವಾಗುತ್ತದೆ.

ಗುಂಗುರು ಕೂದಲು ಇದ್ದರೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಖಂಡಿತ ಇರುತ್ತದೆ. 

ಗುಂಗುರು ಕೂದಲಿನ ಆರೈಕೆ ಹೇಗೆ?
ಎಣ್ಣೆ ಉಪಯೋಗಿಸಿ

ನೇರವಾದ ಎಣ್ಣೆಗಿಂತ ಬೇಗನೆ ಗುಂಗುರು ಕೂದಲು ಒಣಗುವ ಕಾರಣ ಇವುಗಳಿಗೆ ಹೆಚ್ಚಿನ ಎಣ್ಣೆಯ ಅಗತ್ಯ ಇದೆ. ಇದಕ್ಕೆ ಕಾರಣ ಗುಂಗುರು ಆಕಾರ ಕೂದಲಿನ ಬುಡದಲ್ಲಿರುವ ಸ್ವಾಭಾವಿಕ ಎಣ್ಣೆಯ ಅಂಶವನ್ನು ಕೂದಲಿನ ತುದಿಯ ತನಕ ಬರಲು ಬಿಡುವುದಿಲ್ಲ. ಒಣ ಕೂದಲು ಯಾವತ್ತೂ ಆರೋಗ್ಯಕರವಲ್ಲ. ಇದು ಬಲಹೀನವಾಗಿರುತ್ತದೆ. ಇದಕ್ಕಾಗಿ ಆಲೀವ್ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಇನ್ನಿತರ ಸ್ವಾಭಾವಿಕ ಎಣ್ಣೆಗಳನ್ನು ಹಚ್ಚಬಹುದು.

ಗುಂಗುರು ಕೂದಲಿಗೆ ಅತಿಯಾಗಿ ಶಾಂಪೂವನ್ನು ಬಳಸಬೇಡಿ. ಇದರಿಂದ ಕೂದಲು ಒಣಗಿ ನಿರ್ಜೀವವಾಗುತ್ತದೆ. ಶಾಂಪೂ ಕೂದಲಿನ ನೈಸರ್ಗಿಕ ತೇವಾಂಶವನ್ನು ನಾಶ ಮಾಡುತ್ತದೆ. ಹಾಗಾಗಿ ತೇವಾಂಶವನ್ನು ಹೆಚ್ಚಿಸುವ ಶಾಂಪೂವನ್ನು ಬಳಸಿ.

ವಾರಕ್ಕೊಮ್ಮೆ ಕೂದಲನ್ನು ತೊಳೆಯುವುದು ಉತ್ತಮ. ಆದರೆ ನಿಮ್ಮ ಕೂದಲು ಕೊಳಕು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಂಡರೆ ವಾರಕ್ಕೆ ಎರಡು ಬಾರಿ ಕೂದಲನ್ನು ತೊಳೆಯುವುದು ಒಳ್ಳೆಯದು ಅಥವಾ ತೊಳೆಯಬೇಕೆಂದು ಅನ್ನಿಸಿದರೆ ಅಥವಾ ಅಗತ್ಯವಿದ್ದರೆ ತೊಳೆಯಬಹುದು.

ಕೂದಲಿನ ಆರೋಗ್ಯದ ದೃಷ್ಟಿಯಿಂದ ಸ್ವಾಭಾವಿಕ ವಸ್ತುಗಳು ಉತ್ತಮ. ಎಂಟು ಚಮಚ ಕೆಮೆಲಿಯಾ ಎಣ್ಣೆ, ಒಂದು ಚಮಚ ಹರಳೆಣ್ಣೆ ಹಾಗೂ ಸಂಸ್ಕರಿಸದ ಅವಕಾಡೊ ಎಣ್ಣೆಯನ್ನು ಒಂದು ಬಾಟಲಿಯಲ್ಲಿ ಹಾಕಿ ಮಿಶ್ರಣ ಮಾಡಿ. ಇದನ್ನುನಿಯಮಿತವಾಗಿ ಬಳಸಿ ಮತ್ತು ನುಣುಪಾದ ಮತ್ತು ಆಕರ್ಷಕ ಕೂದಲನ್ನು ಪಡೆಯಿರಿ.

ತುಂಬಾ ತೆಳ್ಳಗಿನ ಗುಂಗುರು ಕೂದಲನ್ನು ಹೊಂದಿದ್ದರೆ, ದಿನ ಬಿಟ್ಟು ದಿನಕ್ಕೆ ನಿಮ್ಮ ಕೂದಲನ್ನು ತೊಳೆಯಿರಿ ಏಕೆಂದರೆ ಇಂತಹ ಕೂದಲು ಆಗಾಗ್ಗೆ ಕೊಳಕು ಆಗುತ್ತದೆ ಮತ್ತು ಎಣ್ಣೆಯನ್ನು ತ್ವರಿತವಾಗಿ ಪಸರಿಸುತ್ತದೆ, ಕೂದಲು ಜಿಡ್ದುಗಟ್ಟುತ್ತದೆ.

ಗುಂಗುರು ಕೂದಲು ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ನೇರವಾದ ವಿನ್ಯಾಸದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಕೆಲವರು ಕೂದಲನ್ನು ಕೆಲವು ಚಿಕಿತ್ಸೆಗೆ ಒಳಪಡಿಸಿ, ಕೂದಲನ್ನು ನೇರವಾದ ವಿನ್ಯಸಕ್ಕೆ ಬದಲಿಸಿಕೊಳ್ಳುವರು. ಆದರೆ ಈ ಕ್ರಿಯೆ ಕೂದಲಿನ ಆರೋಗ್ಯವನ್ನು ಹಾಳು ಮಾಡುವುದು. ಗುಂಗುರು ಕೂದಲು ಸಾಮಾನ್ಯವಾಗಿ ಬಹುಬೇಗ ತೇವಾಂಶ ಹಾಗೂ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಕೂದಲಿಗೆ ಆರೋಗ್ಯಕರವಾದ ಲೇಪನ, ಸಾರಭೂತ ಎಣ್ಣೆಯ ಆರೈಕೆ ಮಾಡಿ. ಕೂದಲನ್ನು ತೊಳೆದಾಗ ಸ್ವಲ್ಪ ನೀರಿನಂಶ ಇನ್ನೂ ಇದೆ ಎನ್ನುವಾಗ ಕೂದಲನ್ನು ಬಾಚಿಕೊಳ್ಳಿ. ಆಗ ಕೂದಲು ಸ್ವಲ್ಪ ನೇರವಾದ ವಿನ್ಯಾಸಕ್ಕೆ ತಿರುಗಿಕೊಳ್ಳುತ್ತದೆ.

ಗುಂಗುರು ಕೂದಲಿನ ಆರೈಕೆ ಹೇಗೆ?
ಅತಿಯಾದ ವಿನ್ಯಾಸಗಳು ಕೂದಲನ್ನು ಹಾನಿಗೊಳಿಸುತ್ತದೆ

ಆದಷ್ಟೂ ಕಡಿಮೆ ಶಾಂಪೂ ಬಳಸಿ. ಶಾಂಪೂವಿನ ಅಂಶ ನಮ್ಮ ಗುಂಗುರು ಕೂದಲಿನ ನಡುವೆ ಸಿಕ್ಕಿ ಇದು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ಸ್ವಾಭಾವಿಕವಾದ ದಾರಿಗಳಿಂದ ಕೂದಲಿನ ಸ್ವಚ್ಛತೆಗೆ ಮುಂದಾಗಿ.

ಹೆಚ್ಚು ನೀರು ಸೇವನೆ ಹಾಗೂ ಕೂದಲ ಆರೈಕೆಗೆ ವಿಶೇಷ ಕ್ರಮಗಳನ್ನು ಅನುಸರಿಸಬೇಕು. ಮೃದುವಾದ ಶಾಂಪೂ, ಕಂಡೀಷನರ್‍ಗಳನ್ನು ಬಳಸುವುದರ ಮೂಲಕ ಕೂದಲನ್ನು ಸ್ವಚ್ಛಗೊಳಿಸಿ, ಮೃದುವಾಗಿ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವನೆ ಹಾಗೂ ಕೆಲವು ಮನೆ ಆರೈಕೆಯ ಲೇಪನಗಳನ್ನು ಅನ್ವಯಿಸಿಕೊಳ್ಳುವುದರ ಮೂಲಕ ಕೂದಲಿನ ಸಾಂದ್ರತೆ ಮತ್ತು ವಿನ್ಯಾಸವನ್ನು ಕಾಯ್ದುಕೊಳ್ಳಬೇಕು.

ಕಂಡೀಷನರ್ ಗುಂಗುರು ಕೂದಲಿಗೆ ಖಂಡಿತವಾಗಿ ಬೇಕಾಗುತ್ತದೆ. ಇಲದಿದ್ದಲ್ಲಿ ಕೂದಲು ಅಂದವಾಗಿಯೂ ಕಾಣುವುದಿಲ್ಲ ನೆತ್ತಿ ಆರೋಗ್ಯವೂ ಸರಿಯಾಗಿರುವುದಿಲ್ಲ. ಇದಕ್ಕಾಗಿ ಸ್ವಾಭಾವಿಕವಾಗಿರುವ ಕೆಲವು ವಸ್ತುಗಳೆಂದರೆ ಜೇನುತುಪ್ಪ, ಮೊಟ್ಟೆಗಳು, ಸೇಬು ಹಣ್ಣಿನಿಂದ ಮಾಡಿದ ವಿನೆಗರ್, ಚಹಾ ಮುಂತಾದವುಗಳನ್ನು ಬಳಕೆ ಮಾಡಬಹುದು.

ಗುಂಗುರು ಕೂದಲಿನ ಆರೈಕೆ ಹೇಗೆ?
ದೊಡ್ಡ ಹಲ್ಲಿನ ಬಾಚಣಿಗೆಯನ್ನೇ ಆರಿಸಿಕೊಳ್ಳಿ

ಗುಂಗುರು ಕೂದಲನ್ನು ಬಾಚಲು ಯಾವತ್ತೂ ಬ್ರಷ್ ಅನ್ನು ಬಳಸಬೇಡಿ. ಇದು ಕೂದಲನ್ನು ಹಾನಿಗೊಳಿಸುತ್ತದೆ, ಹಾಗಾಗಿ ಕೂದಲನ್ನು ತೊಳೆದ ನಂತರ ಅದರ ಸಿಕ್ಕುಗಳನ್ನು ಬೆರಳುಗಳಿಂದ ಬಿಡಿಸಿಕೊಳ್ಳಿ. ಶಾಂಪೂ ಮಾಡುವ ಮೊದಲು ಕೂದಲಿಗೆ ಬಾಚಣಿಗೆಯನ್ನು ಬಳಸಿ ಬಾಚಿಕೊಳ್ಳಿ.

ಬಾಚಣಿಗೆಯ ಬಗ್ಗೆಯೂ ಬಹಳಷ್ಟು ಜಾಗೃತೆ ವಹಿಸಬೇಕಾಗುತ್ತದೆ. ದೊಡ್ಡ ಹಲ್ಲಿನ ಬಾಚಣಿಗೆಯನ್ನೇ ಆರಿಸಿಕೊಳ್ಳಿ. ಇದು ಕೂದಲಲ್ಲಿ ಸಿಕ್ಕಿಹಾಕಿಕೊಂಡು ಕೂದಲನ್ನು ಉದುರಿಸುವ ಹಾಗೆ ಇರಬಾರದು.

ಕೂದಲಿಗೆ ಹೀಟರ್, ಹೇರ್ ಸ್ಟ್ರೈಟರ್ ಗಳನ್ನು ಬಳಸಬೇಡಿ. ಇದರಿಂದ ಕೂದಲಿನ ಬುಡಕ್ಕೆ ಹಾನಿಯಾಗಿ ಕೂದಲು ಉದುರುತ್ತದೆ. ಹಾಗೇ ಗುಂಗುರು ಕೂದಲಿಗೆ ಹೇರ್ ಸ್ಪ್ರೇಗಳನ್ನು ಬಳಸಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿತ್ರರಂಗದಲ್ಲಿ "ಅಮ್ಮ" ಎಂದೇ ಖ್ಯಾತಿ ಪಡೆದಿರುವ ಪಂಡರೀಬಾಯಿಯವರ ಜನ್ಮದಿನ

ಜನವರಿ 29, ಚಿತ್ರರಂಗದಲ್ಲಿ “ಅಮ್ಮ” ಎಂದೇ ಖ್ಯಾತಿ ಪಡೆದಿರುವ ಪಂಡರೀಬಾಯಿಯವರ ಜನ್ಮದಿನ

ಗೋದಾವರಿ ಘಟ್ಟ

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು