in

ಹೃದಯ ಸಮಸ್ಯೆಯಿಂದ ಬಳಲಬೇಡಿ, ತಿಳಿಯಿರಿ ಈ ಗುಟ್ಟು

40 ವರ್ಷ ದಾಟಿದ ಬಳಿಕ ನಾವು ನಮ್ಮ ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ, ಹಾಗಂತ ಬರಿ 40  ವರ್ಷಕ್ಕೆ ಅಂತ ಈ ಹೃದಯ ಸಮಸ್ಯೆ ಮೀಸಲಾಗಿಲ್ಲ. ಇವಾಗಿನ ವಾಸ್ತವಕ್ಕೆ ಬಂದ್ರೆ ಇದು ಫಾಸ್ಟ್ ಮೂವಿಂಗ್ ಜನರೇಶನ್ ಹಾಗಾಗಿ ನಾವುಗಳು ಫಾಸ್ಟ್ ಫುಡ್ ಪ್ರಿಯರು ಅನ್ನೋದ್ರಲ್ಲಿ ಎರಡು ಮಾತಿಲ್ಲ ಬಿಡಿ. ನಾವು ಮನೆ ಆಹಾರಕ್ಕಿಂತ ಹೊರಗಿನ ಆಹಾರ ಮತ್ತು ಹೆಚ್ಚಾಗಿ ಜಂಕ್ ಫುಡ್ಸ್ ಕಡೆ ಇರೋ ಒಲವು ತುಂಬ.ಹೀಗೆ ಇಂತಹ ಆಹಾರ ಕ್ರಮದಿಂದ ನಮ್ಮ ದೇಹವನ್ನು ಅನಾರೋಗ್ಯಕ್ಕೆ ನಾವೇ ಅಹ್ವಾನ ಕೊಟ್ಟ ಹಾಗಿದೆ. ಇದರ ಪರಿಣಾಮದಿಂದ ರೋಗ ನಿರೋಧಕ ಶಕ್ತಿ ಕುಗ್ಗುವಿಕೆ ಹೆಚ್ಚು.ಕಾಯಿಲೆಗೆ ಒಳಗಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಿಂತ ಅದು ಬರದಂತೆ ತಡೆಯುವುದು ಉತ್ತಮ.

ನಮಗೆ ಈ ರೀತಿಯ ಸಮಸ್ಯೆ ಇದೆಯಾ ಅನ್ನೋದು ಕೆಲವರಿಗೆ ದೇಹದ ಲಕ್ಷಣಗಳಿಂದ ಗೊತ್ತಾದರೆ ಇನ್ನೂ ಕೆಲವರಿಗೆ ಇದರ ಯಾವ ಲಕ್ಷಣವು ತಿಳಿಯದೆ ಒಂದೇ ಸಲ ಶಾಕ್ ನಂತೆ ತಿಳಿಯುತ್ತದಷ್ಟೇ.

ಹೃದಯಾಘಾತದ ಲಕ್ಷಣಗಳು

 1. ಊತ: ದೇಹದ ಕೆಲವು ಭಾಗಗಳಲ್ಲಿ ಅಂದರೆ ಪಾದ, ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳುತ್ತದೆ.ಹೀಗಿರುವಾಗ ನಮ್ಮ ಹೃದಯ ಅಸಹಜ ರೀತಿಯಲ್ಲಿ ರಕ್ತವನ್ನು ಹೊರಹಾಕುತ್ತಿದೆ ಎಂದು ಅರ್ಥ. ಇದರಿಂದ ಅಪಧಮನಿಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.
 2. ನೋವು: ಕತ್ತು, ಬೆನ್ನು, ಹೊಟ್ಟೆ, ದವಡೆ ಈ ಭಾಗಗಳಲ್ಲಿ ನೋವು ಕಾಣಿಸಿ ಕೊಳ್ಳುತ್ತದೆ.
 3. ಕೆಲವು ಸಲ ಹೃದಯದ ಬಾಗದಲ್ಲಿ ಅಸ್ವಸ್ಥತೆ, ಒತ್ತಡ,ಹಿಸುಕಿದ ಅನುಭವ ಉಂಟಾಗುತ್ತದೆ.

ತಕ್ಷಣದ ತೊಡಕುಗಳು: ಹೃದಯ ಸಮಸ್ಯೆ ಇದ್ದಲ್ಲಿ ತಕ್ಷಣಕ್ಕೆ ಕಂಡು ಬರುವ ಲಕ್ಷಣಗಳು

ಆರ್ರಿತ್ಮಿಯಾಸ್: ಇದರಲ್ಲಿ ಹೃದಯ ಅನಿಯಮಿತವಾಗಿ ಬಡಿದುಕೊಳ್ಳುತ್ತದ್ದೆ. ಇಲ್ಲವೇ ಎದೆ ಬಡಿತ ಹೆಚ್ಚಾಗಿರುತ್ತೆ ಇಲ್ಲ ಕಮ್ಮಿ.

ಕಾರ್ಡಿಯೋಜೆನಿಕ್ ಆಘಾತ: ಇಲ್ಲಿ ರಕ್ತದ ಒತ್ತಡ(B P) ಕಡಿಮೆಯಾಗಿ ಹೃದಯ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ರಕ್ತವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

ಹಿಪೋಕ್ಸೇಮಿಯಾ: ರಕ್ತದಲ್ಲಿನ ಆಮ್ಲಜನಕದ ಪ್ರಮಾಣವು ಕಡಿಮೆ ಆಗುತ್ತದೆ.
ಪಲ್ಮನರಿ ಎಡಿಮಾ: ಶ್ವಾಸಕೋಶದ ಒಳಗೆ ಮತ್ತು ಹೊರ ಭಾಗದಲ್ಲಿ ದ್ರವ ಸಂಗ್ರಹಗೊಳ್ಳುತ್ತದೆ.
ಹೃದಯದ ಕೋಣೆಗಳಾದ ಕುಹರವು ಉಬ್ಬಿಕೊಳ್ಳುತ್ತದೆ.

ನಂತರದ ತೊಡಕುಗಳು: ಮೇಲೆ ಹೇಳಿದಂತೆ ಕೆಲವು ಬಾರಿ ನಮಗೆ ಹೃದಯ ಸಮಸ್ಯೆ ಎಂಬುದು ತುಂಬಾ ನಿಧಾನವಾಗಿ ಅರಿವಾಗುತ್ತದೆ.

ಅನ್ಯಾರಿಮ್ಮ್: ಹಾನಿಗೊಳಗಾಗಿರುವ ಹೃದಯದ ಭಾಗದಲ್ಲಿ ಗಾಯದ ಗುರುತುಗಳು ಕಾಣಿಸಿಕೊಳ್ಳುತ್ತದ್ದೆ.

ಆಂಜಿನಾ: ಬೇಕಾದ ಪ್ರಮಾಣದಲ್ಲಿ ಆಮ್ಲಜನಕವು ಹೃದಯಕ್ಕೆ ತಲುಪುವುದಿಲ್ಲ. ಇದರಿಂದ ಎದೆ ನೋವು ಕಾಣಿಸಿಕೊಳ್ಳುತ್ತದೆ.

ರಕ್ತಸ್ರಾವ ಹೃದಯದ ವೈಫಲ್ಯ: ಹೃದಯವು ತುಂಬಾ ದುರ್ಬಲವಾಗಿ ಬಡಿದುಕೊಳ್ಳುತ್ತದೆ. ಪರಿಣಾಮ ದಣಿವು ಅನ್ನಿಸಬಹುದು ಇಲ್ಲ ಉಸಿರಾಟದ ತೊಂದರೆಯಾಗುತ್ತದೆ.

ಎಡಿಮಾ:ಕಾಲಿನ ಬಾಗದಲ್ಲಿ ದ್ರವ ಶೇಖರಣೆ ಗೊಳ್ಳುತ್ತದೆ ಮತ್ತು ಊತ ಕಾಣಿಸಿಕೊಳ್ಳುತ್ತದೆ.

ಪೆರಿಕಾರ್ಡಿಟಿಸ್: ಹೃದಯದ ಸಾಲಿನಲ್ಲಿ ಊತ ಕಾಣಿಸಿಕೊಳ್ಳುವುದರಿಂದ ಆತಿ ತೀವ್ರವಾದ ಎದೆ ನೋವು ಉಂಟಾಗುತ್ತದೆ.

ಹೃದಯಾಘಾತವಾದಾಗ ತಕ್ಷಣ ಚಿಕಿತ್ಸೆ ಸಿಕ್ಕಿದರೆ ಪ್ರಾಣಾಪಾಯದಿಂದ ಪಾರಾಗಬಹುದು.

ಹೃದಯಾಘಾತ ತಡೆಗಟ್ಟಲು ನಾವು ಏನೆಲ್ಲಾ ಪ್ರಯತ್ನ ಪಡಬಹುದು,

 1. ಧೂಮಪಾನ ಮಾಡಬಾರದು.
 2. ಮೊದಲೇ ಹೇಳಿದ ಹಾಗೆ ಆರೋಗ್ಯಕರ ಆಹಾರ ಸೇವನೆ.
 3. ಯೋಗ ಅಥವಾ ಬೇರೆ ಯಾವುದೇ ತರಹದ ವ್ಯಾಯಾಮ ರೂಢಿಸಿಕೊಳ್ಳುವುದು.
 4. ಒಳ್ಳೆ ಗುಣಮ್ಮಟ್ಟದ ನಿದ್ರೆ.
 5. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುವುದು.
 6. ಆಲ್ಕೋಹಾಲ್ನಿಂದ ದೂರ.
 7. B P ನಿಯಂತ್ರಣದಲ್ಲಿರಬೇಕು
 8. ಸರಿಯಾದ ರೀತಿಯಲ್ಲಿ ದೇಹದ ತೂಕವನ್ನು ಕಾಪಾಡಿಕೊಳ್ಳುವುದು
 9. ಒತ್ತಡ ತೆಗುದುಕೊಳ್ಳದೆ ಇರುವುದು

ಏನೇ ಆದರೂ ನಮ್ಮ ಹೃದಯ ಆರೋಗ್ಯವಾಗಿದ್ರೆ ನಾವು ಆರೋಗ್ಯದಿಂದ ಇರ್ತೀವಿ. ನಾವು ನಮ್ಮ ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸೋಣ..

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ಗ್ರೀನ್ ಟೀ ಉಪಯೋಗಗಳನ್ನು ಯಾವಾಗ್ಲಾದ್ರೂ ಕೇಳಿದೀರಾ?

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..

ಮಧುಮೇಹದ ಲಕ್ಷಣಗಳನ್ನು ತಿಳಿಯಿರಿ..