ನಿಸರ್ಗದ ಸಮತೋಲನಕ್ಕೆ ಕೀಟಗಳು ಅವಶ್ಯಕ. ನಾವು ತಿನ್ನುವ ಆಹಾರಕ್ಕೆ ಮುಖ್ಯವಾಗಿ ಬೇಕಾದ ಪರಾಗಸ್ಪರ್ಶವಾಗುವುದು ಕೀಟಗಳಿಂದಲೇ. ಆದರೆ ಯಾವುದೋ ಮೈಮರೆತ ಘಳಿಗೆಯಲ್ಲಿ ಕೀಟಗಳು ಕಡಿಯುತ್ತವೆ. ಸಾಮಾನ್ಯವಾಗಿ ಜೇನು, ಕಣಜ ಮೊದಲಾದವು ಕಚ್ಚುವುದಿಲ್ಲ, ಬದಲಿಗೆ ತಮ್ಮ ದೇಹದ ಹಿಂಭಾಗದಲ್ಲಿರುವ ಮುಳ್ಳೊಂದನ್ನು ಬಲವಾಗಿ ಚುಚ್ಚಿ ಓಡುತ್ತವೆ.
ಸಾಮಾನ್ಯವಾಗಿ ಸೊಳ್ಳೆಗಳು, ಚಿಗಟಗಳು ಮತ್ತು ಹುಳುಗಳಿಂದ ಉಂಟಾಗುವ ಕಡಿತಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ. ಆದರೆ ಕುಟುಕು ಜೇನು ನೊಣಗಳು, ಬೆಂಕಿ ಇರುವೆ ಸೇರಿದಂತೆ ಇನ್ನಿತರ ಕೀಟಗಳ ಕಡಿತವು ಅನಾಫಿಲ್ಯಾಕ್ಸಿಸ್ ಎಂದು ಕರೆಯಲ್ಪಡುವ ತೀವ್ರ ಅಲರ್ಜಿಯಂತಹ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದು.
ಒಂದು ವೇಳೆ ಯಾವುದೇ ಕೀಟ ಕಡಿದು ವಿಪರೀತ ಉರಿ ಮತ್ತು ದದ್ದು ಎದ್ದರೆ ತಕ್ಷಣ ವೈದ್ಯರನ್ನು ಕಾಣುವುದು ಅನಿವಾರ್ಯ. ತಮ್ಮನ್ನು ಕಡಿದ ಕೀಟ ಯಾವುದು ಎಂದು ತಿಳಿದಿದ್ದರೆ ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.
ಜೇಡ, ಇರುವೆ ಮೊದಲಾದವುಗಳ ಇಕ್ಕಳದಂತಿರುವ ಹಲ್ಲುಗಳು ಚರ್ಮವನ್ನು ಹರಿದು ವಿಷಕಾರಿ ರಾಸಾಯನಿಕಗಳನ್ನು ಸುರಿಸುತ್ತವೆ. ಇವು ಅಸಾದ್ಯ ಉರಿಯನ್ನು ಉಂಟುಮಾಡುತ್ತವೆ. ತಕ್ಷಣವೇ ಇದಕ್ಕೆ ಸೂಕ್ತ ಚಿಕಿತ್ಸೆ ಅಥವಾ ಮನೆಮದ್ದು ಪಡೆದರೆ ಉರಿ ತಗ್ಗಿಸಬಹುದು.
ತಾಜಾ ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ, ಪೀಡಿತ ಪ್ರದೇಶಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ 2 ಬಾರಿ ಪುನರಾವರ್ತಿಸಬಹುದು.
ಇದರಲ್ಲಿ ಕಂಡು ಬರುವ ಯುಜೆನಾಲ್ ಎಂಬ ರಾಸಾಯನಿಕ ಸಂಯುಕ್ತವು ಚರ್ಮದ ತುರಿಕೆಯನ್ನು ನಿವಾರಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಬೇವು ಒಂದು ಉತ್ತಮ ಬ್ಯಾಕ್ಟೀರಿಯಾನಿವಾರಕ ಮತ್ತು ಶಿಲೀಂಧ್ರನಿವಾರಕವಾಗಿದೆ. ಕೀಟಕಡಿತಕ್ಕೆ ಬೇವಿನ ಆರೈಕೆ ಉತ್ತಮ ಪರಿಹಾರ ನೀಡುತ್ತದೆ. ಕೀಟದ ಕಡಿತದ ಬಳಿಕ ಕಾಡುವ ಉರಿ, ತುರಿಕೆ, ಊತ ಮೊದಲಾದವುಗಳನ್ನು ಕಡಿಮೆ ಮಾಡುವುದರ ಜೊತೆಗೇ ಸೋಂಕು ಹಡುವುದರಿಂದಲೂ ತಡೆಯುತ್ತದೆ. ಇದಕ್ಕಾಗಿ ಬೇವಿನ ಎಲೆಗಳನ್ನು (ಕಹಿಬೇವು ಉತ್ತಮ, ಇಲ್ಲದಿದ್ದರೆ ಕರಿಬೇವೂ ಆಗಬಹುದು) ಕೈಯಲ್ಲಿಯೇ ಜಜ್ಜಿ ಕೀಟ ಕಡಿದಲ್ಲಿ ದಪ್ಪನಾಗಿ ಹಚ್ಚಿ ಅಲ್ಲಿಯೇ ಇರುವಂತೆ ಮಾಡಿ. ಬಟ್ಟೆಯ ಪಟ್ಟಿ ಕಟ್ಟಿದರೆ ಇನ್ನೂ ಉತ್ತಮ. ದಿನಕ್ಕೆ ಎರಡು ಬಾರಿ ಈ ವಿಧಾನ ಅನುಸರಿಸುವ ಮೂಲಕ ಕೀಟ ಕಡಿತದ ಗಾಯ ಶೀಘ್ರವಾಗಿ ಮಾಗುತ್ತದೆ. ತಕ್ಷಣಕ್ಕೆ ಬೇವಿನ ಎಲೆಗಳು ಸಿಗದೇ ಇದ್ದಲ್ಲಿ ಬೇವಿನ ಎಣ್ಣೆಯೂ ಆಗುತ್ತದೆ.
ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಅಡಿಗೆ ಸೋಡಾವನ್ನು ಬಳಸಲಾಗುತ್ತದೆ. ಈ ಸೋಡಾ ಅತ್ಯಂತ ಶಕ್ತಿಯುತವಾದ ಗುಣಗಳನ್ನು ಒಳಗೊಂಡಿದೆ. ಸೋಡಿಯಂ ಬೈಕಾರ್ಬನೇಟ್ ಎಂದು ಕರೆಯಲ್ಪಡುವ ಅಡಿಗೆ ಸೋಡಾ ಕೂಡ ಕೀಟಗಳ ಕಡಿತಕ್ಕೆ ಚಿಕಿತ್ಸೆ ನೀಡುತ್ತದೆ. ಅಡಿಗೆ ಸೋಡಾದ ಪೇಸ್ಟ್ ಅನ್ನು ತಯಾರಿಸುವುದು ಬಹಳ ಸುಲಭ. ಒಂದು ಚಮಚ ಅಡಿಗೆ ಸೋಡಾಕ್ಕೆ ಸ್ವಲ್ಪ ನೀರು ಬೆರಸಿ, ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ, 10 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ 1 ರಿಂದ 2 ಬಾರಿ ಪುನರಾವರ್ತಿಸಬಹುದು.
ಟಿ ಟ್ರೀ ಎಣ್ಣೆಯಲ್ಲಿ ಬಾಕ್ಟೀರಿಯಾನಿವಾರಕ ಮತ್ತು ಶಿಲೀಂಧ್ರನಿವಾರಕ ಗುಣಗಳಿವೆ. ಕೀಟಗಳ ಕಡಿತದ ಬಾಧೆಯಿಂದ ಮುಕ್ತಿ ಪಡೆಯಲು ಈ ಗುಣಗಳು ಸಮರ್ಥವಾಗಿವೆ. ಕೀಟ ಕಡಿದಲ್ಲಿ ಕೊಂಚ ಎಣ್ಣೆಯನ್ನು ಸವರಿ ಒಣಗಲು ಬಿಡಿ. ಎಣ್ಣೆ ಹಚ್ಚಿದ ಬಳಿಕ ಈ ಭಾಗವನ್ನು ಮುಟ್ಟಲು ಹೋಗಬಾರದು. ಕೊಂಚ ಹೊತ್ತಿನಲ್ಲಿಯೇ ಉರಿ ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಹಚ್ಚುವ ಮೂಲಕ ಶೀಘ್ರವಾಗಿ ಈ ಭಾಗ ಮೊದಲಿನಂತಾಗುತ್ತದೆ ಮತ್ತು ನೋವು, ಬಾವು ಮತ್ತು ಉರಿ ಸಹಾ ಇಲ್ಲವಾಗುತ್ತದೆ.
ಅಲೋವೆರಾ ಕೂಡ ಸೌಂದರ್ಯಕ್ಕೂ ಸೈ, ಚರ್ಮ ಸಮಸ್ಯೆಗೂ ಸೈ…. ಇದೊಂದು ಬಹುಪಯೋಗಿ ಸಸ್ಯವಾಗಿದ್ದು, ಇದರ ಲೋಳೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಚರ್ಮ ವ್ಯಾಧಿಗಳನ್ನು ಮತ್ತು ಸೋಂಕುಗಳನ್ನು ಶಾಂತವಾಗಿಸಲು, ಗುಣಪಡಿಸಲು ಅಲೋವೆರಾ ಅತ್ಯದ್ಭುತವಾದ ಔಷಧಿಯಾಗಿದೆ.ಇದೊಂದು ನೈಸರ್ಗಿಕ ನಂಜುನಿರೋಧಕ ಏಜೆಂಟ್ ಆಗಿದ್ದು, ಕೀಟಗಳ ಕಡಿತಕ್ಕೆ ಚಿಕಿತ್ಸೆ ನೀಡಲು ಬಹಳ ಪರಿಣಾಮಕಾರಿಯಾಗಿದೆ. ತಾಜಾ ಅಲೋವೆರಾ ಲೋಳೆಯನ್ನು ಕೀಟ ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಊತ, ನೋವು ಮತ್ತು ತುರಿಕೆಯ ಸಂವೇದನೆಯಿಂದ ಮುಕ್ತಿ ಹೊಂದಬಹುದಾಗಿದೆ.
ಲವಂಗದ ಎಣ್ಣೆ ಕೀಟಗಳ ಬಾಧೆಗೂ ಉತ್ತಮವಾಗಿದೆ. ಇದರಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಮತ್ತು ಬಾಕ್ಟೀರಿಯಾನಿವಾರಕ ಗುಣಗಳಿದ್ದು ಸೋಂಕು ಹರಡದಂತೆ ತಡೆಯುತ್ತದೆ. ಕೀಟ ಕಚ್ಚಿದಲ್ಲಿ ತೆಳ್ಳಗೆ ಲವಂಗದ ಎಣ್ಣೆಯನ್ನು ದಿನಕ್ಕೆ ಮೂರು ಬಾರಿ ಹಚ್ಚಿಕೊಳ್ಳುವ ಮೂಲಕ ಕಡಿತದ ತೊಂದರೆ ಶೀಘ್ರವಾಗಿ ಕಡಿಮೆಯಾಗುತ್ತದೆ.
ಜೇನುತುಪ್ಪವು ಶಕ್ತಿಯುತವಾದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ತುರಿಕೆಯ ಸಂವೇದನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಕೀಟವು ಕಚ್ಚಿದ ಜಾಗಕ್ಕೆ, ಕೆಲವು ಜೇನಿನ ಹನಿಯನ್ನು ಲೇಪಿಸಿ, ಸ್ವಲ್ಪ ಸಮಯದ ನಂತರ ಶುದ್ಧವಾದ ನೀರಿನಲ್ಲಿ ತೊಳೆಯಿರಿ. ಹೀಗೆ ದಿನಕ್ಕೆ 2 ಬಾರಿ ಪುನರಾವರ್ತಿಸಿ.
ಬೆಳ್ಳುಳ್ಳಿಯಲ್ಲಿಯೂ ಉತ್ತಮ ಬ್ಯಾಕ್ಟೀರಿಯಾನಿವಾರಕ ಮತ್ತು ಪ್ರತಿಜೀವಕ ಗುಣಗಳಿವೆ ಹಾಗೂ ಬೆಳ್ಳುಳ್ಳಿಯ ಲೇಪನ ಕೀಟಗಳ ಕಡಿತದ ಉರಿಯಿಂದ ಶಮನ ನೀಡುತ್ತದೆ. ಇದು ಚರ್ಮಕ್ಕೆ ಸೋಂಕು ಉಂಟಾಗುವುದರಿಂದ ರಕ್ಷಣೆ ನೀಡುತ್ತದೆ ಹಾಗೂ ಗಾಯ ಶೀಘ್ರವಾಗಿ ಮಾಗಲು ನೆರವಾಗುತ್ತದೆ.
ಅಂಗಡಿಯಿಂದ ಟೂಥ್ ಪೇಸ್ಟ್ ಒಂದನ್ನು ಬಳಸಿ ನೇರವಾಗಿ ಕೀಟಕಡಿದ ಚರ್ಮದ ಮೇಲೆ ತೆಳುವಾಗಿ ಹಚ್ಚಿ. ಇದರಿಂದ ಉರಿ, ತುರಿಕೆ ಕಡಿಮೆಯಾಗುತ್ತದೆ ಹಾಗೂ ತಂಪಾಗಿಸುತ್ತದೆ.
ಫ್ರಿಜ್ಜಿನಿಂದ ಐಸ್ ತುಂಡೊಂದನ್ನು ನೇರವಾಗಿ ಕೀಟ ಕಡಿತದ ಭಾಗದ ಮೇಲೆ ಹಚ್ಚಿ ನಯವಾಗಿ ಸವರಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನ ಅನುಸರಿಸುವ ಮೂಲಕ ಉರಿ ಕಡಿಮೆಯಾಗುತ್ತದೆ. ಇದು ಕೀಟ ಕಡಿತಕ್ಕೆ ಸುಲಭ ಮತ್ತು ತಕ್ಷಣಕ್ಕೆ ಮಾಡಬಹುದಾದ ಆರೈಕೆಯಾಗಿದೆ.
ಆಲ್ಕೋಹಾಲ್ ನಲ್ಲಿಯೂ ನಂಜುನಿರೋಧಕ ಗುಣವಿದ್ದು ಕೀಟಗಳ ಕಡಿತದ ಉರಿ ಕಡಿಮೆಗೊಳಿಸುವ ಮತ್ತು ಸೋಂಕಿನಿಂದ ರಕ್ಷಿಸುವ ಸಾಮರ್ಥ್ಯವಿದೆ. ಒಂದು ಹತ್ತಿಯುಂಡೆಯನ್ನು ಆಲ್ಕೋಹಾಲ್ ನಲ್ಲಿ ಮುಳುಗಿಸಿ ಕೀಟ ಕಡಿತದ ಭಾಗಕ್ಕೆ ಹಚ್ಚಿಕೊಳ್ಳಿ. ಗಾಯಗಳಿಗೆ ಹಚ್ಚುವ ಆಲ್ಕೋಹಾಲ್ ಸ್ವಾಬ್ ಎಂಬ ಪಟ್ಟಿ ಇದ್ದರೆ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ.
ಕೀಟಗಳ ಕಡಿದ ಬಳಿಕ ಎದುರಾಗುವ ಉರಿಯನ್ನು ಬಳಸಿದ ಟೀ ಬ್ಯಾಗ್ ಗಳು ಕಡಿಮೆಗೊಳಿಸಲು ಸಮರ್ಥವಾಗಿವೆ. ಟೀ ಬ್ಯಾಗ್ ಹೀರಿಕೊಂಡಿದ್ದ ನೀರನ್ನು ಹಿಂಡಿ ಈ ಚೀಲವನ್ನು ಕೀಟ ಕಡಿದ ಭಾಗಕ್ಕೆ ಕೊಂಚ ಒತ್ತಡದಲ್ಲಿ ಒತ್ತಿ. ಇದು ಕೀಟಕಡಿದ ಭಾಗದಿಂದ ಕೀಟದ ವಿಷವನ್ನು ಹೀರಿಕೊಂಡು ಉರಿಯನ್ನು ಕಡಿಮೆ ಮಾಡುತ್ತದೆ ಹಾಗೂ ಈಗಾಗಲೇ ಊದಿಕೊಂಡಿದ್ದ ಭಾಗದ ಊತವನ್ನು ಕಡಿಮೆಗೊಳಿಸುತ್ತದೆ. ಒಂದು ವೇಳೆ ಬಳಸಿದ ಟೀ ಬ್ಯಾಗ್ ಇಲ್ಲದಿದ್ದರೆ ಹೊಸ ಬ್ಯಾಗ್ ಒಂದನ್ನು ತಣ್ಣೀರಿನಲ್ಲಿ ಅದ್ದಿ ಹಿಂಡಿ ಬಳಸಬಹುದು.
ಧನ್ಯವಾದಗಳು.
промокод на продамус [url=www.prodamus-promokod1.ru/]промокод на продамус[/url] .
продамус промокод скидка [url=www.forumbar.anihub.me/viewtopic.php?id=9823#p17576/]www.forumbar.anihub.me/viewtopic.php?id=9823#p1757[/url] .
Быстрая схема покупки диплома старого образца: что важно знать?
Официальная покупка школьного аттестата с упрощенным обучением в Москве