in ,

ಉಪವಾಸದ ಮಹತ್ವ

ಉಪವಾಸದ ಮಹತ್ವ
ಉಪವಾಸದ ಮಹತ್ವ

ಹಿಂದೂ ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಮತ್ತು ಪುರಾಣಗಳಲ್ಲಿ ಉಪವಾಸಕ್ಕೆ ಅದರದ್ದೇ ಆದ ಮಹತ್ವವಿದೆ. ಋಗ್ವೇದದಲ್ಲಿ ಉಪವಾಸ ಎನ್ನುವ ಪದವನ್ನು ಸುಮಾರು 200 ಬಾರಿ ನೋಡಬಹುದು. ಧರ್ಮಗ್ರಂಥಗಳಲ್ಲಿ ಉಪವಾಸವು ತ್ಯಾಗವಾದರೆ, ಉಪನಿಷತ್ತುಗಳಲ್ಲಿ ನೈತಿಕತೆಯ ಮತ್ತು ನಡವಳಿಕೆಯ ಶಿಸ್ತು ಎಂದರ್ಥ. ಪುರಾಣವು ಉಪವಾಸವನ್ನು ಮನಸ್ಸನ್ನು ಸಶಕ್ತಗೊಳಿಸುವ ಅಭ್ಯಾಸವೆಂದು ಪರಿಗಣಿಸುತ್ತದೆ ಹಾಗೂ ಧರ್ಮವು ಇದನ್ನು ಮುಕ್ತಾಯದ ಕ್ರಿಯೆಯೆಂದು ಪರಿಗಣಿಸುತ್ತದೆ.

ನಮ್ಮ ದೇಹದ ಜೀರ್ಣಾಂಗಗಳಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿರುತ್ತದೆ ಮತ್ತು ಪುನಃ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ತಯಾರಿ ಮಾಡುವುದೇ ಉಪವಾಸದ ಉದ್ದೇಶ.

ಸಾಮಾನ್ಯರ ದೃಷ್ಟಿಯಲ್ಲಿ ‘ಉಪವಾಸ’ ಎಂದರೆ ‘ಉಪಾಹಾರ’ ಸೇವನೆ. ಊಟದ ಬದಲು ಉಪಾಹಾರವನ್ನೇ ಎರಡು ಪಟ್ಟು ಸೇವಿಸಿರುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಎಲ್ಲ ಮತ ಬಾಂಧವರಲ್ಲಿ ‘ಉಪವಾಸ’ ಒಂದು ಧಾರ್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ತಿಥಿಗಳನ್ನಾಚರಿಸುವಾಗ ಸಂಪ್ರದಾಯವಾಗಿ ಉಪವಾಸ ರೂಢಿಯಲ್ಲಿದೆ.

ದೇವರನ್ನು ಒಲಿಸಿಕೊಳ್ಳಲು ನಾವು ಆಚರಿಸುವ ಉಪವಾಸವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಕಾರಾತ್ಮಕ ಶಕ್ತಿಯನ್ನು, ಸಕಾರಾತ್ಮಕ ಚಿಂತನೆಯನ್ನು ಪಡೆದುಕೊಳ್ಳಲು ಸ್ವಇಚ್ಛೆಯಿಂದ ಊಟವನ್ನು ಅಥವಾ ಸಂಪೂರ್ಣ ಆಹಾರವನ್ನು ತ್ಯಾಗ ಮಾಡಿದರೆ ಅದು ಉಪವಾಸವಾಗುತ್ತದೆ. ಉಪವಾಸವು ಮನಸ್ಸನ್ನು ಮತ್ತು ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಉಪವಾಸದ ಸಮಯದಲ್ಲಿ ಓರ್ವ ವ್ಯಕ್ತಿಯು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ ಇದರಿಂದ ಅವನಲ್ಲಿದ್ದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ.

ಆಹಾರ ತ್ಯಜಿಸುವುದಷ್ಟೇ ಅಲ್ಲ
ಉಪವಾಸವನ್ನು ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಹಾಗೂ ಯಾರು ಮಾಡಬಹುದು, ಮಾಡಬಾರದು ಎಂಬುದನ್ನು ಪ್ರಕೃತಿ ಚಿಕಿತ್ಸೆಯಲ್ಲಿ ವಿವರವಾಗಿ ಹೇಳಲಾಗಿದೆ. ಉಪವಾಸವೆಂದರೆ ಕೇವಲ ನಿರಾಹಾರಿಯಾಗಿ ಇರುವುದು ಎಂದರ್ಥವಲ್ಲ. ಬದಲಿಗೆ, ಆಹಾರ ಸೇವನೆಯ ಕ್ರಮಗಳನ್ನು ಪಾಲಿಸುವ ವ್ರತ ಅಥವಾ ಚಿಕಿತ್ಸಾ ಪದ್ಧತಿ ಎನ್ನಬಹುದು. ಶರೀರ ಪ್ರಕೃತಿಯನ್ನು ಅನುಸರಿಸಿಕೊಂಡು ಅವುಗಳಿಗೆ ತಕ್ಕಂತೆ ತಣ್ಣನೆ, ಬಿಸಿ, ಹಗುರ ಹಾಗೂ ಕಠಿಣ ಆಹಾರ ಸೇವಿಸಬಹುದು.

ಉಪವಾಸದ ಮಹತ್ವ
ಉಪವಾಸವು ಒಂದು ಧಾರ್ಮಿಕ ಆಚರಣೆ

ಹಿಂದಿಯಲ್ಲಿ ವ್ರತ ಎಂದು ಕರೆಯಲ್ಪಡುವ ಉಪವಾಸವು ಕಠಿಣ ಅಭ್ಯಾಸ ಮತ್ತು ಧಾರ್ಮಿಕ ವಿಧಿಯಾಗಿದೆ. ಜನರು ಉಪವಾಸವನ್ನು ಧಾರ್ಮಿಕ ಆಚರಣೆಯಾಗಿ ಆಚರಿಸುತ್ತಾರೆ. ಉಪವಾಸವು ಒಂದು ಧಾರ್ಮಿಕ ಆಚರಣೆಯಾಗಿದ್ದು, ಹಬ್ಬದ ದಿನಗಳಲ್ಲಿ, ವಿಶೇಷ ಪೂಜೆಯ ದಿನಗಳಲ್ಲಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಉಪವಾಸವು ನಮ್ಮ ಮಾತಿನ ಮೇಲೆ, ನಡವಳಿಕೆಯ ಮೇಲೆ ಹಾಗೂ ನಾವು ಸೇವಿಸುವ ಆಹಾರ, ಪಾನೀಯಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಒಳಗೊಂಡಿದೆ. ಅಷ್ಟು ಮಾತ್ರವಲ್ಲದೇ ಕೆಲವರು ತಮ್ಮ ಜೀವನದ ಆತ್ಮೀಯರ ಉತ್ತಮ ಸ್ವಾಸ್ಥ್ಯಕ್ಕಾಗಿಯೂ ಉಪವಾಸವನ್ನು ಕೈಗೊಳ್ಳುತ್ತಾರೆ.

ದೇಹ ಮತ್ತು ಮನಸ್ಸನ್ನು ನಿಗ್ರಹಿಸುವಂತಹ ಶಕ್ತಿ ಉಪವಾಸಕ್ಕಿದೆ ಎಂಬುದನ್ನು ಈ ಪ್ರಯೋಗದ ಮೂಲಕ ಎಲ್ಲರಿಗೂ ಮನದಟ್ಟು ಮಾಡಿಸಿದರು. ಅಲ್ಲದೇ ಉಪವಾಸದ ಸಂದರ್ಭದಲ್ಲಿ ಅವರೆಲ್ಲರಿಗೂ ಅವರವರ ಧರ್ಮಕ್ಕನುಗುಣವಾಗಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಅವಕಾಶ ಕಲ್ಪಿಸಿದರು. ಹೀಗೆ ಉಪವಾಸ ದೇಹ ಮತ್ತು ಮನಸ್ಸಿನ ನಿಗ್ರಹ ಮಾಡಿಕೊಳ್ಳಲು, ಕಲುಷಿತ ಅಂಶಗಳನ್ನು ತೊಡೆದುಹಾಕಿ ನಿರ್ಮಲಗೊಳಿಸುವಲ್ಲಿ ಒಂದು ಸಾಧನ ಎಂಬುದನ್ನು ತಾವು ಅರಿತುಕೊಂಡಿದ್ದಲ್ಲದೆ, ಇತರರಿಗೂ ಮನವರಿಕೆ ಮಾಡಿಕೊಟ್ಟರು.

ಉಪವಾಸದ ಪ್ರಯೋಜನಗಳು

*ನಮ್ಮ ಮೆದುಳಿನಲ್ಲಿರುವ ‘ಹೈಪೊಥೆಲಮಸ್’ ನ ಗ್ರಂಥಿಯ ಪಾತ್ರ ಬಹಳ ಮಹತ್ಪದ್ದು. ಇದು ಹಸಿವು, ನೀರಡಿಕೆಗಳ ಕುರಿತು ನಮಗೆ ಸಂದೇಶ ರವಾನಿಸುತ್ತಿರುತ್ತದೆ. ದೇಹದಲ್ಲಿ ಸಕ್ಕರೆಯ (ಗ್ಲುಕೊಸ್) ಮಟ್ಟ ಹಾಗೂ ಪಿ.ಎಚ್. ಮಟ್ಟದಲ್ಲಿ ವ್ಯತ್ಯಾಸವಾದಾಗ ಹಸಿವಿನ ಅನುಭವ ನಮಗಾಗುತ್ತದೆ. 15-20 ನಿಮಿಷಗಳು ಮಾತ್ರ ಹಸಿವಿನ ತೀವ್ರತೆಯ ಅನುಭವವಾಗುತ್ತದೆ. ಆಹಾರ ಸೇವಿಸಿದ ನಂತರ ‘ಸಾಕು’ ಎನ್ನುವ ಸಂದೇಶ ಬರುತ್ತದೆ. ನಂತರವೇ ನಾವು ನಿಲ್ಲಿಸುತ್ತೇವೆ. ನಾವು ಹಸಿವಿನ ತೀವ್ರತೆಯಲ್ಲಿರುವಾಗ ಆಹಾರ ಸೇವನೆ ಮಾಡದಿದ್ದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಇಂಧನವನ್ನಾಗಿ ಉಪಯೋಗಿಸಿಕೊಳ್ಳುತ್ತದೆ. ಆದ್ದರಿಂದ ಕೊಬ್ಬು ಹೆಚ್ಚಾಗಿರುವವರಿಗೆ ‘ಉಪವಾಸ’ ಕ್ರಮ ಒಳ್ಳೆಯದು.

*ಉಪವಾಸ ಒಳ್ಳೆಯದೆಂದು ಅತಿಯಾಗಿ ಮಾಡಬಾರದು. ಅತಿಯಾದ ಉಪವಾಸ ಮಾಡುವುದರಿಂದ ಬಾಯಿ ವಾಸನೆ, ಮೈ ಕೈನೋವು, ಬಾಯಿ ರುಚಿ ಇಲ್ಲದಿರುವುದು, ಹೊಟ್ಟೆನೋವು, ಸುಸ್ತು, ತಲೆಸುತ್ತು ಉಂಟಾಗುತ್ತದೆ.

*ಹೊಟ್ಟೆಯ ತೊಂದರೆಯಿಂದ ಬಳಲುವವರು, ಮೂತ್ರ ಪಿಂಡದ ರೋಗಿಗಳು, ಯಕೃತ್ತಿನ (ಲಿವರ್) ತೊಂದರೆ ಇರುವವರು, ಚರ್ಮರೋಗದಿಂದ ಬಳಲುವವರಿಗೆ ಉಪವಾಸ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ಆದರೆ ಸಕ್ಕರೆ ಕಾಯಿಲೆ, ಕ್ಷಯ ರೋಗಿಗಳು, ನರದೌರ್ಬಲ್ಯವಿರುವವರು, ಹೃದ್ರೋಗಿಗಳು, ಕಡಿಮೆ ರಕ್ತದ ಒತ್ತಡ ಇರುವವರು ಉಪವಾಸ ಮಾಡುವುದು ಬೇಡ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಿಲ್ಲದವರು ಹಣ್ಣಿನರಸ, ಎಳನೀರು, ಗಂಜಿಯಂತಹ ದ್ರವಗಳನ್ನು ಸೇವಿಸಬಹುದು.

*ನಾವು ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯಿಂದ ಆರಂಭವಾಗಿ ದೊಡ್ಡ ಕರುಳಿನವರೆಗೂ ನಿರಂತವಾಗಿ ಜೀರ್ಣ ಕ್ರಿಯೆ ನಡೆಯುತ್ತಿರುತ್ತದೆ. ಉಪವಾಸ ಆಚರಿಸುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ. ‘ಲಂಘನಂ ಪರಮೌಷಧಂ’ ಎಂದರೆ ಉಪವಾಸ ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಜ್ವರ, ಅಜೀರ್ಣವಾದಾಗ ಒಂದು ದಿನ ಉಪವಾಸ ಮಾಡಿದರೆ ದೇಹ ತನ್ನನ್ನು ತಾನು ರಿಪೇರಿ ಮಾಡಿಕೊಂಡು ಸರಿಪಡಿಸಿಕೊಳ್ಳುತ್ತದೆ. ದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು. ಆರೋಗ್ಯವಂತರು 15 ದಿನಗಳಿಗೊಮ್ಮೆ ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದು. ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ಶರೀರಕ್ಕೆ ದೃಢತೆ ಬರುತ್ತದೆ. ದೇಹದಲ್ಲಿನ ವಿಷಕಾರಿ ವಸ್ತುಗಳು ಹೊರಹೋಗುವುದಲ್ಲದೆ ಕೊಬ್ಬು ಕೂಡ ಕರಗುತ್ತದೆ. ವಾರಕ್ಕೊಂದು ಬಾರಿ ಅರ್ಧ ದಿನ ಉಪವಾಸ ಅಂದರೆ ಒಂದು ಹೊತ್ತಿನ ಉಪವಾಸ ಮಾಡುವುದು ಒಳ್ಳೆಯದು.

ಗಾಂಧೀಜಿ ಮತ್ತು ಉಪವಾಸ

ಉಪವಾಸದ ಮಹತ್ವ
ಗಾಂಧೀಜಿ ಮತ್ತು ಉಪವಾಸ

ಗಾಂಧೀಜಿಯವರು ಉಪವಾಸದ ಬಗೆಗೆ ತಮ್ಮ ನಂಬಿಕೆ ಬಲಗೊಳಿಸಲು, ಅದರ ಸತ್ಯಾಸತ್ಯತೆ ಅರಿಯಲು ಒಂದು ಪ್ರಯೋಗ ನಡೆಸುತ್ತಾರೆ. ಗಾಂಧೀಜಿಯವರು ಚಿಕ್ಕವಯಸ್ಸಿನಲ್ಲಿ ಉಪವಾಸದ ರೂಢಿಯನ್ನು ಅವರ ತಾಯಿಯನ್ನು ಸಂತೋಷಪಡಿಸಲು ಮಾತ್ರ ಮಾಡುತ್ತಿದ್ದರು. ಬಹುಕಾಲದ ನಂತರ ಅವರು ತಮ್ಮ ಒಬ್ಬ ಸ್ನೇಹಿತರಿಂದ ಉಪವಾಸದ ಮಹತ್ವದ ಬಗೆಗೆ ಇನ್ನಷ್ಟು ಅರಿತುಕೊಂಡರು. ಅದನ್ನು ಅರಿತ ನಂತರ ತಮ್ಮ ಆರೋಗ್ಯ ರಕ್ಷಣೆಗೆ ತಮ್ಮ ಮೇಲೆ ಅದರ ಪ್ರಯೋಗ ಮಾಡಿಕೊಂಡು ಒಳ್ಳೆಯ ಪರಿಣಾಮಗಳನ್ನು ಕಂಡುಕೊಳ್ಳುತ್ತಾರೆ.

ಲಾಲ್‍ಬಹದ್ದೂರ್ ಶಾಸ್ತ್ರಿಯರವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಆಹಾರದ ಕೊರತೆ ಇದ್ದ ಸಂದರ್ಭದಲ್ಲಿ ಪ್ರಜೆಗಳೆಲ್ಲರೂ ವಾರಕ್ಕೊಮ್ಮೆ ಒಂದು ಹೊತ್ತಿನ ಉಪವಾಸ ಆಚರಿಸುವಂತೆ ಕರೆಕೊಟ್ಟಿದ್ದರು. ಹಲವಾರು ಹಿರಿಯ ನಾಗರಿಕರು ಇಂದಿಗೂ ವಾರಕ್ಕೊಮ್ಮೆ ಉಪವಾಸದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಲಿಗ್ರಾಮ ಗುರು ನರಸಿಂಹ

ಸಾಲಿಗ್ರಾಮ : ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು

ಜಗತ್ತಿಗೆ ಬೆಳಕು ಕೊಡುವ ಸೂರ್ಯ

ಜಗತ್ತಿಗೆ ಬೆಳಕು ಕೊಡುವ ಸೂರ್ಯ