in

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?
ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?

ದ್ರೋಣಾಚಾರ್ಯರನ್ನು ವಿಶ್ವದ ಅತ್ಯುತ್ತಮ ಬಿಲ್ಲುಗಾರರೆಂದು ಪರಿಗಣಿಸಲಾಗುತ್ತದೆ. ಪಾಂಡವರಿಗೆ ಮತ್ತು ಕೌರವರಿಗೆ ಬಿಲ್ವಿದ್ಯೆಯನ್ನು, ಯುದ್ಧದ ಕಲೆಯನ್ನು ಕಲಿಸಿದವರು ದ್ರೋಣಾಚಾರ್ಯರು. ದ್ರೋಣಾಚಾರ್ಯರು ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರೋದು ಅವರ ಜ್ಞಾನ, ಬಿಲ್ವಿದ್ಯೆ ಹಾಗೂ ಮಹಾಭಾರತ ಯುದ್ಧ.

ಒಂದು ನದಿಯ ಬದಿಯಲ್ಲಿ, ಋಷಿ ಭಾರದ್ವಾಜರು ಘೃತಾಚಿ ಎಂಬ ಅಪ್ಸರೆಯನ್ನು ನೋಡಿದರು. ಅವನು ಆಸೆಯಿಂದ ತುಂಬಿದನು ಮತ್ತು ಅವನ ಬೀಜವು ಮಡಕೆ ಅಥವಾ ಬುಟ್ಟಿಯಲ್ಲಿ ಬಿದ್ದಿತು. ಅದರೊಳಗೆ, ಒಂದು ಮಗುವು ಕುಂಡದಲ್ಲಿ ಜನಿಸಿದ ಕಾರಣ ದ್ರೋಣ ಎಂದು ಹೆಸರಿಸಲ್ಪಟ್ಟಿತು ಮತ್ತು ಆಶ್ರಮಕ್ಕೆ ಕರೆತರಲಾಯಿತು.

ಋಷಿ ಭಾರದ್ವಾಜರ ಆಶ್ರಮದಲ್ಲಿ ಅವರ ಮಗ ದ್ರೋಣ ಮತ್ತು ರಾಜಕುಮಾರ ದ್ರುಪದರು ಶಿಕ್ಷಣ ಪಡೆದರು. ದ್ರೋಣ ಮತ್ತು ದ್ರುಪದ ಉತ್ತಮ ಸ್ನೇಹಿತರಾದರು, ಮತ್ತು ದ್ರುಪದನು ದ್ರೋಣನಿಗೆ ಅಗತ್ಯವಿರುವಾಗ ಸಹಾಯ ಮಾಡುವುದಾಗಿ ಭರವಸೆ ನೀಡಿದನು. ಸಮಯ ಕಳೆದುಹೋಯಿತು, ಮತ್ತು ದ್ರುಪದನು ಪಾಂಚಾಲದ ರಾಜನಾದನು ಮತ್ತು ದ್ರೋಣನು ಋಷಿ ಮತ್ತು ಶಿಕ್ಷಕನಾದನು. ದ್ರೋಣನಿಗೆ ಅಶ್ವತ್ಥಾಮ ಎಂಬ ಮಗನಿದ್ದನು. ದ್ರೋಣನು ಭೌತಿಕ ಸಂಪತ್ತಿನಲ್ಲಿ ಆಸಕ್ತಿ ಹೊಂದದೆ ಬಡವನಾದನು. 

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?
ಅಶ್ವತ್ಥಾಮ ಗುರು ದ್ರೋಣರ ಮಗ

ಮಹಾಭಾರತ ಯುದ್ಧದಲ್ಲಿ ಗುರು ದ್ರೋಣಾಚಾರ್ಯರು ಕೌರವರೊಂದಿಗೆ ಇದ್ದರೂ ಕೂಡ ಅವರ ಮನಸ್ಸು ಪಾಂಡವರ ವಿಜಯವನ್ನೇ ಬಯಸಿತ್ತು. ದ್ರೋಣಾಚಾರ್ಯರು ವೇದ ಮತ್ತು ಪುರಾಣಗಳಲ್ಲಿ ಪಾರಂಗತರಾಗಿದ್ದರು ಹಾಗೂ ಮಹಾನ್ ತಪಸ್ವಿಗಳೂ ಕೂಡ ಆಗಿದ್ದರು.

ದ್ರೋಣಾಚಾರ್ಯ ಮಹಾಕಾವ್ಯದಲ್ಲಿ ಕಾಣಿಸಿಕೊಂಡಿರುವ ಪ್ರಾಥಮಿಕ ಸಲಹೆಗಾರರು ಮತ್ತು ಯೋಧರಲ್ಲಿ ಒಬ್ಬರು. ದ್ರೋಣಾಚಾರ್ಯ ಅಸುರರ ಗುರುವಾದ ಶುಕ್ರಾಚಾರ್ಯರ ಜೊತೆಗೆ ಮಹಾಬಲಿಯ ಸ್ನೇಹಿತನೂ ಆಗಿದ್ದಾರೆ. ಅವನು ಭಾರದ್ವಾಜ ಋಷಿಯ ಮಗ ಮತ್ತು ಅಂಗೀರಸ ಋಷಿಯ ವಂಶಸ್ಥನೆಂದು ವಿವರಿಸಲಾಗಿದೆ. ಬೋಧಕನು ಅಸ್ತ್ರಗಳೆಂದು ಕರೆಯಲ್ಪಡುವ ದೈವಿಕ ಆಯುಧಗಳನ್ನು ಒಳಗೊಂಡಂತೆ ಸುಧಾರಿತ ಮಿಲಿಟರಿ ಕಲೆಗಳಲ್ಲಿ ಮಾಸ್ಟರ್ ಆಗಿದ್ದಾರೆ. ಅವರು ತನ್ನ ಆತ್ಮವನ್ನು ಯುದ್ಧಭೂಮಿಯಲ್ಲಿ ಬಿಡುಗಡೆ ಮಾಡಲು ಧ್ಯಾನ ಮಾಡುವಾಗ ಧೃಷ್ಟದ್ಯುಮ್ನನಿಂದ ಶಿರಚ್ಛೇದಿಸಲ್ಪಟ್ಟನು. ದ್ರೋಣನು ಬೃಹಸ್ಪತಿಯ ಅವತಾರ ಎಂದು ಹೇಳಲಾಗುತ್ತದೆ.

ದ್ರೋಣನ ಅವಮಾನ :

ಒಮ್ಮೆ ದ್ರೋಣನ ಮಗ ಅಶ್ವತ್ಥಾಮ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ. ಅವನ ಸ್ನೇಹಿತರು ಹಾಲು ಕುಡಿಯುತ್ತಿದ್ದರು ಮತ್ತು ಅವನು ಅದನ್ನು ಕುಡಿಯಲು ಬಯಸಿದನು. ಆದರೆ ಅವನ ಸ್ನೇಹಿತರು ಹಿಟ್ಟನ್ನು ನೀರಿನಲ್ಲಿ ಬೆರೆಸಿ ಅವನಿಗೆ ಕೊಟ್ಟರು. ಇದರಿಂದ ಕೋಪಗೊಂಡ ದ್ರೋಣನು ದ್ರುಪದನ ವಾಗ್ದಾನವನ್ನು ನೆನಪಿಸಿಕೊಂಡನು. ಅವನು ದ್ರುಪದನ ಅರಮನೆಗೆ ಹೋಗಿ ತನ್ನ ಮಗನಿಗೆ ಹಾಲು ನೀಡಲು ಹಸುವನ್ನು ಮಾತ್ರ ನೀಡುವಂತೆ ಕೇಳಿದನು. ಆದರೆ ದ್ರುಪದನು ವ್ಯರ್ಥವಾಗಿ ಬೆಳೆದು ನಿರಾಕರಿಸಿದನು. ಭಿಕ್ಷುಕ ತನ್ನ ಸ್ನೇಹಿತನಾಗುವುದು ಹೇಗೆ ಎಂದು ಕೇಳಿ ದ್ರೋಣನನ್ನು ಅವಮಾನಿಸಿದನು. ಇದರಿಂದ ಆಕ್ರೋಶಗೊಂಡ ದ್ರೋಣನು ಸೇಡು ತೀರಿಸಿಕೊಳ್ಳಲು ಬಯಸಿದನು.

ಗುರು ದ್ರೋಣಾಚಾರ್ಯರು ಮಹಾಭಾರತ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿದರು. ಭೀಷ್ಮನು ಶರಪಂಜರದ ಮೇಲೆ ಮಲಗಿದ ನಂತರ ಕರ್ಣನ ಆಜ್ಞೆಯ ಮೇರೆಗೆ ದ್ರೋಣಾಚಾರ್ಯರರನ್ನು ಸೇನಾಪತಿಯಾಗಿ ನೇಮಿಸಲಾಗುತ್ತದೆ. ಯುದ್ಧದಲ್ಲಿ ಗುರು ದ್ರೋಣರ ಹೆಚ್ಚುತ್ತಿರುವ ಶಕ್ತಿಯನ್ನು ಕಂಡು ಪಾಂಡವರಲ್ಲಿ ಭೀತಿ ಆರಂಭವಾಯಿತು. ದ್ರೋಣಾಚಾರ್ಯರ ಮತ್ತು ಅವರ ಮಗ ಅಶ್ವತ್ಥಾಮನ ಯುದ್ಧ ಕುಶಲತೆಯನ್ನು ಕಂಡು ಪಾಂಡವರಿಗೆ ತಮ್ಮ ಸೋಲು ಖಚಿತವೆಂಬುದೂ ಅರಿವಾಗುತ್ತದೆ.

ಗುರು ದ್ರೋಣರ ಸಾವು ನ್ಯಾಯವಾಗಿತ್ತಾ?
ಶ್ರೀ ಕೃಷ್ಣ ರಥದ ಚಕ್ರ ಹಿಡಿದು ದ್ರೋಣರ ಮೇಲೆ ಕೋಪಗೊಳ್ಳುವರು

ಯುದ್ಧದಲ್ಲಿ ಪಾಂಡವರು ಕ್ಷೀಣಿಸುತ್ತಿರುವುದನ್ನು ಅರಿತ ಶ್ರೀಕೃಷ್ಣನು ಪಾಂಡವರಿಗೆ ಮೋಸದ ಉಪಾಯವನ್ನು ಸೂಚಿಸುತ್ತಾನೆ. ಶ್ರೀಕೃಷ್ಣನ ಮೋಸದ ಉಪಾಯವೆಂದರೆ ಯುದ್ಧದಲ್ಲಿ ದ್ರೋಣರ ಮಗ ಅಶ್ವತ್ಥಾಮನು ಹತನಾದನೆಂದು ವದಂತಿ ಹರಡಿಸಲು ಹೇಳುತ್ತಾನೆ. ಆದರೆ ಯುದ್ಧ ಭೂಮಿಯಲ್ಲಿ ಸುಳ್ಳು ನುಡಿಯಲು ಧರ್ಮರಾಜ ಮತ್ತು ಯುಧಿಷ್ಠಿರ ಒಪ್ಪುವುದಿಲ್ಲ. ಅದೇ ಸಂದರ್ಭದಲ್ಲಿ ಅಶ್ವತ್ಥಾಮ ಎನ್ನುವ ಆನೆಯನ್ನು ಭೀಮನು ಕೊಲ್ಲುತ್ತಾನೆ. ಆಗ ಯುದ್ಧಭೂಮಿಯಲ್ಲಿ ಅಶ್ವತ್ಥಾಮನು ಹತನಾದನೆಂಬ ಸುದ್ಧಿ ಹರಡುತ್ತದೆ. ಆಗ ದ್ರೋಣರು ಇದನ್ನು ದೃಢಪಡಿಸಿಕೊಳ್ಳಲು ಧರ್ಮರಾಜ ಮತ್ತು ಯುಧಿಷ್ಠಿರನ ಬಳಿ ಬರುತ್ತಾರೆ. ಅಷ್ಟರಲ್ಲಿ ಶ್ರೀಕೃಷ್ಣನು ಅಶ್ವತ್ಥಾಮ ಹತಃ ಕುಂಜರ ಎಂದು ಶಂಖನಾದವನ್ನು ಮೊಳಗಿಸಿದನು. ಆದರೆ ಶ್ರೀಕೃಷ್ಣನು ಮೊದಲೆರೆಡು ಶಬ್ಧವನ್ನು ಜೋರಾಗಿ ಹೇಳುತ್ತಾನೆ ಕುಂಜರ ಎನ್ನುವ ಶಬ್ಧವನ್ನು ನಿಧಾನವಾಗಿ ಹೇಳುತ್ತಾನೆ. ಇದನ್ನು ಕೇಳಿದ ದ್ರೋಣರು ತನ್ನ ಮಗ ಮರಣ ಹೊಂದಿದನೇ ಎಂದು ಅಲ್ಲಿಯೇ ಕುಸಿದು ಬೀಳುತ್ತಾರೆ.

ತನ್ನ ಮಗನ ಸಾವಿನ ಸುದ್ಧಿಯನ್ನು ಕೇಳಿದ ದ್ರೋಣಾರ್ಚಾರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಯುದ್ಧಭೂಮಿಯಲ್ಲಿ ದುಖಃದ ಸಾಗರದಲ್ಲಿ ಮುಳುಗುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ದ್ರೌಪದಿಯ ಸಹೋದರ ದೃಷ್ಟದ್ಯುಮ್ನ ನು ದ್ರೋಣಾಚಾರ್ಯರ ಶಿರಚ್ಛೇದನ ಮಾಡುತ್ತಾನೆ.

ತನ್ನ ತಂದೆಯನ್ನು ಮೋಸದಿಂದ ಕೊಂದ ವಿಷಯ ತಿಳಿಯುತ್ತಿದ್ದಂತೆ ಅಶ್ವತ್ಥಾಮನ ಕೋಪ ಹಾಗೂ ದುಃಖವು ಮುಗಿಲು ಮುಟ್ಟಿತು. ಕೋಪದಿಂದ ಅಶ್ವತ್ಥಾಮನು ಯುದ್ಧಭೂಮಿಯಲ್ಲಿ ಪಾಂಡವರ ಮಕ್ಕಳನ್ನು ಜೀವಂತವಾಗಿ ಉಳಿಸುವುದಿಲ್ಲವೆಂದು ಶಪತವನ್ನು ಮಾಡುತ್ತಾನೆ. ದ್ರೋಣರನ್ನು ಮೋಸದಿಂದ ಕೊಂದು ಹಾಕಿ ಪಾಂಡವರು ಮಹಾಭಾರತ ಯುದ್ಧದಲ್ಲಿ ಗೆಲುವನ್ನು ಸಾಧಿಸುತ್ತಾರೆ. ಆದರೆ ಅಶ್ವತ್ಥಾಮನು ತನ್ನ ತಂದೆಯ ಮೋಸದ ಸಾವಿಗೆ ಪ್ರತಿಕಾರವಾಗಿ ದ್ರೌಪದಿಯ ಎಲ್ಲಾ ಮಕ್ಕಳನ್ನು ಸಾಯಿಸುತ್ತಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತುಳಸಿ ಎಲೆಯ ಉಪಯೋಗ

ಮನೆಯಂಗಳದ ತುಳಸಿ ಎಲೆಯ ಉಪಯೋಗಗಳು

ಗೋವಾ ವಿಮೋಚನಾ ದಿನ

ಗೋವಾ ವಿಮೋಚನಾ ದಿನ