ಗರ್ಭಧಾರಣೆ ಎಂಬುದು ಮಹಿಳೆಯ ಜೀವನದ ಅತ್ಯಂತ ಮಹತ್ವದ ಘಟ್ಟ. ಮಗುವಿನ ಪೋಷಣೆ ಸರಿಯಾಗಿ ಆಗಲು ಪ್ರಾಥಮಿಕ ಹಂತದಲ್ಲಿ ಗರ್ಭವನ್ನು ಪೋಷಿಸಲು ಗರ್ಭಾಶಯದಲ್ಲಿ ಅನೇಕ ರೀತಿಯ ಬದಲಾವಣೆ ಕಂಡು ಬರುತ್ತವೆ. ಇದರ ಪರಿಣಾಮವಾಗಿ ವಾಂತಿ, ಸುಸ್ತು, ವಾಕರಿಕೆಯಂತಹ ಲಕ್ಷಣಗಳು ತಲೆದೋರಬಹುದು.
ಗರ್ಭಧಾರಣೆಯಾದ ನಂತರ ಮೊದಲಿನ 16 ವಾರಗಳವರೆಗೆ (3–4 ತಿಂಗಳು) ಉಬ್ಬಳಿಕೆ ಅಥವಾ ವಾಕರಿಕೆ ಹಾಗೂ ವಾಂತಿಯ ಲಕ್ಷಣಗಳು ಸಾಮಾನ್ಯವಾಗಿ ಎಲ್ಲ ಗರ್ಭಿಣಿಯರಲ್ಲಿ ಕಂಡು ಬರುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಕೃತಿ ಹಾಗೂ ಗರ್ಭಾಶಯದ ಪ್ರಭಾವ ವಿಭಿನ್ನವಾಗಿರುವುದರಿಂದ ಕೆಲವೊಂದು ಮಹಿಳೆಯರಲ್ಲಿ ವಾಂತಿಯ ಪ್ರಮಾಣ ಹೆಚ್ಚಾಗಿ ಚಿಕಿತ್ಸೆ ಅನಿವಾರ್ಯ ಎನಿಸುತ್ತದೆ.
ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಗರ್ಭ ಧರಿಸಿದ ಮೊದಲ ಮೂರು ತಿಂಗಳು ವಾಕರಿಕೆ, ವಾಂತಿ, ಸುಸ್ತು ಆಗುವುದು ಸರ್ವೇ ಸಾಮಾನ್ಯ. ಕೆಲವರಿಗಂತೂ ಯಾವ ವಾಸನೆಯನ್ನು ಸಹಿಸಲು ಆಗುವುದೇ ಇಲ್ಲ. ಊಟವೂ ಸೇರುವುದಿಲ್ಲ. ವಿಪರೀತ ವಾಂತಿಯಾಗುತ್ತಿರುತ್ತದೆ.
ಗರ್ಭಿಣಿಯರಿಗೆ ಯಾವುದೇ ತೊಂದರೆ ಕಂಡು ಬಂದರೂ ನೇರವಾಗಿ ಔಷಧಿ ನೀಡುವುದು ಹಿತಕರವಲ್ಲ ಮತ್ತು ತೀಕ್ಷ್ಣ ಉಷ್ಣ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡುವುದು ಒಳ್ಳೆಯದಲ್ಲ. ಹೀಗಾಗಿ ಇಂದಿಗೂ ಗರ್ಭಿಣಿಯರಿಗೆ ಮನೆ ಮದ್ದು ರೂಪದಲ್ಲಿ ಆಹಾರವನ್ನೇ ಔಷಧಿಯಾಗಿ ಅಲ್ಪ ಪ್ರಮಾಣದಲ್ಲಿ ಕೊಟ್ಟು ಚಿಕಿತ್ಸೆ ನೀಡುತ್ತಾರೆ.
ವಾಂತಿ ಬರುವಂತಾದರೆ ಪುದೀನಾ ಎಲೆಯನ್ನು ಅಗಿಯಿರಿ. ಇಲ್ಲವಾದರೆ ಎರಡು ಮೂರು ಎಲೆಗಳನ್ನು ಜಜ್ಜಿ ಅದರ ವಾಸನೆಯನ್ನು ಗ್ರಹಿಸಿ. ಇದೂ ವಾಂತಿ ನಿವಾರಿಸಲು ಅತ್ಯುತ್ತಮ ಮದ್ದು.
ಒಂದು ಲೋಟ ನೀರಿಗೆ ಹತ್ತು ಹನಿ ನಿಂಬೆರಸ ಮತ್ತು ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿ ಕುಡಿದರೆ ಶೀಘ್ರವಾಗಿ ಉಬ್ಬಳಿಕೆ, ವಾಂತಿ ಕಡಿಮೆಯಾಗುವುದು.
ಗರ್ಭಾವಸ್ಥೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅದಕ್ಕಾಗಿಯೇ ನೀವು ಒಂದೇ ಬಾರಿಗೆ ಹೆಚ್ಚು ತಿನ್ನುವ ಬದಲು ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಬೇಕು. ಒಂದೇ ಬಾರಿಗೆ ಹೆಚ್ಚು ನೀರು ಮತ್ತು ಜ್ಯೂಸ್ ಕುಡಿಯಬೇಡಿ. ಬದಲಿಗೆ ಅರ್ಧ ಗ್ಲಾಸ್ ಕುಡಿಯಿರಿ.
ನಿಂಬೆ ಹಣ್ಣಿನ ತುಂಡನ್ನು ಬೆಂಕಿಯಲ್ಲಿ ಸ್ವಲ್ಪ ಸುಟ್ಟು ನಂತರ ಅದನ್ನು ಬಿಸಿಲಿನಲ್ಲಿಟ್ಟು ಒಣಗಿಸಿ ಪುಡಿ ಮಾಡಿ. ವಾಂತಿ ಬರುವ ಸಮಯದಲ್ಲಿ ಇದನ್ನು ನೀರಿಗೆ ಬೆರೆಸಿ ಕುಡಿಯಿರಿ.
ವಾಂತಿ ಹಾಗೂ ಉಬ್ಬಳಿಕೆ ಕಂಡು ಬಂದಾಗ ಏಲಕ್ಕಿಯ 3–4 ಬೀಜಗಳನ್ನು ಬಾಯಿಯಲ್ಲಿ ಹಾಕಿ ಚೀಪುವುದರಿಂದ ಬಾಯಿಯ ರುಚಿ ಬದಲಾಗಿ ವಾಂತಿಯ ಅನಿಸಿಕೆ ನಿಲ್ಲುವುದು.
ನೆಲ್ಲಿಕಾಯಿ ಹುಳಿಯಾಗಿರುತ್ತದೆ. ವಾಂತಿ ಬರುತ್ತದೆ ಎಂದು ಅನಿಸಿದಾಗ ನೆಲ್ಲಿಕಾಯಿಯನ್ನು ಬಾಯಿಗೆ ಹಾಕಿ ಅಗಿಯಿರಿ. ಇದು ಗರ್ಭಿಣಿಯರಿಗೆ ವಾಂತಿಯಿಂದ ರಿಲೀಫ್ ನೀಡುತ್ತದೆ.
ವಾಂತಿಗೆ ವಿಷಮ ಆಹಾರ ಅಥವಾ ಆಹಾರದ ಗುಣ ಮತ್ತು ಪ್ರಮಾಣದಲ್ಲಿ ಆಗುವ ವ್ಯತ್ಯಯದ ಪರಿಣಾಮವಾಗಿ ಜೀರ್ಣ ಶಕ್ತಿ ಏರುಪೇರಾಗಿ ವಾಂತಿ, ಉಬ್ಬಳಿಕೆ ಕಂಡು ಬಂದರೆ 1–2 ಸಣ್ಣ ಶುಂಠಿ ತುಂಡುಗಳನ್ನು ಚೆನ್ನಾಗಿ ಅಗಿದು ತಿನ್ನಬೇಕು.
ಮಲಗುವ ಮುನ್ನ ಅಥವಾ ಮಧ್ಯ ರಾತ್ರಿ ನಿಮಗೆ ಹಸಿವು ಅನಿಸಿದರೆ, ಹೆಚ್ಚಿನ ಪ್ರೋಟೀನ್ ತಿಂಡಿಗಳನ್ನು ಮಾತ್ರ ಸೇವಿಸಿ. ಹಾಗೆ, ಡ್ರೈ ಫ್ರೂಟ್ಸ್, ಬೇಯಿಸಿದ ದಾಲ್ ಅಥವಾ ಕಡಲೆ, ಸಲಾಡ್ ರೂಪದಲ್ಲಿ ಹಸಿ ತರಕಾರಿಗಳು, ಸಾದಾ ಪನೀರ್ ತಿನ್ನಿರಿ. ಅಲ್ಲದೆ, ಈ ಆಹಾರಗಳನ್ನು ಮಧ್ಯಾಹ್ನದ ವೇಳೆಯೂ ಸೇವಿಸಿ.
1/4 ಚಮಚ ಜೀರಿಗೆ ಮತ್ತು 1/4 ಚಮಚ ಸೋಂಪು ಹಾಗೂ ಒಂದು ಲೋಟ ನೀರು ಸೇರಿಸಿ ಕುದಿಸಿ ತಯಾರಿಸಿದ ಕಷಾಯದ ಸೇವನೆ ಉತ್ತಮ ಪರಿಣಾಮ ಬೀರುತ್ತದೆ.
ಕಿತ್ತಳೆ ಹಣ್ಣು ತಿನ್ನಿ. ಇದರಿಂದ ವಾಂತಿ ನಿಲ್ಲುತ್ತದೆ.
ಮಲಪ್ರವೃತ್ತಿ ಸರಿಯಾಗಿ ಆಗದೆ ಇದ್ದಾಗ ಕಂಡು ಬರುವ ವಾಂತಿ, ವಾಕರಿಕೆಯಲ್ಲಿ ಶುಂಠಿ ಕಷಾಯ ತಯಾರಿಸಿ ಅಲ್ಪ ಪ್ರಮಾಣದಲ್ಲಿ ಪದೇ ಪದೇ ಕುಡಿಯುವುದು ಒಳ್ಳೆಯ ಪರಿಣಾಮ ಬೀರುತ್ತದೆ.
ಸಮ ಪ್ರಮಾಣದಲ್ಲಿ ನಿಂಬೆರಸ ಹಾಗೂ ಜೇನುತುಪ್ಪ ಅತ್ಯಲ್ಪ ಪ್ರಮಾಣದಲ್ಲಿ ಪುನಃ ಪುನಃ ಸೇವಿಸುವುದರಿಂದ ಉಬ್ಬಳಿಕೆಯಿಂದ ಕಂಡು ಬರುವ ಕಿರಿಕಿರಿ ಕಡಿಮೆಯಾಗುತ್ತದೆ.
1 ಚಮಚ ಲಿಂಬೆ ರಸ ಹಾಗೂ 1 ಚಮಚ ಶುಂಠಿ ರಸ ಸೇರಿಸಿ ದಿನದಲ್ಲಿ 3–4 ಬಾರಿ ಅಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ವಾಂತಿ ಹಾಗೂ ಉಬ್ಬಳಿಕೆಯ ಅನಿಸಿಕೆಯನ್ನು ತಡೆಯಬಹುದು.
ಧನ್ಯವಾದಗಳು.
GIPHY App Key not set. Please check settings