in ,

ಕ್ಯಾಬೇಜ್ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ

ಕ್ಯಾಬೇಜ್
ಕ್ಯಾಬೇಜ್

ಕ್ಯಾಬೇಜ್ ನ್ನು ನಾವೆಲ್ಲರೂ ಪಲ್ಯ ಮಾಡಲು, ಸೂಪ್ ಇತ್ಯಾದಿಗಳಿಗೆ ಬಳಕೆ ಮಾಡುತ್ತೇವೆ. ಇದರ ಜ್ಯೂಸ್ ತಯಾರಿಸಿಕೊಂಡು ಕುಡಿದರೆ ಅದು ತುಂಬಾ ಸಹಕಾರಿ.

ತರಕಾರಿಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಕೆಲವು ತರಕಾರಿಗಳನ್ನು ಬಳಸಿದರೆ ಖಂಡಿತವಾಗಿಯೂ ಮಧುಮೇಹ ಬರದಂತೆ ತಡೆಯಬಹುದು.

ಇಲ್ಲಿ ಮುಖ್ಯವಾಗಿ ಎಲೆಕೋಸು ಯಾನೆ ಕ್ಯಾಬೇಜ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಇದನ್ನು ಪಲ್ಯ, ಸಲಾಡ್ ಹೀಗೆ ಹಲವಾರು ವಿಧದಿಂದ ಬಳಕೆ ಮಾಡಲಾಗುತ್ತದೆ. ಇದು ಕೆಲವರಿಗೆ ಇಷ್ಟವಾಗದೆ ಇರುವಂತಹ ತರಕಾರಿ ಕೂಡ.

ಕ್ಯಾಬೇಜ್ ನಮ್ಮ ಆರೋಗ್ಯಕ್ಕೆ ನಾನಾ ರೀತಿಯ ಲಾಭಗಳನ್ನು ನೀಡುವುದು. ಇದರಲ್ಲಿ ಇರುವಂತಹ ಹಲವು ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಇಂದಿನ ದಿನಗಳಲ್ಲಿ ಹಣ್ಣುಗಳ ಜತೆಗೆ ತರಕಾರಿಗಳ ಜ್ಯೂಸ್ ತಯಾರಿಸಿಕೊಂಡು ಸೇವನೆ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿನ ರೋಗದ ಅಂಶಗಳ ವಿರುದ್ಧ ಹೋರಾಡಲು ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಎಲೆಕೋಸು ಯಾನೆ ಕ್ಯಾಬೇಜ್ ತುಂಬಾ ಪೋಷಕಾಂಶಗಳನ್ನು ಹೊಂದಿರುವಂತಹ ತರಕಾರಿ. ಇದರ ಸೇವನೆ ಮಾಡಿದರೆ ಲಾಭಗಳು ಸಿಗುವುದು. ಅದೇ ರೀತಿ ಇದರ ಜ್ಯೂಸ್ ತಯಾರಿಸಿಕೊಂಡು ಕೂಡ ಕುಡಿಯಬಹುದು.

ಕ್ಯಾಬೇಜ್ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ
ನೇರಳೆ ಎಲೆಕೋಸು

ಕ್ಯಾಬೇಜ್ ಜ್ಯೂಸ್ ಕುಡಿದರೆ ಅದರಿಂದ ಜಠರದ ಹುಣ್ಣು ಸಮಸ್ಯೆಯು ನಿವಾರಣೆ ಆಗುವುದು. ಜಠರಕರುಳಿನ ವ್ಯವಸ್ಥೆಯಲ್ಲಿರುವ ಲೋಳೆಪೊರೆ ಗೋಡೆಗೆ ಇದು ನೆರವಾಗುವುದು. ಎಲೆಕೋಸಿನಲ್ಲಿ ಅತ್ಯಧಿಕ ಪ್ರಮಾಣದ ಸಲ್ಫೋರಾಫೆನ್ ಅಂಶವು ಇದ್ದು, ಜಠರದ ಹುಣ್ಣು ನಿವಾರಣೆಗೆ ಸಹಕಾರಿ.

ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವ ಕ್ಯಾಬೇಜ್, ಕಿಡ್ನಿ ಕಾರ್ಯವನ್ನು ಕೂಡ ಉತ್ತಮಪಡಿಸುವುದು. ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣವು ಅತಿಯಾಗಿದ್ದ ವೇಳೆ ಕಿಡ್ನಿಯು ಅದನ್ನು ಹೊರಗೆ ಹಾಕಲು ಪ್ರಯತ್ನಿಸುವುದು.

ಹೃದಯದ ಕಾಯಿಲೆಯಿಂದ ರಕ್ಷಣೆ

ಎಲೆಕೋಸಿನಲ್ಲಿ ಸೆಲೆನಿಯಂ ಎನ್ನುವ ಅಂಶವಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಕ್ಯಾಬೇಜ್ ಜ್ಯೂಸ್ ಕುಡಿದರೆ ಪಾರ್ಶ್ವವಾಯು, ಅಪಧಮನಿ ಕಾಯಿಲೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವುದು. ಕ್ಯಾಬೇಜ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ.

ಎಲೆಕೋಸನ್ನು ವಿಶ್ವದಾದ್ಯಂತ ಬಳಸುತ್ತಾರೆ. ಇದು ದೇಹದಲ್ಲಿರುವ ವಿಷದ ಅಂಶಗಳನ್ನು ಹೊರಹಾಕುತ್ತದೆ. ಇದರಲ್ಲಿ ವಿಟಮಿನ್‌ ಸಿ ಹಾಗೂ ಗಂಧಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಜೀರ್ಣಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹತ್ತು ದಿನಗಳ ಕಾಲ ಒಂದು ಲೀಟ್ ಕ್ಯಾಬೇಜ್ ಜ್ಯೂಸ್ ಕುಡಿದರೆ ಅದು ಜಠರದ ಹುಣ್ಣು ನಿವಾರಣೆ ಮಾಡುವುದು. ಕ್ಯಾಬೇಜ್ ಜ್ಯೂಸ್ ನಲ್ಲಿ ಇರುವ ಪೈಥೋಕೆಮಿಕಲ್ ಅಂಶವು ಆಮ್ಲೀಯ ಪ್ರತಿರೋಧಕವನ್ನು ತಡೆಯುವುದು ಮತ್ತು ಗ್ಯಾಸ್ಟ್ರಿಕ್ ಪದರವನ್ನು ಶಾಂತಪಡಿಸುವುದು.

ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂತಹ ಅಗತ್ಯ ಪೋಷಕಾಂಶಗಳು ಮೂಳೆಗಳನ್ನು ಕ್ಷೀಣಿಸುವುದು ಮತ್ತು ದುರ್ಬಲಗೊಳ್ಳುವುದನ್ನು ತಡೆಯುತ್ತದೆ. ಹಾಗೇ ಇದರಲ್ಲಿನ ಬೀಟಾ– ಕೆರೊಟಿನ್‌ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಉತ್ತಮ

ಮೊಡವೆ, ಕೀಟಗಳ ಕಡಿತ, ಚಿಕ್ಕಪುಟ್ಟ ಗಾಯಗಳು, ತುರಿಕೆ, ಬೆವರುಗುಳ್ಳೆ ಮೊದಲಾದವುಗಳಿಗೆ ಎಲೆಕೋಸನ್ನು ಅರೆದು ಹಿಂಡಿ ತೆಗೆದ ರಸವನ್ನು ಹಚ್ಚುವುದರಿಂದ ಉತ್ತಮ ಪರಿಣಾಮ ಕಾಣಬಹುದು.

ಕ್ಯಾನ್ಸರ್ ಅನ್ನುವ ಮಹಾಮಾರಿಯು ನಮ್ಮ ದೇಹವನ್ನು ವಕ್ಕರಿಸಿಕೊಳ್ಳದಂತೆ ತಡೆಯಲು ಮುನ್ನೆಚ್ಚರಿಕೆ ಹಾಗೂ ಆರೋಗ್ಯಕಾರಿ ಜೀವನಶೈಲಿ ಬೆಳೆಸಬೇಕು. ಕ್ಯಾಬೇಜ್ ಜ್ಯೂಸ್ ಕುಡಿದರೆ ಅದರಿಂದ ಪ್ರಾಸ್ಟೇಟ್, ಕರುಳು ಮತ್ತು ಮೂತ್ರಕೋಶದ ಕ್ಯಾನ್ಸರ್ ತಡೆಯಬಹುದು.

ಕಾಲಜನ್‌ ಎಂಬ ಪ್ರೋಟೀನ್‌ ಚರ್ಮದ ಆರೋಗ್ಯಕ್ಕೆ ಬಹುಮುಖ್ಯ. ಕ್ಯಾಬೇಜ್ ಸೇವನೆಯಿಂದ ಇದು ಯಥೇಚ್ಛವಾಗಿ ಸಿಗುತ್ತದೆ. ನಿಯಮಿತವಾಗಿ ಸೇವಿಸಿದರೆ ದೇಹದಲ್ಲಿ ಕೆರಾಟಿನ್‌ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಉಗುರು ಹಾಗೂ ಕೂದಲ ಬೆಳವಣಿಗೆಗೆ ಸಹಕಾರಿ. ಒಂದು ವೇಳೆ ಈ ಪ್ರೊಟೀನ್‌ಗಳು ದೇಹಕ್ಕೆ ಸಿಗದೇ ಹೋದರೆ ನಿಜವಯಸ್ಸಿಗಿಂತ ಹೆಚ್ಚು ವಯಸ್ಸಾಗಿರುವಂತೆ ಕಾಣುತ್ತಾರೆ.

 ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ರಕ್ತದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಎಲೆಕೋಸು ಕೆಟ್ಟ ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು.

ವಿಟಮಿನ್ ಸಿ ಹಾಗೂ ಸಲ್ಫರ್‌ ದೇಹದಲ್ಲಿನ ವಿಷದ ಅಂಶಗಳನ್ನು ಹೊರಹಾಕುತ್ತದೆ. ಯಕೃತ್ತು ಸರಾಗವಾಗಿ ಕೆಲಸ ಮಾಡುವಂತೆ ಮಾಡುತ್ತದೆ. 

ಕ್ಯಾಬೇಜ್ ನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಕರುಳನ್ನು ಸೋಂಕು ರಹಿತವನ್ನಾಗಿ ಮಾಡುವುದು. ಹಸಿ ಕ್ಯಾಬೇಜ್ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆ ಆಗುವುದು.

ಸೆಲೆನಿಯಂ ಸಮೃದ್ಧವಾಗಿ ಹೊಂದಿರುವಂತಹ ಎಲೆಕೋಸು ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುವುದು. ಉರಿಯೂತ ಶಮನಕಾರಿ ಗುಣ ಹೊಂದಿರುವ ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವುದು.

ಕ್ಯಾಬೇಜ್ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ
ಜಠರದ ಹುಣ್ಣು

​ಎಲೆಕೋಸಿನಲ್ಲಿ ವಿಟಮಿನ್‌ ಕೆ, ಆಯೋಡಿನ್ ಪ್ರಮಾಣ ಹೆಚ್ಚಿದೆ. ಇದು ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ. ಬುದ್ಧಿಮಾಂದ್ಯತೆ, ಮಿದುಳಿನ ನರಹಾನಿ ಹಾಗೂ ಅಲ್‌ಜೈಮರ್‌ನಂತಹ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ.  

ಮಧುಮೇಹಿಗಳು ಅಥವಾ ಚಯಾಪಚಯ ಸಿಂಡ್ರೋಮ್ ನಿಂದ ಬಳಲುತ್ತಿರುವವರು ಕ್ಯಾಬೇಜ್ ನ್ನು ಬಳಕೆ ಮಾಡಬಹುದು. ಕ್ಯಾಬೇಜ್ ನೈಸರ್ಗಿಕವಾಗಿ ಮಧುಮೇಹ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ತರಕಾರಿ.

ಎಲೆಕೋಸು ಸೇವನೆಯಿಂದ ಪದೇ ಪದೇ ಹಸಿವಾಗುವುದಿಲ್ಲ. ಅತಿ ಹೆಚ್ಚು ತಿನ್ನುವ ಚಪಲಕ್ಕೂ ತಡೆ ಹಾಕುತ್ತದೆ. ಇದರ ಸೇವನೆಯಿಂದ ಕ್ಯಾಲೊರಿ ಮಟ್ಟ ಹೆಚ್ಚಾಗದೇ ಇರುವುದರಿಂದ ತೂಕವೂ ಇಳಿಕೆಯಾಗುತ್ತದೆ.

ದೇಹವನ್ನು ನಿರ್ವಿಷಗೊಳಿಸುವುದು

ಹಾರ್ಮೋನ್ ಮತ್ತು ರಾಸಾಯನಿಕಗಳಿಂದ ಆಗಿರುವಂತಹ ಹಾನಿಯನ್ನು ಕ್ಯಾಬೇಜ್ ಜ್ಯೂಸ್ ಕಡಿಮೆ ಮಾಡುವುದು ಮತ್ತು ದೇಹವನ್ನು ನಿರ್ವಿಷಗೊಳಿಸುವುದು. ಹಸಿ ಕ್ಯಾಬೇಜ್ ಜ್ಯೂಸ್ ಸೇವಿಸಿದರೆ ಅದರಿಂದ ಯಕೃತ್ ಶುದ್ಧವಾಗುವುದು.

ಚರ್ಮವು ನಯ ಹಾಗೂ ಬಿಳಿಯಾಗುವುದು

ಕ್ಯಾಬೇಜ್ ಜ್ಯೂಸ್ ನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಬಣ್ಣ ನೀಡಿ, ನಯವಾಗಿಸುವುದು. ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ದೇಹವನ್ನು ನಿರ್ವಿಷಗೊಳಿಸಿ ಚರ್ಮಕ್ಕೆ ಹೊಳಪು ನೀಡುವುದು. ದುಬಾರಿ ಮೇಕಪ್ ಉತ್ಪನ್ನಗಳ ಬದಲಿಗೆ ಕ್ಯಾಬೇಜ್ ಜ್ಯೂಸ್ ಕುಡಿಯಿರಿ.

ತೂಕ ಸಮತೋಲನದಲ್ಲಿಡಲು ಸಹಕಾರಿ

ಹೊಟ್ಟೆಯಲ್ಲಿ ಇರುವಂತಹ ಕಲ್ಮಷವನ್ನು ಹೊರಗೆ ಹಾಕುವ ಮೂಲಕ ಕ್ಯಾಬೇಜ್ ಜ್ಯೂಸ್ ತೂಕ ಇಳಿಸಲು ಸಹಕಾರಿ ಆಗುವುದು. ಅಜೀರ್ಣದ ಸಮಸ್ಯೆಯಿದ್ದರೆ ಅದರಿಂದ ಬೊಜ್ಜು ಹಾಗು ಅತಿಯಾದ ದೇಹ ತೂಕವು ಬರುವುದು.

ಬೇಯಿಸಿ ತಿನ್ನುವುದಕ್ಕಿಂತಲೂ ಎಲೆಕೋಸನ್ನು ಹಸಿಯಾಗಿ ತಿಂದರೆ ಲಾಭ ಹೆಚ್ಚು. ಆದರೆ ಇದರಲ್ಲಿ ಕಾಣಿಸಿಕೊಳ್ಳುವ ಹುಳದ ಭಯದಿಂದ ಅನೇಕ ಜನರು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಇದು ಪೌಷ್ಟಿಕಾಂಶ ತರಕಾರಿ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಕೆ, ಮೆಗ್ನೀಷಿಯಂ, ಫೋಲಿಕ್‌ ಆ್ಯಸಿಡ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ಹೃದಯದ ಕಾಯಿಲೆ ವಿರುದ್ಧ ಹೋರಾಡುವ ಗುಣ ಹೊಂದಿದೆ ಹಾಗೂ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ. ಅತಿ ಹೆಚ್ಚು ಗ್ಲುಟೊ ಅಮಿನೋ ಇರುವುದರಿಂದ ಇದರ ಸೇವನೆ ಜೀರ್ಣಕ್ರಿಯೆಗೂ ಉತ್ತಮ. 

ಅಸ್ತಮಾ, ಶೀತ ಮತ್ತು ಬ್ರಾಂಕಟೈಸ್ ಗೆ ಚಿಕಿತ್ಸೆ

ಕ್ಯಾಬೇಜ್ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ
ಹಸಿ ಕ್ಯಾಬೇಜ್ ನ ಜ್ಯೂಸ್

ಹಸಿ ಕ್ಯಾಬೇಜ್ ನ ಜ್ಯೂಸ್ ಕುಡಿದರೆ ಅದರಿಂದ ಶ್ವಾಸಕೋಶದ ಚಿಕಿತ್ಸೆ ಪ್ರಕ್ರಿಯೆಗೆ ವೇಗ ಸಿಗುವುದು. ಬ್ರಾಂಕಟೈಸ್, ಶೀತ ಮತ್ತು ಅಸ್ತಮಾವನ್ನು ಇದು ಪರಿಣಾಮಕಾರಿ ಆಗಿ ನಿವಾರಿಸುವುದು.

ಈ ತರಕಾರಿ  ಹಸಿರು, ಬಿಳಿ, ಕೆಂಪು ಹಾಗೂ ನೇರಳೆ ಬಣ್ಣಗಳಲ್ಲಿ ಇವೆ. ಇದನ್ನು ಪಲ್ಯ, ಸಾಂಬಾರ್‌ಗಳಲ್ಲೂ ಬಳಸುತ್ತಾರೆ. ಹಾಗೇ ಅನೇಕ ಬಗೆಯ ಸಲಾಡ್‌ಗಳಲ್ಲಿ ಹಸಿಯಾಗಿಯೇ ಬಳಸಲಾಗುತ್ತದೆ.   

ರಕ್ತ ಹೀನತೆ ಸಮಸ್ಯೆ ಹೊಂದಿರುವಂತವರಲ್ಲಿ ಇದು ಕಬ್ಬಿನಾಂಶ ನೀಡುವುದು ಹಾಗೂ ಹೊಸ ರಕ್ತ ಕಣಗಳಣ್ನು ನಿರ್ಮಿಸುವುದು. ಕಬ್ಬಿನಾಂಶದಿಂದ ಹಿಮೋಗ್ಲೋಬಿನ್ ಉತ್ಪತ್ತಿ ಆಗುವುದು ಮತ್ತು ಇದು ರಕ್ತಹೀನತೆ ರೋಗಿಗಳಿಗೆ ತುಂಬಾ ಪರಿಣಾಮಕಾರಿ.

ದೇಹದಲ್ಲಿ ಈಸ್ಟ್ರೋಜನ್ ಬಳಕೆಯ ವಿಧಾನವನ್ನು ಬದಲಾಯಿಸುವ ಮೂಲಕ ಸ್ತನ ಕ್ಯಾನ್ಸರ್ ಅಪಾಯ ತಡೆಯಬಹುದು. ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಕ್ಯಾನ್ಸರ್ ನಿಂದ ಗುಣಮುಖವಾಗಲು ನೆರವಾಗುವುದು.

ಜಿಐ ಸೂಚ್ಯಂಕವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಾರ್ಬೋಹೈಡ್ರೇಟ್ಸ್ ಎಷ್ಟು ವೇಗವಾಗಿ ಹೆಚ್ಚಿಸುವುದು ಎಂದು ಹೇಳುತ್ತದೆ. ಅಧಿಕ ಜಿಐ ಇರುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ವೃದ್ಧಿಸುವುದು. ಹೀಗಾಗಿ ನೀವು ಕ್ಯಾಬೇಜ್ ನ್ನು ನಿಮ್ಮ ಆಹಾರದಲ್ಲಿ ಬಳಕೆ ಮಾಡಿಕೊಳ್ಳಿ.

ಕ್ಯಾಬೇಜ್ ನಲ್ಲಿ ಉನ್ನತ ಮಟ್ಟ ಆಂಟಿಆಕ್ಸಿಡೆಂಟ್ ಮತ್ತು ಆಂಟಿಹೈಪರ್ಗ್ಲೈಸೆಮಿಕ್ ಅಂಶಗಳು ಇವೆ. 60 ದಿನಗಳ ಕಾಲ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಕ್ಯಾಬೇಜ್ ಸಾರವನ್ನು ನೀಡಿದ್ದರಿಂದ ಸಕ್ಕರೆ ಮಟ್ಟವು ಕಡಿಮೆ ಆಗಿರುವುದು ಕಂಡುಬಂದಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರು ಆಗುವುದನ್ನು ಇದು ತಡೆಯುವುದು ಮತ್ತು ಸುರಕ್ಷಿತವಾಗಿಡುವಂತೆ ಮಾಡುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶಂಕರ್‌ನಾಗ್ ಹುಟ್ಟಿದ ದಿನ

ಇಂದು ನಟ, ನಿರ್ದೇಶಕ ಶಂಕರ್‌ನಾಗ್ ಹುಟ್ಟಿದ ದಿನ

ಅಭಯಾರಣ್ಯ

ಅಭಯಾರಣ್ಯಗಳ ಕಲ್ಪನೆ ಪ್ರಾಚೀನ ಕಾಲದಲ್ಲಿ ಇತ್ತು