in ,

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು
ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು

ವಿಷಮಶೀತ ಜ್ವರ, ಅಥವಾ ಸಾಮಾನ್ಯವಾಗಿ ಟೈಫಾಯ್ಡ್ ಎಂದು ಪರಿಚಿತವಾಗಿರುವ, ಸ್ಯಾಲ್ಮನೆಲಾ ಎಂಟರಿಕಾ ಸಿಯರೋವೇರ್ ಟೈಫೈ ಬ್ಯಾಕ್ಟೀರಿಯದಿಂದ ಉಂಟಾಗುವ ಒಂದು ಕಾಯಿಲೆ. ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇದು, ಸೋಂಕಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಆಮೇಲೆ ಬ್ಯಾಕ್ಟೀರಿಯ ಕರುಳಿನ ಗೋಡೆಯ ಮೂಲಕ ಪ್ರವೇಶಿಸುತ್ತವೆ ಮತ್ತು ಮ್ಯಾಕ್ರಫೇಜ್‌ಗಳಿಂದ ಕಬಳಿಸಲ್ಪಡುತ್ತವೆ. ಸಾಲ್ಮೋನೆಲ್ಲಾ ಟೈಫೀ ಎಂಬ ಹೆಸರಿನ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುವ ಟೈಫಾಯ್ಡ್ ವಾಸ್ತವದಲ್ಲಿ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಬರುವ ಜ್ವರವಾಗಿದ್ದು ಕೆಲವರಲ್ಲಿ ಇದಕ್ಕೂ ಹೆಚ್ಚಿನ ಬಾರಿ ಎದುರಾಗಬಹುದು. ಟೈಫಾಯ್ಡ್ ಎಂದರೆ ವಾಸ್ತವವಾಗಿ ನಮ್ಮ ದೇಹ ನಿರೋಧಕ ವ್ಯವಸ್ಥೆ ಈ ಬ್ಯಾಕ್ಟೀರಿಯಾಕ್ಕೆ ಮುಂದೆಂದೂ ಬಾಧೆಗೊಳಗಾಗದಂತೆ ನಿರ್ಮಿಸಿಕೊಳ್ಳುವ ರಕ್ಷಣಾ ವ್ಯವಸ್ಥೆಯಾಗಿದ್ದು ಈ ಹಂತ ಪೂರ್ಣವಾಗಲು ಒಂದು ವಾರದಿಂದ ಹದಿನೈದು ದಿನಗಳಾದರೂ ಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಭಾರೀ ಜ್ವರ, ಸುಸ್ತು ಮೊದಲಾದವು ಎದುರಾಗುತ್ತವೆ.

ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ರೋಗ ಪೂರ್ಣವಾಗಿ ಗುಣವಾಗುವವರೆಗೂ ದಿನದ ಎಚ್ಚರವಾಗಿದ್ದಷ್ಟೂ ಕಾಲ ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಏಕೆಂದರೆ ಟೈಫಾಯ್ಡ್ ಜ್ವರ ಅತಿಯಾದ ಪ್ರಮಾಣದಲ್ಲಿ ರೋಗಿ ಅತಿಸಾರದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ದೇಹದಿಂದ ನಷ್ಟವಾದ ದ್ರವವನ್ನು ಮರುತುಂಬಿಸದೇ ಇದ್ದರೆ ತೀವ್ರ ನಿರ್ಜಲೀಕರಣಕ್ಕೆ ಒಳಗಾಗಬಹುದು. ಒಂದು ವೇಳೆ ಈ ಜ್ವರದ ಸಮಯದಲ್ಲಿಯೇ ನಿರ್ಜಲೀಕರಣವೂ ಎದುರಾದರೆ ಪರಿಣಾಮ ಭೀಕರ ಸ್ವರೂಪಕ್ಕೆ ತಿರುಗುತ್ತದೆ. ರೋಗಿ ಪ್ರಜ್ಞಾಶೂನ್ಯನೂ ಆಗಬಹುದು. ಹಾಗಾಗಿ ದಿನದಲ್ಲಿ ಹಲವಾರು ಬಾರಿ ನೀರಿನಂಶ ಹೆಚ್ಚಿರುವ ಆಹಾರಗಳು, ತಾಜಾ ಹಣ್ಣಿನ ರಸ ಮೊದಲಾದವುಗಳನ್ನು ಸೇವಿಸುತ್ತಿರಬೇಕು.

ಟೈಫಾಯಿಡ್ ಜ್ವರಕ್ಕೆ ಮುಖ್ಯ ಕಾರಣಗಳು : ಕಲುಷಿತ ನೀರು ಮತ್ತು ಆಹಾರದ ಸೇವನೆಯಿಂದ ಟೈಫಾಯಿಡ್ ಜ್ವರ ಬರುತ್ತದೆ. ನೀವು ತಿಳಿಯದೇ ಸೇವಿಸಿದ ಕಲುಷಿತ ಆಹಾರದಲ್ಲಿರುವ ಬ್ಯಾಕ್ಟೀರಿಯಾ ರಕ್ತವನ್ನು ಸೇರಿ, ಪಿತ್ತಕೋಶ, ಪಿತ್ತರಸ ನಾಳ ಅಥವಾ ಯಕೃತ್ತು, ಕರಳುಗಳಲ್ಲಿ ನೆಲೆಸುತ್ತವೆ. ಸೋಂಕುಂಟಾದ ವ್ಯಕ್ತಿಯ ಮಲದಲ್ಲಿ ಈ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ರೋಗ ಹರಡುವ ಸಾಧ್ಯತೆಯಿರುತ್ತದೆ. ಹಾಗೆಯೇ ರೋಗಿಯು ಬಳಸಿದ ಬಟ್ಟೆ ಮತ್ತು ವಸ್ತುಗಳನ್ನು ಬಳಸುವುದರಿಂದ ಕೂಡ ಬ್ಯಾಕ್ಟೀರಿಯಾ ನಿಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿರುತ್ತದೆ.

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು
ಟೈಫಾಯಿಡ್ ಜ್ವರಕ್ಕೆ ಮುಖ್ಯ ಕಾರಣಗಳು

ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬಾರದ ಆಹಾರಗಳು :
ಕೋಸು, ಹೂಕೋಸು, ದೊಣ್ಣೆ ಮೆಣಸು, ಬದನೆ, ಮೂಲಂಗಿ, ಕಡ್ಲೆಬೇಳೆ, ಕಡ್ಲೆಕಾಳು, ಗೆಣಸು, ಹಲಸಿನ ಬೀಜ ಮೊದಲಾದ ವಾಯುಪ್ರಕೋಪವುಂಟುಮಾಡುವ ಯಾವುದೇ ಆಹಾರ ಬೇಡ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗಿ ರೋಗಿ ಇನ್ನಷ್ಟು ತೊಂದರೆ ಅನುಭವಿಸಬಹುದು.

ಖಾರವಾದ ಮತ್ತು ಆಮ್ಲೀಯ ಅಹಾರಗಳು ಬೇಡ. ಹಸಿಮೆಣಸು, ಒಣಮೆಣಸು, ಶಿರ್ಕಾ, ಲಿಂಬೆರಸ ಮೊದಲಾದವು ಜೀರ್ಣವ್ಯವಸ್ಥೆಯನ್ನು ಕದಡಬಹುದು. ಒಣಮೆಣಸು ಟೈಫಾಯ್ಡ್ ರೋಗಿಗಳ ಚೇತರಿಸುವಿಕೆಯ ಮೇಲೆ ಅಪಾರ ಪ್ರಭಾವವುಂಟುಮಾಡುತ್ತದೆ.

ಹಾಗೆ ಪರಂಗಿಹಣ್ಣು, ಸಿಹಿಗೆಣಿಸು, ಕಂದು ಬಣ್ಣದ ಅಕ್ಕಿ, ಪುಡಿ ಮಾಡಿದ ಅಕ್ಕಿ ಮತ್ತು ಜೋಳ ಬೆಣ್ಣೆ, ತುಪ್ಪ, ಪೇಸ್ಟ್ರಿಗಳು, ಕರಿದ ಎಣ್ಣೆ ಪದಾರ್ಥಗಳು, ಐಸ್ ಕ್ರೀಮ್‍ಗಳನ್ನು ತಿನ್ನಬಾರದು.

ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬೇಕಾದ ಆಹಾರಗಳು :

ಟೈಪಾಯ್ಡ್ ನಿಂದ ಬಳಲುತ್ತಿರುವಂತಹ ಜನರು ಅಧಿಕ ಕ್ಯಾಲರಿ ಇರುವ ಆಹಾರ ಸೇವನೆ ಮಾಡಬೇಕು. ಮುಖ್ಯವಾಗಿ ಅನ್ನ, ಬಾಳೆಹಣ್ಣು, ಬೇಯಿಸಿ ಬಟಾಟೆ ಮತ್ತು ಬಿಳಿ ಬ್ರೆಡ್ ಸೇವನೆ ಮಾಡಿದರೆ ಒಳ್ಳೆಯದು.
ದೇಹಕ್ಕೆ ದ್ರವಾಂಶ ಒದಗಿಸುವಲ್ಲಿ ನೀರಿನಾಂಶವು ಪ್ರಮುಖ ಪಾತ್ರ ವಹಿಸುವುದು. ಟೈಪಾಯ್ಡ್ ನಿಂದ ಅತಿಸಾರ ಮತ್ತು ನಿರ್ಜಲೀಕರಣವು ಉಂಟಾಗುವುದು. ಇದರಿಂದ ದೇಹಕ್ಕೆ ದ್ರವಾಂಶ ನೀಡುವಂತಹ ಗ್ಲುಕೋಸ್, ಎಳನೀರು, ಲಸ್ಸಿ, ತಾಜಾ ಹಣ್ಣುಗಳು ಮತ್ತು ತರಕಾರಿ ಜ್ಯೂಸ್, ಅಧಿಕ ನೀರಿನಾಂಶವು ಇರುವ ತರಕಾರಿಗಳನ್ನು ಸೇವನೆ ಮಾಡಿದರೆ ಒಳ್ಳೆಯದು. ಇದರಿಂದ ದೇಹವು ಹೈಡ್ರೇಟ್ ಆಗುವುದು.

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು
ಟೈಫಾಯ್ಡ್ ಜ್ವರಕ್ಕೆ ಸೇವಿಸಬೇಕಾದ ಆಹಾರಗಳು

ಬೆಳ್ಳುಳ್ಳಿ ಅನೇಕ ಆರೋಗ್ಯಕಾರಿ ಅಂಶಗಳಿರುವುದು ಗೊತ್ತಿದೆ. ಇದು ಕೂಡ ಟೈಫಾಯಿಡ್ ಜ್ವರವನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿರುವುದರಿಂದ ರಕ್ತ ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಮೂತ್ರಪಿಂಡವು ದೇಹದ ಕಲ್ಮಷಗಳನ್ನು ಹೊರ ಹಾಕಲು ಸಹಕಾರಿಯಾಗಲಿದೆ. ಇದನ್ನು ಅರ್ಧ ಬೇಯಿಸಿ ಅಥವಾ ಹಸಿಯಾಗಿ ಕೂಡ ತಿನ್ನಬಹುದು.

ಹಾಲಿನ ಉತ್ಪನ್ನಗಳನ್ನು ಟೈಪಾಯ್ಡ್ ಇರುವವರು ಬಳಸಲೇಬೇಕು. ಹಾಲು ಸೇವನೆಯು ಇಷ್ಟವಾಗದೆ ಇದ್ದರೆ, ಆಗ ನೀವು ಮೊಸರು ಅಥವಾ ಮಜ್ಜಿಗೆ ಸೇವನೆ ಮಾಡಬಹುದು.

ದಾಳಿಂಬೆ ಟೈಫಾಯಿಡ್ ಗೆ ಪರಿಣಾಮಕಾರಿ ಮನೆಮದ್ದು, ಇದು ನಿರ್ಜಲೀಕರಣವನ್ನು ತಡೆಯಲು ಸಹಕಾರಿಯಾಗಿದೆ. ಇದು ರೋಗಿಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ.

ಮಾಂಸಕ್ಕೆ ಹೋಲಿಕೆ ಮಾಡಿದರೆ, ಮೊಸರು ಹಾಗೂ ಮೊಟ್ಟೆಯು ಬೇಗನೆ ಜೀರ್ಣವಾಗುವುದು ಮತ್ತು ಇದರಿಂದ ದೇಹದಲ್ಲಿನ ಪ್ರೋಟೀನ್ ಕೊರತೆಯು ತಗ್ಗುವುದು. ಸಸ್ಯಾಹಾರಿಗಳು ಧಾನ್ಯಗಳು ಮತ್ತು ಚೀಸ್ ಸೆವನೆ ಮಾಡಿ.

ಹಣ್ಣಿನ ರಸ, ಖನಿಜಯುಕ್ತ ನೀರನ್ನು ಹೆಚ್ಚಾಗಿ ಸೇವಿಸಿ. ಹಾಗೆಯೇ ಮೂಸಂಬಿ ಹಣ್ಣನ್ನು ತಿನ್ನುವುದು ಉತ್ತಮ. ಹಾಗೇಯೇ ಆಪಲ್ ಸೈಡರ್ ವಿನೆಗರ್, ಬೆಳ್ಳುಳ್ಳಿ, ತುಳಸಿ ಎಲೆ ಟೈಫಾಯಿಡ್ ಜ್ವರಕ್ಕೆ ಮತ್ತೊಂದು ರಾಮಬಾಣ. ಜೊತೆಗೆ ಬಿಸಿ ನೀರಿನ ಸ್ನಾನ ತುಂಬ ಅಗತ್ಯ. ಇನ್ನು ಭೇಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಕಡಿಮೆ ನಾರಿನಾಂಶದ ಪದಾರ್ಥಗಳಾದ ಹಣ್ಣುಗಳು, ಆಲೂಗೆಡ್ಡೆ ಇತ್ಯಾದಿಯನ್ನು ಸೇವಿಸಿರಿ ಭೇದಿ ಆಗುವುದನ್ನು ತಪ್ಪಿಸಬಹುದು. ಆಹಾರದಲ್ಲಿ ಬೇಗನೆ ಕರಗುವಂತಹ ನಾರಿನಾಂಶವಿರುವ ತರಕಾರಿಗಳಾದ ಪಾಲಕ್ ಸೊಪ್ಪು, ಎಲೆಕೋಸು, ಕ್ಯಾರೆಟ್ಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು.

ಅಧಿಕ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆಯು ಇರುವಂತಹ ಆಹಾರವು ಕೂಡ ದೇಹಕ್ಕೆ ಶಕ್ತಿ ನೀಡುವುದು. ಟೈಪಾಯ್ಡ್ ನಿಂದಾಗಿ ಪ್ರತಿರೋಧಕ ಶಕ್ತಿಯು ಕುಗ್ಗುವುದು. ಇದಕ್ಕಾಗಿ ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ ಸೇವನೆ ಮಾಡಿ. ಅವಲಕ್ಕಿ, ಹಣ್ಣಿನ ಜ್ಯೂಸ್, ಆಮ್ಲೇಟ್, ಬಟಾಟೆ, ಜೇನು ಮತ್ತು ಬೇಯಿಸಿದ ಅನ್ನ ಸೇವನೆ ಮಾಡಿದರೆ, ಕಾರ್ಬ್ಸ್ ಮತ್ತು ದೇಹಕ್ಕೆ ಶಕ್ತಿ ಸಿಗುವುದು.

ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಟೈಪಾಯ್ಡ್ ಇರುವವರು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸೇವನೆ ಮಾಡಬೇಕು.
ಸೂಪ್ ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೋಷಕಾಂಶಗಳು ಅಧಿಕವಾಗಿದೆ ಮತ್ತು ಜೀರ್ಣಕ್ರಿಯೆಗೆ ಕೂಡ ಸಹಕಾರಿ. ಇದರಿಂದ ನೀವು ಮನೆಯಲ್ಲೇ ಸೂಪ್ ಮಾಡಿ ಕುಡಿಯಿರಿ. ಕ್ಯಾರೇಟ್ ಸೂಪ್, ಪಾಲಕ ಸೂಪ್, ತರಕಾರಿ ಸೂಪ್, ಮಶ್ರೂಮ್ ಸೂಪ್ ಮತ್ತು ಕೋಳಿ ಮಾಂಸದ ಸೂಪ್ ಬಳಸಬಹುದು.

ಮಸೂರದಲ್ಲಿ ಒಳ್ಳೆಯ ಪ್ರಮಾಣದ ಪ್ರೋಟೀನ್ ಇದೆ. ಇದನ್ನು ಅನ್ನದ ಜತೆಗೆ ಸೇವನೆ ಮಾಡಿದರೆ, ಆಗ ಹೊಟ್ಟೆಯು ಲಘುವಾಗಿರುವುದು. ಬೇಳೆಕಾಳುಗಳಲ್ಲಿ ವಿವಿಧ ಬಗೆಯಲ್ಲಿ ಲಭ್ಯವಿದ್ದು, ಇದರಲ್ಲಿ ಒಂದನ್ನು ಆಯ್ಕೆ ಮಾಡಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗೋಕಾಕ್ ಚಳುವಳಿ

ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ : ಗೋಕಾಕ್ ಚಳುವಳಿ

ಚೀನ - ಜಪಾನ್ ಯುದ್ಧ

ಚೀನ – ಜಪಾನ್ ಯುದ್ಧಗಳು