in ,

ನಿಂಬೆ ಹಣ್ಣಿನ ಉಪಯೋಗಗಳು

ನಿಂಬೆ ಹಣ್ಣಿನ ಉಪಯೋಗ
ನಿಂಬೆ ಹಣ್ಣಿನ ಉಪಯೋಗ

ನಿಂಬೆ ಹಣ್ಣಿನಲ್ಲಿ ಭರ್ಜರಿಯಾಗಿ ವಿಟಮಿನ್ ಸಿ ಸಿಗುತ್ತದೆ. ವಿಟಮಿನ್ ಸಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿಂಬೆ ರಸದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಪ್ರತಿದಿನ ಒಂದು ಲೋಟ ನಿಂಬೆ ಪಾನಕವನ್ನು ಕುಡಿದರೆ, ಅನೇಕ ರೋಗಗಳನ್ನು ತೊಡೆದುಹಾಕಬಹುದು.

ನಿಂಬೆ ರಸ ಶರೀರವನ್ನು ಡಿಟಾಕ್ಸ್ ಮಾಡುತ್ತದೆ. ಅಂದರೆ, ದೇಹದ ವಿಷಕಾರಕಗಳನ್ನು ಹೊರಗೆ ಹಾಕಲು ನೆರವಾಗುತ್ತದೆ. ದಿನವೂ ನಿಂಬೆ ಶರಬತ್ತು ಕುಡಿಯುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಹೊಟ್ಟೆಯ ರೋಗಗಳು ಗುಣವಾಗುತ್ತದೆ.

ಮನುಷ್ಯನ ಮೂತ್ರ ಪಿಂಡಗಳಲ್ಲಿ ಅಥವಾ ಕಿಡ್ನಿಗಳಲ್ಲಿ ಕಂಡು ಬರುವ ಕಲ್ಲುಗಳು ಹೆಚ್ಚಾಗಿ ಕ್ಯಾಲ್ಸಿಯಂ ಅಂಶದ ಶೇಖರಣೆಯಿಂದ ಉಂಟಾಗುವ ಘನ ವಸ್ತುಗಳು ಎನಿಸುತ್ತವೆ. ಮನುಷ್ಯನ ದೇಹದಲ್ಲಿ ಉಂಟಾಗುವ ಇಂತಹ ಆರೋಗ್ಯ ಸಮಸ್ಯೆಗಳಿಗೆ ಆಮ್ಲಿಯ ಪದಾರ್ಥಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ. ನಿಂಬೆ ಹಣ್ಣಿನಲ್ಲಿ ” ಸಿಟ್ರಿಕ್ ಆಸಿಡ್ ” ಎಂಬ ಆಮ್ಲವಿರುವುದರಿಂದ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಅರ್ಧ ಲೋಟ ಲೆಮನ್ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ಕರಗುತ್ತವೆ.

ನಿಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಸಿಗುತ್ತದೆ. ಇದು ಬಿಪಿ ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ಇದು ಕೊಲೆಸ್ಟ್ರಾಲ್ ಅಥವಾ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವುದಿಲ್ಲ ಮತ್ತು ಕ್ಯಾಲೊರಿಗಳನ್ನೂ ಕಡಿಮೆ ಮಾಡುತ್ತದೆ.

ನಿಂಬೆಯಲ್ಲಿ ಭರ್ಜರಿ ವಿಟಮಿನ್ ಸಿ ಸಿಗುತ್ತದೆ. ಇದು ತ್ವಚೆಯ ಆರೋಗ್ಯಕ್ಕೆ ಲಾಭದಾಯಕ. ಇದರಿಂದ ಚರ್ಮ ರೋಗಗಳೂ ದೂರವಾಗುತ್ತವೆ.

ನಿಂಬೆ ಹಣ್ಣಿನ ಉಪಯೋಗಗಳು
ನಿಂಬೆ ತ್ವಚೆಯ ಆರೋಗ್ಯಕ್ಕೆ ಲಾಭದಾಯಕ

ಉಗುರು ಬೆಚ್ಚಗಿನ ನೀರಿನಲ್ಲಿ ಲಿಂಬು ಜ್ಯೂಸ್​ ಮಾಡಿಕೊಂಡು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಂಜಾನೆಯೇ ಇದನ್ನು ಕುಡಿಯಬೇಕು. ಲಿಂಬು ಜ್ಯೂಸ್​​ನಿಂದ ದಿನವನ್ನು ಪ್ರಾರಂಭ ಮಾಡುವುದರಿಂದ ನಮ್ಮ ದೇಹಕ್ಕೆ ಹೊಸ ಚೈತನ್ಯ ಬರುವುದರ ಜತೆ, ಇಡೀದಿನ ಶರೀರ ಹೈಡ್ರೇಟ್​ ಆಗಿರುತ್ತದೆ. ಅಂದರೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ಲಿಂಬುವಿನಲ್ಲಿ ವಿಟಮಿನ್​ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಲ್ಲಿ ನಿಂಬೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ರೆ ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ಪಾನಕವನ್ನು ಸೇವಿಸಿ ಪರಿಹಾರ ಕಾಣಬಹುದು.

ತಲೆನೋವು ಕಾಡಿದರೆ ಹೀಗೆಮಾಡಿ
ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿದ ನೀರು ಕುಡಿಯುವುದರಿಂದ ಸಾಕಷ್ಟು ಅನುಕೂಲ ಆಗಲಿದೆ, ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ನಿಮ್ಮಕರುಳಿನ ಭಾಗ ಸ್ವಚ್ಛವಾಗಿ ಸರಾಗವಾದ ಮಲವಿಸರ್ಜನೆ ಆಗುವಂತೆ ಮಾಡುತ್ತದೆ. ಕರುಳಿನಲ್ಲಿ ವಿಪರೀತ ಒತ್ತಡ ಕಂಡುಬರುವುದರಿಂದ ಮಲದ ಚಲನೆಗೆ ಕಷ್ಟ ಆಗುತ್ತದೆ. ಇದರಿಂದ ಕರುಳಿನ ಚಲನೆಯಲ್ಲಿ ವ್ಯತ್ಯಾಸ ಕಂಡುಬರುವ ಹಾಗಾಗಿ ಮಲಬದ್ಧತೆ ಉಂಟಾಗುತ್ತದೆ. ಆದರೆ ಇಂತಹ ಸಂದರ್ಭವನ್ನು ಮಹಿಳೆಯರಿಗೆ, ವಯಸ್ಸಾದವರಿಗೆ, ಯುವಜನರಿಗೆ ಮತ್ತು ಮಕ್ಕಳಿಗೆ ಉಂಟಾಗದಂತೆ ನಿಂಬೆಹಣ್ಣು ನೋಡಿಕೊಳ್ಳುತ್ತದೆ.

ನಿಂಬೆ ರಸವು ಪಿತ್ತಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಯಕೃತ್ತಿಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಪಿತ್ತರಸವನ್ನು ಹೆಚ್ಚಿಸುತ್ತದೆ, ಇದು ಕೊಬ್ಬು ಮತ್ತು ಲಿಪಿಡ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ.

ಮೂತ್ರನಾಳದ ಸೋಂಕು ಹೊಂದಿದ ವ್ಯಕ್ತಿಗಳು ಹೆಚ್ಚಾಗಿ ಹೊಟ್ಟೆಯ ಕೆಳ ಭಾಗದಲ್ಲಿ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಅತಿಯಾದ ನೋವು ಮತ್ತು ಯಾತನೆ ಅನುಭವಿಸುತ್ತಾರೆ. ಆರಂಭದಲ್ಲಿ ಇದರ ಗುಣ ಲಕ್ಷಣ ಕಂಡು ಬರದಿದ್ದರೂ ನಂತರದ ದಿನಗಳಲ್ಲಿ ಸೋಂಕು ಹೆಚ್ಚಾದ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಇಂತಹ ಸೋಂಕನ್ನು ನಿವಾರಣೆ ಮಾಡಲು ನಿಂಬೆ ಹಣ್ಣು ಸಹಕಾರಿ.

ನಿಂಬೆ ಹಣ್ಣಿನ ಉಪಯೋಗಗಳು
ನಿಂಬೆ ರಸ

ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಬೆಳಗ್ಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ದಿನಕ್ಕೆರಡು ಸಲ ಕುಡಿದರೆ ಇನ್ನೂ ಒಳ್ಳೆಯದು. ಲಿಂಬೆ ರಸ ದೇಹದ ಬ್ಯಾಲೆನ್ಸ್ ಕಾಪಾಡುತ್ತದೆ. ಜೊತೆಗೆ ಜೀರ್ಣ ಕ್ರಿಯೆಯನ್ನೂ ಸಂತುಲನದಲ್ಲಿಡುತ್ತದೆ. ಇದರ ನಿಯಮಿತ ಸೇವನೆಯಿಂದ ತೂಕ ಕೂಡಾ ಕಡಿಮೆಯಾಗುತ್ತದೆ.

ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುವಂತಹ ಹಲವಾರು ಅಂಶಗಳು ನಿಂಬೆಹಣ್ಣಿನಲ್ಲಿವೆ. ಮೊಟ್ಟಮೊದಲನೆಯದಾಗಿ ನಿಂಬೆ ಹಣ್ಣು ಹೆಚ್ಚು ಆಂಟಿ – ಆಕ್ಸಿಡೆಂಟ್ ಅಂಶಗಳನ್ನು ತನ್ನಲ್ಲಿ ಹೊಂದಿದ್ದು, ಜೊತೆಗೆ ವಿಟಮಿನ್ ‘ ಸಿ ‘ ಅಂಶ ಇದರಲ್ಲಿ ಅಧಿಕವಾಗಿದೆ. ವಿಟಮಿನ್ ‘ ಎ ‘, ಬೀಟಾ – ಕ್ಯಾರೋಟಿನ್, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ದೇಹದ ಉರಿಯೂತದ ವಿರುದ್ಧ ಹೋರಾಡುವ ‘ ಫ್ಲೇವನಾಯ್ಡ್ ‘ ಅಂಶಗಳು ನಿಂಬೆ ಹಣ್ಣಿನಲ್ಲಿ ಸಾಕಷ್ಟು ಕಂಡುಬರುತ್ತವೆ.

ಪೊಟ್ಯಾಷಿಯಂ ಅಂಶವನ್ನು ಹೊಂದಿದ ಆಹಾರಗಳು ಮನುಷ್ಯನ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಶಕ್ತಿ ಪಡೆದಿರುತ್ತವೆ. ಇದಕ್ಕೆ ಕಾರಣ ನಿಂಬೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶ. ಇದು ದೇಹದಲ್ಲಿ ಉಪ್ಪಿನ ಅಂಶದಿಂದ ರಕ್ತದಲ್ಲಿ ಕಂಡು ಬರುವ ಮತ್ತು ರಕ್ತದ ಒತ್ತಡದ ಏರಿಕೆಗೆ ಕಾರಣವಾಗುವ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಪೊಟ್ಯಾಷಿಯಂ ಅಂಶ ಹೆಚ್ಚಿರುವ ಯಾವುದೇ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ಸೋಡಿಯಂ ಅಂಶ ಮೂತ್ರ ವಿಸರ್ಜನೆಯ ಮುಖಾಂತರ ದೇಹದಿಂದ ಹೊರ ಹೋಗಿ ರಕ್ತ ನಾಳಗಳ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಹಜವಾಗಿ ಮನುಷ್ಯನ ದೇಹದಲ್ಲಿನ ರಕ್ತದ ಒತ್ತಡ ಕಡಿಮೆಯಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಘ್ನ ವಿನಾಶಕ

ವಿಘ್ನ ವಿನಾಶಕ ವರ್ಣನೆ

ಗೋಕಾಕ್ ಚಳುವಳಿ

ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ : ಗೋಕಾಕ್ ಚಳುವಳಿ