in ,

ನೇಲಬೇವು, ನೆಲ ಬಸಳೆ, ಇನ್ನೂ ತುಂಬಾ ಹೆಸರಿದೆ ಇದಕ್ಕೆ

ನೆಲ ಬಸಳೆ
ನೆಲ ಬಸಳೆ

ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೇ ಇದು ಅತ್ಯಂತ ಕಹಿಯಾಗಿರುದರಿಂದ ಮಹಾತಿಕ್ತ ಎಂಬ ಹೆಸರೂ ಇದೆ.

ನೆಲಬೇವು ಅಕೇಂಥೇಸಿಯೆ ಕುಟುಂಬಕ್ಕೆ ಸೇರಿದ ಮುಖ್ಯ ಔಷಧಿ ಬೆಳೆ. ಇದು ನೇರವಾಗಿ ಬೆಳೆಯುವ ಗಿಡ. ಪೂರ್ಣ ಬೆಳೆದ ಗಿಡಗಳು ೩೦-೧೦೦ ಸೆಂ.ಮೀ.ಎತ್ತರವಿರುತ್ತದೆ. ಕೊಂಬೆಗಳು ತೀಕ್ಷ್ಣವಾದ ಚೌಕಾಕಾರ ಹೊಂದಿ ಕೆಲವೊಮ್ಮೆ ಕೆರಿದಾದ ರೆಕ್ಕೆಗಳಂತೆ ಗಿಡದ ತುದಿಯ ಕಡೆಗೆ ಚುಚ್ಚಿರುತ್ತದೆ. ಎಲೆಗಳಿಗೆ ತೊಟ್ಟಿರುತ್ತದೆ. ಹೂಗಳು ಚಿಕ್ಕದಾಗೆದ್ದು ಅವು ಹೂಗೊಂಚಲಿನಲ್ಲಿ ಏಕಾಂತವಾಗಿರುತ್ತವೆ. ಹೂದಳಗಳು ಗುಲಾಬಿ ಬಣ್ಣವಿದ್ದು ಹೊರಭಾಗದಲ್ಲಿ ರೋಮಭರಿತವಾಗಿರುತ್ತದೆ. ಹಣ್ಣಿನ ಎರಡೂ ತುದಿಗಳು ಚೂಪಾಗಿ ಇರುತ್ತವೆ.bಬೀಜಗಳು ಬಹಳವಾಗಿದ್ದು ಅವುಗಳ ಬಣ್ಣ ಹಳದಿಯಿದ್ದು ಮೃದುವಾಗಿರುತ್ತದೆ.

ನೆಲಬೇವಿನ ಪಂಚಾಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ. ನೆಲಬೇವು ಒಂದು ಗಡುತರ ಸಸ್ಯವಾಗಿರುವುದರಿಂದ ಇದನ್ನು ಹಲವಾರು ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಜೇಡಿಮಣ್ಣಿನಿಂದ ಹಿಡಿದ ಮರಳು ಮಿಶ್ರಿತ ಮಣ್ಣಿನಲ್ಲಿ ಮತ್ತು ಸಾವಯವ ಪದಾರ್ಥ ಹೊಂದಿದ ಮರಳು ಮಿಶ್ರಿತ ಜೇಡಿಮಣ್ಣು, ಈ ಬೆಳೆಗೆ ಬಲು ಸೂಕ್ತವಾಗಿದೆ. ಹೆಚ್ಚು ನೀರು ನಿಲ್ಲುವ ಹಾಗೂ ಸಮಸ್ಯಾತ್ಮಕ ಮಣ್ಣುಗಳು ಈ ಬೆಳೆಗೆ ಸೂಕ್ತವಲ್ಲ.

ನೇಲಬೇವು, ನೆಲ ಬಸಳೆ, ಇನ್ನೂ ತುಂಬಾ ಹೆಸರಿದೆ ಇದಕ್ಕೆ
ನೆಲ ಬಸಳೆ

ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಅನಂತರ ಬರುವ ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ. ಇದರಿಂದ ಶರೀರವು ಆರೋಗ್ಯವಂತವಾಗಿರುತ್ತದೆ.

ಕರಾವಳಿಯಲ್ಲಿ ಹೆಚ್ಚಿನ ಜನರ ಮನೆಗಳಲ್ಲಿ ಇರುತ್ತದೆ. ಮೊದಲ ಮಳೆ ಬಿದ್ದ ಮೇಲೆ ಈ ವನಸ್ಪತಿಯ ಸಸಿಗಳು ಮೊದಲು ಬಿದ್ದಿರುವ ಬೀಜಗಳಿಂದ ಬಹಳಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತವೆ. ಈ ಸಸಿಗಳನ್ನು ತಂದು ಮನೆಯಲ್ಲಿ ನೆಡಬಹುದು. ಮಳೆಗಾಲ ಮುಗಿಯುವಾಗ ಬರುವ ಬೀಜಗಳನ್ನು ಸಂಗ್ರಹಿಸಿಟ್ಟರೆ ಮುಂದಿನ ಮಳೆಗಾಲದ ಆರಂಭದಲ್ಲಿ ಅವುಗಳನ್ನು ಬಿತ್ತಿ ಅವುಗಳಿಂದಲೂ ಸಸಿಗಳನ್ನು ತಯಾರಿಸಬಹುದು. ನೀರು ಲಭ್ಯವಿದ್ದರೆ ಮನೆಯಲ್ಲಿ ಕುಂಡಗಳಲ್ಲಿ ಈ ಬೀಜಗಳನ್ನು ಯಾವಾಗ ಬೇಕಾದರೂ ಬಿತ್ತಬಹುದು.

ಔಷಧೀಯ ಗುಣಗಳು

ಜ್ವರ : ಮಲೇರಿಯಾ,ಟೈಫಾಯ್ಡ್ ಮತ್ತು ಯವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.

ಅಷ್ಟೇ ಅಲ್ಲದೆ ಯಾವುದೇ ಜ್ವರವಿದ್ದರೂ ಮುಷ್ಠಿಯಷ್ಟು ನೆಲಬೇವು ಮತ್ತು ಕಾಲು ಚಮಚ ಶುಂಠಿಯ ಪುಡಿಯನ್ನು ೨ ಲೋಟ ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟ ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಅರ್ಧ ಲೋಟ ಬೆಳಗ್ಗೆ ಮತ್ತು ಅರ್ಧ ಲೋಟ ಸಾಯಂಕಾಲ ಕುಡಿಯಬೇಕು.

ಕಾಲರಾ : ನೆಲಬೇವಿನ ಎಲೆಗಳರಸದೊಂದಿಗೆ ಬೇವು ಮತ್ತು ಅಮೃತಬಳ್ಳಿ ಎಲೆಗಳ ರಸವನ್ನು ಸಮಭಾಗ ತೆಗೆದುಕೊಂಡು ಅದಕ್ಕೆ ಜೇನು ಬೆರಸಿ ಕುಡಿಯುವುದರಿಂದ ಕಾಲರಾ ನಿಯಂತ್ರಣಕ್ಕೆ ಬರುತ್ತದೆ.

ಒಣಗಿದ ನೆಲಬೇವಿನ ಪುಡಿಯನ್ನು ಮಾಡಿಡಬೇಕು. ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿ ಆಗುತ್ತಿದ್ದರೆ ಅರ್ಧ ಚಮಚ ನೆಲಬೇವಿನ ಪುಡಿಯನ್ನು ಅರ್ಧ ಚಮಚ ಸಕ್ಕರೆಯ ಜೊತೆಗೆ ಜಗಿದು ತಿನ್ನಬೇಕು.

ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು.

ಕಾಲಮೇಘದಂತಹ ಗಿಡಮೂಲಿಕೆಯನ್ನು ಕುದಿಸಿ ಆ ನೀರು ಸೇವಿಸಿದರೆ ಕೆಮ್ಮು ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.

ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.

ನೇಲಬೇವು, ನೆಲ ಬಸಳೆ, ಇನ್ನೂ ತುಂಬಾ ಹೆಸರಿದೆ ಇದಕ್ಕೆ
ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ

ಮೊಣಕಾಲಿನಲ್ಲಿ ಸಾಧಾರಣದಿಂದ ತುಸು ಹೆಚ್ಚೇ ಅನ್ನಿಸುವುದರ ಮಟ್ಟಿಗೆ ನೋವು ಮತ್ತು ಸೆಳೆತ ಇರುತ್ತದೆ. ಅಂತಹವರು ಈ ಆಂಡ್ರೋಗ್ರಾಫಿಸ್ ನ ಸಾರವನ್ನ ಪ್ರತಿದಿನ ತೆಗೆದುಕೊಳ್ಳುತ್ತಾ ಬಂದಲ್ಲಿ ಅವರ ಮೊಣಕಾಲಿನ ನೋವು ಮತ್ತು ಸೆಳೆತ ಬಹಳಷ್ಟು ಕಡಿಮೆಯಾಗುತ್ತದೆ.

ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತ್ರಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯಷ್ಟುತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.
ಕಾಮಾಲೆ ಮತ್ತು ಇತರ ಯಕೃತ್ತಿನತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ.

ಹಾವುಕಡಿತದಲ್ಲಿಯೂ ನೆಲಬೇವಿನ ಕಷಾಯ ತುಂಬ ಉಪಯುಕ್ತ. ಇದು ವಿಷಹರವಾಗಿ ಕೆಲಸ ಮಾಡುತ್ತದೆ.


ಅತಿರಕ್ತಸ್ರಾವ : ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ೩ಬಾರಿ ಕುಡಿಯಬೇಕು.

ಕಾಲಮೇಘವು ಶರೀರದ ಮುಕ್ತ ರಾಡಿಕಲ್ ಗಳನ್ನು ನಿವಾರಿಸುವಲ್ಲಿ ಸಶಕ್ತವಾಗಿದೆ ಹಾಗೂ ಆ ಮೂಲಕ ಯಕೃತ್ತಿನ ಅಥವ ಪಿತ್ತಕೋಶದ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.

ಸಕ್ಕರೆ ಕಾಯಿಲೆಂದ ಬಳಲುವವರು : ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.

ಅರ್ಧ ತಲೆನೋವು : ನೆಲಬೇವು,ಅಮೃತಬಳ್ಳಿ,ಬೇವಿನ ತೊಗಟೆ,ಅರಶಿನ ಸಮವಾಗಿ ಬೆರಸಿ ಕುಟ್ಟಿಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.ಎದೆಯುರಿ,ತಲೆಸುತ್ತು ಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

13 Comments

ಮಕ್ಕಳಲ್ಲಿ ಬಳಸುವ ಬಜೆ

ಮಕ್ಕಳಲ್ಲಿ ಬಳಸುವ “ಬಜೆ” ಗಿಡಮೂಲಿಕೆಯ ಕೃಷಿ ಹೀಗಿದೆ

ಸಾಲು ಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೇ ಗೊತ್ತಿಲ್ಲ?