ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆ. ಇದು ಆರೋಗ್ಯವರ್ಧಕ ತರಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡು ತುಂಡು ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು.
ಬಹಳ ಪ್ರಾಚೀನ ಕಾಲದಿಂದಲೂ ಇದರ ವಿಶೇಷ ಔಷಧೀಯ ಗುಣಗಳಿಂದ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾದ ಮರ ಇದು.

ಎರಡು ಬಟ್ಟಲು ಕುದಿಯುವ ನೀರಿಗೆ ಒಂದು ಹಿಡಿ ನುಗ್ಗೆಸೊಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಐದು ನಿಮಿಷ ಬೇಯಿಸಿ, ಬಳಿಕ ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು, ಸೊಪ್ಪಿನ ರಸವನ್ನು ತಂಪು ಮಾಡಿ, ಬಸಿಯಬೇಕು. ಆ ರಸಕ್ಕೆ ಸ್ವಲ್ಪ ಅಡಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಬೇಕು. ಹೀಗೆ ತಯಾರಿಸಿದ ಒಂದು ಬಟ್ಟಲು ರಸ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ದೈಹಿಕ ಶಕ್ತಿ ನಾಶ, ಸಂಭೋಗ ಸಾಮಥ್ರ್ಯದ ಅಭಾವ, ನರ ದೌರ್ಬಲ್ಯ, ಉಬ್ಬಸ, ನೆಗಡಿ, ಪುಪ್ಪುಸ ನಳಿಕಾದಾಹ, ಕ್ಷಯ, ಅಪೌಷ್ಟಿಕತೆ, ಅರಕ್ತತೆ ಇತ್ಯಾದಿ ವ್ಯಾಧಿಗಳಲ್ಲಿ ಗಮನಾರ್ಹ ಪರಿಹಾರ ಲಭಿಸುತ್ತದೆ.
ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು. ನಂತರ ಇದರ ಮಹತ್ವ ವಿಶ್ವದ ಅನೇಕ ರಾಷ್ಟ್ರಗಳಿಗೂ ಹರಡಿತು.
ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
ತ್ವಚೆಯನ್ನು ಕೂಡ ಸುಂದರಗೊಳಿಸುತ್ತದೆ. ನುಗ್ಗೆಸೊಪ್ಪಿನ ಪೌಡರ್ ನಿಂದ ತಯಾರಿಸಲಾಗಿರುವ ಫೆಸ್ ಪ್ಯಾಕ್ ನಿಂದ ಮೊಡವೆ, ಕಲೆಗಳು ಹಾಗೂ ಪಿಂಪಲ್ಸ್ ಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಇದರಿಂದ ತ್ವಚೆಗೆ ಪೋಷಣೆ ಸಿಗುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆ ಹೊಳೆಯಲಾರಂಭಿಸುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ತಪ್ಪಿಸುತ್ತದೆ.
ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.
ಸೊಪ್ಪು ಮನುಷ್ಯನ ದೇಹದ ಯಕೃತ್, ವಿಪರೀತ ಕೊಬ್ಬಿನ ಅಂಶದ ಸೇವನೆಯಿಂದ ಮತ್ತು ಲಿವರ್ ಕಾಯಿಲೆಯಿಂದ ಬಹು ಬೇಗನೆ ಹಾನಿಯಾಗುವುದನ್ನು ತಪ್ಪಿಸುತ್ತದೆ.
ಚಳಿಗಾಲದ ದಿನಗಳಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ವೈರಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಗಳು ಸಾಮಾನ್ಯ. ಇಂತಹುದರಲ್ಲಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದಾಗಿದೆ.
ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.
ಪೆಟ್ಟು ಬಿದ್ದು ಊದಿಕೊಂದಿರುವಾಗ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿಕೊಂಡಿರುವ ಭಾಗಕ್ಕೆ ಬಿಸಿಬಿಸಿಯಾಗಿ ಶಾಖ ಕೊಟ್ಟರೆ, ಊತ ಕಡಿಮೆಯಾಗುತ್ತದೆ ಮತ್ತು ನೋವು ಇಳಿಮುಖವಾಗುತ್ತದೆ.
ವಿಟಮಿನ್ ‘ ಎ ‘ ಮತ್ತು ಬೀಟಾ – ಕ್ಯಾರೋಟಿನ್ ಅಂಶ ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಬಹಳ ಸಹಕಾರಿಯಂತೆ. ನುಗ್ಗೆ ಸೊಪ್ಪು ಕೂಡ ಹಸಿರು ಎಲೆ-ತರಕಾರಿಗಳ ಗುಂಪಿಗೆ ಸೇರುತ್ತದೆ.
ನುಗ್ಗೆಸೊಪ್ಪಿನ ರಸದಲ್ಲಿ ಒಂದೆರಡು ಮೆಣಸುಕಾಳು ಅರೆದು ಕಪಾಲಗಲ ಮೇಲೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು. ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕಿ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ‘ ಡಿ ‘ ಅಂಶ ಇದ್ದು, ಮನುಷ್ಯನ ದೇಹದಲ್ಲಿ ಇನ್ಸುಲಿನ್ ನ ಮಟ್ಟ ಹೆಚ್ಚಾಗುವಂತೆ ಮಾಡುತ್ತದೆ.

ನುಗ್ಗೆಕಾಯಿ ಊಟ ಮಾಡುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.
ಅಧಿಕವಾದ ಪೊಟ್ಯಾಶಿಯಂ ಅಂಶ ಇದೆ. ಸಹಜವಾಗಿಯೇ ಪೊಟ್ಯಾಶಿಯಂ ಅಂಶ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ರಕ್ತ ಶುದ್ಧವಾಗುತ್ತದೆ.
ನುಗ್ಗೆಕಾಯಿಯನ್ನು ನೇರವಾಗಿ ತೆಗೆದುಕೊಳ್ಳುವುದು ಕೂಡ ಅಪಾಯಕರ. ಇದು ಎದೆಯುರಿಗೆ ಕಾಣವಾಗಬಲ್ಲುದು.
ಸಾವಯವದಲ್ಲಿ ಬೆಳೆದ ನುಗ್ಗೆಯಿಂದ ಯಾವುದೇ ಹಾನಿಯಿಲ್ಲ. ಒಂದು ವೇಳೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆದ ಗಿಡಗಳ ಬೇರನ್ನು ಸೇವಿಸಿದರೆ ಗರ್ಭಸ್ರಾವ ಆಗುವ ಸಾಧ್ಯತೆ ಇದೆ.
ಧನ್ಯವಾದಗಳು.
GIPHY App Key not set. Please check settings