in

ಕಮಲದ ಹೂವು

ಕಮಲದ ಹೂವು
ಕಮಲದ ಹೂವು

ಕಮಲದ ಹೂವಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಕಮಲದ ಹೂ ಅನೇಕ ರೂಪದಲ್ಲಿದ್ದು, ದೇವತೆಯ ಸ್ವಭಾವ ಕಾಲ/ದೇಶಕ್ಕೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ. ಕಮಲವನ್ನು ಕೈಯಲ್ಲಿ ಹಿಡಿಯುವುದು ಅನೇಕ ದೇವರುಗಳ ವೈಶಿಷ್ಟ್ಯವಾಗಿದೆ. ಬುದ್ದನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲದ ಹೂ ಹುಟ್ಟಿತೆಂಬ ಪ್ರತೀತಿ ಇದೆ.

ಕಮಲದ ಹೂವಿನ ಪರಿಕಲ್ಪನೆಯ ಮೂಲನೆಲೆ ಭಾರತವೆಂದು ಗುರ್ತಿಸಲಾಗಿದೆ. ಇಡೀ ಸೃಷ್ಠಿಯನ್ನೇ ಈ ಹೂವಿನಲ್ಲಿ ಗುರ್ತಿಸಲಾಗಿದೆ. ಇದು ಸ್ತ್ರೀಯ ಜನನೇಂದ್ರಿಯದ ಸಂಕೇತ. ಜೊತೆಗೆ ದೇವತೆ, ವಿಶ್ವ ಕಮಲ, ದೈವತ್ವ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿನಿಧಿ. ಕ್ರಿಸ್ತಪೂರ್ವ ೮೦೦ರ ಬ್ರಾಹ್ಮಣಗಳಲ್ಲಿ ಕಮಲದ ಎಲೆಯನ್ನು ಗರ್ಭವೆಂದು ಹೇಳಲಾಗಿದೆ. ಇದು ಜೀವನದ ಅಸ್ತಿತ್ವವನ್ನು ಜೀವಂತಗೊಳಿಸುವ ದ್ವಂದ್ವ ಸ್ವಭಾವದ ಪ್ರತೀಕವಾಗಿದೆ. ಕ್ರಿ.ಪೂ ೧ನೇ ಶತಮಾನದಿಂದ ಹಿಡಿದು ಇಂದಿನವರೆವಿಗೂ ದೇವಿ ಪದ್ಮಳ ಕೆತ್ತನೆಗಳಲ್ಲಿ ಅವಳು ಕಮಲದ ಹೂ ಮೇಲೆ ನಿಂತಿದ್ದಾಳೆ, ಅವಳ ಅಕ್ಕ-ಪಕ್ಕ ಎರಡು ಆನೆಗಳಿದ್ದು ,ಅವು ಸೊಂಡಿಲಿನಿಂದ ನೀರನ್ನು ಎರಚುತ್ತಿರುತ್ತವೆ. ಕ್ರಿ.ಪೂ.೩ನೇ ಶತಮಾನದಲ್ಲಿ ಸಿಂಧೂಕಣಿವೆಯ ಮೆಹೆಂಜೋದಾರೋವಿನಲ್ಲಿ ಸಿಕ್ಕಿರುವ ಕಲಾಪ್ರತಿಮೆಯಲ್ಲಿ ಕಮಲದ ಹೂ ಕಂಡು ಬಂದಿದೆ. ರೈತರಿಗೆ ಲಕ್ಷ್ಮೀ ತುಂಬಾ ಶ್ರೇಷ್ಠಳಾದ ದೇವತೆ. ಫಲವಂತಿಕೆಯ ಶಕ್ತಿ ಇರುವಂತಹವಳು. ಸೆಗಣಿಯ ಅಧಿದೇವತೆ. ವಿಷ್ಣುವಿನ ಹೆಂಡತಿಯಾದ ಇವಳನ್ನು ಶ್ರೀ, ಸಿರಿ, ಪದ್ಮ, ಲಕ್ಷ್ಮೀ, ಭೂದೇವಿ ಎಂದು ಕರೆಯಲಾಗಿದೆ.

ಕಮಲದ ಹೂವು
ಕಮಲನಾಭನ ವಿಷ್ಣು

ಕಮಲದ ಹೂವಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಇದು ಪೂರ್ವದೇಶಗಳ ಅತ್ಯಂತ ಸುಂದರ ಹೂ. ಕಮಲದ ಹೂವಿನ ಉಲ್ಲೇಖ ಪ್ರಾಚೀನ ಋಗ್ವೇದದಲ್ಲೇ ಕಂಡು ಬರುತ್ತದೆ. ಕಮಲದ ಹೂ ಅನೇಕ ರೂಪದಲ್ಲಿದ್ದು, ದೇವತೆಯ ಸ್ವಭಾವ ಕಾಲ/ದೇಶಕ್ಕೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ. ಚೀನಾದ ಬೌದ್ದ ಧರ್ಮದಲ್ಲಿ ತಾರಾ ದೇವತೆಯನ್ನು ಕಮಲ ಎಂದು ಕರೆಯಲಾಗುತ್ತದೆ. ಭದ್ರಕಲ್ಪ ಎಂಬ ಒಂದು ಯುಗದ ಆರಂಭದಲ್ಲಿ ಒಂದು ಸಾವಿರ ದಳದ ಕಮಲದ ಹೂವಿದ್ದು, ಮುಂಬರುವ ಬುದ್ದರ ಸಂಖ್ಯೆಯನ್ನು ಅದು ಸೂಚಿಸುತ್ತದೆ. ಬೌದ್ದ ಸ್ವರ್ಗದಲ್ಲಿ ಪ್ರತಿಯೊಬ್ಬನೂ ಕಮಲದ ಹೂವಿನ ಮೇಲೆ ದೇವತೆಯಾಗಿ ಹುಟ್ಟುತ್ತಾನೆ. ಜೀವಚಕ್ರದ ಚಿತ್ರಗಳಲ್ಲಿ ಕಮಲದಳಗಳ ತುದಿ ಅಥವಾ ವಿಶ್ವ ಕಮಲದ ಹೂವಿನ ಚಿತ್ರಣ ಪ್ರಮುಖವಾಗಿರುತ್ತದೆ.

ಭಾರತೀಯ ಸೃಷ್ಟಿಯು ವಿಶ್ವ ಪ್ರಮಾಣದಲ್ಲಿ ಸಂಭವಿಸುತ್ತದೆ. ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ, ಅದರ ಮೇಲೆ ‘ಕಮಲಭವ’ ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ. ಸಾವಿರ ಸುವರ್ಣದಳಗಳುಳ್ಳ ಈ ಕಮಲ ವಿಶ್ವ ವಿಸ್ತರಿಸಿದಂತೆ ತಾನೂ ಬೆಳೆಯುತ್ತಾ ಹೋಗುತ್ತದೆ. ಅದರ ದಳಗಳಿಂದ ಪರ್ವತಗಳು ಉದ್ಭವಿಸುತ್ತವೆ, ನೀರು ಪ್ರವಹಿಸುತ್ತದೆ. ದಳದ ಮುಂಭಾಗದಲ್ಲಿ ದೇವತೆಗಳ ಚಿತ್ರ, ದಳದ ಹಿಂಭಾಗದಲ್ಲಿ ರಾಕ್ಷಸರ ಮತ್ತು ಸರ್ಪಗಳ ಚಿತ್ರವಿದೆ. ಪ್ರತಿಯೊಂದು ಕಲ್ಪ ಅಥವಾ ದಿನ ಮುಗಿದ ನಂತರ, ವಿಷ್ಣುವಿನ ನಾಭಿಯ ಕಮಲದ ಮೇಲೆ ಬ್ರಹ್ಮ ಮರು ಹುಟ್ಟು ಪಡೆಯುತ್ತಾನೆಂದು ‘ಪದ್ಮ ಪುರಾಣ’ದಲ್ಲಿ ಹೇಳಲಾಗಿದೆ. ಕಮಲವನ್ನು ಕೈಯಲ್ಲಿ ಹಿಡಿಯುವುದು ಅನೇಕ ದೇವರುಗಳ ವೈಶಿಷ್ಟ್ಯವಾಗಿದೆ. ವಿಷ್ಣು ತನ್ನ ನಾಲ್ಕು ಕೈಗಳ ಪೈಕಿ ಒಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾನೆ. ಪ್ರಾಚೀನ ಜೈನ ಶಿಲ್ಪಗಳಲ್ಲಿ ಅದು ಆರನೇ ಜಿನನ ಚಿಹ್ನೆಯಾಗಿದೆ. ಅವಲೋಕಿತನನ್ನು ‘ಪದ್ಮಪಾಣಿ’ ಎಂದು ಕರೆಯಲಾಗಿದೆ. ಶುಭ ಶಕುನದ ಎಂಟು ಬೌದ್ದ ಚಿಹ್ನೆಗಳಲ್ಲಿ ಕಮಲವೂ ಒಂದು. ಹಾಲ್ಗಡಲನ್ನು ಮಥಿಸಿದಾಗ ಮೊದಲು ಬಂದ ವಸ್ತುಗಳಲ್ಲಿ ಇದು ಒಂದು. ಕಮಲದೊಂದಿಗೆ ಹೆಣೆದುಕೊಂಡ ಲಿಂಗವನ್ನು ಶಿವ ತನ್ನ ದೇವತೆಯಾದ ಶಕ್ತಿಗೆ ಇದನ್ನು ಕೊಡುತ್ತಾನೆ. ಕಾಳಿ/ಪಾರ್ವತಿಯಾದ ಅವಳು ನಿರಂತರ ಪೀಳಿಗೆಯ ಸಂಕೇತವಾದ ಕಮಲವನ್ನು ಒಂದು ಕೈಯಲ್ಲಿ ಹಿಡಿದಿದ್ದಾಳೆ. ಎಲ್ಲೆಲ್ಲೂ ನೀರೇ ತುಂಬಿದ್ದ ಈ ವಿಶ್ವದ ಮೇಲೆ ಒಂದು ಕಮಲದ ಎಳೆಯನ್ನು ಪ್ರಜಾಪತಿ ಕಂಡನೆಂದೂ ಅವನೇ ಸೃಷ್ಟಿಕರ್ತನೆಂದು ಪುರಾಣಗಳಲ್ಲಿ ಹೇಳಲಾಗಿದೆ.

*ಗ್ರಾಮೀಣ ಬುಡಕಟ್ಟುಗಳಲ್ಲಿ ಕೆಟ್ಟ ಚೇತನಗಳಿಂದ ಒದಗುವ ದುರಾದೃಷ್ಟವನ್ನು ಕಮಲದ ಹೂ ನಿವಾರಿಸುತ್ತದೆ.
*ಕಮಲದ ಹೂವಿನ ಪ್ರತಿ ಭಾಗಗಳನ್ನು ಔಷಧವನ್ನಾಗಿ ಬಳಸಬಹುದು.
*ಶುಭ ನುಡಿಯುವಾಗ, ಬೇರೆಯವರಿಗೆ ಹರಸುವಾಗ ಕಮಲದ ಹೂ ಕೊಡುವುದು ವಾಡಿಕೆ.
*ಕಮಲದ ಹೂವನ್ನು ಮುಡಿದರೆ ಶುಭ, ತಿಂದರೆ ಆರೋಗ್ಯಕಾರಕ.
*ವಿರಹಕ್ಕೆ ಇದು ಪರಿಹಾರ; ಸತ್ತವರ ಆಹಾರವನ್ನು ಕಮಲದ ಹೂವಿನ ಹಾಳೆಯಲ್ಲಿ ಕಟ್ಟಿಡುತ್ತಾರೆ.
*ದೀಪದ ಅಂಗಡಿಯವರಿಗೆ ಕಮಲದ ಹೂ ಶುಭದಾಯಕ ಚಿಹ್ನೆ.
*ಕನಸಿನಲ್ಲಿ ಕಮಲದ ಹೂ ಕಂಡರೆ ಸಂತಾನ ಪ್ರಾಪ್ತಿಯಾಗುತ್ತದೆ.

ಕಮಲದ ಹೂವು
ಕಮಲ

ಕಮಲ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಆಹಾರ ವಸ್ತುವಾಗಿಯೂ ಹೆಸರಾಗಿದೆ. ಇದರ ಪ್ರಕಂದದಲ್ಲಿ ಯಥೇಚ್ಛವಾಗಿ ಪಿಷ್ಠ ಸಂಗ್ರಹವಾಗಿರುವುದರಿಂದ ತರಕಾರಿಯಾಗಿಯೂ ಉಪ್ಪಿನಕಾಯಿಗೂ ಇದನ್ನು ಉಪಯೋಗಿಸುತ್ತಾರೆ. ಇದರಲ್ಲಿ ಶೇ. 2.70 ಪ್ರೋಟೀನು, ಶೇ.9.25 ಪಿಷ್ಠ, ಶೇ.0.11 ಕೊಬ್ಬು, ಶೇ.1.56 ಸಕ್ಕರೆಯ ಭಾಗ ಇದೆಯೆಂದು ತಿಳಿದುಬಂದಿದೆ. ಅಲ್ಲದೆ ಬಿ ಮತ್ತು ಸಿ ಜೀವಾತುಗಳು ಕೂಡ ಇವೆ. ಕಮಲದ ಕಾಯಿಗಳನ್ನು ಹುರಿದು ಅಥವಾ ಹುರಿಯದೆಯೇ ತಿನ್ನುವುದುಂಟು. ಎಳೆಯ ಎಲೆಗಳು, ಕಾಂಡ (ದಂಟು) ಮತ್ತು ಹೂಗಳನ್ನೂ ತರಕಾರಿಯಾಗಿ ಬಳಸುವ ರೂಢಿಯಿದೆ. ಎಲೆಗಳು ಅಗಲವಾಗಿರುವುದರಿಂದ ಊಟದ ಎಲೆಯಾಗಿ ಬಳಸುತ್ತಾರೆ. ಒಂದು ಕಾಲದಲ್ಲಿ ಕಮಲದ ಹೂಗಳಿಂದ ಒಂದು ಬಗೆಯ ಸುಗಂಧ ದ್ರವ್ಯವನ್ನು ತಯಾರಿಸುತ್ತಿದ್ದರು. ಹೂಗಳಿಂದ ಬರುವ ಜೇನು ಶಕ್ತಿವರ್ಧಕವೆನ್ನುತ್ತಾರೆ. ಅಲ್ಲದೆ ಅದನ್ನು ಕಣ್ಣಿನ ಕೆಲವು ರೋಗಗಳಿಗೆ ನಿವಾರಕವಾಗಿ ಉಪಯೋಗಿಸುತ್ತಾರೆ. ಪ್ರಕಂದಗಳಿಂದ ಒಂದು ಬಗೆಯ ಹಿಟ್ಟನ್ನು ತಯಾರಿಸಬಹುದು. ಶಕ್ತಿವರ್ಧಕವೆಂದು ಹೆಸರಾಗಿರುವ ಇದನ್ನು ಅತಿಸಾರ, ಆಮಶಂಕೆಗಳಿಂದ ಬಳಲುವ ಮಕ್ಕಳಿಗೆ ಆಹಾರವಾಗಿ ಕೊಡುತ್ತಾರೆ. ಪ್ರಕಂದಗಳಿಂದ ಒಂದು ರೀತಿಯ ಲೇಪವನ್ನು ತಯಾರಿಸಿ ಗಜಕರ್ಣ ಮತ್ತಿತರ ಚರ್ಮರೋಗಗಳಿಗೆ ಬಳಸುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಾಮುಂಡೇಶ್ವರಿ

ಚಾಮುಂಡೇಶ್ವರಿ ಬೆಟ್ಟದ ಮೇಲೆ ನೆಲೆಯಾದ ಕಥೆ

ಪೀಚ್ ಹಣ್ಣು

ಪೀಚ್ ಹಣ್ಣು ಉತ್ಪಾದನೆ ಮತ್ತು ಆರೋಗ್ಯಕರ ಲಾಭಗಳು