in

ವಿಘ್ನ ವಿನಾಶಕ ವರ್ಣನೆ

ವಿಘ್ನ ವಿನಾಶಕ
ವಿಘ್ನ ವಿನಾಶಕ

ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ.

*ಆನೆಯ ತಲೆ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ.

*ಗಣೇಶನಿಗೆ ಒಂದು ದಂತ ಇರುವುದೆಂಬ ಸಂಗತಿ, ಇನ್ನೊಂದು ದಂತ ಭಗ್ನವಾಗಿದೆ, ಎಲ್ಲ ದ್ವಂದ್ವಗಳನ್ನೂ ಮೀರಿ ನಿಲ್ಲುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ .

*ಅಗಲವಾದ ಕಿವಿಗಳು ವಿವೇಕ, ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೆ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಪ್ರಕಟಿಸುತ್ತದೆ. ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಕೇಳಿಸಿ ಕೊಳ್ಳಬೇಕಾದುದರ ಪ್ರಾಮುಖ್ಯತೆಯನ್ನು ಅವು ಸೂಚಿಸುತ್ತವೆ. ಜ್ಞಾನವನ್ನು ಸಂಪಾದಿಸಲು ಕಿವಿಗಳು ಉಪಯೋಗಿಯಾಗಿವೆ. ಅಗಲವಾದ ಕಿವಿಗಳು “ಯಾವಾಗ ದೇವರು ಅರಿವಿಗೆ ಬರುವನೋ, ಆಗಲೇ ಎಲ್ಲಾ ಜ್ಞಾನವೂ ಅರಿವಾದಂತೆಯೇ” ಎಂಬುದನ್ನು ಸೂಚಿಸುತ್ತವೆ.

*ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಲ್ಲಿ ತಾನಾಗಿಯೇ ವಿವೇಚನಾಶಕ್ತಿಯ ರೂಪದಲ್ಲಿ ಪ್ರಕಟವಾಗುವ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ;

*ಹಣೆಯ ಮೇಲೆ ಚಿತ್ರಿತವಾದ ತ್ರಿಶೂಲವು, ಶಿವನ ಆಯುಧ ತ್ರಿಶೂಲಕ್ಕೆ ಸಮಾನವಾದ ಕಾಲವನ್ನು ಸಂಕೇತಿಸುವುದಲ್ಲದೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಅದರ ಮೇಲೆ ಗಣೇಶನ ಪ್ರಭುತ್ವವನ್ನು ಸೂಚಿಸುತ್ತದೆ.

*ಗಣೇಶನ ದೊಡ್ಡ ಹೊಟ್ಟೆಯಲ್ಲಿ ಅಸಂಖ್ಯಾತವಾದ ಲೋಕಗಳು ಅಡಗಿವೆ. ಅದು ಪ್ರಕೃತಿಯ ಔದಾರ್ಯ ಹಾಗೂ ಸ್ಥೈರ್ಯವನ್ನು ಸಂಕೇತಿಸುವುದಲ್ಲದೆ, ಪ್ರಪಂಚದ ದುಃಖ, ಕ್ಲೇಶಗಳೆಲ್ಲವನ್ನೂ ನುಂಗಿ ಜಗತ್ತನ್ನು ರಕ್ಷಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ.
ಗಣೇಶನು ಕಾಲುಗಳನ್ನು ಇಟ್ಟಿರುವ ರೀತಿ, ಒಂದು ನೆಲದ ಮೇಲೆ, ಇನ್ನೊಂದು ಎತ್ತಿರುವ ರೀತಿ ಇಹ ಮತ್ತು ಪರಲೋಕಗಳಲ್ಲಿ ಬಾಳುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಲೋಕದಲ್ಲಿಲ್ಲದೆಯೇ ಲೋಕದಲ್ಲಿ ಬಾಳುವ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.

*ಗಣೇಶನನ್ನು “ಓಂಕಾರ” ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ. ಈ ಕಾರಣದಿಂದ ಗಣೇಶನನ್ನು ಇಡೀ ವಿಶ್ವದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೂಲದಲ್ಲಿರುವ ಕಾರಣ ವಿಶ್ವಾಧಾರ, ಜಗದೋದ್ಧಾರ ಎಂದೂ ಕರೆಯಲಾಗುತ್ತದೆ.

ವಿಘ್ನ ವಿನಾಶಕ ವರ್ಣನೆ
ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ

*ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ. ಒಂದು ವಿವರಣೆಯ ಪ್ರಕಾರ, ಗಣೇಶನ ದೈವಿಕ ವಾಹನ, ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ಗಣೇಶನ ತಾಯಿಯ ಪ್ರೀತಿ :

ಒಮ್ಮೆ ಆಟವಾಡುತ್ತಿದ್ದಾಗ ಗಣೇಶ ಒಂದು ಬೆಕ್ಕನ್ನು ಗಾಯಗೊಳಿಸಿದ. ಅವನು ಮನೆಗೆ ಹಿಂದಿರುಗಿದಾಗ, ಅವನ ತಾಯಿಯ ಶರೀರದ ಮೇಲೆ ಒಂದು ಗಾಯವನ್ನು ಕಂಡ. ಅವಳು ಹೇಗೆ ಗಾಯಗೊಂಡಳೆಂದು ಕೇಳಿದ. ತಾಯಿ ಪಾರ್ವತಿ ಇದಕ್ಕೆ ಕಾರಣ ಬೇರಾರೂ ಅಲ್ಲ, ಸ್ವಯಂ ಗಣೇಶನೇ! ಎಂದು ತಿಳಿಸಿದಳು. ಆಶ್ಚರ್ಯಗೊಂಡ ಗಣೇಶ ತಾನು ಯಾವಾಗ ಆಕೆಯನ್ನು ಗಾಯಗೊಳಿಸಿದೆನೆಂದು ತಿಳಿಯಲಿಚ್ಛಿಸಿದ.
ಆಗ ಪಾರ್ವತಿ ತಾನೇ ದೇವಿ, ದೈವಿಕಶಕ್ತಿ, ಎಲ್ಲ ಜೀವರಾಶಿಗಳಲ್ಲಿ ಅಂತರ್ಗತವಾಗಿ ಇರುವವಳು ಎಂದು ವಿವರಿಸಿದಳು. ಅವನು ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಯಿತು. ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಯಥಾರ್ಥವಾದ ಪ್ರಕಟರೂಪ(ಪ್ರತಿರೂಪ)ವೆಂದು ಜ್ಞಾನೋದಯವಾಯಿತು. ಅವನು ಮದುವೆಯಾಗುವುದಿಲ್ಲವೆಂದು ನಿಶ್ಚಯಿಸಿದ.
ಹೀಗೆ ಗಣಪತಿಯು ಆಜನ್ಮ ನೈಷ್ಠಿಕ ಬ್ರಹ್ಮಚಾರಿಯಾಗಿ, ಬ್ರಹ್ಮಚರ್ಯದ ಕಟ್ಟುನಿಟ್ಟಿನ ನಿಯಮಗಳ ಪಾಲಕನಾಗಿ ಉಳಿದ. ಆದರೂ, ಕೆಲವು ಸನಾತನ ಗ್ರಂಥ ಹಾಗೂ ಪ್ರತಿಮೆಗಳಲ್ಲಿ ಕೆಲವು ಕಡೆ ಗಣೇಶನು ಬ್ರಹ್ಮನ ಇಬ್ಬರು ಪುತ್ರಿಯರನ್ನು ವಿವಾಹವಾಗಿರುವಂತೆ ಚಿತ್ರಿಸಲಾಗಿದೆ: ಬುದ್ಧಿ (ಬುದ್ಧಿಶಕ್ತಿ) ಮತ್ತು ಸಿದ್ಧಿ (ಆಧ್ಯಾತ್ಮಿಕ ಶಕ್ತಿ).

ಗಣೇಶನ ಹುಟ್ಟಿನ ಕಥೆ :

೧.ತನ್ನ ಮನದಿಂದ ಗಣೇಶ ಉದಿಸಿದ ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದ ರಿಂದ ಫಲದೊರಕದು ಎಂದೂ ಆತ ಸಂಕಲ್ಪಿಸಿದ. ಇದಾದ ನಂತರ, ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ.
ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದನು. ನಂತರ, ಮಗನನ್ನು ಪೂಜಿಸಿದ ಮತ್ತು ಯಶಸ್ವಿಯಾಗಿ ತ್ರಿಪುರಾಂತಕ ಯುದ್ಧವನ್ನು ಯಶಸ್ವಿಯಾಗಿ ಜಯಿಸಿದನು.

ವಿಘ್ನ ವಿನಾಶಕ ವರ್ಣನೆ
ಗಣೇಶ ಮತ್ತು ಸುಬ್ರಹ್ಮಮಣ್ಯ ಸ್ಫರ್ಧೆ

೨.ಒಂದು ದಿನ ಕೈಲಾಸ ವಾಸನಾದ ಶಿವ ಮತ್ತು ಮಡದಿ ಪಾರ್ವತಿ ತಮ್ಮಿಬ್ಬರು ಪುತ್ರರಾದ ಗಣೇಶ ಮತ್ತು ಸುಬ್ರಹ್ಮಮಣ್ಯರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದರು. ಶಿವ-ಪಾರ್ವತಿಯರು ತಮ್ಮಿಬ್ಬರು ಪುತ್ರರಿಗೆ ಎರಡು ಸುಂದರ ಹಣ್ಣನ್ನು ನೀಡಿದ್ದರು. ಇಬ್ಬರಿಗೂ ಅವೆರಡೂ ತಮಗೇ ಸೇರಬೇಕೆಂಬ ಆಸೆಯಿತ್ತು. ಆ ಹಣ್ಣಿನಲ್ಲಿ ವಿಶೇಷವಾದ ಜ್ಞಾನ ಮತ್ತು ಎಂದಿಗೂ ಅಳಿಯದ ವಿಶೇಷತೆಯೊಂದು ಅಡಕವಾಗಿರುವುದೆಂದು ಜನುಮದಾತರು ತಿಳಿಸಿದ್ದರು.
ಆ ಹಣ್ಣನ್ನು ಪಡೆಯಲು ಇಬ್ಬರೂ ಸ್ಫರ್ಧಿಸಬೇಕಾಗಿತ್ತು ಮತ್ತು ಯಾರು ಅದರಲ್ಲಿ ಗೆಲ್ಲುತ್ತಾರೋ ಅವರು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕಾಗಿತ್ತು. ಕೊನೆಗೂ ಸ್ಫರ್ಧೆಯಲ್ಲಿ ಕಾರ್ತಿಕೇಯನೇ ಮೊದಲಿಗನಾಗಿ ಲೋಕ ಸುತ್ತಲು ತನ್ನ ವಾಹನವಾದ ನವಿಲನ್ನೇರಿ ಹೊರಟ. ಆಕಾಶದಲ್ಲಿ ಹಾರಾಡುತ್ತಾ ಪವಿತ್ರವೂ ಪಾವನಪೂಜ್ಯವೂ ಆದ ಸ್ಥಳಗಳಲ್ಲಿ ನಿಂದು ದೇವದೇವೋತ್ತಮರನ್ನೆಲ್ಲಾ ಪೂಜಿಸುತ್ತಾ ಮುಂದೆ ಸಾಗುತ್ತಿದ್ದ.

ಆದರೆ ಗಣೇಶನಿಗೆ ತನ್ನ ದೇಹದ್ದೇ ಚಿಂತೆಯಾಗಿತ್ತು. ತನ್ನ ಡೊಳ್ಳು ಹೊಟ್ಟೆಯನ್ನೆತ್ತಿಕೊಂಡು ನಿಧಾನವಾಗಿ ಸಾಗಿದರೆ ಯಾವುದೇ ರೀತಿಯಲ್ಲೂ ತಾನು ಕಾರ್ತಿಕೇಯನನ್ನು ಹಿಂದಿಕ್ಕಲಾರೆನೆಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವನ ಬುದ್ಧಿಯು ಅವನ ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಿತ್ತು. ಅವನು ಮರುಯೋಚಿಸದೆ ತನ್ನ ಜನುಮದಾತರಾದ ಸಾಕ್ಷಾತ್ ಪಾರ್ವತಿ ಪರಮೇಶ್ವರರಿಗೆ ಪ್ರದಕ್ಷಿಣೆ ಹಾಕಿ ನಿಂತನು.

ನನ್ನ ಮಾತಾ-ಪಿತರಾದ ಶಿವ ಪಾರ್ವತಿಯರಲ್ಲಿ ಇಡೀ ಜಗತ್ತೇ ಮೈದುಂಬಿರಲು, ಅವರೇ ಸರ್ವಸ್ವವಾಗಿರುವಾಗ ನಾನು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯಿಲ್ಲ ಎಂದು ಗಣೇಶ ತನ್ನ ನಿಲುವನ್ನು ಸಮರ್ಥಿಸಿಕೊಂಡನು. ಕೊನೆಗೆ ಗಣೇಶನೇ ಪಂದ್ಯ ಗೆದ್ದ. ಜತೆಗೆ ಆ ಸುಂದರ ಹಣ್ಣಗಳನ್ನೂ ತನ್ನದಾಗಿಸಿಕೊಂಡ ಪ್ರಥಮ ಪೂಜ್ಯ ಗಣೇಶ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಆಯುಧ ಪೂಜೆ

ಆಯುಧ ಪೂಜೆ ಮಾಡುವ ವಿಶೇಷತೆ

ನಿಂಬೆ ಹಣ್ಣಿನ ಉಪಯೋಗ

ನಿಂಬೆ ಹಣ್ಣಿನ ಉಪಯೋಗಗಳು