ಹೊಟ್ಟೆಯ ಕೆಳಗೆ ಬಲ ಭಾಗದಲ್ಲಿ ಕರುಳಿನಿಂದ ಬೆರಳಿನ ಆಕಾರದಲ್ಲಿ ಹೊರ ಬಂದಿರುವ ಅಪೆಂಡಿಕ್ಸ್ ಅಂಗ ಉರಿಯೂತದಿಂದ ಬಳಲಿದ ಸಂದರ್ಭವನ್ನು ಅಪೆಂಡಿಸೈಟಿಸ್ ಎಂದು ಕರೆಯುತ್ತಾರೆ. ಈ ರೀತಿಯ ಸಂದರ್ಭ ಎದುರಾದಾಗ ಸಾಮಾನ್ಯವಾಗಿ ಕೆಳಗಿನ ಹೊಟ್ಟೆ ಅಥವಾ ಕಿಬ್ಬೊಟ್ಟೆಗೆ ವಿಪರೀತ ನೋವು ಬರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಹೊಟ್ಟೆ ನೋವು ಹೊಕ್ಕಳಿನ ಭಾಗದಿಂದ ಪ್ರಾರಂಭವಾಗಿ ನಿಧಾನವಾಗಿ ಕೆಳ ಭಾಗಕ್ಕೆ ವಿಸ್ತರಿಸುತ್ತದೆ.
ಉರಿಯೂತ ಹೆಚ್ಚಾದಷ್ಟು ಹೊಟ್ಟೆ ನೋವು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಅಪೆಂಡಿಸೈಟಿಸ್ ರೋಗ ಲಕ್ಷಣವನ್ನು ಗುಣ ಪಡಿಸಲು ಶಸ್ತ್ರಚಿಕಿತ್ಸೆಯ ಮೂಲಕ ಅಪೆಂಡಿಕ್ಸ್ ಭಾಗವನ್ನು ತೆಗೆದುಹಾಕಲಾಗುತ್ತದೆ.
ಅಪೆಂಡಿಸೈಟಿಸ್ ಅಥವಾ, ಅಪೆಂಡಿಕ್ಸ್ ನ ಉರಿಯೂತ ಹದಿಹರೆಯ ಮಧ್ಯವಯಸ್ಕರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ನಾವೆಲ್ಲ ಈ ಸಮಸ್ಯೆಯನ್ನು ತಪ್ಪಾಗಿ ‘ಅಪೆಂಡಿಕ್ಸ್’ ರೋಗವೆಂದು ಕರೆಯುತ್ತೇವೆ. ಅಪೆಂಡಿಕ್ಸ್ ದೇಹದ ಅಂಗಾಂಗವಾಗಿದೆ. ಈ ಆರೋಗ್ಯ ಸಮಸ್ಯೆಯನ್ನು ಸುಮಾರು ಎರಡು ಶತಮಾನಗಳ ಮೊದಲೇ ವಿವರಿಸಲಾಗಿತ್ತು. ಪ್ರತಿ ವ್ಯಕ್ತಿಯು ತನ್ನ ಜೀವಮಾನದುದ್ದಕ್ಕೂ ಸಮಸ್ಯೆಯನ್ನು ಅನುಭವಿಸಬಹುದಾದ ಅಪಾಯವೆದುರಿಸುತ್ತಾನೆ. ಅಪೆಂಡಿಕ್ಸ್ ಗೆ ಸಂಬಂಧಿಸಿದ ಈ ಕಾಯಿಲೆಗೆ ಪರಿಹಾರವಿದೆ, ಆದರೆ ಈ ಕಾಯಿಲೆ ನಮ್ಮ ನಿರ್ಲಕ್ಷ್ಯದಿಂದ ಜಾಸ್ತಿಯಾಗುತ್ತದೆ.

ಅಪೆಂಡಿಕ್ಸ್ ಸಮಸ್ಯೆ ಯಾರಿಗೆ ಬೇಕಾದರೂ ಯಾವ ವಯಸ್ಸಿನಲ್ಲಿ ಬೇಕಾದರೂ ಬರಬಹುದು. ಹೆಚ್ಚಾಗಿ 10 ವರ್ಷದ ಮಕ್ಕಳಿಂದ ಹಿಡಿದು 30 ವರ್ಷದ ವಯಸ್ಕರವರೆಗೂ ಕಾಡುತ್ತದೆ.
ವಿಶೇಷವಾಗಿ ನಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಚಿಕ್ಕ ಕಲ್ಲುಗಳು, ಮೂಳೆ ಚೂರುಗಳು, ಲೋಹದ ವಸ್ತುಗಳು, ಗಾಜು, ಮರಳು, ಮಣ್ಣು ಇತ್ಯಾದಿಗಳೆಲ್ಲಾ ಇಲ್ಲಿ ನಿಧಾನವಾಗಿ ಸಂಗ್ರಹವಾಗುತ್ತಾ ಇರುತ್ತದೆ. ಎಲ್ಲಿಯವರೆಗೆ ಇದು ತುಂಬುವುದಿಲ್ಲವೋ ಅದುವರೆಗೂ ಯಾವುದೇ ಲಕ್ಷಣವನ್ನು ತೋರುವುದಿಲ್ಲ. ಆದರೆ ತುಂಬಿದ ಬಳಿಕ ಒಳಗಿನ ಘನವಸ್ತುಗಳು ಕರುಳಿನ ಒಳಗೋಡೆಯ ಮೇಲೆ ಒತ್ತಡ ಹೇರುತ್ತವೆ ಹಾಗೂ ಇದು ಅಪಾರ ನೋವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಹತ್ತರಿಂದ ಮೂವತ್ತು ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಂಗ್ರಹಗೊಂಡ ಘನವಸ್ತುಗಳ ಮೊನಚು ಮತ್ತು ಸಾಂದ್ರತೆಯನ್ನು ಅನುಸರಿಸಿ ನೋವು ಸಾಮಾನ್ಯದಿಂದ ತೀವ್ರವಾಗಿರುತ್ತದೆ.
ಅಪೆಂಡಿಕ್ಸ್ ಲಕ್ಷಣಗಳು :
*ಇದ್ದಕ್ಕಿದ್ದಂತೆ ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
*ಕೆಲವೊಮ್ಮೆ ಹೊಕ್ಕಳಿನ ಭಾಗದಲ್ಲಿ ನೋವು ಪ್ರಾರಂಭವಾಗಿ ನಿಧಾನವಾಗಿ ಹೊಟ್ಟೆಯ ಬಲ ಭಾಗದಲ್ಲಿ ಕೆಳ ಭಾಗಕ್ಕೆ ನೋವು ವಿಸ್ತಾರವಾಗುತ್ತದೆ.
*ಕೆಮ್ಮಿದಾಗ, ಸೀನಿದಾಗ, ನಡೆದಾಗ, ಓಡಿದಾಗ, ಬಾಗಿದಾಗ, ಭಾರ ಎತ್ತಿದಾಗ ನೋವು ವಿಪರೀತವಾಗುತ್ತದೆ.
*ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಗೋಚರಿಸುತ್ತವೆ.
*ಹೊಟ್ಟೆ ಹಸಿವಾಗುವುದಿಲ್ಲ.
*ಮಲಬದ್ಧತೆ ಅಥವಾ ವಿಪರೀತ ಭೇದಿಯಾಗುತ್ತದೆ
ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು.
*ದಿನ ಕಳೆದಂತೆ ಸಣ್ಣದಾಗಿ ಜ್ವರ ಕಾಣಿಸಿಕೊಳ್ಳುತ್ತದೆ
*ಹೊಟ್ಟೆ ಹಿಡಿದುಕೊಂಡು ಅಂತ ಹೊಟ್ಟೆಯ ಸೆಳೆತ ಶುರುವಾಗುತ್ತದೆ.

ಸರ್ಜರಿಯ ಮೂಲಕ ಅಪೆಂಡಿಕ್ಸ್ ಹೊರತೆಗೆದ ನಂತರ ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ರೋಗಿಯು ಚೇತರಿಸಿಕೊಳ್ಳುತ್ತಾನೆ. ಲ್ಯಾಪರೋಸ್ಕೋಪಿಕ್ ಸರ್ಜರಿಯಲ್ಲಿ ರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ.
ಅಪೆಂಡಿಕ್ಸ್ ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಸಣ್ಣ-ಪುಟ್ಟ ನಗರಗಳಲ್ಲೂ ಮಾಡಲಾಗುತ್ತದೆ. ಅಪೆಂಡಿಸೈಟಿಸ್ ನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದಲ್ಲಿ ಹೆಚ್ಚಿನ ಅಪಾಯ ತಪ್ಪಿಸಬಹುದಾಗಿದೆ.
ಬೆಳ್ಳುಳ್ಳಿಯಲ್ಲಿ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳಿಂದ ಅಪೆಂಡಿಸೈಟಿಸ್ ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಉಂಟಾಗಿರುವ ನೋವು ಮತ್ತು ಉರಿಯೂತವನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ದಿನ ಅಪೆಂಡಿಸೈಟಿಸ್ ಉಂಟಾದ ವ್ಯಕ್ತಿ 2 – 3 ಬೆಳ್ಳುಳ್ಳಿ ಎಸಳುಗಳನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಉಪಹಾರಕ್ಕೆ ಮುಂಚೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಅಪೆಂಡಿಕ್ಸ್‌ಗೆ ಚಿಕಿತ್ಸೆ ನೀಡಲು ಹೆಸರುಕಾಳು ತುಂಬಾ ಹಳೆಯ ಮನೆಮದ್ದಾಗಿದೆ. ನೀರಿನಲ್ಲಿ ನೆನೆಸಿದ ಹೆಸರುಕಾಳುಗಳನ್ನು ದಿನದಲ್ಲಿ ಮೂರು ಸಲ ಒಂದು ಚಮಚ ಸೇವಿಸಿ. ಇದರಿಂದ ನಿಮಗೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುತ್ತದೆ.
ಶುಂಠಿಯಲ್ಲಿ ಸಹ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳಿದ್ದು, ಪ್ರತಿ ದಿನ ಎರಡರಿಂದ ಮೂರು ಬಾರಿ ಶುಂಠಿ ಚಹಾವನ್ನು ಮಾಡಿ ಕುಡಿಯುವುದರಿಂದ ನೋವು ಮತ್ತು ಉರಿಯೂತವನ್ನು ಪರಿಹಾರ ಮಾಡಿಕೊಳ್ಳಬಹುದು. ಜೊತೆಗೆ ಶುಂಠಿ ಚಹಾ ಕುಡಿಯುವುದರಿಂದ ವಾಕರಿಕೆ ಮತ್ತು ವಾಂತಿಯ ಸಮಸ್ಯೆ ದೂರಾಗುತ್ತದೆ. ಇದರ ಜೊತೆಯಲ್ಲಿ ಶುಂಠಿಯ ಎಣ್ಣೆಯಿಂದ ಹೊಟ್ಟೆಯನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬಹುದು.
ಮಜ್ಜಿಗೆ ಅಪೆಂಡಿಕ್ಸ್‌ಗೆ ಚಿಕಿತ್ಸೆ ನೀಡಲು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದು ಅಪೆಂಡಿಸಿಟಿಸ್ ನ ನೋವನ್ನು ಕಡಿಮೆ ಮಾಡುತ್ತದೆ. ಮಜ್ಜಿಗೆಗೆ ಸ್ವಲ್ಪ ಉಪ್ಪು ಹಾಕಿ. 2-3 ಲೋಟ ಮಜ್ಜಿಗೆ ದಿನಾ ಕುಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಅಪೆಂಡಿಕ್ಸ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ಮಜ್ಜಿಗೆಯು ತಡೆಯುತ್ತದೆ. ಇದರಿಂದ ಅಪೆಂಡಿಸಿಟಿಸ್ ಕಡಿಮೆಯಾಗುವುದು.

ಲಿಂಬೆರಸ ಮತ್ತು ಜೇನುತುಪ್ಪ ಅಥವಾ ಲಿಂಬೆನೀರನ್ನು ಸೇವಿಸಿದರೆ ಅಪೆಂಡಿಸಿಟಿಸ್ ಗೆ ಪರಿಣಾಮಕಾರಿ ಔಷಧಿಯಾಗಿದೆ. ಲಿಂಬೆಯಲ್ಲಿ ಸಿಟ್ರಸ್ ಅಂಶವಿದೆ ಮತ್ತು ಇದು ತುಂಬಾ ಹುಳಿಯಾಗಿರುತ್ತದೆ. ಇದರಲ್ಲಿರುವಂತಹ ವಿಟಮಿನ್ ಸಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಲಿಂಬೆಯು ನೋವನ್ನು ಕಡಿಮೆ ಮಾಡಿ ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
ಮೆಂತೆ ಕಾಳಿನಿಂದ ಮಾಡಿದಂತಹ ಚಹಾವನ್ನು ಅಪೆಂಡಿಕ್ಸ್‌ನ ಚಿಕಿತ್ಸೆಗೆ ಪ್ರತೀದಿನ ಸೇವನೆ ಮಾಡಿ. ಮೆಂತೆ ಕಾಳುಗಳು ಅಪೆಂಡಿಕ್ಸ್ ನಲ್ಲಿ ಕೀವು ಮತ್ತು ಲೋಳೆ ಜಮೆಯಾಗುವುದನ್ನು ತಡೆಯುತ್ತದೆ. ಇದರಿಂದ ಅಪೆಂಡಿಸಿಟಿಸ್ ಕಡಿಮೆಯಾಗುವುದು.
ಮನೆ ಮದ್ದುಗಳ ಪ್ರಯೋಗದಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಈ ಮೇಲಿನ ಮನೆ ಮದ್ದುಗಳು ತಾತ್ಕಾಲಿಕವಾಗಿ ಪರಿಹಾರ ಒದಗಿಸುತ್ತವೆ ಎಂಬ ವಿಶ್ವಾಸ ಅಷ್ಟೆ.
ಧನ್ಯವಾದಗಳು.
GIPHY App Key not set. Please check settings