in

ಸಾಲಿಗ್ರಾಮ : ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು

ಸಾಲಿಗ್ರಾಮ ಗುರು ನರಸಿಂಹ
ಸಾಲಿಗ್ರಾಮ ಗುರು ನರಸಿಂಹ

ದೇವಳ ನಗರಿ ಉಡುಪಿಯಿಂದ ಸುಮಾರು ೨೧ಕೀ. ಮೀ.ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಸಾಲಿಗ್ರಾಮ ಪಟ್ಟಣ. ಸಾಲಿಗ್ರಾಮದಲ್ಲಿನ ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ಲಿ ಇದಕ್ಕೆ ದೇಗುಲದ ರೂಪವನ್ನು ನೀಡಲಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಹಬ್ಬವು ತುಂಬಾ ಜನಪ್ರಿಯವಾಗಿದ್ದು, ರಾಜ್ಯವೂ ಸೇರಿದಂತೆ, ನೆರೆ ರಾಜ್ಯಗಳಿಂದಲೂ ಕೂಡಾ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ಈ ಪ್ರದೇಶವು ಉಡುಪಿ ಮತ್ತು ಕುಂದಾಪುರದ ಮಧ್ಯದಲ್ಲಿದೆ. ಉಡುಪಿಯಿಂದ ಉತ್ತರದಲ್ಲಿ ೨೧ ಕಿ.ಮೀ ದೂರದಲ್ಲಿದ್ದು, ಮಂಗಳೂರಿನಿಂದ ೮೧ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ನೀವು ಸುಲಭವಾಗಿ ರಾಷ್ಟ್ರೀಯ ಹೆದ್ದಾರಿ ೧೭ರ ಮೂಲಕ ಸಾಗಬಹುದು. ಬಸ್‌ ಸೇವೆಯು ಲಭ್ಯವಿದ್ದು, ಬೆಂಗಳೂರಿನಿಂದ ಸಾಲಿಗ್ರಾಮಕ್ಕೆ ನೇರವಾದ ಸಂಪರ್ಕ ಕೂಡಾ ಇದೆ. ನೀವು ಅಲ್ಲಿಗೆ ತಲುಪಿದ ಮೇಲೆ, ಸ್ಥಳಕ್ಕೆ ತಲುಪಲು ಸಾಕಷ್ಟು ಆಟೋಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಹಲವು ರೀತಿಯ ವಸತಿ ಸೌಲಭ್ಯಗಳು ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸಿಗರಿಗೆ ಲಭ್ಯವಿದೆ.

ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ :

ಸಾಲಿಗ್ರಾಮ : ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು
ಸಾಲಿಗ್ರಾಮ ಗುರು ನರಸಿಂಹ ಮೂರ್ತಿ

ದೇವಳ ನಗರಿ ಉಡುಪಿಯಿಂದ ಸುಮಾರು ೨೧ಕೀ. ಮೀ.ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನವಿದೆ. ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲ್ಪಟ್ಟ ಶಂಕಚಕ್ರಧಾರಿ ಗುರುನರಸಿಂಹನ ವಿಗ್ರಹವಿರುವ ದೇವಸ್ಥಾನವಿದ್ದು, ಸ್ಕಂದ ಪುರಾಣದ ಪ್ರಕಾರ ನಾರದ ಮುನಿಗಳು ಈ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂಬ ನಂಬಿಕೆ ಇಲ್ಲಿದೆ. ಇಲ್ಲಿನ ಇನ್ನೊಂದು ವಿಶೇಷ ಗುರುನರಸಿಂಹ ದೇವರಿಗೆ ಅಭಿಮುಖವಾಗಿ ಶ್ರೀ ಅಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಉಗ್ರ ಸ್ವರೂಪಿ ನರಸಿಂಹನ ಕೋಪಾವತಾರ ಕಮ್ಮಿಯಾಗುತ್ತದೆಂದು ಇಲ್ಲಿಯ ಜನರ ನಂಬಿಕೆ.

ಸಾಲಿಗ್ರಾಮ ಹಬ್ಬ :
ಸಾಲಿಗ್ರಾಮ ಹಬ್ಬವು ಪ್ರತೀ ವರ್ಷವೂ ಜನವರಿ ತಿಂಗಳಿನ ೧೬ರಂದು ಪ್ರಾರಂಭವಾಗುತ್ತದೆ. ಈ ಜಾತ್ರೆಗೆ ಬೆಳಗ್ಗಿನಿಂದಲೇ ಜನರು ದೇವಸ್ಥಾನಕ್ಕೆ ಆಗಮಿಸಿ ಗುರು ನರಸಿಂಹ ಸ್ವಾಮಿ ಹಾಗೂ ಶ್ರೀ ಅಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಹಣ್ಣು ಕಾಯಿ ಸಮರ್ಪಿಸುತ್ತಾರೆ. ಸಂಜೆ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೋಳ್ಳುತ್ತಾರೆ.

ಸ್ಥಳ ಪುರಾಣ :
ಸ್ಥಳ ಪುರಾಣದ ಪ್ರಕಾರ ಕದಂಬ ದೊರೆ ಮಯೂರನ ಮೊಮ್ಮಗ ಲೋಕಾದಿತ್ಯನ ಅಪೇಕ್ಷೆಯಂತೆ ಭಟ್ಟಾಚಾರ್ಯರೆಂಬ ಮಹಾಪುರುಷರು ಇಲ್ಲಿನ ಗ್ರಾಮಗಳಲ್ಲಿ ಪೌಂಡ್ರ, ಅತಿ ರಾತ್ರ ಮೊದಲಾದ ಮಹಾಯಾಗ ಮಾಡುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ ಈ ಕ್ಷೇತ್ರದಲ್ಲಿ ಮಹಾಗಣಪತಿಯನ್ನು ಪ್ರಾರ್ಥಿಸುತ್ತಾರೆ. ಅಲ್ಲಿಯೇ ಅಶ್ವತ್ಥ ಮರದ ಪೊಟರೆಯಲ್ಲಿ ನಾರದಮುನಿ ಪ್ರತಿಷ್ಠಾಪಿತ ನರಸಿಂಹ ದೇವರ ವಿಗ್ರಹವನ್ನು ಪುನಃ ಪ್ರತಿಷ್ಠೆ ಮಾಡಿ ಸಾಲಿಗ್ರಾಮ ಸುತ್ತಮುತ್ತಲಿನ 14 ಗ್ರಾಮದ ಬ್ರಾಹ್ಮಣರು ಈ ದೇವರನ್ನು ಪೂಜಿಸಲು ತಿಳಿಸುತ್ತಾರೆ. ಆಗ ನರಸಿಂಹ ವಿಗ್ರಹ ಪೂರ್ವಾಭಿಮುಖವಾಗಿ ಇತ್ತು. ಆದರೆ ದೇವರ ಉಗ್ರ ಸ್ವರೂಪದಿಂದ ಮೂಡುದಿಕ್ಕಿನ ಗದ್ದೆಗಳಲ್ಲಿ ಬೆಳೆದ ಬೆಳೆ ಭಸ್ಮವಾಗುತ್ತಿತ್ತು. ಇದರಿಂದ ಕೋಪಗೊಂಡ ಬ್ರಾಹ್ಮಣನೊಬ್ಬ ಹಾರೆಯಿಂದ ನರಸಿಂಹನ ವಿಗ್ರಹಕ್ಕೆ ಘಾತ ಮಾಡುತ್ತಾನೆ. ಆ ಮೇಲೆ ದೇವರನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಪಡುವಣ ಕಡೆ ಬೆಳೆಗಳಿಗೆ ಆಗುವ ಹಾನಿ ತಡೆಯಲು ಕುಕ್ಕುಡೆಗುಂಡಿಯಿಂದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ಎದುರು ಸ್ಥಾಪಿಸಲಾಯಿತು.

ಸಾಲಿಗ್ರಾಮ : ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು
ಸಾಲಿಗ್ರಾಮ ಹಬ್ಬ

ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಆಂಜನೇಯನ ವಿಗ್ರಹಕ್ಕೆ ಚಂದ್ರ ಮತ್ತು ಬೆಣ್ಣೆ ಲೇಪಿಸಲಾಗುತ್ತಿದೆ. ಮಕರ ಸಂಕ್ರಾಂತಿ ಹೊತ್ತಿಗೆ ನಡೆಯುವ ಸಾಲಿಗ್ರಾಮ ಹಬ್ಬ ಈ ಭಾಗದ ಅತಿ ದೊಡ್ಡ ಜಾತ್ರೆಗಳಲ್ಲೊಂದು. ಪ್ರತೀ ಶನಿವಾರ ಮತ್ತು ಸಂಕ್ರಮಣದ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು. ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿ ಜಾತ್ರೆಯ ವಾತಾವರಣ ಇರುತ್ತದೆ.

ಈ ದೇವಸ್ಥಾನದ ವತಿಯಿಂದ ಪ್ರತೀ ವರ್ಷ ಉಚಿತ ವೈದ್ಯಕೀಯ ಶಿಬಿರ, ಮಣಿಪಾಲ ದಂತ ಕಾಲೇಜು ನೆರವಿನಲ್ಲಿ ಉಚಿತ ದಂತ ವೈದ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ವೇದ ಮತ್ತು ಆಗಮ ಶಾಸ್ತ್ರ ಕಲಿಕೆಗೆ ಉಚಿತ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನೀರಜ್ ಚೋಪ್ರಾ

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ

ಉಪವಾಸದ ಮಹತ್ವ

ಉಪವಾಸದ ಮಹತ್ವ