ಸಿ-ಸೆಕ್ಷನ್ ಅಂದರೆ ಸಿಸೇರಿಯನ್ ಹೆರಿಗೆಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಇದು ಒಂದು ಪ್ರಮುಖ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ಮತ್ತು ಅದರಲ್ಲಿ ಸುಮಾರು 2 ರಿಂದ 3 ಇಂಚು ಉದ್ದದ ಕಟ್ ಮಾಡಲಾಗುತ್ತದೆ. ಚರ್ಮ, ಸ್ನಾಯುಗಳು ಮತ್ತು ಗರ್ಭಾಶಯದ ಎಲ್ಲಾ ಪದರಗಳನ್ನು ಕತ್ತರಿಸಿ ಮಗುವನ್ನು ಹೊರತೆಗೆಯಲಾಗುತ್ತದೆ, ಆದ್ದರಿಂದ ಗಾಯವು ತುಂಬಾ ಆಳವಾಗಿರುತ್ತದೆ.
ಸಿಸೇರಿಯನ್ ಹೆರಿಗೆ ಈಗ ಬಹಳ ಕಾಮನ್ ಆಗಿ ಬಿಟ್ಟಿದೆ. ಹೆಚ್ಚಿನವರು ಸಿಸೇರಿಯನ್ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಸಿಸೇರಿಯನ್ ಶಸ್ತ್ರಚಿಕಿತ್ಸೆ ಗಾಯವು ಆಳವಾಗಿದ್ದು ಚೇತರಿಸಿಕೊಳ್ಳಲು ಬಹಳ ಕಾಳಜಿಯ ಅವಶ್ಯಕತೆ ಇದೆ.
ಈ ಗಾಯವು ಸಂಪೂರ್ಣವಾಗಿ ಗುಣವಾಗಲು ಸುಮಾರು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಚೇತರಿಕೆಯ ಅವಧಿಯಲ್ಲಿ, ತಾಯಿ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಾಯಿಯಾಗುವ ಮೊದಲು ಗರ್ಭಿಣಿ ಮಹಿಳೆಯ ಆಹಾರ ಕ್ರಮವನ್ನು ನೋಡಿಕೊಳ್ಳುವುದು ಎಷ್ಟು ಮುಖ್ಯವೋ ತಾಯಿಯಾದ ನಂತರ ಅವುಗಳ ಬಗ್ಗೆ ಗಮನ ಹರಿಸುವುದು ಅಷ್ಟೇ ಮುಖ್ಯ. ಏಕೆಂದರೆ ಇದು ತಾಯಿ ಮೇಲೆ ಮಾತ್ರವಲ್ಲ ಮಗುವಿನ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುತ್ತದೆ. ತಾಯಿಯಾದ ನಂತರ ಹೆರಿಗೆ ನಾರ್ಮಲ್ ಆಗಿರಲು ಅಥವಾ ಸಿಸೇರಿಯನ್ ಆಗಿರಲಿ ಎರಡೂ ಸಂದರ್ಭಗಳಲ್ಲಿ ಆಹಾರ ಕ್ರಮವನ್ನು ನೋಡಿಕೊಳ್ಳುವುದು ಮುಖ್ಯ. ಆದರೆ ಸಿಸೇರಿಯನ್ ಹೆರಿಗೆಯಲ್ಲಿ ಅದರ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಏಕೆಂದರೆ ತಾಯಿ ವಿವಿಧ ದೈಹಿಕ ತೊಂದರೆಗಳನ್ನು ಅನುಭವಿಸುತ್ತಿರುತ್ತಾಳೆ ಮತ್ತು ತ್ವರಿತ ಚೇತರಿಕೆಯ ಅಗತ್ಯವಿದೆ.
ಸಿಸೇರಿಯನ್ ಪ್ರಸವದ ನಂತರ ಸರಿಯಾದ ಆಹಾರದ ಆಯ್ಕೆ ನಿಮ್ಮನ್ನು ವೇಗವಾಗಿ ಗುಣಮುಖರಾಗುವಂತೆ ಮಾಡುತ್ತದೆ. ಗ್ಯಾಸ್ ಹೆಚ್ಚಿಸುವ, ಮಲಬದ್ಧತೆಗೆ ಕಾರಣವಾಗಬಹುದಾದ ಮತ್ತು ಜೀರ್ಣಕ್ರಿಯೆಗೆ ಅಡಚಣೆ ಉಂಟುಮಾಡುವಂತಹ ಆಹಾರಗಳ ಬಗ್ಗೆ ಗಮನವಿರಲಿ.
ಹೊಟ್ಟೆಯ ಮೇಲೆ ಹೊಲಿಗೆಗಳು ಇದ್ದಾಗ, ಕೆಮ್ಮುವುದು, ಸೀನುವುದು ಮತ್ತು ನಗುವುದು ಸಹ ಕತ್ತರಿಸಿದ ಪ್ರದೇಶದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದು ಕುಟುಕುವ ನೋವನ್ನು ಉಂಟುಮಾಡಬಹುದು. ನೀವು ನಗುವಾಗ, ಸೀನುವಾಗ ಅಥವಾ ಕೆಮ್ಮುವಾಗ, ನಿಮ್ಮ ನೋಯುತ್ತಿರುವ ಸ್ಥಳದ ಮೇಲೆ ಮೃದುವಾದ ದಿಂಬನ್ನುಇಡಿ. ಇದು ನಿಮಗೆ ಕಡಿಮೆ ಒತ್ತಡವನ್ನುಂಟು ಮಾಡುತ್ತದೆ.
ಆಹಾರದಲ್ಲಿ ಫೈಬರ್ ಸಮೃದ್ಧ ವಸ್ತುಗಳನ್ನು ಸೇರಿಸಬೇಕು. ಇದಕ್ಕಾಗಿ ರಾಜ್ಮಾ, ಫೈಬರ್ ತರಕಾರಿಗಳು, ಬ್ರೌನ್ ಬ್ರೆಡ್, ಓಟ್ ಮೀಲ್, ಬಟಾಣಿ, ಮೆಕ್ಕೆಜೋಳ, ಪೇರಳೆ, ಸೇಬು, ಕಂದು ಅಕ್ಕಿ, ಬಾಳೆಹಣ್ಣು, ಅನಾನಸ್, ಕಿತ್ತಳೆ, ಸಿಂಗ್ಹಾಡಾ, ಮೂಲಂಗಿ-ಕ್ಯಾರೆಟ್, ಆಲೂಗಡ್ಡೆ ಮತ್ತು ಸಿಹಿ ಆಲೂಗಡ್ಡೆಯಂತಹ ವಸ್ತುಗಳನ್ನು ಸೇವಿಸಬಹುದು.

ಕ್ಯಾಲ್ಸಿಯಂ ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯು ಮೂಳೆ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂನ ಉತ್ತಮ ಮೂಲಗಳನ್ನು ಸೇರಿಸುವುದು ಮುಖ್ಯ.
ಮಲಬದ್ಧತೆ ಹೊಲಿಗೆಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು ಮತ್ತು ನೋವನ್ನು ಉಂಟುಮಾಡಬಹುದು. ಮಲಬದ್ಧತೆಯನ್ನು ತಪ್ಪಿಸಲು, ಹೆಚ್ಚು ಫೈಬರ್ ಭರಿತ ಆಹಾರವನ್ನು ಸೇವಿಸಿ ಮತ್ತು ಹೆಚ್ಚು ದ್ರವಗಳನ್ನು ತೆಗೆದುಕೊಳ್ಳಿ.
ಆಹಾರದಲ್ಲಿ ಬೆಂಡೆಕಾಯಿ, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳನ್ನು ಸೇರಿಸಿ. ಸೈನ್ಸ್‌ಡೈರೆಕ್ಟ್.ಕಾಮ್‌ನ ಅಧ್ಯಯನವು ಸಿ-ಸೆಕ್ಷನ್ ನಂತರ ಮಲಬದ್ಧತೆಯನ್ನು ತಡೆಯಲು ಕಾಫಿ ಸಹಕಾರಿಯಾಗಿದೆ.
ಸಿಸೇರಿಯನ್ ಹೆರಿಗೆ ನಂತರ ಮಹಿಳೆಯರು ಪ್ರೋಟೀನ್ ಭರಿತ ವಸ್ತುಗಳನ್ನು ತಿನ್ನಬೇಕು. ಇದಕ್ಕಾಗಿ ಟೋನ್ಡ್ ಹಾಲು, ಸೋಯಾ ಹಾಲು, ಟೋಫು, ಮೊಸರು, ಓಟ್ ಮೀಲ್, ಮೊಟ್ಟೆ, ಬಿಳಿ ಬೀನ್ಸ್, ಬೇಳೆಕಾಳುಗಳು ಮತ್ತು ಮಾಂಸದಂತಹ ವಸ್ತುಗಳನ್ನು ಆಹಾರದಲ್ಲಿ ಸೇರಿಸಬೇಕು. ಪ್ರೋಟೀನ್ ಹೊಸ ಅಂಗಾಂಶ ಜೀವಕೋಶಗಳ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಸಿಸೇರಿಯನ್ ಪ್ರಸವದ ನಂತರ ಸಾಕಷ್ಟು ನೀರು ಕುಡಿಯುವುದು ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಬಹಳ ಮುಖ್ಯ. ಇದು ದೇಹವನ್ನು ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ಸಾಕಷ್ಟು ನೀರು ಒದಗಿಸುವುದರಿಂದ ಮಗುವಿಗೆ ಅಗತ್ಯವಾದ ಹಾಲು ದೇಹದಲ್ಲಿ ಉತ್ಪಾದನೆಯಾಗುವಲ್ಲಿಯೂ ಸಹಾಯ ಮಾಡುತ್ತದೆ .
ಸಿಸೇರಿಯನ್ ಪ್ರಸವದ ನಂತರ ಸೇವಿಸಲೇ ಬೇಕಾದ ಪ್ರಮುಖ ಆಹಾರ ಮೊಟ್ಟೆ. ಮೊಟ್ಟೆಯಲ್ಲಿ ಪ್ರೋಟೀನ್ ಗಳು ಮತ್ತು ಸತು ಸಮೃದ್ಧವಾಗಿದೆ. ಇದು ನಿಮ್ಮ ಗರ್ಭಧಾರಣೆಯ ಬದಲಾವಣೆಗಳ ಕಠಿಣ ಹಂತಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಸುಧಾರಿಸಲು ಮತ್ತು ಸದಾ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ ಮತ್ತು ಚೇತರಿಕೆಯ ವೇಗವನ್ನೂ ಹೆಚ್ಚಿಸುತ್ತದೆ.
ಸಿಸೇರಿಯನ್ ಪ್ರಸವದ ನಂತರ ನಮ್ಮ ಕರುಳು ಅದರ ಸಾಮಾನ್ಯ ಕ್ರಿಯೆಗೆ ಮರಳಿ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಗ್ಯಾಸ್ ಮತ್ತು ಮಲಬದ್ಧತೆ ಉಂಟುಮಾಡದಿರುವ ಆಹಾರಗಳನ್ನೇ ಸೇವಿಸಬೇಕಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಸಿಸೇರಿಯನ್ ಪ್ರಸವದ ನಂತರ ನಿಮ್ಮ ಪ್ರಮುಖ ಆಹಾರದಲ್ಲಿ ಸೇರಿಸಿದರೆ ಉತ್ತಮ.

ಸಿಸೇರಿಯನ್ ಹೆರಿಗೆಯಲ್ಲಿ ಸಾಕಷ್ಟು ರಕ್ತಸ್ರಾವವಾಗಿರುತ್ತದೆ. ಇದು ಪ್ರಸವಾನಂತರದ ರಕ್ತಹೀನತೆಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು, ನಿಮ್ಮ ಆಹಾರದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಿ. ಇದಕ್ಕಾಗಿ ನೀವು ಹಸಿರು ಎಲೆಗಳ ತರಕಾರಿಗಳು, ಒಣ ಹಣ್ಣುಗಳನ್ನು ತಿನ್ನಬೇಕು. ಅಂಜೂರದಲ್ಲಿ ಬಹಳಷ್ಟು ಕಬ್ಬಿಣವಿದೆ. ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನುವುದು ಕೂಡ ಪ್ರಯೋಜನಕಾರಿ.
ತಾಯಿಯ ಆಹಾರದಲ್ಲಿ ವಿಟಮಿನ್-ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳಾದ ಕಿತ್ತಳೆ, ಕಲ್ಲಂಗಡಿಗಳು, ಪಪ್ಪಾಯಿಗಳು, ಸ್ಟ್ರಾಬೆರಿಗಳು, ದ್ರಾಕ್ಷಿಹಣ್ಣುಗಳು, ಸಿಹಿ ಆಲೂಗಡ್ಡೆಗಳು, ಟೊಮೆಟೊಗಳು ಮತ್ತು ಬ್ರೊಕೊಲಿಗಳನ್ನು ಒಳಗೊಂಡಿರುವುದು ಮುಖ್ಯವಾಗಿದೆ.
ಕ್ಯಾಲ್ಸಿಯಂ ಸಮೃದ್ಧ ವಸ್ತುಗಳನ್ನು ಸಹ ಆಹಾರದಲ್ಲಿ ಸೇರಿಸಬೇಕು. ಇದಕ್ಕಾಗಿ ಕಿವಿ, ತೆಂಗಿನಕಾಯಿ, ಮಾವು, ಅನಾನಸ್, ಮುನಕ್ಕಾ, ಬಾದಾಮಿ, ಕಲ್ಲಂಗಡಿ, ಮೊಸರು, ಬೀನ್ಸ್, ಒಣಗಿದ ಬಟಾಣಿ, ಟೋಫು, ಹಸಿರು ಸೊಪ್ಪು, ಮೀನು, ಗೋಧಿ, ನವಣೆ, ರಾಗಿ, ಕಡಲೆ ಮತ್ತು ಸೋಯಾಬೀನ್ ಗಳನ್ನು ಆಹಾರದಲ್ಲಿ ಸೇರಿಸಬಹುದು.
ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿರುವ ಹಾಲನ್ನು ಮಗುವಿಗೆ ಸ್ತನ್ಯಪಾನ ಮಾಡುತ್ತಿರುವ ವೇಳೆ ಅಗತ್ಯವಾಗಿ ಸೇವಿಸಬೇಕು. ಎದೆ ಹಾಲು ಉತ್ಪಾದನಾ ಪ್ರಕ್ರಿಯೆಯಲ್ಲಿ ನಿಮ್ಮ ದೇಹಕ್ಕೆ ಕ್ಯಾಲ್ಷಿಯಂ ಅಗತ್ಯವಿರುತ್ತದೆ. ಆದ್ದರಿಂದ ದಿನದಲ್ಲಿ ಎರಡು ಲೋಟ ಹಾಲು ಕುಡಿಯುವುದು ಸೂಕ್ತ.
ಧನ್ಯವಾದಗಳು.
GIPHY App Key not set. Please check settings