in ,

ಇಂದು ನಟ, ನಿರ್ದೇಶಕ ಶಂಕರ್‌ನಾಗ್ ಹುಟ್ಟಿದ ದಿನ

ಶಂಕರ್‌ನಾಗ್ ಹುಟ್ಟಿದ ದಿನ
ಶಂಕರ್‌ನಾಗ್ ಹುಟ್ಟಿದ ದಿನ

ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 – 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ. ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು (ಪುರುಷ) ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7ನೇ ರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು. ಅವರು ನಟ ಅವರು ಕಿರಿಯ ಅನಂತನಾಗ್ ಸಹೋದರರಾಗಿದ್ದಾರೆ.

ಜನನ, ವೃತ್ತಿ ಜೀವನ

  • ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು. ನಕ್ಷತ್ರ ನಾಮ’ಅವಿನಾಶ’. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.
  • ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.
  • ಅಣ್ಣನಂತೆ ತಮ್ಮನು ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ, ಕೊಳಲು, ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇಂದು ನಟ, ನಿರ್ದೇಶಕ ಶಂಕರ್‌ನಾಗ್ ಹುಟ್ಟಿದ ದಿನ
ಅಣ್ಣ ತಮ್ಮಂದಿರು
  • ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು. ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ “ಗೆದ್ದ ಮಗ”. ತಮ್ಮ ಸಹೋದರಅನಂತ ನಾಗ್ ಅವರೊಡನೆ “ಮಿಂಚಿನ ಓಟ”, “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ “ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು” ಮತ್ತು ಸ್ವಾಮಿ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದು ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರಾವಾಹಿ ‘ಮಾಲ್ಗುಡಿ ಡೇಸ್’.
ಇಂದು ನಟ, ನಿರ್ದೇಶಕ ಶಂಕರ್‌ನಾಗ್ ಹುಟ್ಟಿದ ದಿನ
ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್

ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್. ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್‌ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ಆ ರಂಗಮಂದಿರಕ್ಕೆ”ರಂಗಶಂಕರ” ಎಂದು ಹೆಸರಿಟ್ಟರು.”ರಂಗಶಂಕರ” ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಬೆಂಗಳೂರಿನಿಂದ ತೆರಳುತ್ತಿದ್ದ ಶಂಕರ್‌ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು.

ಕರಾಟೆ ಕಿಂಗ್ ಶಂಕರ್ ನಾಗ್ ಅವರು ೧೯೮೮ ಜುಲೈನಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ

ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು ಒಂದಾನೊಂದು ಕಾಲದಾಗ ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಅ್ಯಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಗ ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸೆಟ್ರಾ ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೆ ಈ ಹಾಡಿನ ಚಿತ್ರೀಕರಣ ಇತ್ತು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರು ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶಯೋಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಜಿಗಿತ ಜಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್ ದಲ್ಲಿ ಧೀ ಬರ್ತಾಯಿತ್ತು ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

48 Comments

ಕುಸುಬೆ

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ

ಕ್ಯಾಬೇಜ್

ಕ್ಯಾಬೇಜ್ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ