in

ಯೋಗದ ಉಪಯೋಗ

ಈಗಿನ ಕಾಲದಲ್ಲಿ ಎಲ್ಲರಿಗೂ ಆರೋಗ್ಯವಾಗಿರಬೇಕು, ಫಿಟ್ ಆಗಿರಬೇಕು ಅಂತ ಅನ್ನಿಸದೆ ಇರಲ್ಲ. ಆದರೆ ಹೀಗೆಲ್ಲ ಇರೋದಕ್ಕೆ ಅಥವಾ ರೂಢಿಸಿಕೊಳ್ಳುವುದಕ್ಕೆ ಒಂದು ಕಡೆ ಸೋಂಬೇರಿತನ ಕಾರಣ ಆದರೆ, ಜೀವನದ ನಿತ್ಯದ ಕೆಲಸದ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಟೈಮ್ ಕೊಡೋಕೆ ಆಗೋದಿಲ್ಲ ಅನ್ನೋದು ಇನ್ನೊಂದು ಕಾರಣ. ಸಾಮಾನ್ಯವಾಗಿ ಹೇಳುವುದಾದ್ರೆ ಯೋಗ ಮಾಡ್ತೀವಿ, ಜಿಮ್ ಸೇರ್ಕೋತೀವಿ, ದಿನಕ್ಕೆ ಒಂದು ತಾಸು ನಡಿತೀವಿ ಇಲ್ಲ ಜಾಗಿಂಗ್ ಮಾಡಣ ಅಂದುಕೊಂಡು ಅಬಬ್ಬಾ ಅಂದರೆ ಒಂದು ವಾರ ಇಲ್ಲ ಹದಿನೈದು ದಿನ ಮಾಡಿ, ಆಗಲ್ಲ ಮಾಡೋಕೆ ಇಲ್ಲ ನಾಳೆ ಮಾಡಿದ್ರಾಯ್ತು ಅಂತ ಬಡೀತಿರೋ ಅಲಾರಂ ಬಂದ್ ಮಾಡಿ ಕಂಬಳಿ ಹೊದ್ದು ಮಲಗಿದೋರ ಪಟ್ಟಿನೇ ಉದ್ದ ಇದೆ.  ಇದರಲ್ಲಿ ನಾನು ಒಬ್ಬಳು.

ಒಂದು ಅರ್ಥದಲ್ಲಿ ಹೇಳೋದಾದರೆ ಯೋಗ ಅಭ್ಯಾಸದಿಂದಲೇ ಬೇಕಾದಷ್ಟು ಲಾಭಗಳಿವೆ. ದಿನಕ್ಕೆ ಒಂದು ತಾಸು ಯೋಗಕ್ಕೆ ಅಂತ ಸಮಯ ಮೀಸಲು ಇಟ್ಟರೆ ಇದರಿಂದ ಆಗೋ ಲಾಭಗಳು ಒಂದೊಂದಾಗಿ ನಮ್ಮ ಅರಿವಿಗೆ ಬರುತ್ತೆ. ಯೋಗಾಸನದಲ್ಲಿ ಹಲವು ರೀತಿಯ ಪ್ರಕಾರಗಳಿವೆ,

ಮೆಡಿಟೇಶನ್ ಮಾಡೋದ್ರಿಂದ ಮನಸ್ಸು ನಿರಾಳವಾಗಿರುತ್ತೆ ಹಾಗು ಶಾಂತವಾಗಿರುತ್ತೆ. ಇದನ್ನ ರೆಗ್ಯುಲರ್ ಆಗಿ ಮಾಡೋದ್ರಿಂದ ಮನಸ್ಸು ನಿರಾಳವಾಗಿರುತ್ತೆ ಮತ್ತು ಶಾಂತವಾಗಿರುತ್ತೆ. ಯೋಗದಿಂದ ಬರಿ ದೇಹದ ಆರೋಗ್ಯ ಅಲ್ಲದೆ, ಮನಸ್ಸಿನ ಆರೋಗ್ಯ ಕೂಡ ದೊರೆಯುತ್ತೆ. ಕಪಾಲಭಾತಿ, ಸೂರ್ಯ ನಮಸ್ಕಾರ ಇವೆರಡನ್ನೂ ರೂಢಿ ಮಾಡ್ಕೊಂಡ್ರೆ ದೇಹದ ತೂಕ ಮತ್ತು ಬೊಜ್ಜು ಕರಾಗೋದಕ್ಕೂ ಹೆಚ್ಚು ಉಪಯೋಗ. ಹಾಗಂತ ಬರಿ ಯೋಗ ಮಾಡಿ ತೂಕ ಇಳಿಸುವುದರ ಜೊತೆಗೆ ನಾವು ಪ್ರತಿನಿತ್ಯ ಸೇವಿಸುವ ಆಹಾರ ಕ್ರಮವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು. ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥ, ಹೊರಗಿನ ಜಂಕ್ ಫುಡ್ಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ದೂರ ಮಾಡಿದ್ರೆ ಇದರಿಂದ ಬೇಗ ಬದಲಾವಣೆಗಳನ್ನು ನೋಡಬಹುದು.

ದಿನದಲ್ಲಿ ಯೋಗಕ್ಕೆ ಅಂತ ಸ್ವಲ್ಪ ಬಿಡುವು ಮಾಡ್ಕೊಂಡ್ರೆ ನಮ್ಮ ಸ್ಟ್ರೆಸ್ ಕೂಡ ಕಮ್ಮಿ ಮಾಡ್ಕೋಬಹುದು. ಮೆಡಿಟೇಶನ್ ಮತ್ತು ಪ್ರಾಣಾಯಾಮ ಟೆಕ್ನಿಕ್ಸ್ ಅಳವಡಿಸಿಕೊಂಡರೆ ಯಾವದೇ ಟ್ರೀಟ್ಮೆಂಟ್ ಕೂಡ ಬೇಕಾಗಿಲ್ಲ ತನ್ನತಾನೆ ಸ್ಟ್ರೆಸ್ ಒಂದು ಮೈಲಿ ದೂರದಲ್ಲಿರತ್ತೆ. ನೆಮ್ಮದಿ ಇಂದ ಇರಬೇಕು ಅಂತ ಎಲ್ಲರಿಗೂ ಆಸೆ ಇದ್ದೆ ಇರತ್ತೆ. ಒಂದು ಪ್ರವಾಸಕ್ಕೆ ಹೋಗಿ ಬಂದ್ರೆ ಇಲ್ಲ ಹೊರಗೆ ಸುತ್ತಾಡಿದ್ರೆ ಸ್ವಲ್ಪ ಮನಸ್ಸಿಗೆ ಹಾಯ್ ಅನ್ನಿಸುತ್ತೆ. ಅದರ ಬದಲು ಯೋಗ ನಮ್ಮ ಡೈಲಿ ಬೆಳಗ್ಗಿನ ಸಮಯ ಪಟ್ಟಿ ಆದ್ರೆ ದಿನ ಕೂಡ ಪ್ರವಾಸದಲ್ಲಿ ಸಿಕ್ಕ ಶಾಂತಿ ಇಲ್ಲ ಖುಷಿ ಸಿಗೋದಂತು ನಿಜ. ಮನುಷ್ಯ ಯಾವಾಗಲು  ಭೂತಕಾಲ ಇಲ್ಲ ಭವಿಷ್ಯತ್ ಕಾಲದಲ್ಲಿ ಬದುಕ್ತಾನೆ, ವರ್ತಮಾನ ಕಾಲದಲ್ಲಿ ಬದುಕವ್ರು ತುಂಬಾ ಕಮ್ಮಿ. ಯೋಗ ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟು ವರ್ತಮಾನ ಕಾಲದಲ್ಲಿ ಖುಷಿ ಇಂದ ಹಾಗು ನೆಮ್ಮದಿಯಿಂದ ಇರೋದಕ್ಕೆ ಸಹಾಯ ಮಾಡುತ್ತೆ.

ನಾವು ಹೆಚ್ಚಾಗಿ ಒಂದೇ ಕೆಲಸ ಮಾದೋದ್ಕಿಂತ ಒಂದೇ ಸಮಯದಲ್ಲಿ ಹೆಚ್ಚು ಕೆಲಸ ಮಾಡ್ತೀವಿ ಅಂದ್ರೆ ಮಲ್ಟಿಟಾಸ್ಕಿನ್ಗ್ ಇದರಿಂದ ನಮ್ಮ ಎನರ್ಜಿ ಬೇಗ ಕಮ್ಮಿ ಆಗತ್ತೆ ಹಾಗು ಬೇಗ ಸುಸ್ತಾಗತ್ತೆ. ಆದ್ರೆ ದಿನದ ಕೆಲ್ಸಗಳ ಮಧ್ಯೆ ಬರಿ ಹತ್ತು ನಿಮಿಷ ಮೆಡಿಟೇಶನ್ ಅಂತ ಮಾಡುದ್ರೆ ನಮ್ಮ ಬ್ಯಾಟರಿ ಮತ್ತೆ ಅದೇ ತರ ಚಾರ್ಜ್ ಆಗಿ ಕೆಲಸ ಆರಾಮವಾಗಿ ನಡಿಯುತ್ತೆ. ಒಳ್ಳೆ ಆಹಾರ ಅಭ್ಯಾಸ ಮಾಡ್ಕೊಳಿ ಮತ್ತೆ ಮರಿದೆ ಯೋಗ ಮಾಡಿ, ಆರೋಗ್ಯ ಮತ್ತೆ ಆಯಸ್ಸು ಎರಡನ್ನು ರುದ್ದಿ ಮಾಡ್ಕೊಳಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ಗ್ರೀನ್ ಟೀ ಉಪಯೋಗಗಳನ್ನು ಯಾವಾಗ್ಲಾದ್ರೂ ಕೇಳಿದೀರಾ?