in

ಬೆವರುಸಾಲೆ ಮನೆಮದ್ದುಗಳು

ಬೆವರುಸಾಲೆ
ಬೆವರುಸಾಲೆ

ಬೆವರುಸಾಲೆ ಒಂದು ಚರ್ಮರೋಗವಾಗಿದೆ. ಇದರಲ್ಲಿ ಚರ್ಮದ ಕೆಳಗೆ ತಡೆಯಲ್ಪಟ್ಟ ಬೆವರು ಗ್ರಂಥಿ ನಾಳಗಳಿಂದ ಸಿಲುಕಿಕೊಂಡ ಬೆವರಿನಿಂದ ಚಿಕ್ಕ, ತುರಿಕೆ ಬರಿಸುವ ದದ್ದುಗಳು ಕಾಣಿಸಿಕೊಳ್ಳುತ್ತವೆ. ಬೆವರುಸಾಲೆಯು ಉಷ್ಣವಲಯಗಳು ಹಾಗೂ ಬೇಸಿಗೆ ಋತುವಿನ ಅವಧಿಯಂತಹ ಬಿಸಿ ಹಾಗೂ ಆರ್ದ್ರ ಹವೆಯಲ್ಲಿ ಸಾಮಾನ್ಯ ಅಸ್ವಸ್ಥತೆಯಾಗಿದೆ. ಇದು ಎಲ್ಲ ವಯಸ್ಸಿನ ಜನರನ್ನು ಬಾಧಿಸುತ್ತದಾದರೂ, ಇದು ಚೆನ್ನಾಗಿ ವಿಕಾಸಗೊಳ್ಳದ ಬೆವರು ಗ್ರಂಥಿಗಳ ಕಾರಣದಿಂದ ವಿಶೇಷವಾಗಿ ಮಕ್ಕಳಲ್ಲಿ ಹಾಗೂ ಶಿಶುಗಳಲ್ಲಿ ಸಾಮಾನ್ಯವಾಗಿದೆ.

ಬೆವರುಸಾಲೆಯ ಲಕ್ಷಣಗಳಲ್ಲಿ ಉದ್ರೇಕಗೊಂಡ ಹಾಗೂ ತುರಿಕೆ ಉಂಟುಮಾಡುವ ಸಣ್ಣ ಕೆಂಪು ದದ್ದುಗಳು ಸೇರಿವೆ. ಇವು ಏಕಕಾಲದಲ್ಲಿ ಬಾಧಿತನ ದೇಹದ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಅತ್ಯಂತ ಸಾಮಾನ್ಯವಾದ ಭಾಗಗಳೆಂದರೆ ಎದೆಯ ಮೇಲ್ಭಾಗ, ಕುತ್ತಿಗೆ, ಮೊಣಕೈಯ ಮಡಿಕೆಗಳು, ಸ್ತನಗಳ ಕೆಳಗೆ ಹಾಗೂ ವೃಷಣ ಕೋಶದ ಕೆಳಗೆ.

ಬೆವರುಗುಳ್ಳೆಗೆ ಕಾರಣವೇನು?
ಚರ್ಮದ ರಂಧ್ರಗಳು ಯಾವಾಗಲೂ ತೆರೆದಿದ್ದು, ಜೀವಕೋಶಗಳ ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಚರ್ಮ ವಿಸರ್ಜಿಸುತ್ತದೆ. ಆದರೆ ವಾತಾವರಣದಲ್ಲಿಯ ಧಗೆಯ ಕಾರಣದಿಂದ ದೇಹ ಅತಿ ಹೆಚ್ಚು ಬೆವರನ್ನು ಹೊರಚೆಲ್ಲುತ್ತದೆ. ಆದರೆ, ಬೆವರಿನೊಂದಿಗೆ ಬರುವ ಎಣ್ಣೆಯಂಶ ಅಥವಾ ಬ್ಯಾಕ್ಟೇರಿಯಾ ಚರ್ಮದ ರಂಧ್ರಗಳಿಂದ ಸರಾಗವಾಗಿ ಕಲ್ಮಶಗಳು ಹೊರಬಾರದಂತೆ ತಡೆಒಡ್ಡುತ್ತವೆ. ಬ್ಯಾಕ್ಟೇರಿಯಾಗಳು ಚರ್ಮದ ರಂಧ್ರಗಳ ಮೇಲೇಯೇ ಕುಳಿತು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಇದೇ ಕಾರಣಕ್ಕೇ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಸೂರ್ಯೋದಯಕ್ಕೂ ಮುನ್ನ ಏಳಿ. ತಂಪಾದ ಮುಂಜಾನೆ ಸರ್ವರೋಗಕ್ಕೂ ಮದ್ದಂತೆ!
ಬೆಳಿಗ್ಗೆ ಮತ್ತು ರಾತ್ರಿ ತಣ್ಣೀರಿನ ಅಥವಾ ಉಗುರು ಬೆಚ್ಚಗಿನ ನೀರಿನ ಸ್ನಾನ. ಹೆಚ್ಚು ಬೆವರುವ ಕಂಕುಳು, ಕುತ್ತಿಗೆ, ತೊಡೆ ಸಂಧಿ, ದೇಹದ ಹಿಂಭಾಗ, ಮೊಣಕಾಲ ಸಂಧಿ, ಬೆರಳು ಸಂಧಿ ಗಳನ್ನು ಮೆಲುವಾಗಿ ತಿಕ್ಕಿ ಸ್ನಾನ ಮಾಡಿ.

ರಾಸಾಯನಿಕ ಸೋಪಿನ ಬದಲು ಕಡಲೆಹಿಟ್ಟು, ಅರಿಶಿನ, ಮೆಂತ್ಯ, ಹೆಸರುಕಾಳಿನ ಪುಡಿ, ಕಹಿಬೇವು, ಶ್ರೀಗಂಧ, ಆಯುರ್ವೇದ ಸೋಪು ಇತ್ಯಾದಿಗಳನ್ನು ಬಳಸಿ.
ಬಿಸಿ ಕುದಿಸಿ ಆರಿಸಿದ ತಣ್ಣಗಿನ ನೀರನ್ನು ಕುಡಿಯುತ್ತ ಇರಿ. ದಿನದಲ್ಲಿ ಕನಿಷ್ಠ ೩-೫ ಲೀಟರ್ ನೀರು ಅವಶ್ಯ. ಮಣ್ಣಿನ ಹೂಜಿಯಲ್ಲಿಟ್ಟ ನೀರು ಇನ್ನೂ ಉತ್ತಮ.
ಆದಷ್ಟೂ, ಒಗೆದು ಶುಭ್ರವಾಗಿ ಒಣಗಿಸಿದ ಹಗುರವಾದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನೇ ಧರಿಸಿ.
ಹೊರಗೆ ಓಡಾಡುವುದನ್ನು ಅತ್ಯಂತ ಮಿತಗೊಳಿಸಿ.

ಮನೆಯಲ್ಲೇ ಇದೆ ಮದ್ದು :
*ಬೆವರುಗುಳ್ಳೆಗಳಿಗೆ ಅಕ್ಕಿ ತೊಳೆದ ನೀರನ್ನು ಹಚ್ಚಿದರೆ ಗುಳ್ಳೆಗಳು ಗುಣವಾಗುತ್ತವೆ.
*ಮನೆಯಲ್ಲಿರುವ ಅಲೋವೆರಾವನ್ನು ೫-೧೦ ಇಂಚಿನಷ್ಟು ಕತ್ತರಿಸಿ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಹಾಗೇ ಬೆವರುಗುಳ್ಳೆಗಳ ಮೇಲೆ ಮಸಾಜ್ ಮಾಡಿ. ಮೂವತ್ತು ನಿಮಿಷದಿಂದ ಒಂದು ಗಂಟೆಯ ನಂತರ ಮಸಾಜ್ ಮಾಡಿದ ಜಾಗವನ್ನು ತಣ್ಣೀರಿನಿಂದ ಮೆಲುವಾಗಿ ತೊಳೆಯಿರಿ.
*ಮುಳ್ಳುಸೌತೆ/ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ, ಆ ಬಿಲ್ಲೆಗಳಿಂದ ಬೆವರುಗುಳ್ಳೆಯಿರುವ ಜಾಗವನ್ನು ಮಸಾಜ್ ಮಾಡಿ/ ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರುಗುಳ್ಳೆಗಳ ಮೇಲೆ ಸುಮಾರು ೧೫ ನಿಮಿಷಗಳ ಕಾಲ ಇಟ್ಟಾಗಲೂ ಸಮಸ್ಯೆ ಪರಿಹಾರ ಕಾಣುವುದು.
*ನೆಲ್ಲಿಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ಅಂಗೈ, ಅಂಗಾಲಿಗೆ ಹಚ್ಚುವುದರಿಂದ ಬೆವರುವ ಪ್ರಮಾಣದಲ್ಲಿ ಕಡಿಮೆಯಾಗುವುದನ್ನು ಕಾಣಬಹುದು.

ಬೆವರುಸಾಲೆ ಮನೆಮದ್ದುಗಳು
ನೆಲ್ಲಿಕಾಯಿಯನ್ನು ಜಜ್ಜಿ ರಸ

ಮನೆಯಲ್ಲೇ ಲಭ್ಯವಿರುವ ಕೆಲವು ವಸ್ತುಗಳ ಮಿಶ್ರಣಗಳ ತಯಾರಿಕೆಯಿಂದಲೂ ಬೆವರುಗುಳ್ಳೆಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು :

*ತೆಂಗಿನೆಣ್ಣೆ ಮತ್ತು ಸೌತೆಕಾಯಿ ರಸ
*ಅಲೋವೆರಾ ಮತ್ತು ಅರಿಸಿನ
*ಕಡಲೆಹಿಟ್ಟು ಮತ್ತು ರೋಸ್ ವಾಟರ್
*ಕರ್ಪೂರ ಮತ್ತು ಕಹಿಬೇವಿನ ಎಣ್ಣೆ
*ಆಲೂಗಡ್ಡೆ ರಸ ಮತ್ತು ಎಲೋವೇರಾ
*ತೇಯ್ದ ಶ್ರೀಗಂಧ ಮತ್ತು ಎಲೋವೇರಾ
*ಮುಲ್ತಾನ್ಮಿಟ್ಟಿ ಮತ್ತು ಎಲೋವೇರಾ
*ಕಲ್ಲಂಗಡಿ ಹಣ್ಣಿನ ರಸ ಮತ್ತು ಅರಸಿನ
*ಜಜ್ಜಿದ ಹಸಿಶುಂಠಿ ರಸ ಮತ್ತು ರೋಸ್ ವಾಟರ್
ಈ ಮೇಲಿನ ಎರಡೂ ವಸ್ತುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಪೇಸ್ಟ್ನಂತೆ ಮಾಡಿಕೊಂಡು ಬೆವರುಗುಳ್ಳೆಯ ಮೇಲೆ ಹಚ್ಚಿ. ಆದಷ್ಟು ಬೆರಳನ್ನು ಬಳಸದೆ, ಮೃದುವಾದ ಬ್ರಷ್ ಅಥವ ಹತ್ತಿಯಿಂದ ಹಚ್ಚಿಕೊಳ್ಳಿ. ೪೦-೬೦ ನಿಮಿಷಗಳ ನಂತರ ತಣ್ಣೀರಿನಲ್ಲಿ ಮೆಲುವಾಗಿ ತೊಳೆಯಿರಿ. ಮೃದುವಾದ ಬಟ್ಟೆಯಿಂದ ಒರೆಸಿರಿ.

ಕೊತ್ತಂಬರಿ ಬೀಜ ನೆನೆಸಿಟ್ಟ ನೀರು :
ಒಂದು ಹತ್ತಿಬಟ್ಟೆಯಲ್ಲಿ ಎರಡು ಹಿಡಿಯಷ್ಟು ಕೊತ್ತಂಬರಿ ಬೀಜವನ್ನು ಕಟ್ಟಿ ಸುಮಾರು ಎರಡು ಲೀಟರ್ ಶುಧ್ಧ ನೀರಿನಲ್ಲಿಸುಮಾರು ೫ಗಂಟೆ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಬೇಕು. ನಂತರ ಈ ಕೊತ್ತಂಬರಿ ಬೀಜದ ಗಂಟನ್ನು ಬೆವರು ಸಾಲೆಯಿರುವ ಜಾಗದ ಮೇಲೆ ಸುಮಾರು ಅರ್ಧ ಗಂಟೆಗಳ ಕಾಲ ಮೆಲುವಾಗಿ ಒತ್ತಿ ಮಸಾಜ್ ಮಾಡಿ. ಈಗ ಪಾತ್ರೆಯಲ್ಲಿರುವ ನೀರನ್ನು ನಿಮ್ಮ ಸ್ನಾನದ ನೀರಿನೊಂದಿಗೆ ಬೆರೆಸಬಹುದು ಅಥವಾ ಮುಖ ತೊಳೆದುಕೊಳ್ಳಲು ಬಳಸಬಹುದು.

ಓಟ್ ಮೀಲ್ ಸ್ನಾನ
ಒಂದು ಟಬ್ ನೀರಿಗೆ ೧-೨ ಕಪ್ ಓಟ್ ಮೀಲ್ ಬೆರೆಸಿ, ಅದರಲ್ಲಿ ಸುಮಾರು ೧೫-೨೦ ನಿಮಿಷವಿದ್ದು ನಂತರ ತಣ್ಣೀರ ಸ್ನಾನ ಮಾಡಿ.

ರೋಸ್ ವಾಟರ್ ಸ್ನಾನ : ಒಂದು ಟಬ್ ನೀರಿಗೆ ೧ -೨ ಕಪ್ ರೋಸ್ ವಾಟರ್ ಹಾಕಿ ಅದರಲ್ಲಿ ಸುಮಾರು ೨೦ ನಿಮಿಷವಿದ್ದು ನಂತರ ತಣ್ಣೀರು ಸ್ನಾನ ಮಾಡಿ
ಈ ಸ್ನಾನಗಳು ಬೆವರುಗುಳ್ಳೆ ನಿವಾರಣೆಯ ಜೊತೆಗೆ ಶ್ರಮ ನಿವಾರಕ ಮತ್ತು ದೇಹಕ್ಕೂ ತಂಪು.

ಲೋಳೆಸರ
ಲೋಳೆಸರ ತ್ವಚೆಗೆ ತಂಪು ನೀಡುವ ಅತ್ಯುತ್ತಮ ಔಷಧಿಯಾಗಿದ್ದು ಬೆವರುಸಾಲೆಗೂ ಅತ್ಯುತ್ತಮವಾಗಿದೆ. ಇದರ ಉರಿಯೂತ ನಿವಾರಕ ಮತ್ತು ಗಾಯಗಳನ್ನು ಗುಣಪಡಿಸುವ ಗುಣಗಳು ಚರ್ಮದ ತುರಿಕೆ, ಉರಿ ಹಾಗೂ ಕೆಂಪಗಾಗಿರುವ ಚರ್ಮವನ್ನು ಆದಷ್ಟೂ ಶೀಘ್ರ ಸಾಮಾನ್ಯವಾಗಿಸುತ್ತದೆ.

ಬೆವರುಸಾಲೆ ಮನೆಮದ್ದುಗಳು
ಲೋಳೆಸರ

ವಿಧಾನ: ಒಂದು ತಾಜಾ ಲೋಳೆಸರದ ಕೋಡನ್ನು ತೆರೆದು ಒಳಗಿನ ತಿರುಳನ್ನು ಸಂಗ್ರಹಿಸಿ ಈ ತಿರುಳನ್ನು ನೇರವಾಗಿ ಬೆವರುಸಾಲೆ ಕಂಡುಬಂದ ಭಾಗಕ್ಕೆ ತೆಳುವಾಗಿ ಸವರಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಒದ್ದೆಬಟ್ಟೆಯಿಂದ ಒರೆಸಿಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ದಿನಕ್ಕೆರಡು ಬಾರಿ, ಒಂದು ವಾರದವರೆಗೆ ಮುಂದುವರೆಸಿ.

ಬೇವಿನೆಲೆ ಹಾಕಿ ಕುದಿಸಿದ ನೀರನ್ನು ಸ್ನಾನ್ನಕ್ಕೆ ಬಳಸಿ. ಇಲ್ಲ ಬೇವಿನೆಲೆ ನೀರು ಬೆರೆಸಿ ರುಬ್ಬಿ ಪೇಸ್ಟ್‌ ತಯಾರಿಸಿ ಬೆವರುಸಾಲೆ ಮೇಲೆ ಹಚ್ಚಿ ಅರ್ಧ ಗಂಟೆ ನಂತರ ತಣ್ಣೀರ ಸ್ನಾನ ಮಾಡಿ. ಅತಿಯಾದ ಬೆವರುಸಾಲೆಯಿಂದ ಅವು ಸೋಂಕಿಗೆ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಬೆವರುಸಾಲೆ ಇರುವಾಗ ಸ್ನಾನಕ್ಕೆ ಸೋಪ್‌ ಬಳಸಬೇಡಿ. ಲೋಳೆಸರ ಜೆಲ್‌ ಅಥವಾ ಲೋಳೆಸರ ತಿರುಳನ್ನು ಬೆವರುಸಾಲೆ ಮೇಲೆ ಹಚ್ಚಿದರೆ ತಂಪನೆಯ ಅನುಭವವಾಗಿ ತುರಿಕೆ ಕಡಿಮೆಯಾಗುತ್ತದೆ. ಬೇಗ ವಾಸಿಯಾಗುತ್ತದೆ. ಬೆವರುಸಾಲೆ ಮೇಲೆ ಐಸ್‌ಕ್ಯೂಬ್‌ ಅನ್ನು ನಿಧಾನವಾಗಿ ಸವರಿ. ಅತಿಯಾದ ಬೆವರುಸಾಲೆ ಇದ್ದರೆ ಒಂದು ಕಪ್‌ ತಣ್ಣನೆಯ ನೀರಿಗೆ ಒಂದು ಚಮಚ ಬೇಕಿಂಗ್‌ ಪೌಡರ್‌ ಬೆರೆಸಿ. ಇದಕ್ಕೆ ಬಟ್ಟೆಯನ್ನು ಅದ್ದಿ ಸ್ವಲ್ಪ ಹಿಂಡಿ ಬೆವರುಸಾಲೆ ಮೇಲೆ ಹೊದೆಯಿರಿ. ತುರಿಕೆ ಇಲ್ಲವಾಗಿಸುತ್ತದೆ. ದಿನಕ್ಕೆ 5-6 ಬಾರಿ ಹೀಗೆ ಮಾಡಿ. ಕೊತ್ತಂಬರಿಬೀಜದ ಪುಡಿ-ಅರಸಿನವನ್ನು ಕಲಸಿ ರೋಸ್‌ವಾಟರ್‌ ಬೆರೆಸಿ ಬೆವರುಸಾಲೆ ಮೇಲೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಶ್ರೀಗಂಧದ ಪುಡಿಗೆ ರೋಸ್‌ವಾಟರ್‌ ಬೆರೆಸಿದ ಪೇಸ್ಟ್‌ನ್ನು ಬೆವರುಸಾಲೆಯಾದ ಭಾಗಗಳಿಗೆ ಲೇಪಿಸಿ. ಅಕ್ಕಿ ತೊಳೆದ ನೀರನ್ನು ಬೆವರುಸಾಲೆಗೆ ಬಳಸಬಹುದಾಗಿದೆ. 10 ಗ್ರಾಂ ಶ್ರೀಗಂಧದ ಹುಡಿ ಮತ್ತು 5 ಗ್ರಾಂ ರುಬ್ಬಿದ ಗಸಗಸೆ ಮತ್ತು ರೋಸ್‌ವಾಟರ್‌ ಬೆರೆಸಿ ಮಿಶ್ರಣ ತಯಾರಿಸಿ ಬೆವರುಸಾಲೆಗೆ ಲೇಪಿಸಿ. ಒಣಗಿದ ನಂತರ ಸ್ನಾನ ಮಾಡಿ. ಜೀರಿಗೆ ಪುಡಿ ಮತ್ತು ಕೊಬ್ಬರಿಎಣ್ಣೆ ಬೆರೆಸಿ ದಪ್ಪಗಾದ ಪಾಕದಂತೆ ಮಾಡಿ ಬೆವರುಸಾಲೆಯ ಮೇಲೆ ಲೇಪಿಸಿ. ಅರ್ಧ ಗಂಟೆ ನಂತರ ಸ್ನಾನ ಮಾಡಿ. ಕಲ್ಲಂಗಡಿ ಅಥವಾ ಸೌತೆಕಾಯಿ ತುಂಡನ್ನು ಬೆವರುಸಾಲೆ ಮೇಲೆ ಸವರಿಕೊಳ್ಳಿ. ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ನೆನೆಸಿಡಿ. ಅದು ಕರಗಿದ ನಂತರ ಬೆವರುಸಾಲೆ ಮೇಲೆ ಹಚ್ಚಿ. ಜೇನುತುಪ್ಪ ಸಹ ಬೆವರುಸಾಲೆಗೆ ಹಚ್ಚಬಹುದು. ಇದಕ್ಕೆ ಬೇಗ ವಾಸಿ ಮಾಡುವ ಗುಣವಿದೆ. ಕೇವಲ ಹಚ್ಚಿದರೆ ಸಾಲದು. ದೇಹದ ಒಳಗೂ ತಂಪಾಗಿಡಬೇಕು. ಸಿಹಿ ಲಸ್ಸಿ, ಒಂದು ಚಮಚ ಸಕ್ಕರೆ ಹಾಕಿದ ಮೊಸರು, ನಿಂಬೆ ಜ್ಯೂಸ್‌ ದಿನಕ್ಕೆರಡು ಬಾರಿ ಸೇವಿಸಿ ಬೆವರುಸಾಲೆಯಿಂದ ಮುಕ್ತಿ ಪಡೆಯಿರಿ. ಸ್ನಾನದ ನಂತರ ಬೆವರುಸಾಲೆ ನಿರೋಧಕ ಪೌಡರನ್ನು ಬಳಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹೃದಯ ಸ್ತಂಭನ

ಹಠಾತ್ ಹೃದಯ ಸಾವು : ಹೃದಯ ಸ್ತಂಭನ

ಋತುಸ್ತಬ್ಧ

ಮೆನೋಪಾಸ್ ಅಥವಾ ಋತುಸ್ತಬ್ಧ ಸಮಯದಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳು