in ,

ಬಾಳೆಹಣ್ಣುಗಳಲ್ಲಿ ಕೆಂಪು ಬಾಳೆಹಣ್ಣಿನಲ್ಲಿ ಶ್ರೇಷ್ಠವಾದ ಗುಣಗಳಿವೆ 

ಕೆಂಪು ಬಾಳೆ
ಕೆಂಪು ಬಾಳೆ

ಕೆಂಪು ಬಾಳೆಹಣ್ಣುಗಳು ಕೆಂಪು-ನೇರಳೆ ಚರ್ಮವನ್ನು ಹೊಂದಿರುವ ಬಾಳೆಹಣ್ಣುಗಳ ಒಂದು ಗುಂಪು. ಕೆಲವು ಸಾಮಾನ್ಯ ಕ್ಯಾವೆಂಡಿಷ್ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ ಮತ್ತು ಕೊಬ್ಬಿರುತ್ತವೆ, ಇತರವುಗಳು ಹೆಚ್ಚು ದೊಡ್ಡದಾಗಿರುತ್ತವೆ. ಹಣ್ಣಾದಾಗ, ಹಸಿ ಕೆಂಪು ಬಾಳೆಹಣ್ಣುಗಳು ಕೆನೆಯಿಂದ ತಿಳಿ ಗುಲಾಬಿ ಬಣ್ಣದ ಮಾಂಸವನ್ನು ಹೊಂದಿರುತ್ತವೆ. ಹಳದಿ ಕ್ಯಾವೆಂಡಿಷ್ ಪ್ರಭೇದಗಳಿಗಿಂತ ಅವು ಮೃದು ಮತ್ತು ಸಿಹಿಯಾಗಿರುತ್ತವೆ, ಕೆಲವು ಸ್ವಲ್ಪ ರಾಸ್ಪ್ಬೆರಿ ಪರಿಮಳವನ್ನು ಹೊಂದಿರುತ್ತವೆ ಮತ್ತು ಇತರವುಗಳು ಮಣ್ಣಿನಿಂದ ಕೂಡಿರುತ್ತವೆ. ಪೂರ್ವ ಆಫ್ರಿಕಾ, ಏಷ್ಯಾ, ದಕ್ಷಿಣ ಅಮೇರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅನೇಕ ಕೆಂಪು ಬಾಳೆಹಣ್ಣುಗಳನ್ನು ನಿರ್ಮಾಪಕರು ರಫ್ತು ಮಾಡುತ್ತಾರೆ. ಅವರು ಮಧ್ಯ ಅಮೇರಿಕಾ  ಕಾಮೋತ್ತೇಜಕ ರಸದ ಒಂದು ರೂಪವಾಗಿ ಅಚ್ಚುಮೆಚ್ಚಿನವರಾಗಿದ್ದಾರೆ, ಜೊತೆಗೆ ಫಲವತ್ತತೆಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಅಚ್ಚುಮೆಚ್ಚಿನವರು ಆದರೆ ಪ್ರಪಂಚದಾದ್ಯಂತ ಮಾರಾಟವಾಗುತ್ತಾರೆ.

ಹಳದಿ ಬಾಳೆಹಣ್ಣಿನಂತೆ ಈ ಕೆಂಪು ಬಾಳೆ ಹಣ್ಣು ಸಹ ಆದರೆ ಕೆಂಪು ಬಾಳೆಹಣ್ಣು ಸಹ ರುಚಿಯಾಗಿದ್ದು, ತನ್ನದೇ ಆದ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಂಪು ಬಾಳೆಹಣ್ಣುಗಳು ಹಳದಿ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ. ಇದರಲ್ಲಿ ಹಳದಿ ಬಾಳೆಹಣ್ಣಿನಲ್ಲಿ ಇರೋದಕ್ಕಿಂತ ಹೆಚ್ಚಿನ ಪೋಷಕಾಂಶಗಳಿವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಬಾಳೆಹಣ್ಣುಗಳಲ್ಲಿ ಕೆಂಪು ಬಾಳೆಹಣ್ಣಿನಲ್ಲಿ ಶ್ರೇಷ್ಠವಾದ ಗುಣಗಳಿವೆ 
ಕೆಂಪು ಬಾಳೆಹಣ್ಣುಗಳು

ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಕೆಲ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.

ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ತುಂಬಾ ಹೆಚ್ಚಾಗಿದೆ. ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ನಿಮಗೆ ಸಿಗಬೇಕು ಎಂದರೆ ಪ್ರಮುಖವಾಗಿ ಇಂತಹ ವಿಟಮಿನ್ ಪ್ರಮಾಣ  ದೇಹಕ್ಕೆ ಸೇರಬೇಕು.

ಕಾಯಿಲೆಯ ಸಂದರ್ಭಗಳಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು ಮತ್ತು  ದೇಹ ಮತ್ತಷ್ಟು ಸೋಂಕಿಗೆ ಒಳಗಾಗದೇ ಇರಲು ಕೆಂಪು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.

ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ಕಣ್ಣಿನ ಆರೋಗ್ಯಕ್ಕೆ ಉತ್ತಮ – ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಣ್ಣುಗಳು ದುರ್ಬಲವಾಗಿರುವ ಅಥವಾ ದೃಷ್ಟಿ ದುರ್ಬಲವಾಗಿರುವ ಜನರು ಇದರ ಸೇವನೆಯನ್ನು ಮಾಡಬಹುದು.

ಕೆಂಪು ಬಾಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶದ ಪ್ರಮಾಣ ತುಂಬಾ ಹೇರಳವಾಗಿ ಕಂಡುಬರುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ.

ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಈ ಹಣ್ಣು ಹೊಟ್ಟೆಯನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದು  ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು.

ಬಾಳೆಹಣ್ಣುಗಳಲ್ಲಿ ಕೆಂಪು ಬಾಳೆಹಣ್ಣಿನಲ್ಲಿ ಶ್ರೇಷ್ಠವಾದ ಗುಣಗಳಿವೆ 
ಹಳದಿ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ

ಪೊಟಾಶಿಯಂ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಸಮತೋಲನದಲ್ಲಿಡಲೂ ಇದು ಸಹಾಯಕಾರಿ. ಇದರಿಂದ ಶರೀರದಲ್ಲಿರುವ ಮೂಳೆಗಳು ಆರೋಗ್ಯಕರವಾಗಿದ್ದು, ಗಟ್ಟಿಯಾಗಿರುತ್ತದೆ.

ಕೆಂಪು ಬಾಳೆಹಣ್ಣು ಕೇವಲ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದಕ್ಕಾಗಿ ನೀವು ಕೆಂಪು ಬಾಳೆಹಣ್ಣನ್ನು ತಿನ್ನಬಹುದು ಅಥವಾ ಸ್ಕಿನ್ ಪ್ಯಾಕ್ ತರಹ ಚರ್ಮದ ಮೇಲೆ ಅನ್ವಯಿಸಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಂಪು ಬಾಳೆಹಣ್ಣು ಸೇವಿಸುವುದು ಅನಿವಾರ್ಯ. ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಈ ವಿಧಾನಕ್ಕೆ ಕೆಂಪು ಬಾಳೆಹಣ್ಣು ಸೇವಿಸುವುದನ್ನು ಸೇರಿಸಿ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಗೆ ಮಾರಕ ಮದ್ದು- ಕೆಂಪು ಬಾಳೆಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ಪೊಟ್ಯಾಷಿಯಂ ಇರುತ್ತದೆ. ಇದರಿಂದ ಕ್ಯಾನ್ಸರ್ ಹಾಗೂ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.

ದೇಹದಲ್ಲಿ ಕೆಂಪು ರಕ್ತಕಣಗಳನ್ನು ಸೇರಿಕೊಂಡು ಹಿಮೋಗ್ಲೋಬಿನ್ ಉತ್ಪತ್ತಿ ಮಾಡಿ ಒಂದು ಬದಿಯಿಂದ ಮತ್ತೊಂದು ಬದಿಗೆ ರಕ್ತನಾಳಗಳ ಮೂಲಕ ತೆಗೆದುಕೊಂಡು ಹೋಗುತ್ತದೆ. ಕೆಂಪು ಬಾಳೆಹಣ್ಣುಗಳಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವುದರಿಂದ, ನಿಮ್ಮ ಅವಶ್ಯಕತೆಗೆ ಇದು ಸಾತ್ ಕೊಡುತ್ತದೆ.

ರಕ್ತ ಶುದ್ಧೀಕರಣಕ್ಕೆ ಅನುಕೂಲವಾಗುವಂತೆ ಇರುವಂತಹ ಕೆಲವು ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಕೆಂಪು ಬಾಳೆ ಹಣ್ಣಿನಲ್ಲಿ ಕಂಡುಬರುತ್ತದೆ. ರಕ್ತ ಶುದ್ಧೀಕರಣಕ್ಕೆ ನೆರವಾಗುವುದು ಮಾತ್ರವಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕೂಡ ಹೆಚ್ಚಾಗುತ್ತದೆ.

ಕೆಂಪು ಬಾಳೆಹಣ್ಣಿನಿಂದ ಮುಖದ ಕಾಂತಿಯನ್ನೂ ಹೆಚ್ಚಿಸಬಹುದು. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಮೂರ್ನಾಲ್ಕು ಜೇನುತುಪ್ಪ ಹನಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.

ಬಾಳೆಹಣ್ಣುಗಳಲ್ಲಿ ಕೆಂಪು ಬಾಳೆಹಣ್ಣಿನಲ್ಲಿ ಶ್ರೇಷ್ಠವಾದ ಗುಣಗಳಿವೆ 
ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ

ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಎದುರಾಗುತ್ತದೆ ಆಗ ಅನಿಮಿಯಾ ಎನ್ನುವ ಸಮಸ್ಯೆ ಬರುತ್ತದೆ.ಕೆಂಪು ಬಾಳೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ.

ಕೆಂಪು ಬಾಳೆಹಣ್ಣುಗಳಲ್ಲಿ ಮೆಗ್ನೀಷಿಯಮ್ ಮತ್ತು ಪೊಟ್ಯಾಷಿಯಮ್ ಇವೆ, ಇದು ಧೂಮಪಾನದ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಶಕ್ತಿ ಮತ್ತು ಪೂರ್ಣ ಅನುಭವವನ್ನು ನೀಡುತ್ತದೆ, ಇದು ಮಾನಸಿಕ ಸಮಸ್ಯೆಗಳನ್ನು ಎದುರಿಸಲು  ಸಹಾಯ ಮಾಡುತ್ತದೆ. ಧೂಮಪಾನ ಸಮಸ್ಯೆ ನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ.

ಕೆಂಪು ಬಾಳೆಹಣ್ಣು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೈ ಬ್ಲಡ್ ಪ್ರೆಶರ್ ಇರುವವರು ಕೆಂಪು ಬಾಳೆಹಣ್ಣು ಸೇವಿಸಬೇಕು. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭಗವಾನ್ ಸ್ವಾಮಿನಾರಾಯಣ ಯೋಗಿಜಿ ಮಹಾರಾಜರ ಪುಣ್ಯ ಸ್ಮರಣೆ

23 ಜನವರಿ, ಭಗವಾನ್ ಸ್ವಾಮಿನಾರಾಯಣ ಯೋಗಿಜಿ ಮಹಾರಾಜರ ಪುಣ್ಯ ಸ್ಮರಣೆ

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದು

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು