ಪೀಚ್ ಮರ ಚೀನಾದ ಪ್ರುನುಸ್ ಸ್ಥಳೀಯ ಪ್ರಭೇದವಾಗಿದ್ದು, ಪೀಚ್ ಎಂದು ಕರೆಯುವ ತಿನ್ನಬಹುದಾದ ರಸಭರಿತ ಹಣ್ಣನ್ನು ಹೊಂದಿರುತ್ತದೆ. ಇದು ಶುಷ್ಕಪರ್ಣಿ ಮರವಾಗಿದ್ದು, 4–10 m ಎತ್ತರವಾಗಿ ಬೆಳೆಯುತ್ತವೆ.ಈ ಮರಗಳು ರೊಸಸೆಯೆ ವಂಶದ ಪ್ರುನಾಯ್ಡೆ ಉಪಕುಟುಂಬಕ್ಕೆ ಸೇರಿವೆ. ಇದನ್ನು ಪ್ರುನಸ್ ಕುಲದ ಒಳಗೆ ಅಮಿಗ್ಡಲುಸ್ ಎಂಬ ಉಪಕುಲದಲ್ಲಿ ಬಾದಾಮಿಯೊಂದಿಗೆ ವರ್ಗೀಕರಿಸಲಾಗುತ್ತದೆ. ಅಲ್ಲದೇ ಉಬ್ಬುತಗ್ಗಿರುವ ಬೀಜದ ಕೋಶ ಇತರ ಉಪಕುಲಗಳಿಂದ ಇವುಗಳನ್ನು ಬೇರ್ಪಡಿಸುತ್ತವೆ.
ಎಲೆಗಳು ಶೂಲಶಿರದ ಆಕಾರವನ್ನು ಹೊಂದಿದ್ದು , 7–16 ಸೆಮೀ ಉದ್ದವನ್ನು (3–6 in), 2–3 ಸೆಮೀ ಅಗಲವನ್ನು, ಗರಿರೂಪದಎಳೆಗಳನ್ನು ಹೊಂದಿರುತ್ತವೆ. ಎಲೆಗಳು ಬರುವ ಮೊದಲೇ ವಸಂತಕಾಲದ ಪೂರ್ವದಲ್ಲೇ ಹೂಗಳು ಬಿಡುತ್ತವೆ. ಹೂವುಗಳು ಐದು ದಳಗಳೊಂದಿಗೆ ನಸುಕೆಂಪು ಬಣ್ಣವನ್ನು ಹೊಂದಿದ್ದು 2.5–3 ಸೆಮೀ ವ್ಯಾಸವನ್ನು ಹೊಂದಿರುತ್ತವೆ ಹಾಗೂ ಒಂಟಿಯಾಗಿ ಅಥವಾ ಜೋಡಿಯಾಗಿರುತ್ತವೆ. ಇದರ ಹಣ್ಣು ಹಳದಿ ಅಥವಾ ನಸುಬಿಳಿ ಬಣ್ಣದ ತಿರುಳನ್ನು ಮತ್ತು ಸೂಕ್ಷ್ಮವಾದ ಕಂಪನ್ನು ಹಾಗೂ ವಿಭಿನ್ನ ಪ್ರಭೇದಗಳಲ್ಲಿ ನುಣುಪಾದ ಅಥವಾ ಮೃದುವಾದ ಸಿಪ್ಪೆಯನ್ನು ಹೊಂದಿರುತ್ತವೆ. ತಿರುಳು ತುಂಬ ಸೂಕ್ಷ್ಮವಾಗಿರುತ್ತದೆ ಮತ್ತು ಕೆಲವೊಂದು ಪ್ರಭೇದಗಳಲ್ಲಿ ಸುಲಭವಾಗಿ ಪೆಟ್ಟು ಬೀಳಬಹುದು. ಆದರೆ ವಿಶೇಷವಾಗಿ ಹಣ್ಣು ಹಸಿರು ಬಣ್ಣದಲ್ಲಿದ್ದಾಗ ಇದು ಕೆಲವೊಂದು ವಾಣಿಜ್ಯ ತಳಿಗಳಲ್ಲಿ ಗಟ್ಟಿಯಾಗಿರುತ್ತದೆ. ದೊಡ್ಡದಾದ ಏಕ ಬೀಜ ಕೆಂಪು-ಕಂದು ಬಣ್ಣದಲ್ಲಿದ್ದು, ಅಂಡಾಕಾರದಲ್ಲಿರುತ್ತದೆ ಹಾಗೂ ಸರಿಸುಮಾರು 1.3–2 ಸೆಮಿ ನಷ್ಟು ಉದ್ದವನ್ನು ಹೊಂದಿರುತ್ತದೆ ಮತ್ತು ಮರದರೀತಿಯ ಸಿಪ್ಪೆಯಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಚೆರಿಹಣ್ಣುಗಳು, ಪ್ಲಮ್ ಹಣ್ಣುಗಳು ಮತ್ತು ಏಪ್ರಿಕಾಟ್ ಹಣ್ಣುಗಳ ಜೊತೆಯಲ್ಲಿ ಪೀಚ್ ಹಣ್ಣುಗಳು ಓಟೆ ಹಣ್ಣುಗಳಾಗಿವೆ.
ಸ್ವತಃ ” ಪೀಚ್” ಪದದ ಜತೆ ಅನೇಕ ಯುರೋಪಿಯನ್ ಭಾಷೆಗಳಲ್ಲಿರುವ ಇದರ ಸಜಾತೀಯಗಳು ಪರ್ಸಿಕಾ ಎಂಬ ವೈಜ್ಞಾನಿಕ ಹೆಸರು, ಪೀಚ್‌ಗಳು ಪರ್ಷಿಯ ಈಗಿನ ಇರಾನ್ ಸ್ಥಳೀಯವಾದವು ಎಂಬ ಯುರೋಪಿನ ಮುಂಚಿನ ನಂಬಿಕೆಯಿಂದ ವ್ಯುತ್ಪತ್ತಿಯಾಗಿದೆ. ಅವುಗಳು ಚೀನಾದಲ್ಲಿ ಹುಟ್ಟಿದವು ಹಾಗೂ ಪರ್ಷಿಯಾಕ್ಕೆ ಮತ್ತು ಸಿಲ್ಕ್ ಹೆದ್ದಾರಿಯ ಮೂಲಕ ಮೆಡಿಟೇರಿಯನ್ ಪ್ರದೇಶಗಳಿಗೆ ಕ್ರಿಸ್ತ ಶಕ ಕಾಲಕ್ಕೆ ಮೊದಲೇ ಪರಿಚಯಿಸಲ್ಪಟ್ಟಿದ್ದವು ಎಂಬುದು ಆಧುನಿಕ ಸಸ್ಯವಿಜ್ಞಾನದ ಬಹುಮತಾಭಿಪ್ರಾಯವಾಗಿದೆ. ತಿರುಳು ಓಟೆಯನ್ನು ಅಂಟಿಕೊಂಡಿರುತ್ತದೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ ಬೆಳೆದ ಪೀಚ್ ಗಳನ್ನು ಕ್ಲಿಂಗ್‌ಸ್ಟೋನ್ಸ್ ಮತ್ತು ಫ್ರೀಸ್ಟೋನ್ಸ್ ಎಂದು ವಿಂಗಡಿಸಲಾಗುತ್ತದೆವಿಂಗಡಿಸಲಾಗುತ್ತದೆ. ಎರಡು ಬಿಳಿಯ ಅಥವಾ ಹಳದಿ ಬಣ್ಣದ ತಿರುಳನ್ನು ಹೊಂದಿರಬಹುದು. ಬಿಳಿಯ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ತುಂಬ ಸಿಹಿಯಾಗಿದ್ದು ಸ್ವಲ್ಪ ಹುಳಿಯನ್ನು ಹೊಂದಿದ್ದರೆ ಹಳದಿ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ಸಿಹಿಯಿಂದ ಕೂಡಿರುವ ಆಮ್ಲೀಯ ರುಚಿಯನ್ನು ಹೊಂದಿದ್ದರೂ ಹೆಚ್ಚಾಗಿ ವೈವಿಧ್ಯದಿಂದ ಕೂಡಿದೆ. ಯಾವಾಗಲೂ ಎರಡು ಬಣ್ಣಗಳು ಅವುಗಳ ಸಿಪ್ಪೆಯ ಮೇಲೆ ಒಂದು ರೀತಿಯ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ಹುಳಿಯ ಬಿಳಿ ಬಣ್ಣದ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ಚೀನಾ, ಜಪಾನ್ ಮತ್ತು ಸುತ್ತಮುತ್ತಲಿನ ಏಷ್ಯದ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಪ್ರಭೇದಗಳಾಗಿದ್ದರೆ, ಆಮ್ಲೀಯ ಹಳದಿ ಬಣ್ಣದ ತಿರುಳಿನ ಪ್ರಭೇಧಗಳನ್ನು ಯುರೋಪಿನ ಮತ್ತು ಉತ್ತರ ಅಮೇರಿಕಾದವರು ಐತಿಹಾಸಿಕವಾಗಿ ಇಷ್ಟಪಡುತ್ತಾರೆ.
ಇದರ ಸಸ್ಯವಿಜ್ಞಾನದ ಹೆಸರಾದ ಪ್ರುನಸ್ ಪರ್ಸಿಕಾ ಪೀಚ್ ಪರ್ಷಿಯಾದ ಮೂಲವಾಗಿದೆ ಎಂದು ಹೇಳಿದರೂ, ಪೀಚ್ ನಿಜವಾಗಿಯೂ ಚೀನಾದಲ್ಲೇ ಹುಟ್ಟಿದೆ. ಚೀನೀ ಸಂಸ್ಕೃತಿಯ ಆರಂಭಿಕ ದಿನಗಳಲ್ಲೆ ಇವುಗಳನ್ನು ಬೆಳೆಸಲಾಗಿತ್ತು. ಚೀನೀ ಬರಹಗಳಲ್ಲಿ ಪೀಚ್ ಹಣ್ಣುಗಳು ಕ್ರಿಸ್ತಪೂರ್ವ 10 ನೇ ಶತಮಾನದ ಹಿಂದೆ ವರ್ಣಿತವಾಗಿವೆ. ಇವು ರಾಜರ ಮತ್ತು ಚಕ್ರವರ್ತಿಗಳ ನೆಚ್ಚಿನ ಹಣ್ಣುಗಳಾಗಿದ್ದವು ಎಂದು ಹೇಳಲಾಗಿದೆ.
ಇದರ ಇಂಗ್ಲೀಷ್ ಹೆಸರು ಲ್ಯಾಟಿನ್ನ ಪ್ರುನಸ್ ಪರ್ಸಿಕಾ ದಿಂದ ವ್ಯತ್ಪತ್ತಿಯಾಗಿದೆ. ಮೊದಲು ಪರ್ಸಿಕಾ, ನಂತರ ಪೆಸಿಕಾ, ನಂತರ ಪೆಸ್ಕ , ಅನಂತರ ಫ್ರೆಂಚ್ ನ ಪಿಚೆ, ನಂತರ ಮಧ್ಯಕಾಲೀನ ಇಂಗ್ಲೀಷ್ ನಲ್ಲಿ ಪೀಚ್ ಎಂದಾಯಿತು.
ಭಾರತಕ್ಕೆ ಮತ್ತು ಪಶ್ಚಿಮ ಏಷ್ಯಿಯಕ್ಕೆ ಪೀಚ್ ಅನ್ನು ಪ್ರಾಚೀನ ಕಾಲದಲ್ಲಿ ತರಲಾಯಿತು. ಯುರೋಪಿಗೆ ಈ ಹಣ್ಣನ್ನು ಅಲೆಗ್ಸಾಂಡರ್ ದಿ ಗ್ರೇಟ್ ಪರ್ಷಿಯನ್ನರನ್ನು ಸೋಲಿಸಿದ ನಂತರ ಪರಿಚಯಿಸಿದನು. ನಂತರ 16 ನೇ ಶತಮಾನದಲ್ಲಿ ಸ್ಪ್ಯಾನಿಷ್ ಪರಿಶೋಧಕರು ಇದನ್ನು ಅಮೇರಿಕಾಗೆ ತಂದರು. ಅಂತಿಮವಾಗಿ 17 ನೇ ಶತಮಾನದಲ್ಲಿ ಇದನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ ಗೆ ತರಲಾಯಿತು. ಅಲ್ಲಿ ಇದು ಅಮೂಲ್ಯವಾದ, ಅಪರೂಪದ ತಿನ್ನುವ ಪದಾರ್ಥವಾಗಿತ್ತು.
ಸಾಮಾನ್ಯವಾಗಿ ತಿಳಿದಿರುವಂತೆ ಜಾರ್ಜ್ ಮಿನಿಫೈ ಎಂಬ ತೋಟಗಾರಿಕಾ ತಜ್ಞ 17 ನೇ ಶತಮಾನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪೀಚ್ ಗಳನ್ನು ಇಂಗ್ಲೆಂಡ್ ನಿಂದ ಉತ್ತರ ಅಮೇರಿಕಾದ ವಸಾಹತುಗಳಿಗೆ ತಂದನು ಹಾಗೂ ಅವುಗಳನ್ನು ವರ್ಜಿನಿಯಾದಲ್ಲಿರುವ ಅವನ ಬುಕ್ ಲ್ಯಾಂಡ್ ಎಸ್ಟೇಟ್ ನಲ್ಲಿ ಬೆಳೆಸಿದನು.
ಅಮೆರಿಕನ್ ಇಂಡಿಯನ್ ಬುಡಕಟ್ಟು ಜನಾಂಗದವರು ಅಮೇರಿಕ ಸಂಯುಕ್ತ ಸಂಸ್ಥಾನದುದ್ದಕ್ಕೂ ಪೀಚ್ ಮರಗಳನ್ನು ಹರಡಿದ ಹಿರಿಮೆ ಗಳಿಸಿದ್ದಾರೆ. ಅವರು ದೇಶದಲ್ಲಿ ಸುತ್ತಾಡುವಾಗ ತಮ್ಮ ಜತೆ ಬೀಜಗಳನ್ನು ಒಯ್ದು ಬಿತ್ತುತ್ತಿದ್ದರು.
ಥಾಂಮಸ್ ಜೆಫರ್ಸನ್ ಮಾಂಟಿಸೆಲ್ಲೊ ನಲ್ಲಿ ಪೀಚ್ ಮರಗಳನ್ನು ಹೊಂದಿದ್ದರೂ ಕೂಡ ಅಮೇರಿಕ ಸಂಯುಕ್ತ ಸಂಸ್ಥಾನದ ಕೃಷಿಕರು 19ನೇ ಶತಮಾನದವರೆಗೆ ಮೇರಿಲ್ಯಾಂಡ್, ಡೆಲವೇರ್, ಜಾರ್ಜಿಯ ಮತ್ತು ಅಂತಿಮವಾಗಿ ವರ್ಜೀನಿಯಾದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿರಲಿಲ್ಲ. ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ಉತ್ಪಾದನೆಗೆಂದು ಕ್ಯಾಲಿಪೋನಿಯಾದಲ್ಲಿ ಈಗ ಶೇಕಡ 65 ರಷ್ಟು ಪೀಚ್ ಗಳನ್ನು ಬೆಳೆಸುತ್ತದೆ,ಆದರೆ ಕೊಲೆರಾಡೊ, ಮಿಚಿಗನ್, ಮತ್ತು ವಾಷಿಂಗ್ಟನ್ ನ ಉತ್ತರದ ರಾಜ್ಯಗಳು ಕೂಡ ಗಮನಾರ್ಹ ಮಟ್ಟದಲ್ಲಿ ಬೆಳಸುತ್ತವೆ. ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಹೊರತುಪಡಿಸಿ ಇಟಲಿ, ಚೀನಾ, ಭಾರತ ಮತ್ತು ಗ್ರೀಸ್ ಗಳು ಪೀಚ್ ಗಳ ಪ್ರಧಾನ ಉತ್ಪಾದಕ ರಾಷ್ಟ್ರಗಳಾಗಿವೆ.
ದೇಹದ ತೂಕ ಇಳಿಸಲು : ಪೀಚ್ ಹಣ್ಣಿನಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. 100 ಗ್ರಾಂ ಪೀಚ್ನಲ್ಲಿ ಕೇವಲ 39 ಕ್ಯಾಲೊರಿಗಳು ಕಂಡು ಬರುತ್ತದೆ. ಇದನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೂ, ಯಾವುದೇ ರೀತಿಯಲ್ಲೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ಪ್ರತಿನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಒತ್ತಡ ನಿಯಂತ್ರಣ : ಪೀಚ್ ಹಣ್ಣಿನಲ್ಲಿರುವ ಖನಿಜಾಂಶಗಳು ಒತ್ತಡ ನಿವಾರಣೆಗೆ ಸಹಾಯಕವಾಗಿದೆ. ಇದರ ಹೂವುಗಳನ್ನು ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.
ಕಣ್ಣಿನ ಆರೋಗ್ಯ : ಈ ಹಣ್ಣಿನಲ್ಲಿ ವಿಟಮಿನ್ ಎ ಜೊತೆ ಕ್ಯಾರೊಟಿನ್ ಅಂಶಗಳು ಕಂಡು ಬರುತ್ತದೆ. ಇದು ಕಣ್ಣಿನ ರೆಟಿನಾದ ಮೇಲೆ ಪರಿಣಾಮ ಬೀರಿ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಆಂಟಿ-ಆಕ್ಸಿಡೆಂಟ್ಗಳು : ಪೀಚ್ ಹಣ್ಣಿನ ಸಿಪ್ಪೆಯು ಪಾಲಿಫೆನಾಲ್ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಆಂಟಿ-ಆಕ್ಸಿಡೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಗಣನೀಯ ಪ್ರಮಾಣದಲ್ಲಿದ್ದು, ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ.
ದೇಹದ ಆರೋಗ್ಯ ಹೆಚ್ಚಿಸುತ್ತದೆ : ಪೀಚ್ನಲ್ಲಿ ಕಂಡುಬರುವ ಖನಿಜಾಂಶಗಳು ಮತ್ತು ಫೈಬರ್ಗಳು ದೇಹದ ಒಳಭಾಗವನ್ನು ಸ್ವಚ್ಚಗೊಳಿಸುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಈ ಹಣ್ಣಿನ ಸೇವನೆ ತುಂಬಾ ಪ್ರಯೋಜನಕಾರಿ.ಪೀಚ್ ಹಣ್ಣು ಬಳಸಿ ಟೀ ಕೂಡ ತಯಾರಿಸಲಾಗುತ್ತಿದ್ದು, ಪ್ರತಿನಿತ್ಯ ಈ ಪಾನೀಯ ಸೇವಿಸದರೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು.
ಕಿಡ್ನಿ ಸ್ಟೋನ್ಗೆ ಪರಿಹಾರ : ಈ ಹಣ್ಣು ಬರಪೂರ ಪೊಟಾಶಿಯಂ ಅಂಶ ಹೊಂದಿರುತ್ತದೆ. ಇದು ಕಡ್ನಿಯ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಪ್ರತಿನಿತ್ಯ ಪೀಚ್ ಹಣ್ಣು ತಿಂದರೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದು.
ದಂತಕ್ಷಯಕ್ಕೆ ಪರಿಹಾರ : ಪೀಚ್ನಲ್ಲಿ ಫ್ಲೋರೈಡ್ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದು ಹಲ್ಲು ಮತ್ತು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಈ ಹಣ್ಣನ್ನು ದಿನನಿತ್ಯ ತಿನ್ನುವುದರಿಂದ ದಂತಕ್ಷಯದ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.
ಕ್ಯಾನ್ಸರ್ಗೆ ರಾಮಬಾಣ : ಈ ಹಣ್ಣಿನಲ್ಲಿ ಕಂಡುವ ಅ್ಯಂಟಿ-ಆಕ್ಸಿಡೆಂಟ್ಗಳು ಕ್ಯಾನ್ಸರ್ ರೋಗ ಬಾಧಿಸದಂತೆ ತಡೆಯುತ್ತದೆ. ಅಲ್ಲದೆ ಕಿಮೊಥೆರಪಿಯ ಅಡ್ಡ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಪೀಚ್ ಹಣ್ಣು ಸಹಕಾರಿ ಎಂದು ಕೆಲ ಅಧ್ಯಯನಗಳೂ ಕೂಡ ತಿಳಿಸಿದೆ.
ಪೀಚ್ ಹಣ್ಣು ತಿನ್ನುವ ಪ್ರಯೋಜನಗಳು :
ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು
ಪೀಚ್ ಹಣ್ಣು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಪೀಚ್ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕಾಲೋಚಿತ ರೋಗಗಳನ್ನು ತಡೆಗಟ್ಟಲು, ನೀವು ಹಣ್ಣುಗಳಲ್ಲಿ ಪೀಚ್ ತಿನ್ನಬೇಕು.
ತೂಕವನ್ನು ಇಳಿಸಲು
ತೂಕ ಇಳಿಸಲು ಪೀಚ್ ಹಣ್ಣು ಉತ್ತಮ. ಪೀಚ್ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ನಿಮ್ಮ ತೂಕವನ್ನು ವೇಗವಾಗಿ ಇಳಿಸಲು ಕಾರಣವಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಪೀಚ್ ತಿನ್ನುವುದರಿಂದ ಮಧ್ಯಾಹ್ನದವರೆಗೆ ಹಸಿವಾಗುವುದಿಲ್ಲ. ನೀವು ಹಸಿದಿರುವಾಗ ನೀವು ಪೀಚ್ ತಿನ್ನಬಹುದು.
ಮೂತ್ರಪಿಂಡಗಳನ್ನು ಆರೋಗ್ಯವಾಗಿರುತ್ತದೆ
ಪೀಚ್ ತಿನ್ನುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಪೀಚ್ ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮೂತ್ರಪಿಂಡಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪೀಚ್ ನಿಮ್ಮ ಮೂತ್ರಕೋಶಕ್ಕೆ ಶುದ್ಧೀಕರಣ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಪೀಚ್ ತಿನ್ನುವುದರಿಂದ ಮೂತ್ರಪಿಂಡದ ಕಾಯಿಲೆ ಬರುವುದಿಲ್ಲ.
ಕಣ್ಣಿನ ಕಾಯಿಲೆಗಳನ್ನು ನಿವಾರಿಸುತ್ತದೆ
ಪೀಚ್ ತಿನ್ನುವುದು ಕಣ್ಣುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು ಸಹ ಪ್ರಯೋಜನಕಾರಿಯಾಗಿದೆ. ಪೀಚ್ ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ, ಇದು ದೇಹವು ವಿಟಮಿನ್ ಎ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ರೆಟಿನಾವನ್ನು ಆರೋಗ್ಯಕರವಾಗಿಡಲು ವಿಟಮಿನ್ ಎ ಬಹಳ ಮುಖ್ಯ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಪೀಚ್ ತಿನ್ನುವುದರಿಂದ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ. ಪೀಚ್‌ಗಳು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ನಿಮ್ಮನ್ನು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಕೀಮೋಥೆರಪಿಯ ಅಡ್ಡಪರಿಣಾಮಗಳಿಂದ ರಕ್ಷಿಸಲು ಪೀಚ್ ಕೆಲಸ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ.
ಧನ್ಯವಾದಗಳು.
casibom guncel giris adresi: casibom giris adresi – casibom 158 giris
casibom guncel giris
farmacia online madrid: comprar cialis online sin receta – farmacias direct
farmacia online barata: farmacia online internacional – farmacia online barcelona
farmacia online barata: comprar cialis online seguro opiniones – farmacias online seguras
Farmacie online sicure: BRUFEN 600 acquisto online – acquistare farmaci senza ricetta
farmacia senza ricetta recensioni: pillole per erezioni fortissime – viagra generico sandoz