in ,

ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ

ರಾಷ್ಟ್ರೀಯ ಯುವ ದಿನ
ರಾಷ್ಟ್ರೀಯ ಯುವ ದಿನ

ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸವಿನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ.

1984 ರಲ್ಲಿ ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು ಮತ್ತು 1985 ರಿಂದ ಈವೆಂಟ್ ಅನ್ನು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ.

ಮಹಾನ್ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅಂದರೆ ಜನವರಿ 12 ಅನ್ನು ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು 1984 ರಲ್ಲಿ ಭಾರತ ಸರ್ಕಾರವು ತೆಗೆದುಕೊಂಡ ನಿರ್ಧಾರವಾಗಿತ್ತು. ಭಾರತ ಸರ್ಕಾರವು ‘ಸ್ವಾಮೀಜಿಯವರ ತತ್ವಶಾಸ್ತ್ರ ಮತ್ತು ಅವರು ಬದುಕಿದ ಮತ್ತು ದುಡಿದ ಆದರ್ಶಗಳು ಭಾರತೀಯ ಯುವ ದಿನಾಚರಣೆಗೆ ಸ್ಫೂರ್ತಿಯ ಉತ್ತಮ ಮೂಲವಾಗಿದೆ’.    

ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ
ವೀರ್‍ಚಂದ್ ಗಾಂಧಿ, ಹೆವಿವಿಟಾರ್ನೆ ಧರ್ಮಪಾಲ ಅವರೊಂದಿಗೆ ಧರ್ಮ ಸಂಸತ್ತಿನಲ್ಲಿ ವಿವೇಕಾನಂದ

ಯುವಕನೊಬ್ಬ ಕೊಲ್ಕತಾದ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಇದ್ದಕ್ಕಿದ್ದಂತೆ ಜೋರಾದ ಶಬ್ಬ ಕೇಳಿಸಿತು. ಕುದುರೆಗಾಡಿಯೊಂದು ವೇಗವಾಗಿ ಧಾವಿಸುತ್ತಿದ್ದುದನ್ನು ನೋಡಿದನು. ಕುದುರೆ ಎಷ್ಟು ವೇಗವಾಗಿ ಓಡಲು ಸಾಧ್ಯವೊ ಅಷ್ಟೂ ವೇಗವಾಗಿ ಓಡುತ್ತಿತ್ತು. ಕುದುರೆ ಬೆದರಿದಂತಿತ್ತು. ಗಾಡಿಯಲ್ಲಿ ಕುಳಿತಿದ್ದ ಮಹಿಳೆಯೂ ಬಹಳ ಹೆದರಿದ್ದಳು. ಆಕೆ ಅಪಾಯದಲ್ಲಿದ್ದಳು, ಏಕೆಂದರೆ ಗಾಡಿ ಯಾವಾಗ ಬೇಕಾದರೂ ಉರುಳಿ ಬೀಳಬಹುದಾಗಿತ್ತು. ಯಾರೂ ಅವಳಿಗೆ ಸಹಾಯ ಮಾಡುವಂತಿರಲಿಲ್ಲ. ಇದನ್ನು ಆ ಯುವಕ ನೋಡುತ್ತಿದ್ದ. ಆತ ಬಹು ಧೈರ್ಯಶಾಲಿ. ಕುದುರೆ ಹತ್ತಿರ ಬರುತ್ತಿದ್ದಂತೆ ಓಡಿ, ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ, ಅದರ ಲಗಾಮನ್ನು ಹಿಡಿದು ಕುದುರೆ ನಿಲ್ಲುವಂತೆ ಎಳೆದ. ಆತನೆ ನರೇಂದ್ರ, ಮುಂದೆ ಸ್ವಾಮಿ ವಿವೇಕಾನಂದರೆಂದು ಪ್ರಸಿದ್ಧರಾದವರು.

ಸ್ವಾಮಿ ವಿವೇಕಾನಂದರ ಜನ್ಮದಿನ ಜನವರಿ 12, 1863, ಭಾರತೀಯ ಪಂಚಾಂಗದ ಪ್ರಕಾರ ಪೌಷ ಕೃಷ್ಣ ಸಪ್ತಮಿ ತಿಥಿಯಂದು, ಇದು ಪ್ರತಿ ವರ್ಷ ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಬರುತ್ತದೆ. ಇದನ್ನು ರಾಮಕೃಷ್ಣ ಮಠ ಮತ್ತು ಮಿಷನ್‌ನ ವಿವಿಧ ಕೇಂದ್ರಗಳಲ್ಲಿ ಸಾಂಪ್ರದಾಯಿಕ ಹಿಂದೂ ವಿಧಾನದಲ್ಲಿ ಆಚರಿಸಲಾಗುತ್ತದೆ.

ವಿದ್ಯಾರ್ಥಿ ದೆಸೆಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾದ ನರೇಂದ್ರ, ಕಡೆಗೆ ಅವರ ಶಿಷ್ಯರಾಗಿ ಸ್ವಾಮಿ ವಿವೇಕಾನಂದರೆಂದು ಜಗದ್ವಿಖ್ಯಾತರಾದರು. ಅವರ ಉಜ್ವಲ ರಾಷ್ಟ್ರಪ್ರೇಮ ಹಾಗೂ ಜ್ವಲಂತ ಮಾನವ ಪ್ರೇಮ ಆದರ್ಶವಾದುದು. ಶ್ರೀ ರಾಮಕೃಷ್ಣ ಮಹಾಸಂಸ್ಥೆಯ ನಿರ್ಮಾಣಕ್ಕಾಗಿ, ಸನಾತನ ಧರ್ಮದ ಪ್ರಸಾರಕ್ಕಾಗಿ, ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅವರು ಸ್ಪೂರ್ತಿಯ ನೆಲೆಯಾಗಿದ್ದಾರೆ.

ನರೇಂದ್ರನ ಬಾಲ್ಯ ವೈವಿಧ್ಯಮಯವಾಗಿತ್ತು. ನರೇಂದ್ರ ತುಂಟತನಕ್ಕೆ, ಚತುರತೆಗೆ, ಬುದ್ಧಿವಂತಿಕೆಗೆ ಹೆಸರಾಗಿದ್ದ. ಭಿಕ್ಷುಕರು ಮನೆಗೆ ಬಂದರೆ ತನ್ನ ಬಟ್ಟೆಯನ್ನೇ ಕೊಟ್ಟುಬಿಡುತ್ತಿದ್ದ. ರಾಮಾಯಣ, ಮಹಾಭಾರತ ಮೊದಲಾದ ಕತೆಗಳನ್ನು ತಾಯಿಯಿಂದ ಕೇಳಿ ತಿಳಿದುಕೊಂಡಿದ್ದ. ಶಾಸ್ತ್ರಿಯ ಸಂಗೀತ ಹಾಗೂ ಮೃದಂಗ ನುಡಿಸುವುದರಲ್ಲಿ ಉತ್ತಮ ಕಲಾವಿದನಾಗಿದ್ದ. ಎಂಟ್ರೆನ್ಸ ಪರೀಕೆಯಲ್ಲಿ ಉತೀರ್ಣನಾಗಿ 1879ರಲ್ಲಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿ ಅಲ್ಲಿನ ಪ್ರಾಚಾರ್ಯ ವಿಲಿಯಂ ಹೇಸ್ಟಿಯವರ ಮೆಚ್ಚುಗೆಗೆ ಪಾತ್ರನಾದ ವಿದ್ಯಾರ್ಥಿಯಾಗಿದ್ದನು.

ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ
ವಿವೇಕಾನಂದ ವಯಸ್ಕರಾಗಿದ್ದಾಗದ ಚಿತ್ರ

1886ನೇ ಇಸವಿ ಮಾರ್ಚ15ರಂದು ಶ್ರೀ ರಾಮಕೃಷ್ಣ ಪರಮಹಂಸರು ವಿಧಿವಶರಾದರು. ನರೇಂದ್ರ ಸನ್ಯಾಸಿ ವಿವೇಕಾನಂದರೆನಿಸಿದರು. ಭಾರತೀಯ ಸಮಾಜದ ಬದುಕನ್ನು ಅರ್ಥಪೂರ್ಣವಾಗಿ ತಿದ್ದಲು ದೃಢಸಂಕಲ್ಪ ಮಾಡಿದರು. ವಿವೇಕಾನಂದರು ಮೊದಲು ಭಾರತದಲ್ಲೆಲ್ಲಾ ಸಂಚರಿಸಿ ಆಯಾ ಪ್ರದೇಶದ ರಾಜಮಹಾರಾಜರು, ವಿದ್ವಾಂಶರುಗಳನ್ನು ಭೇಟಿ ಮಾಡಿ ಶ್ರೀ ರಾಮಕೃಷ್ಣ ಪರಮಹಂಸರ ವಾಣಿಯನ್ನು ಪ್ರಚಾರ ಮಾಡಿದರು. ಯುವ ಜನರಲ್ಲಿ ಜಾಗೃತಿ ಮೂಡಿಸಿದರು. ವಿವೇಕಾನಂದರಿಗೆ ತಾನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ ಬರಬೇಕು, ಅಲ್ಲಿನ ಜನರಿಗೆ ಭಾರತದ ಜ್ಞಾನವನ್ನು ಉಣಬಡಿಸಬೇಕು, ಭಾರತೀಯ ಸಂಸ್ಕøತಿ ಮತ್ತು ಆಧ್ಯಾತ್ಮಿಕ ಸಂಪತ್ತುಗಳನ್ನು ಪರಿಚಯಿಸಿ ಭಾರತಕ್ಕೆ ಯೋಗ್ಯ ಸ್ಥಾನ ಕಲಿಸಬೇಕು ಎಂಬ ಅಪೇಕ್ಷೆಯಿತ್ತು. ಅದೇ ಸಮಯಕ್ಕೆ ಅಮೇರಿಕಾದ ಚಿಕಾಗೋ ನಗರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುವ ಏರ್ಪಾಟಾಗಿತ್ತು. ವಿವೇಕಾನಂದರು ಅಲ್ಲಿಗೆ ಹೋಗಲು ನಿರ್ಧರಿಸಿ 1893ನೇ ಇಸವಿ ಮೇ 31ರಂದು ಅಮೇರಿಕಾಕ್ಕೆ ಪ್ರಯಾಣ ಮಾಡಿದರು. ಹಾರ್ವರ್ಡ ವಿಶ್ವವಿದ್ಯಾನಿಲಯದಲ್ಲಿ ಗ್ರೀಕ್ ಪಂಡಿತರಾಗಿದ್ದ ಪ್ರೊ. ರೈಟ್ ಮತ್ತು ಶ್ರೀಮತಿ ಹೇಲ್ ಅವರುಗಳು ಇವರಿಗೆ ನೆರವಾದರು.

1893 ಸೆಪ್ಟೆಂಬರ್ 11ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸೋದರ ಸೋದರಿಯರೆ” ಎಂದು ಆತ್ಮೀಯತೆಯಿಂದ ಎಲ್ಲಾರನ್ನು ಸಂಭೋದಿಸಿದರು. ಈ ವಾಕ್ಯವನ್ನು ಕೇಳಿದೊಡನೆಯೇ ಸಭೆ ತನ್ನ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ಸೂಚಿಸಿತು. ಪುಟ್ಟ ಭಾಷಣ ಮಾಡಿ ಎಲ್ಲರ ಮನಸೂರೆಗೊಂಡು ಹಿಂದೂ ಧರ್ಮದ ಹಿರಿಮೆಯನ್ನು ಇಡೀ ಜಿಗತ್ತಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಅವರ ವಿಶೇಷ ಭಾಷಣಗಳಿಗೆ ಅನೇಕ ಸಂಘ ಸಂಸ್ಥೆಗಳು ಏರ್ಪಾಡು ಮಾಡಿದವು. ಅವರ ಭಾಷಣಗಳು ತುಂಬಾ ಅರ್ಥಪೂರ್ಣವಾಗಿಯೂ, ಮೌಖಿಕವಾಗಿಯೂ, ವಿಚಾರ ಪ್ರಚೋದಕವಾಗಿಯೂ ಇರುತ್ತಿದ್ದವು. ಮುಂದೆ ಇಂಗ್ಲೆಂಡ್ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ವೇದಾಂತದ ಹಿರಿಮೆಯನ್ನು ಪರಿಚಯ ಮಾಡಿಸಿದರು.

ಭಾರತಾಂಬೆಯ ವರಪುತ್ರ, ಸಮಾಜ ಸುಧಾರಕ, ಮಹಾಪುರುಷ, ಯೋಗಿ ತಮ್ಮ 39ನೇ ವರ್ಷದ ಕಿರುವಯಸ್ಸಿನಲ್ಲಿಯೇ ಅಂದರೆ 1902ನೇ ಇಸವಿ ಜುಲೈ 4ರಂದು ವಿಧಿವಶರಾದರು.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದ್ರ ಮತ್ತು ಇಂದ್ರಾಣಿ

ಇಂದ್ರ – ಸ್ವರ್ಗಲೋಕದ ಒಡೆಯ ಮತ್ತು ಇಂದ್ರಾಣಿ – ಸಪ್ತಮಾತೃಕೆಗಳಲ್ಲಿ ಪ್ರಮುಖಳು

ಒಮೆಗಾ - 3

ಒಮೆಗಾ – 3, ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ