in

ಹಠಾತ್ ಹೃದಯ ಸಾವು : ಹೃದಯ ಸ್ತಂಭನ

ಹೃದಯ ಸ್ತಂಭನ
ಹೃದಯ ಸ್ತಂಭನ

ಹೃದಯ ಸ್ತಂಭನ, ಇದನ್ನು ಶ್ವಾಸಕೋಶದ ಶುದ್ಧ ರಕ್ತನಾಳ ಸ್ತಂಭನ ಅಥವಾ ರಕ್ತಪರಿಚಲನೆ ಸ್ತಂಭನ ಎಂದೂ ಗುರುತಿಸಲಾಗುತ್ತದೆ ಎಂಬುದು ಕ್ರಮಬದ್ಧವಾದ ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಮತ್ತು ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಅಥವಾ ಎಸ್‌ಸಿಎ ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನವು ಹೃದಯಾಘತಕ್ಕಿಂತ ಭಿನ್ನವಾಗಿದ್ದು, ಆದರೆ ಹೃದಯಾಘಾತಕ್ಕೆ ಕಾರಣವೂ ಆಗಬಹುದು, ಹೃದಯದ ಸ್ನಾಯುಭಾಗದಲ್ಲಿನ ರಕ್ತಸಂಚಾರದ ಏರಿಳಿತವು ದುರ್ಬಲವಾಗುತ್ತದೆ. ರಕ್ತಸಂಚಾರದಲ್ಲಿ ಸ್ತಂಭನವಾದಾಗ ದೇಹಕ್ಕೆ ಆಮ್ಲಜನಕವು ಸರಬರಾಜಾಗುವುದನ್ನು ತಡೆಯುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಿಕ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾಗಿ ಪ್ರಜ್ಞೆ ಹೋಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಉಸಿರಾಟ ಪ್ರಮಾಣವು ಹೆಚ್ಚಾಗುತ್ತದೆ ಅಥವಾ ನಿಲ್ಲುತ್ತದೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಬ್ರೈನ್ ಇಂಜುರಿ, ಮೈದುಳು ನಿಷ್ಕ್ರಿಯವಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಆ ರೋಗಕ್ಕೆ ತುತ್ತಾದವರನ್ನು ಬದುಕಿಸಲು ಮತ್ತು ನರಶಾಸ್ತ್ರೀಯ ಗುಣಮುಖಕ್ಕೆ ತಕ್ಷಣದ ಮತ್ತು ನಿರ್ಧಿಷ್ಟವಾದ ಚಿಕಿತ್ಸೆ ಅತಿ ಅವಶ್ಯಕವಾಗಿದೆ. ಹೃದಯ ಸ್ತಂಭನವು ತುರ್ತು ವೈದ್ಯಕೀಯ ರೋಗವಾಗಿದ್ದು, ಕೆಲವು ಸಂದರ್ಭದಲ್ಲಿ ಮುಂಚೆಯೇ ಇದಕ್ಕೆ ಚಿಕಿತ್ಸೆ ನೀಡುವುದರಿಂದ ಸಾಮರ್ಥ್ಯದಲ್ಲಿ ಹಿಂದೆಮುಂದೆ ಆಗುವ ಸಾಧ್ಯತೆಗಳಿರುತ್ತದೆ. ಅನಿರೀಕ್ಷಿತವಾಗಿ ಹೃದಯ ಸ್ತಂಭನ ಉಂಟಾಗಿ ಸಾವು ಸಂಭವಿಸಿದರೆ, ಅದನ್ನು ಸಡನ್ ಕಾರ್ಡಿಯಾಕ್ ಡೆತ್ (ಎಸ್ ಸಿ ಡಿ) ಅನಿರೀಕ್ಷಿತ ಹೃದಯ ಸಾವು ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನಕ್ಕೆ ಚಿಕಿತ್ಸೆಯೆಂದರೆ ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧರಕ್ತನಾಳವು (ಕಾರ್ಡಿಯೋಪಲ್ಮೋನರಿ ರೆಸಸಿಟೇಶನ್) ಗಾಬಿರಯುತ ಹೃದಯ ಬಡಿತ ಅಥವಾ ಕಂಪನವನ್ನು ಅನುಸರಿಸಿದರೆ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧ ರಕ್ತನಾಳ ಮತ್ತು ಕೆಲ ಅಂಶಗಳ ಮಧ್ಯಪ್ರವೇಶದಿಂದ ಒಂದು ವೇಳೆ ಗಾಬರಿಯುತ ಹೃದಯ ಕಂಪನವು ಆ ಕ್ಷಣದಲ್ಲಿ ಇಲ್ಲದೇ ಹೋದಲ್ಲಿ ವೈದ್ಯಕೀಯ ಮೃತ್ಯು ಅನಿವಾರ್ಯವಾಗುತ್ತದೆ.

ಹೃದಯಕ್ಕೆ ರಕ್ತಒದಗಿಸುವ ರಕ್ತನಾಳಕ್ಕೆ ಸಂಬಂಧಿಸಿದ ರೋಗವು ದಿಢೀರ್ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣವಾಗಬಹುದು. ಕೆಲವು ಹೃದಯ ಸಂದಂಧಿ ಮತ್ತು ಹೃದಯೇತರ ಆರೋಗ್ಯ ಸ್ಥಿತಿಯೂ ತೊಂದರೆಯನ್ನು ಹೆಚ್ಚು ಮಾಡುತ್ತದೆ.

ಹೃದಯಕ್ಕೆ ಸಂಬಂಧಿಸಿದ ರಕ್ತನಾಳ ರೋಗ

ಹಠಾತ್ ಹೃದಯ ಸಾವು : ಹೃದಯ ಸ್ತಂಭನ
ಹೃದಯ ಸಂದಂಧಿ ಮತ್ತು ಹೃದಯೇತರ ಆರೋಗ್ಯ ಸ್ಥಿತಿ

ಅಂದಾಜಿನಂತೆ 60ರಿಂದ 70 ಪ್ರತಿಶತದಷ್ಟು ಎಸ್ ಸಿ ಡಿ ಹಠಾತ್ ಹೃದಯ ಸಾವು ಹೃದಯಕ್ಕೆ ಸಂಬಂಧಿಸಿದ ರಕ್ತನಾಳದಿಂದ ಉಂಟಾಗುವ ರೋಗದಿಂದ ಸಂಭವಿಸುತ್ತದೆ. ವಯಸ್ಕರಲ್ಲಿ ಹೃದಯಕ್ಕೆ ರಕ್ತಕೊರತೆಯ ರೋಗವು ಹೃದಯಸ್ತಂಭನಕ್ಕೆ ಪ್ರಬಲವಾದ ಕಾರಣವಾಗಿದೆ. ಶೇಕಡಾ 30ರಷ್ಟು ಜನರ ಶವಪರೀಕ್ಷೆ ವೇಳೆ ಅವರ ಹೃದಯದ ಸ್ನಾಯುವಿನ ಊತಕ ಸತ್ತುಹೋಗಿರುವ ಕರುಹು ಕಾಣಸಿಗುತ್ತದೆ.

ರಕ್ತಕೊರತೆ ಇಲ್ಲದ ಹೃದ್ರೋಗ

ಹಲವು ಸಂಖ್ಯೆಯ ಹೃದಯ ಸಂಬಂಧೀ ವೈಪರಿತ್ಯಗಳಿಂದಾಗಿ ಎಸ್ ಸಿ ಡಿ, ಹಠಾತ್ ಹೃದಯ ಸಾವು ತೊಂದರೆ ಹೆಚ್ಚಾಗುತ್ತದೆ. ಇದು ಕಾರ್ಡಿಯೋಮ್ಯೂಪತಿ, ಹೃದಯ ಬಡಿತದಲ್ಲಿ ಅಡಚಣೆ, ಹೃದಯದ ಅಧಿಕ ರಕ್ತದೊತ್ತಡ ರೋಗ, ರಕ್ತಸಂಚಾರದಿಂದಾದ ಹೃದಯ ವೈಫಲ್ಯವನ್ನು ಒಳಗೊಂಡಿದೆ. ಮಿಲಟರಿಯಲ್ಲಿರುವ 18ರಿಂದ 35 ವಯಸ್ಸಿನ ಅನನುಭವಿ ಸೈನಿಕರ ಗುಂಪಿನಲ್ಲಿ, ಹೃದಯ ಅಸಮತೋಲನತೆಯ ಶೇಕಡಾ 51ರಷ್ಟು ಎಸ್ ಸಿ ಡಿ ಪ್ರಕರಣವು ಸಿಗುತ್ತದೆ. ಇದರಲ್ಲಿ ಶೇಕಡಾ 35 ರಷ್ಟು ಪ್ರಕರಣಗಳ ಕಾರಣಗಳು ತಿಳಿಯುವುದಿಲ್ಲ. ರೋಗಶಾಸ್ತ್ರದ ಆಧಾರದ ಮೇಲೆ ಹೃದಯದ ಅಪಧಮನಿ, ಹೃದಯದಿಂದ ಇತರ ಭಾಗಗಳಿಗೆ ರಕ್ತ ಒಯ್ಯುವ ನಾಳ ವೈಪರೀತ್ಯವು (ಶೇಕಡಾ 61), ಹೃದಯ ಸ್ನಾಯುವಿನ ಉರಿಯೂತ (ಶೇಕಡಾ 20), ಮತ್ತು ಅತಿಯಾಗಿ ಬೆಳೆದ ಕಾರ್ಡಿಯೋಮ್ಯೋಪಥಿ ಅವಯವ (ಶೇಕಡಾ 13) ಇರುತ್ತದೆ ಎಂದು ಹೇಳಲಾಗಿದೆ. ರಕ್ತದೊತ್ತಡದ ಹೃದಯ ವೈಫಲ್ಯವು ಎಸ್ ಸಿ ಡಿ ತೊಂದರೆಯನ್ನು ಐದು ಪಟ್ಟು ಹೆಚ್ಚಾಗಿಸುತ್ತದೆ.

ಹೃದಯನಾಳೇತರ ಸಮಸ್ಯೆಗಳು

ಹಠಾತ್ ಹೃದಯ ಸಾವು ಶೇಕಡಾ 33ರಷ್ಟು ಪ್ರಕರಣಗಳಲ್ಲಿ ಹೃದಯ ತೊಂದರೆಗೆ ಸಂಬಂಧಿಸಿದ್ದಾಗಿರುವುದಿಲ್ಲ. ಹೃದ್ರೋಗವಲ್ಲದ ಮುಖ್ಯವಾದ ಸಾಮಾನ್ಯ ಕಾರಣಗಳೆಂದರೆ, ಮಾನಸಿಕ ಅಥವಾ ದೈಹಿಕ ಆಘಾತ (ಗಾಯ), ದೈಹಿಕ ಗಾಯಕ್ಕೆ ಸಂಬಂಧಿಸಲ್ಲದ ರಕ್ತಸ್ರಾವ (ಅವುಗಳೆಂದರೆ ಕರುಳಿನಭಾಗದಲ್ಲಿನ ರಕ್ತಸ್ರಾವ, ಮಹಾಪಧಮನಿ ಬಿರುಕಿನಿಂದ ಉಂಟಾದ ಊತ ಮತ್ತು ತಲೆಬುರುಡೆಯೊಳಗಿನ ಆಘಾತ, ಅತಿಯಾದ ಪ್ರಮಾಣದ ಔಷಧಿ ಸೇವನೆ, ರಕ್ತನಾಳದಲ್ಲಾಗುವ ಅಡಚನೆಯಿಂದ ಶ್ವಾಸಕೋಶದಲ್ಲಿ ತೊಂದರೆಯಾಗಿ ಉಸಿರುಗಟ್ಟುವುದು.

ಹಠಾತ್ ಹೃದಯ ಸಾವು : ಹೃದಯ ಸ್ತಂಭನ
ಶ್ವಾಸಕೋಶದಲ್ಲಿ ತೊಂದರೆಯಾಗಿ ಉಸಿರುಗಟ್ಟುವುದು

ಅಪಾಯಕಾರಿ ಅಂಶಗಳು
ಎಸ್‌ಸಿಡಿಗೆ ಅಪಾಯಕಾರಿ ಅಂಶಗಳು ಹೃದಯಕ್ಕೆ ಸಂಬಂಧಿಸಿದ ರಕ್ತನಾಳ ರೋಗಗಳ ಹಾಗೆ ಕಾಣುತ್ತವೆ, ಧೂಮಪಾನ, ದೈಹಿಕ ವ್ಯಾಯಾಮದ ಕೊರತೆ, ಸ್ಥೂಲಕಾಯತೆ, ಡಯಾಬಿಟಿಸ್, ಮತ್ತು ಕೌಟುಂಬಿಕ ಹಿನ್ನೆಲೆಗಳನ್ನು ಇದು ಒಳಗೊಂಡಿದೆ.

ಸಕಾರಾತ್ಮಕ ಪರಿಣಾಮದ ಜೊತೆಗೆ ಹೃದಯ ಸ್ತಂಭನದ ಸಂಭವನೀಯತೆಯ ನಂತರ, ಹೃದಯ ಸ್ತಂಭನವನ್ನು ತಡೆಗಟ್ಟಲು ಪರಿಣಾಮಕಾರಿ ವಿಧಾನವನ್ನು ಕಂಡುಹಿಡಿಯುವ ಪ್ರಯತ್ನ ನಡೆಯಿತು. ಹೃದಯ ಸ್ತಂಭನದ ಪ್ರಮುಖ ಕಾರಣವಾದ ಹೃದಯಕ್ಕೆ ರಕ್ತ ಕೊರತೆ ರೋಗಕ್ಕೆ, ಆರೋಗ್ಯಪೂರ್ಣ ಆಹಾರಪದ್ಧತಿಯ ಅಳವಡಿಕೆಯ ಪ್ರಯತ್ನ, ವ್ಯಾಯಾಮ, ಮತ್ತು ಧೂಮಪಾನದ ಸಮಾಪ್ತಿಗಳು ಮುಖ್ಯವಾಗಿವೆ.ಹೃದಯ ತೊಂದರೆಯ ಅಪಾಯದಲ್ಲಿರುವವರಿಗೆ, ರಕ್ತದೊತ್ತಡದ ನಿಯಂತ್ರಣ, ಕಡಿಮೆ ಕೊಲೆಸ್ಟರಾಲ್, ಮತ್ತು ಇತರ ವೈದ್ಯಕೀಯ-ನಿವಾರಣಾ ಕ್ರಮಗಳನ್ನು ಉಪಯೋಗಿಸಲಾಗುತ್ತದೆ.

ಆಸ್ಪತ್ರೆ ಹೊರಗಿನ ಹೃದಯ ಸ್ತಂಭನದಲ್ಲಿ ಬದುಕುಳಿದ ಪ್ರಮಾಣ ಕೆಟ್ಟದಾಗಿದೆ, ಸ್ಥಬ್ಧವಾದ ವಿದ್ಯುತ್ತಿನಂಥ ಚಟುವಟಿಕೆ ಅಥವಾ ಹೃದಯದ ಸಂಕೋಚನವಿಲ್ಲದೆ ಬಳಲುತ್ತಿರುವವರಿಗಿಂತ ಜನರು ಕುಕ್ಷಿಯ ಫಿಬ್ರಿಲೇಶನ್ ಅಥವಾ ಸ್ಥಬ್ದವಾದ ಕುಕ್ಷಿಯ ಹೃದಯಸ್ಪಂದನಾಧಿಕ್ಯ ದೊಂದಿಗೆ 10-15 ಪಟ್ಟು ಹೆಚ್ಚು ಬದುಕುವ ಅವಕಾಶ ಹೊಂದಿರುತ್ತಾರೆ. ಆದುದರಿಂದ ಒಎಚ್‌ಸಿಎ ಘಟನೆಯಲ್ಲಿ ಮರಣದ ಪ್ರಮಾಣ ಅಧಿಕ, ಬದುಕಿಸುವ ಪ್ರಮಾಣ ಹೆಚ್ಚಿಸುವಲ್ಲಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗಿದ್ದಾಗ್ಯೂ ಕುಕ್ಷಿಯ ಫಿಬ್ರಿಲೇಶನ್ ಘಟನೆಯಲ್ಲಿ ಮರಣದ ಪ್ರಮಾಣ ಹೆಚ್ಚು, ತ್ವರಿತವಾಗಿ ಡಿಫಿಬ್ರಿಲೇಶನ್‌ನೊಂದಿಗೆ ಮಧ್ಯಪ್ರವೇಶಿಸಿದರೆ ಬದುಕುವ ಪ್ರಮಾಣ ಹೆಚ್ಚಾಗುತ್ತದೆ. ನಿರ್ದಿಷ್ಟವಾಗಿ, ರೋಗಿಗಳು ಹೈಪೋಥೆರ್ಮಿಯಾದಿಂದ ಬಳಲುತ್ತಿದ್ದಾಗ ಬದುಕುಳಿಯುವ ಪ್ರಮಾಣ ಹೆಚ್ಚು, ಏಕೆಂದರೆ ಜೀವಕೋಶಕ್ಕೆ ಆಮ್ಲಜಲಕದ ಕೊರತೆಯ ಪ್ರಭಾವದಿಂದ ತಂಪು ಪ್ರಾಯಶಃ ಮುಖ್ಯವಾದ ಅಂಗಗಳನ್ನು ರಕ್ಷಿಸುತ್ತದೆ. ಟಾಕ್ಸಿನ್ ಗುರುತಿಸುವಿಕೆಯ ಮೇಲೆ ಟಾಕ್ಸಿನ್‌ಗಳು ಹೆಚ್ಚು ಅವಲಂಬಿತವಾಗಿದೆ ಮತ್ತು ಸೂಕ್ತವಾದ ಪ್ರತಿವಿಷ ಕೊಟ್ಟು ನಿರ್ವಹಿಸುವುದರಿಂದ ಸ್ತಂಭನದಿಂದ ಬದುಕುವ ಪ್ರಮಾಣವನ್ನು ಪ್ರಚೋದಿಸುತ್ತದೆ. ಮಯೋಕಾರ್ಡಿಯಲ್ ಮರಣದಿಂದ ಬಳಲುತ್ತಿರುವ ರೋಗಿಯ ಎಡ ಕರೊನರಿ ಅಪಧನಿಯಲ್ಲಿ ರಕ್ತ ಹೆಪ್ಪುಗಟ್ಟಿದಾಗ ಬದುಕುವ ಸಾಧ್ಯತೆ ಕಡಿಮೆ. ಆಸ್ಪತ್ರೆ ಹೊರಗಿನ ಹೃದಯ ಸ್ತಂಭನದದಿಂದ 14.6%ರಷ್ಟು ರೋಗಿಗಳು ಅಂಬ್ಯುಲೆನ್ಸ್ ಸಿಬ್ಬಂದಿ ತ್ವರಿತವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕಿದ್ದಾರೆ ಎಂದು ಬದುಕುಳಿದ ಪ್ರಮಾಣದ ಅಧ್ಯಯನ ತಿಳಿಸುತ್ತದೆ. 59% ರಷ್ಟು ದಾಖಲಾತಿ ಸಮಯದಲ್ಲಿ ,ಅರ್ಧದಷ್ಟು ಮೊದಲ 24 ಘಂಟೆಯೊಳಗಡೆ ಸಾವನ್ನಪ್ಪಿದ್ದಾರೆ, 46%ರಷ್ಟು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಬದುಕುಳಿದಿದ್ದಾರೆ. ಇದು ನಮಗೆ ಹೃದಯ ಸ್ತಂಭನದ ಸಂಪೂರ್ಣ 6.8% ಬದುಕಿದವರ ಮಾಹಿತಿ ನೀಡುತ್ತದೆ. ಈ 89% ಸಾಮಾನ್ಯ ಮಿದುಳು ಕಾರ್ಯಚಟುವಟಿಕೆ ಅಥವಾ ಲಘು ನರಶಾಸ್ತ್ರೀಯ ದೌರ್ಬಲ್ಯ ಹೊಂದಿರುತ್ತಾರೆ, 8.5% ಮಧ್ಯಮ ಪ್ರಮಾಣದಲ್ಲಿ ಹಾನಿಗೊಳಗಾಗಿರುತ್ತಾರೆ , ಮತ್ತು 2% ಗಂಬೀರವಾಗಿ ನರಶಾಸ್ತ್ರೀಯ ದೌರ್ಬಲ್ಯದಿಂದ ನರಳುತ್ತಾರೆ. ಇವರು ಆಸ್ಪತ್ರೆಯಿಂದ ಬಿಡುಗಡೆಯಾದವರು, 70% ಜನರು 4 ವರ್ಷದ ನಂತರವು ಬದುಕುಳಿದಿದ್ದಾರೆ. ಆಸ್ಪತ್ರೆಯಲ್ಲಿನ ಹೃದಯ ಸ್ತಂಭನ ಅನುಸರಿಸಿ ಮುನ್ಸೂಚನೆಯನ್ನು ಅವಲೋಕಿಸಿದಾಗ ಬದುಕುಳಿದು ಬಿಡುಗಡೆಯಾದವರು 14% ಹಾಗಿದ್ದರೂ ಅಧ್ಯಯನಗಳ ನಡುವೆ 0-28%ರಷ್ಟು ವ್ಯತ್ಯಾಸವಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಂಡಿ ದೇವಿ ದೇವಸ್ಥಾನ

ಹರಿದ್ವಾರದಲ್ಲಿರುವ ಚಂಡಿ ದೇವಿ

ಬೆವರುಸಾಲೆ

ಬೆವರುಸಾಲೆ ಮನೆಮದ್ದುಗಳು