in ,

ಡೆಂಗ್ಯೂ ಶುರುವಾಗಿದೆ ಜಾಗ್ರತೆ

ಡೆಂಗ್ಯೂ ಶುರುವಾಗಿದೆ ಜಾಗ್ರತೆ
ಡೆಂಗ್ಯೂ ಶುರುವಾಗಿದೆ ಜಾಗ್ರತೆ

ಡೆಂಗ್ಯೂ(ಡೆಂಗೆ) ರಕ್ತಸ್ರಾವ ಜ್ವರಗಳು ಉಷ್ಣವಲಯಗಳಲ್ಲಿ ಕಾಣಿಸಿಕೊಳ್ಳುವ, ಅಪಾಯಕಾರಿಯಾದ ತೀವ್ರ ಜ್ವರ ಲಕ್ಷಣದ ಉಷ್ಣವಲಯದ ರೋಗಗಳು, ಮತ್ತು ಫ್ಲೇವವೈರಸ್ ಪ್ರಜಾತಿ, ಫ್ಲೇವೈವಿರೈಡೇ ಕುಟುಂಬದ ನಾಲ್ಕು ನಿಕಟವಾಗಿ ಸಂಬಂಧಿಸಿದ ವೈರಾಣು ಸಿಯರಟೈಪ್‌ಗಳಿಂದ ಉಂಟಾಗುತ್ತವೆ. ಇದರಿಂದ 3 ದಿನದಲ್ಲಿ ಸಾವು ಉಂಟಾಗುತ್ತವೆ.

ಡೆಂಗಿ ಜ್ವರ/ಡೆಂಗ್ಯೂ ಜ್ವರವು ವೈರಸ್‍ನಿಂದ ಉಂಟಾಗುವ ಸೊಳ್ಳೆ ಹರಡುವ ಉಷ್ಣವಲಯದ ರೋಗ. ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು. ಇದರ ಲಕ್ಷಣ, ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳ ಅಥವಾ ದಡಸಲು/ದದ್ದುಗಳನ್ನು ಒಳಗೊಂಡಿರಬಹುದು.

ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ ಜ್ವರವಾಗಿ ಪರಿಣಮಿಸಬಹುದು. ಪರಿಣಾಮವಾಗಿ ರಕ್ತಸ್ರಾವ, ರಕ್ತದ ಕಿರುಬಿಲ್ಲೆಗಳು ಕಡಿಮೆ ಮಟ್ಟಕ್ಕೆ ಇಳಿಯುಯವುದು, ಹಾಗೂ ರಕ್ತದ ಪ್ಲಾಸ್ಮಾದ ಸೋರಿಕೆ, ಅಥವಾ ಡೆಂಗಿಯ ಗಾಬರಿ ಲಕ್ಷಣಗಳಾದ, ಅಪಾಯಕಾರಿ ಕಡಿಮೆ ರಕ್ತದ ಒತ್ತಡ ಸಂಭವಿಸುತ್ತದೆ.

ಡೆಂಗ್ಯೂ ಶುರುವಾಗಿದೆ ಜಾಗ್ರತೆ
ಈಡಿಸ್‌ ಎಂಬ ಸೊಳ್ಳೆ

ಡೆಂಗಿ ‘ಏಡಿಸ್’ ರೀತಿಯ ಪ್ರಮುಖವಾಗಿ ಹಲವಾರು ಜಾತಿಗಳ ಎ ಈಜಿಪ್ಟಿ ಸೊಳ್ಳೆಗಳಿಂದ ಹರಡುವುದು. ವೈರಸ್`ಗಳು ವಿವಿಧ ರೀತಿಯ ಐದು ಬಗೆ ಇವೆ. ಒಂದು ರೀತಿಯ ವೈರಸ್ ಸಾಮಾನ್ಯವಾಗಿ ರೋಗದಿಂದ ಆಜೀವ ವಿನಾಯಿತಿ (ರೋಗನಿರೋಧ ಶಕ್ತಿ) ನೀಡುತ್ತದೆ. ಸೋಂಕು ಆದರೆ ಇತರ ಬಗೆಯವು ಅಲ್ಪಾವಧಿಗೆ ಮಾತ್ರ ವಿನಾಯಿತಿ ನೀಡುತ್ತದೆ. ಒಂದು ವಿಭಿನ್ನ ರೀತಿಯ ನಂತರದ ಒಂದು ವಿಭಿನ್ನ ರೀತಿಯ ನಂತರದ ಸೋಂಕು ತೀವ್ರ ತೊಡಕುಗಳು ಮತ್ತು ಅಪಾಯವನ್ನು ಹೆಚ್ಚಿಸುತ್ತದೆ. ವೈರಸ್ ಅಥವಾ ಅದರ ಆರಎನಎ ಪ್ರತಿಕಾಯಗಳ ಪತ್ತೆ ಸೇರಿದಂತೆ ರೋಗ ಖಚಿತಪಡಿಸಲು ಅನೇಕ ಪರೀಕ್ಷೆಗಳು ಲಭ್ಯವಿದೆ.

ಡೆಂಗಿ ಈಡಿಸ್‌ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು. ಹೂವಿನ ಕುಂಡ, ಬೀಸಾಕಿದ ಟೈರ್‌, ಹಳೆಯ ಎಣ್ಣೆಯ ಡ್ರಮ್‌, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು.

ಡೆಂಗ್ಯೂ ಶುರುವಾಗಿದೆ ಜಾಗ್ರತೆ
ಡೆಂಗೆ ತಡೆಗಟ್ಟಲುಅನುಸರಿಸುವ ಕ್ರಮ

*ಡೆಂಗೆ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು.
*ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ.
*ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ.
*ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ.
*ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ.
*ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ.
*ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
*ತೊಟ್ಟಿ, ಬಿಂದಿಗೆ, ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
*ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
*ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
*ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.

ಡೆಂಗ್ಯೂ ಶುರುವಾಗಿದೆ ಜಾಗ್ರತೆ
ಆಹಾರ ಕ್ರಮಗಳು

*ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.

  • ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
  • ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
  • ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
  • ಮೊಳಕೆ ಕಾಳುಗಳ ಸೇವನೆ ಉತ್ತಮ.
  • ಗಂಟೆಗೊಂದು ಲೋಟ ನೀರು ಕುಡಿಯುವುದು.
  • ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
  • ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಕಂಡುಬರುವ ಪ್ರಪಂಚದ ಪ್ರದೇಶಗಳಲ್ಲಿ, ಒಮ್ಮೆಯಾದರೂ ಡೆಂಗ್ಯೂ ಜ್ವರವನ್ನು ಹೊಂದಿರುವ 9 ರಿಂದ 45 ವರ್ಷ ವಯಸ್ಸಿನ ಜನರಿಗೆ ಒಂದು ಡೆಂಗ್ಯೂ ಜ್ವರ ಲಸಿಕೆ (ಡೆಂಗ್ವಾಕ್ಸಿಯಾ) ಅನುಮೋದಿಸಲಾಗಿದೆ. ಈ ಲಸಿಕೆಯನ್ನು 12 ತಿಂಗಳ ಅವಧಿಯಲ್ಲಿ ಮೂರು ಡೋಸ್‌ಗಳಲ್ಲಿ ನೀಡಲಾಗುತ್ತದೆ.

ಡೆಂಗ್ಯೂ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿ ಪ್ರತಿ ವರ್ಷ ‘ಮೇ 16ರಂದು ರಾಷ್ಟ್ರೀಯ ಡೆಂಗ್ಯೂ ದಿನ‘ ಎಂದು ಆಚರಿಸಲಾಗುತ್ತದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ದೇಶದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುತ್ತದೆ.

ಈ ಸಂದರ್ಭದಲ್ಲಿ, ವಿವಿಧ ಕಾರ್ಯಕ್ರಮ, ಮಾಹಿತಿ ಯೋಜನೆ ಮತ್ತು ಆರೋಗ್ಯ ಇಲಾಖೆ, ಎನ್‌ಜಿಒಗಳ ಮೂಲಕ ಡೆಂಗ್ಯೂ ರೋಗ, ಅದರ ಲಕ್ಷಣಗಳು, ಚಿಕಿತ್ಸಾ ವಿಧಾನ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಬೇಸಿಗೆಯ ಕೊನೆಯಲ್ಲಿ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತವೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದು ಎಲ್ಲೆಡೆ ವಿಜಯ ದಶಮಿ ಸಂಭ್ರಮ

ಇಂದು ಎಲ್ಲೆಡೆ ವಿಜಯ ದಶಮಿ ಸಂಭ್ರಮ

ರತ್ನಾಗಿರಿ ಬಂದರು

ರತ್ನಾಗಿರಿ ಬಂದರು ನಗರ