in

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..

ಸಕ್ಕರೆ ಕಾಯಿಲೆ ಇದನ್ನು ಮಧುಮೇಹ ಅಂತಾನೂ ಕರೀತಾರೆ. ಇದಕ್ಕೆ ವಯೋಮಿತಿ ಇಲ್ಲ. ಹಾಗಾಗಿ ಪುಟಾಣಿ ಮಕ್ಕಳನ್ನು ಹಿಡಿದು ಎಲ್ಲಾ ರೀತಿಯ ವಯಸ್ಸಿನವರಲ್ಲೂ ಕಂಡುಬರುತ್ತೆ. ನಮ್ಮ ರಕ್ತದಲ್ಲಿ ಯಾವಾಗ ಗ್ಲುಕೋಸ್ ಅಂಶ ಹೆಚ್ಚಾಗುತ್ತದೋ ಅವಾಗ ಕಾಣಿಸಿಕೊಳ್ಳುವ ರೋಗವೇ  ಸಕ್ಕರೆ ಕಾಯಿಲೆ.ಒಂದು ಸಲ ಈ ಕಾಯಿಲೆ ಬಂದರೆ ಅದನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೇ ವಿನಃ ಇದರಿಂದ ಪಾರಾಗಲು ಸಾಧ್ಯವಿಲ್ಲ. ಹೀಗೆ ನಿಯಂತ್ರಣದಲ್ಲಿದ್ದರೆ ಯಾವ ತೊಂದರೆ ಕೂಡ ಇಲ್ಲ.

ಇದರ ಯಾವುದೇ ಲಕ್ಷಣ ಕಂಡುಬಂದರೂ ಅದನ್ನು ನಿರ್ಲಕ್ಷಿಸದೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.

ಇದರ ಲಕ್ಷಣಗಳು

  • ಬಾಯಾರಿಕೆ ಮತ್ತು ಮೂತ್ರವಿಸರ್ಜನೆ: ಆಗಾಗ್ಗೆ ವಿಪರೀತ ಬಾಯಾರಿಕೆ ಹಾಗೂ  ಮೂತ್ರವಿಸರ್ಜನೆ ಮಾಡುವಂತಾಗುವುದು. ಇದು ಸಾಮಾನ್ಯವಾಗಿ ಬಹುತೇಕ ಜನರಲ್ಲಿ ಕಂಡುಬರುತ್ತದೆ.
  • ಅತಿಯಾದ ಹಸಿವು: ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗುತ್ತದೆ. ದೇಹದ ಜೀವಕೋಶಗಳಿಗೆ ಸರಿಯಾದ ಪ್ರಮಾಣದ ಶಕ್ತಿ ದೊರೆಯದ ಕಾರಣ ನಮ್ಮ ದಿನದ ಚಟುವಟಿಕೆಗಳು  ಸರಿಯಾಗಿ ನಡೆಯದೆ ಇರುವುದು.ಇದರಿಂದ ಅಸಾಮಾನ್ಯ ಹಸಿವು ಉಂಟಾಗುತ್ತದೆ.
  • ಹಠಾತ್ತನೆ ತೂಕ ಕಳೆದುಕೊಳ್ಳುವುದು: ಯಾವುದೇ ತರಹದ ವ್ಯಾಯಾಮ ಮಾಡದೇ ದೇಹದ ತೂಕ ಕಡಿಮೆಯಾಗುತ್ತದೆ.ದೇಹವು ಗ್ಲುಕೋಸ್ ಹೀರಿಕೊಳ್ಳಲು ಅಸಮರ್ಥವಾಗುವ ಕಾರಣ ಅತಿ ಬೇಗನೆ ದೇಹದ ತೂಕ ಕಡಿಮೆಯಾಗುತ್ತದೆ.
  • ಆಯಾಸ: ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ ಅತಿ ಬೇಗ ಆಯಾಸವಾಗುತ್ತದೆ. ದೇಹದ ಜೀವಕೋಶಗಳಿಗೆ ಸರಿಯಾದ ಪ್ರಮಾಣದ ಗ್ಲುಕೋಸ್ ತಲುಪದ ಕಾರಣ ಮತ್ತು ಬೇಕಾದ ಪ್ರಮಾಣದ ಶಕ್ತಿ ಸಿಗದ ಕಾರಣ ಆಯಾಸ ಉಂಟಾಗುತ್ತದೆ.ಇದರಿಂದ ಸುಸ್ತು ಕಾಣಿಸಿಕೊಳ್ಳುತ್ತದೆ ಮತ್ತು ಕಿರಿಕಿರಿ ಉಂಟಾಗುತ್ತದೆ.
  • ಗಾಯ ನಿಧಾನವಾಗಿ ಗುಣಮುಖವಾಗುವುದು: ಯಾವುದೇ ಸಣ್ಣ ಪ್ರಮಾಣದ ಗಾಯಗಳಾದರೂ ವಾಸಿಯಾಗಲು ತುಂಬಾ ಸಮಯ ಹಿಡಿಯುತ್ತೆ. ಯಾಕಂದ್ರೆ ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಂಡಿರುತ್ತದೆ.
  • ದೃಷ್ಟಿ ಮಬ್ಬಾಗುವುದು: ದೇಹದ ಹೆಚ್ಚು ಪ್ರಮಾಣದ ಗ್ಲುಕೋಸ್ ಅಂಶ ಬ್ಲಡ್ ವೆಸೆಲ್ಸ್ಅನ್ನು ಹಾಳುಮಾಡುತ್ತದೆ.ಇದರಿಂದ ದೃಷ್ಟಿ ಮಬ್ಬಾಗುತ್ತದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳು ಇವೆ.
  • ಒಣ ತ್ವಚೆ: ಕೆಲವರಲ್ಲಿ ಒಣ ತ್ವಚೆ  ಇಲ್ಲವೆ ನುಸಿ ಕಂಡುಬರುತ್ತದೆ. ಈ ಕಾರಣದಿಂದ ನಮ್ಮ ದೇಹದ ಬೆವರು ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತದೆ.
  • ಕೈ ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ: ರಕ್ತದಲ್ಲಿರುವ ಸಕ್ಕರೆ ಪ್ರಮಾಣವು ಹೆಚ್ಚಾದರೆ ನಮ್ಮ ರಕ್ತ ನಾಳಗಳನ್ನು ಹಾಗು ನರಗಳನ್ನು ಹಾನಿಗೊಳಿಸುತ್ತವೆ.ಇದರಿಂದ ಕಾಲಿನ ಭಾಗ ಹಾಗು ಪಾದಗಳಲ್ಲಿ ಸಂವೇದನೆ ಕಡಿಮೆಯಾಗುತ್ತದೆ.

ಸಕ್ಕರೆ ಕಾಯಿಲೆ ಒಂದು ಗಂಭೀರ ಕಾಯಿಲೆ ಆದರೆ ನಾವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ. ಒಳ್ಳೆಯ ಆಹಾರ ಮತ್ತು ಕ್ರಮವಾದ ಔಷಧಿ ಇವುಗಳ ಸಹಾಯದಿಂದ ನಾವು ಇದನ್ನು

ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.ಒಳ್ಳೆಯ ಆರೋಗ್ಯದ ಕಡೆ ಗಮನಹರಿಸೋಣ…

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹೃದಯ ಸಮಸ್ಯೆಯಿಂದ ಬಳಲಬೇಡಿ, ತಿಳಿಯಿರಿ ಈ ಗುಟ್ಟು

ಲಿವರ್ ಆರೋಗ್ಯ ಕಾಪಾಡುವುದು ಹೇಗೆ?