ಇನ್ನೇನು ಮಳೆಗಾಲ ಶುರುವಾಯಿತು.ಮಕ್ಕಳಿಗೆ, ದೊಡ್ಡವರಿಗೆ ಎಲ್ಲಾ ಶುರು ಆಯಿತು, ಶೀತ, ಕೆಮ್ಮು, ತಲೆನೋವು ಇತ್ಯಾದಿ ಖಾಯಿಲೆಗಳು….
ಹೊರಗಡೆ ಜೋರು ಮಳೆ ,ಬಾಯಿ ಅಂತೂ ಸುಮ್ಮನೆ ಇರಲು ಈಸ್ಟ ಪದಲ್ಲ. ಏನಾದರೂ ತಿನ್ನೋಣ, ಕರಿದಿರೋದು, ಹುರಿದಿರೋದು ಅಂತ.ಹಾಗಂತ ಎಲ್ಲಾ ಆಹಾರಗಳನ್ನು ತಿನ್ನಬಾರದು. ಸ್ವಲ್ಪ ಆರೋಗ್ಯಕರವಾದ,ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ತಿನ್ನಬೇಕು.
ಯಾವೆಲ್ಲ ಆಹಾರಗಳನ್ನು ಮಳೆಗಾಲದಲ್ಲಿ ತಿನ್ನಬಹುದು ನೋಡೋಣ.
ಮಳೆಗಾಲದಲ್ಲಿ ಬಿಸಿ ಬಿಸಿ ಸೂಪ್ ಕುಡಿಯಲು ನೀಡುವುದು ಒಳ್ಳೆಯದು. ಚಿಕನ್ ಸೂಪ್, ಟೊಮೆಟೊ ಸೂಪ್, ವೆಜ್ ಸೂಪ್ ಹೀಗೆ ಯಾವುದೇ ನೀಡಬಹುದು. ಸೂಪ್ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇನ್ನು ಹುಷಾರು ತಪ್ಪಿದಾಗ ಸೂಪ್ ಕೊಡಿ, ಬೇಗನೆ ಚೇತರಿಸಿಕೊಳ್ಳಲು ತುಂಬಾನೇ ಸಹಕಾರಿ.
ಬೇಸಿಗೆಯಲ್ಲಿ ತಿನ್ನಲು ಹಿತವೆನ್ನಿಸುವ ಮೊಸರನ್ನು ಮಳೆಗಾಲದಲ್ಲೂ ಬಳಸಿ, ಮೊಸರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
ಶುಂಠಿ ಜೀರ್ಣಕ್ರಿಯೆಗೆ ಸಹಕಾರಿಯಾಗುವುದರಿಂದ ಆಹಾರ ಪದಾರ್ಥಗಳಲ್ಲಿ ಶುಂಠಿ ಸೇರಿಸಿ ಇದರೊಂಗೆ ಶುಂಠಿ ಟೀ ಮಾಡಿ ಕುಡಿಯುವುದು ಉತ್ತಮ. ಶುಂಠಿ ಜೀರ್ಣಕ್ರಿಯೆ ಜೊತೆಗೆ ದೇಹವನ್ನು ಬೆಚ್ಚಗಿಡುತ್ತದೆ. ಶೀತ, ಕೆಮ್ಮು ಇವುಗಳ ವಿರುದ್ದ ಹೋರಾಡುತ್ತದೆ.
ಮಕ್ಕಳಿಗೆ ಬೇಳೆ ಕೊಡುವುದಿಂದ ಪ್ರೊಟೀನ್ ಹಾಗೂ ಇತರ ಪೋಷಕಾಶಗಳು ದೊರೆಯುತ್ತವೆ. ಅಲ್ಲದೆ ಬೇಳೆ ಆಯಾ ಕಾಲದಲ್ಲಿ ಕಾಡುವ ಸೋಂಕು ತಡೆಗಟ್ಟುವಲ್ಲಿಯೂ ತುಂಬಾ ಸಹಕಾರಿ. ಮಕ್ಕಳಿಗೆ ಜ್ವರ ಇದ್ದಾಗ ಬೇಳೆ ಸೂಪ್ ,ಮಾಡಿ ಕೊಡುವುದರಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ.
ವಿಶೇಷವಾಗಿ ಮಳೆಗಾಲದ ಆರಂಭದಲ್ಲಿ ಭೂಮಿಯಲ್ಲಿ ಕಾಣ ಸಿಗುವ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥವೆಂದರೆ ಅಣಬೆ ಇದರ ಸೇವನೆಯೂ ಆರೋಗ್ಯಕರವಾದುದು. ಆದರೆ ಕೆಲವೊಮ್ಮೆ ಮಳೆಗಾಲದಲ್ಲಿ ಅಣಬೆಗಳ ಮೇಲೆ ಬೇಗನೆ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುವುದರಿಂದ ಇದನ್ನು ತಿಂದಾಗ ಆರೋಗ್ಯ ಸಮಸ್ಯೆ ಬರಬಹುದು. ಅದರಲ್ಲಿರುವ ವಿಷದ ಅಂಶವು ತೀವ್ರವಾದ ರೋಗವನ್ನುಂಟುಮಾಡುವುದು. ಅಣಬೆಯನ್ನು ಸೇವಿಸುವುದರಿಂದ ಕೆಲವರಿಗೆ ಜಠರ ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ.
ಮಕ್ಕಳಿಗೆ ಸೀಸನಲ್ ಫ್ರೂಟ್ ನೀಡಿ. ಬಾಳೆಹಣ್ಣು, ಪಿಯರ್ಸ್, ಪಪ್ಪಾಯಿ ಇವುಗಳನ್ನು ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿ. ವಿಟಮಿನ್ ಸಿ ಇರುವ ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಸೊಪ್ಪಿನ ಆಹಾರ ಸೇವನೆ ಎಲ್ಲಾ ಸಮಯದಲ್ಲೂ ಆರೋಗ್ಯಕರವಾಗಿರುತ್ತದೆ ಆದರೆ, ಮಳೆಗಾಲದಲ್ಲಿ ಸೊಪ್ಪನ್ನು ಶುಚಿ ಮಾಡುವಾಗ ತುಂಬಾನೆ ಜಾಗರೂಕರಾಗಿರಬೇಕು. ಸೊಪ್ಪು ಪದಾರ್ಥಗಳಲ್ಲಿ ಕೀಟಾಣುಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ತಾಜಾ ಸೊಪ್ಪನ್ನೆ ತಿನ್ನಿ.
ಆರೋಗ್ಯದ ರಕ್ಷಣೆಗೆ ಮುಖ್ಯವಾಗಿ ಬೇಕಾಗಿರುವುದು ಶುದ್ದವಾದ ನೀರು. ಅನೇಕ ಕಾಯಿಲೆಗಳು ನೀರಿನಿಂದ ಬರುತ್ತದೆ ಆದ್ದರಿಂದ ನೀರನ್ನು ಕುದಿಸಿ ಕುಡಿಯಿರಿ.
ಮಕ್ಕಳಿಗೆ ನೀಡುವ ಆಹಾರದಲ್ಲಿ ಬೆಳ್ಳುಳ್ಳಿ ಇರುವಂತೆ ನೋಡಿಕೊಳ್ಳಿ. ಸೋಪ್, ಸಾರು ಇವುಗಳಲ್ಲಿ ಬೆಳ್ಳುಳ್ಳಿ ಸೇರಿಸಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಹಾಲು ಕಾಯಿಸುವಾಗ ಅದರಲ್ಲಿ ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ನೀಡಿದರೆ ಅವರಿಗೆ ಕಫ ಉಂಟಾಗುವುದನ್ನು ತಡೆಗಟ್ಟಬಹುದು.
ಹಸಿರು ಮೆಣಸಿನ ಕಾಳುಗಳಲ್ಲಿ ಪೈಪೆರಿನ್ ಎಂಬ ಆಲ್ಕಲಾಯ್ಡ್ ಇದ್ದು ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಇದರಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಕೆ ಇದೆ. ಹಸಿರು ಮೆಣಸಿನ ಕಾಳುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿದ್ದು ಅದು ಸ್ವತಂತ್ರ ರಾಡಿಕಲ್ ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಗಂಭೀರ ರೋಗಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ.
ಹಸಿ ಮೆಣಸಿನಕಾಳುಗಳು ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುವ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪಾದನೆಯನ್ನು ಹೆಚ್ಚು ಮಾಡುವ ಮೂಲಕ ದೇಹದಲ್ಲಿರುವ ಹೆಚ್ಚಿನ ಗ್ಯಾಸ್ ಕಡಿಮೆ ಮಾಡಬಹುದು. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಅಂದರೆ ಆಹಾರದಿಂದ ಬರುವ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಆಹಾರದಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
ದಾಳಿಂಬೆಯಂತಹ ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ತುಂಬಿರುತ್ತವೆ. ಆದರೆ ಮಳೆಗಾಲದಲ್ಲಿ ರಸ್ತೆ ಬದಿಯ ಮಾರಾಟಗಾರರು ಮೊದಲೇ ಕತ್ತರಿಸಿ ಇರಿಸಿದ ಹಣ್ಣುಗಳು ಮತ್ತು ತಿನ್ನುವುದನ್ನು ಬಿಡಿ. ಮನೆಯಲ್ಲಿ ಹಣ್ಣುಗಳನ್ನು ತಂದು ತಿನ್ನಿ. ಹಾಗೂ ಜ್ಯೂಸ್ಗಳನ್ನು ಸಹ ಮನೆಯಲ್ಲಿಯೇ ಮಾಡಿ ಸೇವಿಸಿ.
ಹಾಗಲಕಾಯಿಯು ಬಾಯಿಗೆ ರುಚಿಯಲ್ಲದಿದ್ದರೂ ಇದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಹಾಗಲಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ವೈರಲ್ ವಿರೋಧಿ ಗುಣಗಳು ನೀವು ಮಳೆಗಾಲದಲ್ಲಿ ಫಿಟ್ ಹಾಗೂ ಆರೋಗ್ಯಕರವಾಗಿರುವಂತೆ ಮಾಡುವುದು.
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಚ್ಚಗಿರುವ ಆಹಾರವನ್ನು ಸೇವಿಸುವುದು ಉತ್ತಮ. ಅದರಲ್ಲೂ ದ್ರವ ಆಹಾರಗಳು ಹಗುರವಾಗಿರುವುದರಿಂದ ಆರಾಮದಾಯಕ ಎನಿಸುತ್ತದೆ. ಹಾಗಾಗಿ ಸೂಪ್, ಮಸಾಲಾ ಟೀ, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿ. ಏಕೆಂದರೆ ಅವುಗಳು ಹೈಡ್ರೇಶನ್ ಮತ್ತು ರೋಗನಿರೋಧಕ ವ್ಯವಸ್ಥೆಗೆ ಉತ್ತಮಗೊಳಿಸುತ್ತದೆ.
ಒಂದು ಕಪ್ ಬಿಸಿಬಿಸಿಯಾದ ಚಹಾ ಮಳೆಗಾಲದಲ್ಲಿ ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸುವುದು ಮಾತ್ರವಲ್ಲದೆ ದೇಹವನ್ನು ಬಿಸಿಯಾಗಿಡುವುದು. ಏಲಕ್ಕಿ, ದಾಲ್ಚಿನಿ ಅಥವಾ ಶುಂಠಿ ಮತ್ತು ತುಳಸಿ ಎಲೆಗಳನ್ನು ಹಾಕಿಕೊಂಡು ಚಹಾ ಮಾಡಿದರೆ ಅದರಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ದೇಹಕ್ಕೆ ದಾಳಿ ಮಾಡುವಂತಹ ಸೋಂಕುಗಳನ್ನು ತಡೆಯುವುದು. ಮಸಾಲ ಚಹಾ ಶೀತ ಮತ್ತು ಗಂಟಲಿನ ಸೋಂಕು ನಿವಾರಿಸುವುದು.
ಮಳೆಗಾಲದಲ್ಲಿ ಯಾವ ತರಕಾರಿಗಳು ಲಭ್ಯವಿರುತ್ತದೆಯೋ ಆ ತರಕಾರಿಗಳನ್ನು ಸೇವಿಸುವುದು ಉತ್ತಮ. ಮಳೆಗಾಲ ಸೋರೆಕಾಯಿಗಳ ಸೀಸನ್. ಈ ಸಮಯದಲ್ಲಿ ಸ್ನೇಕ್ ಸೋರೆಕಾಯಿ, ಬಾಟಲ್ ಸೋರ್ಡ್, ಇಂಡಿಯನ್ ಸ್ಕ್ವ್ಯಾಷ್, ರಿಡ್ಜ್ ಸೋರ್ಡ್, ಇತ್ಯಾದಿ ಬಗೆಯ ಸೋರೆಕಾಯಿಗಳು ಸಿಗುತ್ತವೆ. ಅದನ್ನು ಬಳಸಿ ಆಹಾರ ಪದಾರ್ಥ ಮಾಡಿ ಸೇವಿಸುವುದು ಮಳೆಗಾಲದ ಎಷ್ಟು ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ, ಸಲಾಡ್, ಪರಾಠ, ಸೂಪ್, ಮುಂತಾದ ವಿವಿಧ ಅಡುಗೆಗಳಲ್ಲಿ ಸೋರೆಕಾಯಿ ತರಕಾರಿಗಳನ್ನು ಸೇರಿಸಿ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ದೂರವಿರಲು ಸಹಾಯ ಮಾಡುತ್ತದೆ.
ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನುವ ಬದಲು ಬೇಯಿಸಿ ತಿನ್ನುವುದು ಒಳ್ಳೆಯದು. ಕೆಲವೊಮ್ಮೆ ಹಸಿ ತರಕಾರಿ ತಿಂದಾಗ ಹೊಟ್ಟೆ ನೋವು ಬರಬಹುದು. ಹಸಿ ತರಕಾರಿ ಸಲಾಡ್ ಗಳನ್ನು ಕಡೆಗಣಿಸಿ.
ಕೋಸುಗಡ್ಡೆಯು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ತರಕಾರಿಯಾಗಿದ್ದು, ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಉರಿಯೂತ ಶಮನಕಾರಿ ಗುಣಗಳಿವೆ. ಇದರಿಂದ ಹೊಟ್ಟೆ ಉಬ್ಬರ, ಎದೆಯುರಿ ಮತ್ತು ಆಸಿಡಿಟಿ ನಿಯಂತ್ರಿಸಬಹುದು. ಇದರಲ್ಲಿರುವ ನಾರಿ ನಾಂಶವು ಅಜೀರ್ಣವನ್ನು ದೂರವಿಟ್ಟು ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವಂತೆ ಮಾಡುವುದು.
ಧನ್ಯವಾದಗಳು.
GIPHY App Key not set. Please check settings