in ,

ನೈಸರ್ಗಿಕವಾದ ಸಕ್ಕರೆ ಜೇನು ತುಪ್ಪ

ಜೇನು ತುಪ್ಪ
ಜೇನು ತುಪ್ಪ

ಜೇನುತುಪ್ಪ ಜೇನ್ನೊಣಗಳು ಉತ್ಪಾದಿಸುವ ಒಂದು ಸಿಹಿಯಾದ ಅತಿಮಂದ ದ್ರವ. ಜೇನಿನ ಮೂಲವಸ್ತು ಹೂವುಗಳ ಮಕರಂದ. ನೀರೂ ಸೇರಿದಂತೆ ಇತರ ಯಾವುದೇ ವಸ್ತುವೂ ಸೇರಿಸಲ್ಪಡದೆ ಇರುವ ಜೇನು ಶುದ್ಧ ಜೇನೆನಿಸಿಕೊಳ್ಳುತ್ತದೆ. ಜೇನ್ನೊಣಗಳು ಹೊರತಾಗಿ ಇತರ ಕೆಲವು ಜಾತಿಯ ಕೀಟಗಳು ಸಹ ಜೇನನ್ನು ಉತ್ಪಾದಿಸುತ್ತವೆ. ಪ್ರತಿ ಕೀಟದ ಜೇನು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಜೇನು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವುದು. ಅಲ್ಲದೆ ಜೇನು ಕೆಲ ವಿಶಿಷ್ಟ ರಾಸಾಯನಿಕ ಗುಣಗಳನ್ನು ಹೊಂದಿದ್ದು ಬೇಕರಿ ಉತ್ಪನ್ನಗಳಲ್ಲಿ ಜನಪ್ರಿಯವಾಗಿದೆ. ಜೇನು ಅತಿ ಮಂದದ್ರವವಾಗಿದ್ದು ನೀರಿನಂಶ ಬಲು ಕಡಿಮೆಯಿರುವುದರಿಂದ ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗಲಾರವು. ಇದರಿಂದ ಜೇನು ಬಲು ದೀರ್ಘಕಾಲ ಕೆಡದೆ ಉಳಿಯಬಲ್ಲುದು. ಆದರೆ ಅತಿ ಹಳೆಯ ಜೇನಿನಲ್ಲಿ ಜಡಾವಸ್ಥೆಯಲ್ಲಿರುವ ಎಂಡೋಸ್ಪೋರ್ ಎಂಬ ಸೂಕ್ಷ್ಮಜೀವಿಗಳಿರುವ ಸಾಧ್ಯತೆಯಿದ್ದು ಶಿಶುಗಳಿಗೆ ಇವು ಅಪಾಯವನ್ನುಂಟುಮಾಡಬಲ್ಲವಾಗಿವೆ.

ನೈಸರ್ಗಿಕವಾದ ಸಕ್ಕರೆ ಜೇನು ತುಪ್ಪ
ಜೇನುನೊಣ

ಹೊಸಜೇನಿನಲ್ಲಿರುವ ಪರಾಗರೇಣುಗಳು ಮತ್ತು ಮಕರಂದಗಳ ಕಣಗಳ ಅಧ್ಯಯನದಿಂದ ಆ ಜೇನಿನ ಮೂಲವನ್ನು ತಿಳಿಯಬಹುದಾಗಿದೆ. ಜೇನುನೊಣಗಳು ಹೂವುಗಳಿಂದ ಮಕರಂದವನ್ನು ಸಂಗ್ರಹಿಸುವಾಗ ಹೂವುಗಳಿಗೆ ಪರಾಗಸ್ಪರ್ಶನ್ನೂ ಸಹ ಮಾಡುವುದು. ಪರಸ್ಪರ ಸಹಕಾರಿಯಾಗುವಂತಹ ಜೀವವ್ಯವಸ್ಥೆಗೆ ಇದೊಂದು ಉದಾಹರಣೆ. ಇಂದು ಗೂಡುಗಳಲ್ಲಿ ಜೇನನ್ನು ಸಾಕಿ ಜೇನುತುಪ್ಪವನ್ನು ಉತ್ಪಾದಿಸುವುದು ಒಂದು ದೊಡ್ಡ ಉದ್ಯಮವಾಗಿದೆ. ನೊಣಗಳಿಗೆ ಪೋಷಕಯುಕ್ತ ಆಹಾರದ ಕೊರತೆಯಾದಾಗ ಜೇನು ಕೃಷಿಕನು ಇವುಗಳಿಗೆ ಹೆಚ್ಚುವರಿಯಾಗಿ ಬೇರೆ ಆಹಾರವನ್ನು ಒದಗಿಸುವನು. ಜೇನು ತುಪ್ಪ ಕರ್ನಾಟಕದಲ್ಲಿ ತುಡವಿಯಿಂದ ಮಾಡಲ್ಪಟ್ಟದ್ದು ಮಾರುಕಟ್ಟೆಗಳಲ್ಲಿ ಸಿಗುವಂತದ್ದಾಗಿದೆ.

ಜೇನುತುಪ್ಪ ಇಂದಿಗೂ ಅಳಿಯದೆ ಉಳಿಯಲು ಮುಖ್ಯ ಕಾರಣ ಇದು ಬೇರೆ ಔಷಧಿಗಳಂತ್ತಲ್ಲದೇ ದೀರ್ಘಕಾಲದ ವರೆಗೆ ಬಾಳಿಕೆ ಬರುತ್ತದೆ ಮತ್ತು ಉಪಯೋಗಕ್ಕೆ ಅನುಕೂಲಕರವಾಗಿರುತ್ತದೆ ಎನ್ನುವುದು ಆಗಿದೆ.

ಜೇನುತುಪ್ಪದಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶವಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ವಿಟಮಿನ್ ಬಿ ಹಾಗೂ ಮಿನರಲ್ಸ್ ಗಳು, ಕ್ಯಾಲ್ಸಿಯಂ ಹಾಗೂ ಹೇರಳವಾಗಿವುದರಿಂದ ನಮ್ಮ ದೇಹದ ಮೇಲೆ ಈ ಜೇನುತುಪ್ಪವು ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ.

ಕಫ, ಶೀತ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅಸ್ತಮಾದಂತಹ ಕಾಯಿಲೆಗಳನ್ನು ಎದುರಿಸಲು ದಿನನಿತ್ಯ ಜೇನುತುಪ್ಪದ ಸೇವನೆಯನ್ನು ಸೂಚಿಸಲಾಗುತ್ತದೆ.

ದಿನಕ್ಕೆ ಕೇವಲ ಒಂದರಿಂದ ಎರಡು ಚಮಚದಷ್ಟು ಮಾತ್ರ ಹಣ್ಣಿನೊಂದಿಗೆ ಅಥವಾ ನೇರವಾಗಿ ಈ ತುಪ್ಪವನ್ನು ಸೇವಿಸಬೇಕು. ಮುಖ್ಯವಾದ ವಿಚಾರ ಏನೆಂದರೆ ಈ ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಂಡರೆ ದೇಹದ ಉಷ್ಣತೆ ಯು ಹೆಚ್ಚಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಪದೇ ಪದೇ ಬಾಯಾರಿಕೆ ಆಗುವುದರಿಂದ ಸದಾ ಕಿರಿಕಿರಿ ಅನುಭವಿಸುತ್ತಾರೆ. ಈ ರೀತಿಯ ಸಮಸ್ಯೆ ಇರುವವರು ಜೇನುತುಪ್ಪವನ್ನು ಸೇವಿಸಿದರೆ ಉತ್ತಮ.

ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಜೊತೆಗೆ ನಮ್ಮ ಚರ್ಮವನ್ನು ಸಂರಕ್ಷಿಸುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.

ನೈಸರ್ಗಿಕವಾದ ಸಕ್ಕರೆ ಜೇನು ತುಪ್ಪ
ಜೇನುತುಪ್ಪ

ಚರ್ಮದ ಸಮಸ್ಯೆಗೆ ಮತ್ತು ತಲೆಯಲ್ಲಿ ಉಂಟಾಗುವ ಹೊಟ್ಟಿನ ನಿವಾರಣೆಗೆ ಜೇನುತುಪ್ಪವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ತಲೆತುರಿಕೆ ಕಡಿಮೆಯಾಗುತ್ತದೆ. ಜೇನುತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಕೂಡ ದೂರವಾಗುತ್ತದೆ ಮತ್ತು ಮುಖದ ಹೊಳಪು ಹೆಚ್ಚುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಜೇನುತುಪ್ಪವನ್ನು ತಿನಿಸಲಾಗುತ್ತದೆ, ಆ ಮೂಲಕ ಮಕ್ಕಳು ಕೆಮ್ಮು ಇಂತಹ ಸಮಸ್ಯೆಗಳಿಲ್ಲದೆ ಚೆನ್ನಾಗಿ ನಿದ್ರೆ ಮಾಡಲು ಸಹಕಾರಿಯಾಗುತ್ತದೆ.

ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.

ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.

ಜೊತೆಗೆ ಬೊಜ್ಜು ಕರಗಿಸಲು ಕೂಡ ಸಹಾಯವಾಗುತ್ತದೆ. ತಣ್ಣನೆಯ ನೀರಿಗೆ ಒಂದೆರಡು ಚಮಚ ಜೇನು ಹನಿ ಬೆರೆಸಿ ಪ್ರತಿನಿತ್ಯ ಸೇವಿಸಿದರೆ ನಿಮ್ಮ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.

ಆಹಾರದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ತಪ್ಪಿಸಲು ಈ ಜೇನು ಸಹಕಾರಿಯಾಗುತ್ತದೆ. ಅಲ್ಲದೇ ಚರ್ಮಕ್ಕೂ ಕೂಡ ಇದು ಬಹಳ ಒಳ್ಳೆಯದು.
ಇಷ್ಟೇ ಅಲ್ಲದೇ ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ.

ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತಕಣಗಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ ಮತ್ತು ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ. ಆ ಮೂಲಕ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಯೋಗಾಭ್ಯಾಸ ಮಾಡುವ ಮೊದಲು ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೈಹಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಇದರ ಜೊತೆಗೆ ದೇಹದ ತೂಕ ನಿರ್ವಹಣೆಗೆ ಅನುಕೂಲವಾಗಿದೆ.

ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.
ಯಾಕೆಂದರೆ ಕಲಬೆರಕೆ ಮಿಶ್ರಿತ ಜೇನಿನಲ್ಲಿ ಈ ಮೇಲಿನ ಅಂಶಗಳು ಇರುವುದಿಲ್ಲ. ಆದರೆ ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸದರೆ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

ಜೇನುತುಪ್ಪದಲ್ಲಿನ ವಿಧಗಳ ಬಗ್ಗೆ ತಿಳಿಸುವುದಾದರೆ ತುಡುವೆ ಜೇನ, ಹೆಜ್ಜೇನು, ನುಸರಿ ಜೇನು, ಕೋಲು ಜೇನು ಮುಂತಾದ ವಿಧಗಳಿವೆ ಅಂತೆಯೇ ಜೇನುತುಪ್ಪದಲ್ಲು ಕೂಡ ಇಚ್ಚಿ ಜೇನುತುಪ್ಪ, ನೇರಳೆ ಜೇನುತುಪ್ಪ, ಹೆಜ್ಜೇನು ತುಪ್ಪ, ಮಾವು, ತುಳಸಿ ಕಾಡು ಮುಜಂಟಿ ಇತ್ಯಾದಿಯಾಗಿ ವಿಂಗಡಿಸಲಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಜೇನುತುಪ್ಪದ ಬೇಡಿಕೆ ಹೆಚ್ಚಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ

ಕರ್ನಾಟಕ ಏಕೀಕರಣದ ನಂತರ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ

ಅಂಬರೀಶ್

ಹೆಸರಿಗೆ ತಕ್ಕ ಹಾಗೆ ರೆಬೆಲ್, ನಮ್ಮ ಅಂಬರೀಶ್