in ,

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು

ತುಳಸಿ ಎಲೆಯ ಉಪಯೋಗ
ತುಳಸಿ ಎಲೆಯ ಉಪಯೋಗ

ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ.

ತುಳಸಿ ಗಿಡವನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಧಾರ್ಮಿಕ ಹಾಗೂ ಔಷಧಿ ಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ತುಳಸಿ ಗಿಡವನ್ನು ಚಾ, ತಾಜಾ ಎಲೆಗಳು, ಜ್ಯೂಸ್ ಮತ್ತು ಒಣಗಿಸಿ ಹುಡಿ ಮಾಡಿದ ರೂಪದಲ್ಲಿ ಬಳಸಲಾಗುತ್ತದೆ.

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು
ತುಳಸಿಯನ್ನು ಪೂಜಿಸುವುದು ನಮ್ಮ ಸಂಪ್ರದಾಯ

ತುಳಸಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ. ಚರ್ಮದ ಅಲರ್ಜಿಗಳು, ಮೂತ್ರದ ಸೋಂಕುಗಳು, ಉಸಿರಾಟ ಮತ್ತು ಹೊಟ್ಟೆಯ ಸೋಂಕುಗಳು ಸೇರಿದಂತೆ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.

ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್​ ಅಂಶಗಳು ಸಮೃದ್ದವಾಗಿರುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳ ವಿರುದ್ದ ಹೋರಾಡುತ್ತದೆ.

ಉರಿಯೂತವನ್ನು ಕಡಿಮೆ ಮಾಡಲು 

ದೇಹದಲ್ಲಿ ಯಾವುದೇ ಊತವಿದ್ದರೆ ತುಳಸಿ ಬೀಜಗಳನ್ನು ಸೇವಿಸುವುದರಿಂದ ನಿಮಗೆ ಲಾಭವಾಗುತ್ತದೆ. ತುಳಸಿ ಬೀಜಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ, ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ತುಳಸಿ ಎಲೆಗಳನ್ನು ಸೇವಿಸಿದರೆ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯ ವಾಗಿರುವುದು, ಜೊತೆಗೆ ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಆಗುವುದು.

ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯವಾಗಿಡುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿರುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ದೇಹದಲ್ಲಿನ ಪಿಎಚ್ ಮಟ್ಟವನ್ನು ಅದು ಕಾಪಾಡುವುದು ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಕೂಡ ನಿಯಂತ್ರಣದಲ್ಲಿ ಇಡುವುದು.

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು
ತುಳಸಿ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ

ತುಳಸಿ ಬೀಜಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಜೊತೆಗೆ ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ, ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಈ ಬೀಜಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫ್ಲೇವನಾಯ್ಡ್ ಗಳು ಮತ್ತು ಫಿನೋಲಿಕ್ ಗಳಿವೆ. ಶೀತದ ಸಮಸ್ಯೆಯಲ್ಲಿ ತುಳಸಿ ಬೀಜದ ಕಷಾಯ ಅಥವಾ ಟೀ ಕುಡಿಯುವುದರಿಂದ ಸಹಾಯವಾಗುತ್ತದೆ.

ತುಳಸಿ ಎಲೆಗಳನ್ನು ಹಸಿಯಾಗಿ ತಿಂದರೆ ಅದರಿಂದ ಹಲವಾರು ಲಾಭಗಳು ಇವೆ ಮತ್ತು ಅದರ ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಬಹುದು. ತುಳಸಿ ಎಲೆಗಳನ್ನು ತಿನ್ನುವುದು ಅಥವಾ ತುಳಸಿ ನೀರು ಕುಡಿಯುವ ಪರಿಣಾಮ ರಕ್ತದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಮೊಡವೆ ಹಾಗೂ ಬೊಕ್ಕೆಗಳು ಚರ್ಮದ ಮೇಲೆ ನಿರ್ಮಣವಾಗುವುದನ್ನು ತಡೆಯುವುದು.

ಚಿಯಾ ಬೀಜಗಳನ್ನು ಹೋಲುವ ಕಪ್ಪು ಮತ್ತು ಕಣ್ಣೀರಿನ ಆಕಾರದ ಈ ತುಳಸಿ ಬೀಜಗಳು ಪ್ರೋಟೀನ್ ಗಳು, ಕಾರ್ಬ್ಸ್ ಮತ್ತು ಅಗತ್ಯ ಕೊಬ್ಬುಗಳಿಂದ ಸಮೃದ್ಧವಾಗಿವೆ ಮತ್ತು ಸಾಕಷ್ಟು ನಾರಿನಂಶದಿಂದ ತುಂಬಿವೆ. ತುಳಸಿ ಬೀಜಗಳು ಕಬ್ಬಿಣ, ವಿಟಮಿನ್ ಕೆ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ.

ಶೀತದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ ಪ್ರತಿ ದಿನ ಮೂರರಿಂದ ಐದು ತುಳಸಿ ಎಲೆಗಳನ್ನು ಸೇವಿಸಿ. ಇದರಿಂದ ಶೀತದ ಸಮಸ್ಯೆ ದೂರವಾಗುತ್ತದೆ.

ತುಳಸಿ ಬೀಜಗಳನ್ನು ಸೇವಿಸುವುದರಿಂದ ಒತ್ತಡ ನಿವಾರಿಸುವಲ್ಲಿಯೂ ನಿಮಗೆ ಲಾಭವಾಗಲಿದೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ.ಮನಸ್ಸು ಶಾಂತವಾಗುತ್ತದೆ. ಆದುದರಿಂದ ಇದನ್ನು ಮಿಸ್ ಮಾಡದೆ ಪ್ರತಿದಿನ ಸೇವಿಸಿ.

ಪ್ರತಿನಿತ್ಯ ತುಳಸಿ ಎಲೆಯನ್ನು ಸೇವಿಸಿದ್ರೆ ಅಥವಾ ನೀರಿನಲ್ಲಿ ಹಾಕಿ ಕುಡಿದ್ರೆ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಇದು ಮುಖ್ಯವಾಗಿ ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು
ತುಳಸಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣ

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿಯುವುದರಿಂದ ಅಥವಾ ತುಳಸಿ ನೀರು ಕುಡಿದರೆ ಆಗ ಸಾಮಾನ್ಯ ಶೀತದ ಸಮಸ್ಯೆಯು ಪರಿಣಾಮಕಾರಿ ಆಗಿ ನಿವಾರಣೆ ಆಗುವುದು. ತುಳಸಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇರುವುದೇ ಇದಕ್ಕೆ ಕಾರಣವಾಗಿದೆ.

ತುಳಸಿ ಎಲೆಗಳು ಇಮ್ಯೂನ್ ಮಾಡ್ಯೂಲೇಟರ್ ಆಗಿ ಕೆಲಸ ಮಾಡುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಆಗುವುದು ಮತ್ತು ನಿರ್ವಹಿಸುವುದು. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗದ ವಿರುದ್ಧ ಇದು ಹೋರಾಡುವುದು ಮತ್ತು ಆರೋಗ್ಯಕಾರಿ ಪ್ರತಿರೋಧಕ ಅಂಗಾಂಶಗಳನ್ನು ಇದು ನಿರ್ಮಾಣ ಮಾಡುವುದು.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ನರ ವ್ಯವಸ್ಥೆಗೆ ಆರಾಮವಾಗಲು ನೆರವಾಗುವುದು ಮತ್ತು ರಕ್ತ ಸಂಚಾರವು ಸುಧಾರಣೆ ಆಗುವುದು. ಪ್ರತೀ ಎರಡು ದಿನಕ್ಕೊಮ್ಮೆ ಐದು ತುಳಸಿ ಎಲೆಗಳನ್ನು ಸೇವಿಸಿ.

ಫ್ರೀ ರ್ಯಾಡಿಕಲ್ ನಿಂದ ಆರೋಗ್ಯಕಾರಿ ಅಂಗಾಂಶಗಳನ್ನು ಕಾಪಾಡಲು ತುಳಸಿ ಎಲೆಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನೆರವಾಗುವುದು. ತುಳಸಿ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಸೋಂಕಿನಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಮಧುಮೇಹಿಗಳು ತುಳಸಿಯನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದು ಮಧುಮೇಹ ನಿರ್ವಹಣೆಗೆ ಸಹಾಯ ಮಾಡುವಾಗ ರಕ್ತದಲ್ಲಿನ ಸಕ್ಕರೆ ಬಿಡುಗಡೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಮಧುಮೇಹ ಮತ್ತು ಕಿಡ್ನಿ ಕಲ್ಲಿನ ಸಮಸ್ಯೆ ತಗ್ಗಿಸುವುದು

ತುಳಸಿ ಎಲೆಗಳಲ್ಲಿ ಯುಜೆನಾಲ್, ಕ್ಯಾರಿಯೋಫಿಲೀನ್ ಮತ್ತು ಮೀಥೈಲ್ ಯುಜೆನಾಲ್ ಎನ್ನುವ ಸಾರಭೂತ ತೈಲವಿದೆ. ಈ ಅಂಶಗಳು ಮೇಧೋಜೀರಕ ಗ್ರಂಥಿಯ ಅಂಗಾಂಶಗಳು ಇನ್ಸುಲಿನ್ ಜಮೆ ಮಾಡಲು ಮತ್ತು ಬಿಡುಗಡೆಗೊಳಿಸಲು ನೆರವಾಗುವುದು. ಇನ್ಸುಲಿನ್ ಸೂಕ್ಷ್ಮತೆಯಿಂದಾಗಿ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ಕಡಿಮೆ ಆಗುವುದು ಮತ್ತು ಮಧುಮೇಹವನ್ನು ನಿವಾರಣೆ

ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ಕಿಡ್ನಿ ಕಲ್ಲುಗಳು ಕೂಡ ನಿವಾರಣೆ ಆಗುವುದು. ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಯುವುದು.

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು
ಕೃಷ್ಣ ತುಳಸಿ

ನಿಯಮಿತವಾಗಿ ತುಳಸಿ ಬೀಜಗಳನ್ನು ತಿನ್ನುವುದರಿಂದ ನಿಮಗೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ತುಳಸಿ ಬೀಜಗಳಿಂದ ಗ್ರೀನ್ ಟೀ ತಯಾರಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಲಾಭವಾಗುತ್ತದೆ.

ತುಳಸಿ ಎಲೆಗಳಲ್ಲಿ ಕ್ಯಾಂಪೇನ್, ವಿಟಮಿನ್ ಸಿ, ಸಿನೋಲ್ ಮತ್ತು ಯುಜೆನಾಲ್ ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು ಮತ್ತು ಉಸಿರುಗಟ್ಟುವ ಸಮಸ್ಯೆ ನಿವಾರಣೆ ಮಾಡುವುದು ತುಳಸಿ ಎಲೆಗಳು ಶ್ವಾಸಕೋಶದಲ್ಲಿ ಕ್ಷಯ ಮತ್ತು ಧೂಮಪಾನದಿಂದ ಆಗಿರುವಂತಹ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

 ತುಳಸಿ ಎಲೆಗಳಲ್ಲಿ ಇರುವಂತಹ ಯುಜೆನಾಲ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದು ಕಾಯಿಲೆಗಳಿಂದ ಹೃದಯವನ್ನು ರಕ್ಷಣೆ ಮಾಡುವುದು.

ತುಳಸಿ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಈ ಅಂಶಗಳು ಬಾಯಿ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗದಂತೆ ತಡೆಯುವುದು. ಗಡ್ಡೆಗಳಿಗೆ ರಕ್ತ ಸರಬರಾಜು ಆಗುವುದನ್ನು ರಕ್ತನಾಳಗಳಿಗೆ ಕಡಿಮೆ ರಕ್ತ ಪೂರೈಕೆ ಮಾಡುವ ಮೂಲಕ ತಡೆಯುವುದು.

ತುಳಸಿಯಲ್ಲಿರುವ ಯುಜೆನಾಲ್ ಎಂಬ ರಾಸಾಯನಿಕ ಸಂಯುಕ್ತ ಹೊಟ್ಟೆ ಉರಿಯೂತವನ್ನು ಕಡಿಮೆಮಾಡುತ್ತದೆ. ತುಳಸಿ ಜೀರ್ಣಕ್ರಿಯೆ ಮತ್ತು ನರಮಂಡಲಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ ಮತ್ತು ನಮ್ಮ ದೇಹದಲ್ಲಿ ಸೂಕ್ತವಾದ ಜೀರ್ಣಕ್ರಿಯೆ ಮತ್ತು ಪಿಹೆಚ್ ಮಟ್ಟವನ್ನು ಸಮತೋಲನವನ್ನು ಮಾಡುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ತುಳಸಿ ನಿವಾರಣೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಹೊಟ್ಟೆಯ ಅಸಿಡಿಟಿ, ಮಲಬದ್ಧತೆ ಇತ್ಯಾದಿಗಳನ್ನು ನಿವಾರಣೆ ಮಾಡುವುದು.

ತುಳಸಿ ಕಾಯಿಲೆಗಳನ್ನು ಗಾಯಗಳನ್ನು ಗುಣಪಡಿಸುವ ತೈಲ ಸಂಯುಕ್ತಗಳನ್ನು ಹೊಂದಿದೆ. ಚರ್ಮವನ್ನು ಆಳವಾದಿಂದ ಶುದ್ಧಗೊಳಿಸುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಅದು ನಿಮಗೆ ರಕ್ಷಣೆ ನೀಡುತ್ತದೆ. ತುಳಸಿ ಶುದ್ಧೀಕರಣದ ಜೊತೆಗೆ ಮುಚ್ಚಿಹೋಗುವ ರಂಧ್ರಗಳುನ್ನು, ಕಲ್ಮಶಗಳನ್ನು ಕೊಳಕನ್ನು ಸಹ ತೆಗೆದುಹಾಕುತ್ತದೆ.

ಲಿವರ್ ನಮ್ಮ ದೇಹದ ಅಂಗಾಂಗಗಳಲ್ಲಿ ಒಂದು. ಇದು ದೇಹದಲ್ಲಿ ಹೆಚ್ಚಾದ ಕೊಬ್ಬು ಮತ್ತು ಕೆಟ್ಟ ರಾಸಾಯನಿಕ ಅಂಶಗಳನ್ನು ತನ್ನಲ್ಲಿ ಸಂಗ್ರಹಿಸಿಡುತ್ತದೆ. ಯಕೃತ್‍ನಲ್ಲಿ ಶೇಖರಣೆಗೊಂಡ ಕಲ್ಮಶಗಳನ್ನು ಹೊರಹಾಕಲು ತುಳಸಿ ಸಹಾಯ ಮಾಡುತ್ತದೆ.

ತುಳಸಿ ಬೀಜಗಳ ಸೇವನೆಯು ವಿಘಟನೆಯನ್ನು ಸರಿಯಾಗಿರಿಸುತ್ತದೆ. ಇದರಿಂದ ಮಲಬದ್ಧತೆ, ಅಸಿಡಿಟಿ ಅಥವಾ ಅಜೀರ್ಣತೆ ನಿವಾರಣೆಯಾಗುತ್ತದೆ. ಇದರ ಬೀಜಗಳನ್ನು ಸ್ವಲ್ಪ ಕಾಲ ನೀರಿನಲ್ಲಿ ಹಾಕಿ ನಂತರ ಈ ನೀರನ್ನು ಸೇವಿಸಿ. ಇದು ಸಹಾಯ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಲ್ಪಸಂಖ್ಯಾತರ ಹಕ್ಕುಗಳ ದಿನ

ಡಿಸೆಂಬರ್ 18 ರಂದು  ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?