in

ವಿಘ್ನೇಶ್ವರನಿಗೆ ಏಕದಂತ ಎಂದು ಹೆಸರು ಬರಲು ಕಾರಣ ಏನು?

ಏಕದಂತ
ಏಕದಂತ

ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜ್ಯ ವಿಘ್ನವಿನಾಶಕ ಗಣೇಶನಿಗೆ ಅಗ್ರಸ್ಥಾನ. ತ್ರಿದೇವತೆಗಳು ಕೂಡ ವಿನಾಯಕನಿಗೆ ಪ್ರಥಮ ಪೂಜೆ ಸಲ್ಲಿಸುತ್ತಾರೆ. ವಿಘ್ನನಿವಾರಕನಾಗಿರುವ ಶಿವಪುತ್ರ ಬುದ್ದಿವಂತ ದೇವತೇ ಕೂಡ. ಆದರೆ ಒಮ್ಮೆ ಪರಮೇಶ್ವರನ ಪರಮ ಭಕ್ತನಾದ ಭಗವಾನ್ ಪರುಶುರಾಮರು ಹಾಗೂ ವಿನಾಯಕನ ನಡುವೆ ಭಯಂಕರ ಯುದ್ಧವೇ ನಡೆಯುತ್ತದೆ. ಸ್ವಯಂ ನಾರಾಯಣನ ಅವತಾರವಾದ ಪರುಶುರಾಮರು ಮಹಾದೇವನ ಪರಮ ಭಕ್ತನಲ್ಲದೆ ಶಿಷ್ಯ ಕೂಡ ಹೌದು. ಶಿವನ ತಪಸ್ಸು ಮಾಡಿ ಅನುಗ್ರಹಿತನಾದ ಪರುಶುರಾಮ ಭಗವಾನ್ ಶಿವನಿಂದ ಪರುಶು ಆಯುಧವನ್ನ ಪಡೆಯುತ್ತಾನೆ. ಇದರಿಂದಲೇ ಪರಶುರಾಮ ಎಂಬ ಹೆಸರು ಬಂತು ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ.
ಪರಶು ಅಸ್ತ್ರದಿಂದಲೇ ಪರಶುರಾಮರು ಭೂಮಿಯ ಮೇಲಿನ ತನ್ನ ಅವತಾರದ ಉದ್ದೇಶಗಳನ್ನ ಪೂರ್ಣಗೊಳಿಸುತ್ತಾರೆ. ಒಮ್ಮೆ ಮಹಾದೇವನ ದರ್ಶನ ಪಡೆಯುವ ಸಲುವಾಗಿ ಪರಶುರಾಮರು ಕೈಲಾಸಕ್ಕೆ ಪ್ರಯಾಣ ಮಾಡುತ್ತಾರೆ. ಆಗ ಕೈಲಾಸದಲ್ಲಿ ಭಗವಾನ್ ಪರಶುರಾಮರನ್ನ ತಡೆದ ಗಣೇಶ ಮಹಾದೇವನ ಭೇಟಿಗೆ ನಿರಾಕರಿಸುತ್ತಾರೆ. ಧ್ಯಾನದಲ್ಲಿದ್ದ ಪರಮೇಶ್ವರ ತನ್ನ ಬಳಿ ಯಾರನ್ನು ಕಳಿಸಬಾರದು ಎಂದು ವಿನಾಯಕನಿಗೆ ಕಟ್ಟಪ್ಪಣೆ ಮಾಡಿರುತ್ತಾರೆ. ಆದರೆ ಮೊದಲೇ ಮಹಾ ಕೋಪಿಷ್ಠನಾದ ಪರಶುರಾಮರು ವಿನಾಯಕ ತನ್ನ ದಾರಿಗೆ ಅಡ್ಡ ಬಂದಿದಕ್ಕೆ ಕೋಪಗೊಳ್ಳುತ್ತಾನೆ.

ವಿಘ್ನೇಶ್ವರನಿಗೆ ಏಕದಂತ ಎಂದು ಹೆಸರು ಬರಲು ಕಾರಣ ಏನು?
ಗಣಪ ಪರಶುರಾಮ ಯುದ್ಧ

ನಾನು ಶಿವ ಶಂಕರನ ಪರಮ ಭಕ್ತ. ಪ್ರಭುವಿನ ದರ್ಶನ ಪಡೆಯದೇ ನಾನು ಹಿಂತಿರುಗುವುದಿಲ್ಲ ಎಂದು ಗಣೇಶನಿಗೆ ಹೇಳುತ್ತಾರೆ. ಆದರೆ ತಂದೆಯ ಆಜ್ಞೆ ಇದ್ದ ಕಾರಣ ಗಣೇಶ ಪರುಶುರಾಮರ ಮಾತನ್ನ ಕೇಳುವುದಿಲ್ಲ. ಇದರಿಂದ ಕೆರಳಿ ಕೆಂಡವಾದ ಪರಶುರಾಮರು ವಿನಾಯಕನ ಮೇಲೆ ಯುದ್ಧ ಸಾರುತ್ತಾರೆ. ಬೇರೆ ದಾರಿಯಲ್ಲದೆ ಗಣಪ ಕೂಡ ಪರುಶುರಾಮರ ಜೊತೆ ಯುದ್ಧಕ್ಕೆ ನಿಂತಿದ್ದು ಇಬ್ಬರ ನಡುವೆ ಘನಘೋರವಾದ ಯುದ್ಧ ನಡೆಯುತ್ತದೆ. ಇನ್ನು ಪರಶುರಾಮರು ತಮ್ಮ ಬಳಿ ಇದ್ದ ಎಲ್ಲಾ ದಿವ್ಯಾಸ್ತ್ರಗಳನ್ನ ಗಣೇಶನ ಮೇಲೆ ಪ್ರಯೋಗ ಮಾಡಿದರು ಕೂಡ ವಿನಾಯಕನಿಗೆ ಏನೂ ಆಗಲಿಲ್ಲ. ಕೊನೆಗೆ ಶಿವನೇ ಕೊಟ್ಟ ಪರಶುವಿನಿಂದ ಶಿವಪುತ್ರನ ಮೇಲೆ ದಾಳಿ ಮಾಡುತ್ತಾರೆ. ಆದರೆ ಇದನ್ನ ಎದುರಿಸುವ ಶಕ್ತಿಯಿದ್ದರೂ ತಂದೆ ಪರಶುರಾಮರಿಗೆ ಕೊಟ್ಟಿದ್ದ ವರವನ್ನ ಅಪಮಾನ ಮಾಡಲು ಗಣೇಶ ಮುಂದಾಗಲಿಲ್ಲ. ಇದೆ ಕಾರಣದಿಂದ ಪರಷುವನ್ನ ತಮ್ಮ ಒಂದು ದಂತದಿಂದ ತಡೆದಿದ್ದು ಈ ಕಾರಣದಿಂದ ಒಂದು ದಂತ ತುಂಡಾಗಿಹೋಯಿತು. ಕೂಡಲೇ ನೋವಿನಿಂದ ಅಮ್ಮಾ ಎಂದು ತನ್ನ ತಾಯಿ ಪಾರ್ವತೀ ದೇವಿಯನ್ನ ಗಣೇಶ ಕರೆಯುತ್ತಾನೆ. ಸ್ಟಳಕ್ಕೆ ಬಂದ ಮಾತೆ ಪಾರ್ವತೀ ದೇವಿಯು ಮಗನ ಸಂಕಷ್ಟವನ್ನ ಕಂಡು ಪರುಶುರಾಮರ ಮೇಲೆ ಕೋಪಗೊಂಡು ದುರ್ಗಾ ದೇವಿ ರೂಪವನ್ನ ತಾಳುತ್ತಾರೆ. ಅಷ್ಟೊತ್ತಿಗೆ ಭಗವಾನ್ ಪರಶುರಾಮರಿಗೂ ಕೂಡ ತನ್ನ ತಪ್ಪಿನ ಬಗ್ಗೆ ಅರಿವಾಗಿರುತ್ತದೆ. ಗಣೇಶ ಕೂಡ ತಾಯಿಯನ್ನ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾರೆ. ನಾನು ಪರಶುರಾಮರ ಆರಾಧ್ಯ ದೈವ ಮಹದೇವನನ್ನ ಭೇಟಿ ಮಾಡುವುದನ್ನ ತಡೆದಿದ್ದೆ. ಈಗಾಗಿ ಅವರಿಗೆ ಕೋಪ ಬಂದಿರುವುದು ಸ್ವಾಭಾವಿಕವೇ ಸರಿ ಎಂದು ಮತ್ತೆ ಪಾರ್ವತೀ ದೇವಿಯಲ್ಲಿ ಗಣೇಶ ಮನವಿ ಮಾಡಿಕೊಳ್ಳುತ್ತಾನೆ.

ಕೊನೆಗೂ ಪಾರ್ವತೀ ದೇವಿಯು ಶಾಂತರಾಗುತ್ತಾರೆ. ಇನ್ನು ಗಣೇಶನ ವರ್ತನೆ ಕಂಡು ಪರಶುರಾಮರಿಗೂ ಸಂತಸವಾಗಿದ್ದು ಇಷ್ಟೊಂದು ಸಹನಶೀಲತೆಯನ್ನ ಯಾವುದೇ ದೇವರಲ್ಲಿ ನಾನು ಕಂಡಿಲ್ಲ. ಗಣೇಶನ ತುಂಡಾಗಿರುವ ದಂತವಂತೂ ವ್ಯರ್ಥವಾಗುವುದಿಲ್ಲ. ಇದರಿಂದಲೇ ಮಹಾನ್ ಕಾವ್ಯ ಮಹಾಭಾರತವನ್ನ ಬರೆಯಲಾಗುತ್ತದೆ ಎಂದು ಪರಶುರಾಮರು ಹೇಳುತ್ತಾರೆ. ಇನ್ನು ದಂತ ತುಂಡಾಗಿ ಒಂದೇ ದಂತ ಉಳಿದಿದ್ದರಿಂದ ಗಣೇಶನಿಗೆ ಏಕದಂತ ಅಂತಲೂ ಕರೆಯಲಾಗುತ್ತದೆ.

ವಿಘ್ನೇಶ್ವರನಿಗೆ ಏಕದಂತ ಎಂದು ಹೆಸರು ಬರಲು ಕಾರಣ ಏನು?
ಮಹಾಭಾರತದ ಮೂಲ ಬರಹಗಾರ ಗಣೇಶ

ಗಣೇಶನು ಮಹಾಭಾರತದ ಮೂಲ ಬರಹಗಾರ. ವ್ಯಾಸರು ಮಹಾಭಾರತವನ್ನು ಅರ್ಥ ಮಾಡಿಕೊಂಡು ಬರೆಯತಕ್ಕವನು ಗಣಪತಿಯೇ ಎಂದು, ಮಧ್ಯೆ ಏಳದೆ ಬರೆದುಕೊಡುವಂತೆ ಆತನಲ್ಲಿ ಕೇಳುತ್ತಾರೆ. ಹೀಗೆ ವ್ಯಾಸ ಮಹರ್ಷಿಗಳು ಹೇಳುತ್ತಾ ಹೋದಂತೆ ಗಣಪತಿ ಹಕ್ಕಿ ಪುಕ್ಕದಲ್ಲಿ ಬರೆಯುತ್ತಾ ಹೋಗುತ್ತಾನೆ. ಕಡೆಗೆ ಪುಕ್ಕ ಮುರಿದ ಬಳಿಕ ತನ್ನ ದಂತವನ್ನೇ ಬಳಸಿ ಬರೆಯುತ್ತಾನೆ.

ಗಣೇಶನು ಗಂಗೆಯ ತಟದಲ್ಲಿ ಧ್ಯಾನಮಗ್ನನಾಗಿದ್ದಾಗ ಆತನನ್ನು ನೋಡಿದ ತುಳಸಿಗೆ ಅವನ ಮೇಲೆ ಮನಸ್ಸಾಗುತ್ತದೆ. ಆಕೆ ಗಣೇಶನ ಬಳಿ ಹೋಗಿ ತನ್ನನ್ನು ವಿವಾಹವಾಗುವಂತೆ ಕೋರುತ್ತಾಳೆ. ಆದರೆ, ಗಣೇಶ ತಾನು ಬ್ರಹ್ಮಚಾರಿಯಾಗಿರಲು ಬಯಸುವುದಾಗಿ ಹೇಳುತ್ತಾನೆ. ಇದರಿಂದ ಅವಮಾನಿತಳಾದ ತುಳಸಿ ಆತನಿಗೆ ಸಧ್ಯದಲ್ಲೇ ವಿವಾಹವಾಗುವಂತೆ ಶಾಪ ನೀಡುತ್ತಾಳೆ. ಅದಕ್ಕೆ ಗಣೇಶನು ಸಸ್ಯವಾಗಿಯೇ ಇರುವಂತೆ ತುಳಸಿಗೆ ಪ್ರತಿಶಾಪ ನೀಡುತ್ತಾನೆ.

ಗಣೇಶನು ಲೋಭಾಸುರ ಎನ್ನುವ ರಾಕ್ಷಸನನ್ನು ಸೋಲಿಸಲು ಗಜಾನನ ಅಥವಾ ಗಜವಕ್ರ ಅವತಾರವನ್ನು ತಾಳುತ್ತಾನೆ. ಲೋಭಾಸುರ ರಾಕ್ಷಸನ ಹಿಂಸೆಯನ್ನು ತಾಳಲಾರದೆ ದೇವಾನು ದೇವತೆಗಳು ಗಣೇಶನ ಬಳಿ ರಕ್ಷಣೆಯನ್ನು ಕೇಳುತ್ತಾರೆ. ಎಲ್ಲಾ ದೇವರುಗಳಿಗೂ ಕೂಡ ರೈಭ್ಯ ಋಷುಗಳು ಗಣೇಶನ ಬಳಿ ಹೋಗಿ ಅಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿ ಕಳುಹಿಸಿರುತ್ತಾರೆ. ನಂತರ ಗಣೇಶನು ಗಜಾನನ ಅಥವಾ ಗಜವಕ್ರ ರೂಪವನ್ನು ತಾಳಿ ಅವನಿಗೆ ತಿಳಿಸ ಹೇಳಿದ ನಂತರ ಲೋಭಾಸುರನು ತನ್ನ ತಪ್ಪನ್ನು ಒಪ್ಪಿಕೊಂಡು ತಪ್ಪಿಗೆ ಕ್ಷಮೆಯನ್ನು ಯಾಚಿಸಿ ಗಣೇಶನೊಂದಿಗೆ ಯುದ್ಧವನ್ನು ಮಾಡದೆ ಶರಣಾಗುತ್ತಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಆದಿಕವಿ ಪಂಪ

ಕನ್ನಡದ ಆದಿಕವಿ ಪಂಪ

ಹಳೇಬೀಡು

ಹಳೇಬೀಡು ಇತಿಹಾಸ