in ,

ಒಮೆಗಾ – 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ 

ಒಮೆಗಾ - 3
ಒಮೆಗಾ - 3

ಒಮೆಗಾ 3 ಎಂಬುದು ಶ್ರೀಮಂತವಾದ ಪೋಷಕಾಂಶ ಹೊಂದಿರುವ ಮೂಲವಾಗಿದೆ. ಇದನ್ನು ಒಳಗೊಂಡ ಆಹಾರದ ಸೇವನೆಯು ಕ್ಯಾನ್ಸರ್, ಹೃದಯ, ಮೆದುಳು, ಸಂತಾನೋತ್ಪತ್ತಿ ವ್ಯವಸ್ಥೆ ಇನ್ನು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೇ, ವಯಸ್ಸಾಗುವಿಕೆಯ ವಿರುದ್ಧ ಹೋರಾಡುತ್ತದೆ, ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಈ ಒಮೆಗಾ ೩ ಎಂಬುದು ಮೀನು, ಮೀನಿನ ಎಣ್ಣೆ ಅಥವಾ ಮೀನಿನ ಪೂರಕಗಳಿಂದ ದೊರೆಯುತ್ತದೆ.

ಒಮೆಗಾ -3 ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರಿಂದ ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು. ಉರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದರೆ ಆಹಾರದಲ್ಲಿ ಒಮೆಗಾ-3 ಸೇರಿಸುವುದು ಸೂಕ್ತ.

ಒಮೆಗಾ -3 ಸಮೃದ್ಧ ಆಹಾರಗಳನ್ನು ಸೇವಿಸಿ. ಇದು ಮೆದುಳು, ಹೃದಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಸೇರಿದಂತೆ ದೇಹದ ಪ್ರಮುಖ ಭಾಗಗಳಿಗೆ ಈ ಪೋಷಕಾಂಶಗಳು ಪ್ರಯೋಜನಕಾರಿ. ಸೆಲ್ಯುಲಾರ್ ಮಟ್ಟದಲ್ಲಿ ಒಮೆಗಾ -3 (Omega-3) ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರಿಂದ ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು.

ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಅನೇಕ ಗುಣಮಟ್ಟದ ಮೂಲಗಳಿವೆ. ಅವುಗಳಲ್ಲಿ ಸಸ್ಯ ಆಧಾರಿತ ಆಹಾರಗಳು, ತರಕಾರಿಗಳಲ್ಲಿ ಕಂಡು ಬರುತ್ತದೆ. ಮಾಂಸಾಹಾರವನ್ನು ಸೇವಿಸಲು ಇಷ್ಟ ಪಡದೇ ಇರುವವರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಸ್ಯಾಹಾರವನ್ನು ಸೇವಿಸಬಹುದು. ಇವುಗಳಲ್ಲಿಯೂ ಕೂಡ ಒಮೆಗಾ ೩ ಇದ್ದು, ದೇಹದ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ.

ಒಮೆಗಾ - 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ 
ಒಮೆಗಾ 3 ಕೊಬ್ಬಿನಾಮ್ಲ ಕ್ಯಾಪ್ಸುಲ್ ಗಳು

ಉರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಒಮೆಗಾ-3 ಸೇರಿಸುವುದು ಸೂಕ್ತ.

ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ 2 ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಮೆಗಾ 3 ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಕೊಲೆಸ್ಟ್ರಾಲ್ ಅವಶ್ಯಕ. ಅದೇ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ದೇಹದ ಅಂಗಾಂಗಗಳ ಕಾರ್ಯಕ್ಕೆ ಅಡಚಣೆ ಉಂಟು ಮಾಡಿ ಕಾಯಿಲೆಗಳು ಬರುವುದು. ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ.

ವಾಲ್​ನಟ್​

 ವಾಲ್​ನಟ್ಸ್​ ಅನ್ನು ಹೃದಯಕ್ಕೆ ಆರೋಗ್ಯಕರ ಆಹಾರವೆಂದು ತಿಳಿದಿದ್ದಾರೆ. ಇದರ ಜತೆಗೆ ವಾಲ್​ನಟ್ಸ್ ಒಮೆಗಾ -3 ಆಮ್ಲಗಳ ಉತ್ತಮ ಮೂಲವಾಗಿದೆ. ಇದನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಕೆಲವರು ನೆನೆಸಿದ ವಾಲ್​ನಟ್ಸ್ ತಿನ್ನಲು ಶಿಫಾರಸು ಮಾಡುತ್ತಾರೆ.

ಕ್ಯಾನೋಲಾ ಎಣ್ಣೆ

ಇತರೆ ಎಣ್ಣೆಗಳಿಗೆ ಹೋಲಿಸಿದರೆ ಕ್ಯಾನೋಲಾ ಎಣ್ಣೆಯು ಆರೋಗ್ಯಕರವಾಗಿದೆ. ಇದರಲ್ಲಿ ಒಮೆಗಾ ೩ ಅಂಶವು ಸಮೃದ್ಧವಾಗಿದೆ. ಒಂದು ಚಮಚ ಕ್ಯಾನೋಲಾ ಎಣ್ಣೆಯಲ್ಲಿ ೧.೨೮ ಗ್ರಾಂ ಒಮೆಗಾ ೩ ಸಮೃದ್ಧವಾದ ಕೊಬ್ಬಿನಾಮ್ಲ ಮಟ್ಟವನ್ನು ಹೊಂದಿರುತ್ತದೆ. ಇದು ಮಹಿಳೆಯರಿಗೆ ಅತ್ಯುತ್ತಮವಾದ ಪೋಷಕಾಂಶವನ್ನು ನೀಡುತ್ತದೆ. ಮುಖ್ಯವಾಗಿ ಈ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಉತ್ತಮವಾದ ಪ್ರಯೋಜನಗಳನ್ನು ನೀಡುತ್ತದೆ.

ಅಗಸೆ ಬೀಜ

ಒಮೆಗಾ - 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ 
ಅಗಸೆ ಬೀಜ

ಅಗಸೆದ ಬೀಜ ಮತ್ತು ಎಣ್ಣೆಯಲ್ಲಿ ಒಮೆಗಾ 3 ಅಧಿಕವಿದ್ದು ಸಸ್ಯಾಹಾರಿಗಳು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಚಿಯಾ ಬೀಜಗಳು

ಅತ್ಯಂತ ಜನಪ್ರಿಯ ಮತ್ತು ಟ್ರೆಂಡಿ ಬೀಜಗಳಲ್ಲಿ ಒಂದಾದ ಚಿಯಾ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದಾಗ್ಯೂ, ಅವುಗಳನ್ನು ತೂಕ ನಷ್ಟ ಮತ್ತು ಹೃದಯದ ಆರೋಗ್ಯಕರ ಪದಾರ್ಥ ಎಂದು ಕರೆಯಲಾಗುತ್ತದೆ. ಚಿಯಾ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದನ್ನು ನಿಮ್ಮ ಆಹಾರದಲ್ಲಿ ಸುಲಭವಾಗಿ ಸೇರಿಸಬಹುದು. ಚಿಯಾ ಬೀಜಗಳಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಚಿಯಾ ಬೀಜಗಳನ್ನು ಮಿಲ್ಕ್ ಶೇಕ್​ಗಳಲ್ಲಿ ನಿಯಮಿತ ಪ್ರಮಾಣದಲ್ಲಿ ಸೇರಿಸುವುದರಿಂದ ಒಮೆಗಾ-3 ಅಂಶ ದೇಹಕ್ಕೆ ಸಿಗುತ್ತದೆ.

ಸಸ್ಯಾಹಾರಿ ಪ್ರಾಣಿಗಳ ಮಾಂಸದಲ್ಲಿ

ಆಡು, ಕುರಿ ಇವೆಲ್ಲಾ ಬರೀ ಹುಲ್ಲು, ಸೊಪ್ಪು ತಿಂದು ಬದುಕುತ್ತವೆ. ಇಂತಹ ಪ್ರಾಣಿಗಳ ಮಾಂಸದಲ್ಲೂ ಒಮೆಗಾ 3 ಕೊಬ್ಬಿನಂಶವಿರುತ್ತದೆ.

ಎಡಮೇಮ್

ಎಡಮೇಮ್ ಎಂಬುದು ಜಪಾನ್ ದೇಶದಲ್ಲಿನ ಜನಪ್ರಿಯವಾದ ಸೋಯಾಬೀನ್ ಉತ್ಪನ್ನ. ಎಡಮೇಮ್ ನಲ್ಲಿ ಪೌಷ್ಟಿಕಾಂಶದ ಉತ್ತಮ ಮೂಲವಾಗಿದ್ದು, ಇದರಲ್ಲಿಯೂ ಕೂಡ ಒಮೆಗಾ ೩ ಸಮೃದ್ಧವಾಗಿದೆ.  ಸಸ್ಯಾಹಾರಿಗಳಾಗಿದ್ದರೆ  ಆಹಾರದಲ್ಲಿ ಎಡಮೇಮ್ ಅನ್ನು ತಪ್ಪದೇ ಸೇರಿಸಬಹುದು.  ಸೋಯಾ ಬೀನ್ ಎಣ್ಣೆಯನ್ನು ಕೂಡ ಅಡುಗೆಗೆ ಬಳಕೆ ಮಾಡಬಹುದು. ಇದರಲ್ಲಿಯೂ  ದೇಹಕ್ಕೆ ಅಗತ್ಯವಾದ ಒಮೆಗಾ ಪೋಷಕಾಂಶಗಳು ದೊರೆಯುತ್ತವೆ.

ಕುಂಬಳಕಾಯಿ ಬೀಜ

ಕುಂಬಳ ಕಾಯಿ ಬೀಜದಲ್ಲೂ ಒಮೆಗಾ 3 ಕೊಬ್ಬಿಣಂಶವಿರುವುದರಿಂದ ವೆಜ್ ಮಾತ್ರ ತಿನ್ನುವವರು ಕುಂಬಳಕಾಯಿ ಬೀಜ ತಿಂದು ಪ್ರಯೋಜನ ಪಡೆಯಲು ಮರೆಯಬಾರದು.

ಇತರ ಸಮುದ್ರಾಹಾರ

ಒಮೆಗಾ - 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ 
ಒಮೆಗಾ 3 ಕೊಬ್ಬಿನಂಶ ಇರುವ ಮೀನುಗಳು

ಮೀನನ್ನು ಹೊರತು ಪಡಿಸಿ ಏಡಿ, ಮೃದ್ವಂಗಿಗಳು ಈ ರೀತಿಯ ಸಮುದ್ರಾಹಾರಗಳಲ್ಲೂ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ. ಸಾಮಾನ್ಯವಾಗಿ ಎಲ್ಲಾ ಬಗೆಯ ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುತ್ತದೆ. ಅದರಲ್ಲೂ ಕೊಬ್ಬಿನಂಶ ಅಧಿಕವಿರುವ ಮೀನಿನಲ್ಲಿ ಉದಾಹರಣೆಗೆ ಅಂಜಲ್ ಇವುಗಳಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿರುತ್ತದೆ.

ಬೀನ್ಸ್

ಒಮೆಗಾ -3 ಅನ್ನು ಸೇರಿಸಲು ಮತ್ತೊಂದು ಉತ್ತಮ ಮಾರ್ಗವೆಂದರೆ ಬೀನ್ಸ್. ಇದು ಒಮೆಗಾ -3 ನ ಅತ್ಯಂತ ಪೌಷ್ಟಿಕ ಮೂಲವಾಗಿದೆ. ಇದನ್ನು ಹೆಚ್ಚಾಗಿ ಸಾಂಬಾರ್ ಮತ್ತು ಸಲಾಡ್‌ಗಳ ರೂಪದಲ್ಲಿ ಸೇರಿಸಲಾಗುತ್ತದೆ.

ಆಲೀವ್ ಎಣ್ಣೆ

ಆಲೀವ್ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನಂಶವಿದೆ. ಅದರಲ್ಲೂ ಸಂಸ್ಕರಿಸದ ಆಲೀವ್ ಎಣ್ಣೆಯಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ.

ಎಲೆ ಕೋಸು

ಎಲೆ ಕೋಸು ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಆದರೆ ಎಲೆ ಕೋಸು ವಿಟಮಿನ್ ಸಿ, ಫಾಸ್ಫರಸ್ ಮತ್ತು ಫೈಬರ್‌ನಂತಹ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳ ಜೊತೆಗೆ ಒಮೆಗಾ -3 ಸಮೃದ್ಧವಾಗಿದೆ. ಅಧ್ಯಯನಗಳ ಪ್ರಕಾರ, ಎಲೆ ಕೋಸನ್ನು ಆಹಾರದಲ್ಲಿ ಸೇರಿಸುವುದರಿಂದ ಹೃದ್ರೋಗದ ಅಪಾಯವನ್ನು ಶೇ. 16 ರಷ್ಟು ಕಡಿಮೆ ಮಾಡಬಹುದು. ಎಲೆ ಕೋಸನ್ನು ಬೇಯಿಸುವುದರಿಂದ ಇದರಲ್ಲಿನ ಪೋಷಕಾಂಶ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ.

ಮೊಟ್ಟೆ

ಒಮೆಗಾ - 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ 
ಮೊಟ್ಟೆ

ಮೊಟ್ಟೆಯ ಹಳದಿಯಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಸೋಯಾಬೀನ್ ಬೀನ್ಸ್

ಇದು ಜಪಾನ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಸೋಯಾಬೀನ್ ಬೀನ್ಸ್ ಕೂಡ ಉತ್ತಮ ಪೌಷ್ಟಿಕಾಂಶದ ಮೂಲವಾಗಿದೆ. ಇದು ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಸಸ್ಯಾಹಾರಿಗಳು ಒಮೆಗಾ -3 ಕೊಬ್ಬಿನಾಮ್ಲ ಪೋಷಕಾಂಶಕ್ಕಾಗಿ ಆಹಾರದಲ್ಲಿ ಇದನ್ನು ಹೆಚ್ಚಾಗಿ ಸೇರಿಸಿಕೊಳ್ಳಬಹುದು. ಒಮೆಗಾ -3 ಹೊರತಾಗಿ, ಇವು ಸಸ್ಯ ಆಧಾರಿತ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ.  ಇದನ್ನು ಸಲಾಡ್ ರೂಪದಲ್ಲಿ ಕೂಡ ಸೇವಿಸಬಹುದು.

ಬೆಣ್ಣೆ ಹಣ್ಣು

ಈ ಹಣ್ಣಿನಲ್ಲಿ ಅನೇಕ ಆರೋಗ್ಯವರ್ಧಕ ಗುಣವಿದೆ, ಒಂದು ಬೆಣ್ಣೆ ಹಣ್ಣಿನಲ್ಲಿ 250mg ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಷ್ಟ್ರೀಯ ಯುವ ದಿನ

ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ

ಪುರಾಣದಲ್ಲಿ ಅಮರಾವತಿ ಇಂದ್ರ ದೇವನ ರಾಜಧಾನಿ

ಪುರಾಣದಲ್ಲಿ ಅಮರಾವತಿ ಇಂದ್ರ ದೇವನ ರಾಜಧಾನಿಯಾಗಿತ್ತಂತೆ